ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಧ್ಯಾನವು ಚಿನ್ನದ ಹಾಗೆ ಬಹು ಮೂಲ್ಯವುಳ್ಳದು. ಭೌತಿಕ ಐಶ್ವರ್ಯಕ್ಕೂ,ಮುಕ್ತೀಗೂ,ಶಾಂತಿಗೂ ಧ್ಯಾನವು ಒಳ್ಳೆಯದು. ಅದಕ್ಕಾಗಿ ಉಪಯೋಗಿಸುವ ಸಮಯ ಎಂದಿಗೂ ನಷ್ಟವಾಗುವಂತದಲ್ಲ. ಧ್ಯಾನದ ಲಾಭಗಳು ವರ್ಣಿಸಲು ಹೋದರೆ ಅದಕ್ಕೆ ಅಂತ್ಯವೇ ಇಲ್ಲ.
ಧ್ಯಾನವನ್ನು ನಾವು ಏಕೆ ಮಾಡಬೇಕು ?
ಧ್ಯಾನವು ಉದಾತ್ತವಾದ ಜೀವನಕ್ಕೆ ಹೆಬ್ಬಾಗಿಲು
ಧ್ಯಾನವು ಉದಾತ್ತವಾದ ಜೀವನಕ್ಕೆ ಮಾರ್ಗ
ಧ್ಯಾನವು ಉದಾತ್ತವಾದ ಜೀವನಕ್ಕೆ ವಾಹನ
ಧ್ಯಾನದಿಂದಲೇ ಅಂತಿಮಾವಸ್ಥೆ ಪ್ರಾಪ್ತಿ.
ಧ್ಯಾನವು ಆನಂದದಾಯಕ,
ಧ್ಯಾನವು ಶಾಂತಿದಾಯಕ,
ಧ್ಯಾನವು ಸದ್ಗುಣ ರೂಪಕ,
ಧ್ಯಾನವು ಜ್ಞಾನ, ಪ್ರಜ್ಞಾ ಅಭೀಜ್ಞಾ ಸಂಬೋಧಿದಾಯಕ
ಮತ್ತು ಧ್ಯಾನವು ನಿಬ್ಬಾಣದ ನಿಮರ್ಾತವಾಗಿದೆ.
ಧ್ಯಾನದಿಂದಲೇ.ಮಿಥ್ಯದಿಂದ ಸತ್ಯದೆಡೆಗೆ,
ಧ್ಯಾನದಿಂದಲೇ ಅಜ್ಞಾನದಿಂದ ಪ್ರಜ್ಞಾದೆಡೆಗೆ,
ಧ್ಯಾನದಿಂದಲೇ ಬಂಧನದಿಂದ ವಿಮುಕ್ತಿಯಡೆಗೆ,
ಧ್ಯಾನದಿಂದಲೇ ಜನ್ಮದಿಂದ ನಿಬ್ಬಾಣದೆಡೆಗೆ ,ಸಾಗುವಂತಹ ಏಕೈಕ ಧ್ಯಾನ ಮಾರ್ಗವೇ ಉನ್ನತ ವಿಪಸ್ಸನ ಧ್ಯಾನವಾಗಿದೆ
ಧ್ಯಾನವು ಸಂಬೋದಿಯ ಸೂರ್ಯವಾಗಿದೆ. ಒಳಹೊಕ್ಕು ಪ್ರಕಾಶವೀಯುವವರಾಗಿ,
ಧ್ಯಾನವು ನಿಬ್ಬಾಣದ ಆಕಾಶವಾಗಿದೆ, ಹಾರಿ ಮುಕ್ತರಾಗಿ.
ಧ್ಯಾನವು ಅಮರತ್ವದ ಸರೋವರವಾಗಿದೆ ಮಿಂದು ಶುದ್ಧರಾಗಿ, ಪಾವನರಾಗಿ. ಬನ್ನಿ ಧ್ಯಾನದಿಂದ ನಿಯಂತ್ರಣರಾಗಿ,
ಬನ್ನಿ ಧ್ಯಾನದಿಂದ ತಡೆಗಳಿಂದ ಮುಕ್ತರಾಗಿ
ಬನ್ನಿ ಧ್ಯಾನದಿಂದ ಆನಂದ, ಸುಖ, ಪ್ರಶಾಂತತೆ ಪ್ರಾಪ್ತಿ ಮಾಡಿ.
ಈ ಧ್ಯಾನದಿಂದ ಸ್ವ-ಪರಿವರ್ತನೆಯಾಗುತ್ತದೆ.
ಧ್ಯಾನದಿಂದ ಆತನು ರಾಗ, ದ್ವೇಷ ಮತ್ತು ಮೋಹದಿಂದ ಮುಕ್ತನಾಗುತ್ತಾನೆ.
ಧ್ಯಾನದಿಂದ ಮಾನಸಿಕ ಕಶ್ಮಲಗಳೆಲ್ಲದರಿಂದ ಮುಕ್ತನಾಗುವ ಏಕೈಕ ಧ್ಯಾನ ಇದಾಗಿದೆ
ದೋಷವಿಲ್ಲದೆ ಸಮ್ಮಕ್ ದೃಷ್ಟಿಕೋನದಿಂದ ಕೂಡಿರುವ, ವಿಚಾರದಿಂದ, ವಿಶ್ಲೇಷಣೆಯಿಂದ, ವಿಮಶರ್ೆಯುತ, ಯಥಾಭೂತ ದರ್ಶನದಿಂದ ಕೂಡಿರುವ, ಹೃದಯ ವಿಶಾಲತೆಯಿಂದ ಕೂಡಿರುವ, ನಾವೆಲ್ಲಾ ಮಾನವರು ಒಂದೇ, ನಾವೆಲ್ಲಾ ಜೀವಿಗಳೂ ಒಂದೇ, ಸರ್ವಹಿತ ಸರ್ವ ಸುಖವೇ ಜೀವನದ ಆದರ್ಶವಾಗಿರುವ, ಶೀಲದ ಸುಗಂಧ ಹೊಂದಿರುವ ಶಿಸ್ತು, ಸಂಯಮದಿಂದ ಕೂಡಿರುವ, ಮನಸ್ಸಿನ ಪ್ರಭುತ್ವಕ್ಕೆ ಮಾರ್ಗದಶರ್ಿತವಾಗಿರುವ, ಮನಸ್ಸಿನ ಸ್ವಚ್ಛತೆ, ಪರಿಶುದ್ಧತೆ, ಪ್ರಾವಿಣ್ಯತೆ, ಪರಿಪೂರ್ಣತೆಗೆ ಹಾದಿ ತೋರುವ, ಅಭಿಜ್ಞಾ, ದರ್ಶನ, ಸಂಬೋಧಿ ಮತ್ತು ನಿಬ್ಬಾಣವನ್ನು ನೀಡುವ ಧ್ಯಾನಗಳಿವೆ – ಆ ವಿಶಿಷ್ಟ ಧ್ಯಾನಗಳೇ ಬೌದ್ಧರ ಅದ್ವಿತೀಯ ಧ್ಯಾನಗಳ ಮಾರ್ಗವಾಗಿದೆ.
ಈ ವಿಪಸ್ಸನ ಧ್ಯಾನದ ಮಹತ್ವತೆ :
ಯಾವುದು ಧ್ಯಾನವಲ್ಲ ?
ಧ್ಯಾನವೆಂದರೆ ಭ್ರಮಾತ್ಮಕವಾಗಿ ಕಲ್ಪಿಸುವುದಲ್ಲ,
ಧ್ಯಾನವೆಂದರೆ ಜಪಿಸುವುದಲ್ಲ,
ಧ್ಯಾನವೆಂದರೆ ವ್ಯಾಯಾಮವಲ್ಲ,
ಧ್ಯಾನವೆಂದರೆ ಆಸನಗಳು ಅಲ್ಲ,
ಧ್ಯಾನವೆಂದರೆ ಭಾವಾವೇಶಗಳಲ್ಲಿ ತೊಡಗುವುದೂ ಅಲ್ಲ,
ಧ್ಯಾನವೆಂದರೆ ಗಾಯನವು ಅಲ್ಲ,
ಧ್ಯಾನವೆಂದರೆ ಹಾಗೆಯೇ ನೃತ್ಯವೂ ಅಲ್ಲ,
ಧ್ಯಾನವೆಂದರೆ ಭಾವಲೋಕದಲ್ಲಿ ವಿಹರಿಸುವುದೂ ಅಲ್ಲ.
ಧ್ಯಾನವೆಂದರೆ ಪ್ರಾರ್ಥನೆಯು ಅಲ್ಲ,
ಧ್ಯಾನವೆಂದರೆ ಪ್ರಾಪಂಚಿಕತೆ ಯಲ್ಲಿ ತೊಡಗುವುದು ಅಲ್ಲ,
ಧ್ಯಾನವೆಂದರೆ ಇಲ್ಲದ ದೇವರನ್ನು, ಆತ್ಮನನ್ನು ನೋಡುವುದು ಅಲ್ಲ.
ಧ್ಯಾನವು ಜಗತ್ತಿನ ಹಲವಾರು ಧರ್ಮಗಳಲ್ಲಿದೆ, ಆದರೆ ಅಲ್ಲಿ ಧ್ಯಾನವು ಪ್ರಾರ್ಥನೆಯ ರೂಪದಲ್ಲಿದೆ. ಆರೋಗ್ಯದ ಔಷಧಿಯಂತೆ ಇದೆ. ನಿಗೂಢವಾಗಿ ಹಾಗೆಯೇ ಮಿಥ್ಯ ಕರ್ಮಗಳಿಂದ ಕೂಡಿದೆ. ಕೆಲವೆಡೆ ಉನ್ನತ ಭಾವಾವೇಶವಾಗಿದೆ. ಕೆಲವೆಡೆ ಕಲ್ಪನೆಗಳ ಭ್ರಮಾದೀನವಾಗಿದೆ. ಕೆಲವೆಡೆ ಭಾವೋದ್ರೇಕದ ಅತಿರೇಕವಾಗಿದೆ. ಕೆಲವೆಡೆ ದಡ್ಡತನದ ದೇಹದಂಡನಾ ಸ್ವರೂಪದಲ್ಲಿದೆ. ಕೆಲವು ಪದ್ಧತಿಗಳಲ್ಲಿ ಶೀಲವೇ ಇಲ್ಲ. ಕೆಲವು ಪದ್ಧತಿಗಳಲ್ಲಿ ಶಿಸ್ತು ಸಂಯಮವೇ ಇಲ್ಲ. ಕೆಲವು ಪದ್ಧತಿಗಳಲ್ಲಿ ದ್ವೇಷದ ಬೆಳವಣಿಗೆಗೆ ಸಹಾಯಕವಾಗಿದೆ. ಕೆಲವು ಪದ್ಧತಿಗಳಲ್ಲಿ ಮೋದವರ್ದಕವಾಗಿ, ಸ್ವ-ಘನತೆಯ ನಾಶಕವಾಗಿ, ಶರಣಾಗತಿಯ ರೂಪದಲ್ಲಿದೆ. ಕೆಲವೆಡೆ ಕೇವಲ ಯಾಂತ್ರಿಕತೆಯಿದೆ. ಕೆಲವೆಡೆ ಆಶಾ-ಲೋಭ ವರ್ಧಕವಾಗಿದೆ. ಮತ್ತೆ ಕೆಲವು ಪದ್ಧತಿಗಳಲ್ಲಿ ಪ್ರಜ್ಞಾವೇ ಇಲ್ಲ. ವಿಶ್ಲೇಷಣೆಯೇ ಇಲ್ಲ, ವಿಚಾರಶೀಲತೆಯೇ ಇಲ್ಲ. ವಿಮಶರ್ೆಯೇ ಇಲ್ಲ. ಕೇವಲ ಮಾನಸಿಕ ವಿಶ್ರಾಂತಿಯಾಗಿದೆ. ಕೆಲವೆಡೆ ಹೃದಯ ವೈಶಾಲ್ಯವೇ ಇಲ್ಲ. ಸಂಕುಚಿತತೆ ಕಾಣುತ್ತದೆ.
ಯಾವುದು ಧ್ಯಾನ ?(ಧ್ಯಾನ ಎಂದರೇನು?):ಜ್ಞಾನಿಯಲ್ಲದವನಿಗೆ ಧ್ಯಾನ ಸಿದ್ಧಿಯಿಲ್ಲ, ಧ್ಯಾನರಹಿತನಿಗೆ ಜ್ಞಾನವಿಲ್ಲ (ಪ್ರಜ್ಞಾ) ಯಾರಲ್ಲಿ ಧ್ಯಾನ, ಜ್ಞಾನ ಇವೆಯೋ ಆತ ನಿಬ್ಬಾಣಕ್ಕೆ ಸಮೀಪವಾಗಿದ್ದಾನೆ.
ಹೀಗೆ ಬುದ್ಧರು ವಿವಿಧರೀತಿಯಲ್ಲಿ ಧ್ಯಾನದ ಮಹತ್ವ ತಿಳಿಸಿದ್ದಾರೆ. ನಾವು ಈಗ ಧ್ಯಾನ ಎಂದರೇನು ಎಂಬುದನ್ನು ಅರಿಯೋಣ. ಧ್ಯಾನ ಮತ್ತು ಸಮಾಧಿಗೆ ಇಲ್ಲಿ ವ್ಯತ್ಯಾಸವಿಲ್ಲ. ಅದರ ಹಂತಗಳು ಬಹಳ ಇವೆ. ಸಂಸ್ಕೃತದ ‘ಧ್ಯಾನ’ ಪಾಳಿಯಲ್ಲಿ ‘ಝಾನ’ ಎನಿಸಿಕೊಳ್ಳುತ್ತದೆ ಸಮನಾರ್ಥಕ ಪದವಾಗಿ ‘ಸಮಾಧಿ’, ‘ಸಮಾಪತ್ತಿ’, ‘ಬಾವನ’, ಎಂದೆಲಾ ಕರೆಯುತ್ತಾರೆ. ಸಮಾಧಿಯ (ಧ್ಯಾನದ) ಅರ್ಥ ಇಲ್ಲಿ ಹೀಗೆ ವಿವರಿಸಲಾಗಿದೆ.
ಕುಶಲ ಸ್ಥಿತಿಗಳ ಸಮಗ್ರತೆ : ಎಲ್ಲಾ ಕುಶಲ ಸ್ಥಿತಿಗಳಿಗೆ ಸಮಾಧಿಯೇ ನಾಯಕವಾಗಿದೆ, ಸಮಾಧಿಯನ್ನೇ ಹಿಂಬಾಲಿಸುತ್ತದೆ ಮತ್ತು ಭಾಗುತ್ತವೆ ಸಮಾಧಾನ ತರುವುದರಿಂದ ಸಮಾಧಿಯಾಗಿದೆ. ಚಿತ್ತವನ್ನು ಸುಕೇಂದ್ರಿಕರಿಸುವುದರಿಂದ, ಸಮಂ (ಸಮನಾಗಿ) ಸಮ್ಮ (ಸರಿಯಾಗಿ) ಚಿತ್ತವನ್ನು ಏಕ ವಿಷಯದ ಮೇಲೆ ಹರಿಸುವುದರಿಂದ ಅಕ್ಷೊಭ ಮತ್ತು ಅಚದುರುವಿಕೆ ಹೊಂದಿರುವುದರಿಂದ ಇದು ಸಮಾಧಿಯಾಗಿದೆ.
ಸಮಾಧಿಯ ಲಕ್ಷಣ ಏನೆಂದರೆ ಚದುರಿಹೋಗದಿರುವಿಕೆ ಮತ್ತು ನೆಲಸುವಿಕೆಯಾಗಿದೆ. ಸಮಾಧಿಯ ಕ್ರಿಯೆ ಏನೆಂದರೆ ಚದುರುವುದನ್ನು ತೆಗೆದುಹಾಕುವಿಕೆ. ಸಮಾಧಿಯು ವ್ಯಕ್ತವಾಗುವುದು ಹೇಗೆಂದರೆ ಅಚಲತೆಯಿಂದ ಅಂದರೆ ಚಿತ್ತದ ಅಲೆರಹಿತತೆಯಿಂದ ಮತ್ತು ಶಾಂತತೆಯಿಂದಲೇ ಆಗಿದೆ.
ಸಮಾಧಿಗೆ ತತ್ಕ್ಷಣದ ಕಾರಣ ಯಾವುದೆಂದರೆ ಆನಂದ. ಏಕೆಂದರೆ ಉತ್ಸಾಹಯುತ ಆನಂದದಿಂದಲೇ ಮನಸ್ಸು ಏಕಾಗ್ರವಹಿಸುವುದು. ಹಾಗು ಚಿತ್ತದ ಕಲ್ಮಶಗಳಿಂದ ದೂರವಾದಾಗಲೇ ಸಮಾಧಿಯು ಲಭಿಸುವುದು ಇದೇ ತಕ್ಷಣದ ಕಾರಣವಾಗಿದೆ. ಅಂದರೆ ಒಟ್ಟಾರೆ ಹೇಳುವುದಾದರೆ ಯೋಗ್ಯ ವಿಷಯವೊಂದರ ಮೇಲೆ ಚದುರಿಹೋಗದಂತಹ ಚಿತ್ತದ ಏಕಾಗ್ರತೆಯಾಗಿದ್ದು ಕುಶಲಸ್ಥಿತಿಗಳ ಸಮಗ್ರತೆ ಹೊಂದಿಸುವಂತಹದ್ದಾಗಿದೆ.
ಇದನ್ನು ವಾಯುವಿಲ್ಲದ ಕಡೆ ಸ್ಥಿರವಾಗಿ ಅಚಲ ಸ್ಥಿತಿಯಲ್ಲಿರುವ ದೀಪಕ್ಕೆ ಹೋಲಿಸುತ್ತಾರೆ.
ಯಾವುದಕ್ಕೂ ಅವಲಂಬಿತವಾಗದೆ, ಅಚಲವಾಗಿ, ಅಕ್ಷೊಭ್ಯವಾಗಿ (ಅಭಾದಿತ) ಶಾಂತವಾಗಿ, ಯಾವುದಕ್ಕೂ ಅಂಟದೆ ಸರಿಯಾಗಿ, ಏಕವಾಗಿ ಮನಸ್ಸು ಕೇಂದ್ರೀಕೃತವಾಗಿ ನೆಲಸುವಂತಹುದೇ ಸಮಾಧಿಯಾಗಿದೆ.
ಕಲ್ಮಶಗಳಿಂದ, ತಡೆಗಳಿಂದ ದೂರವಾಗಿ, ಸುಖ, ಶಾಂತತೆಯಿಂದ ಸಮನ್ವಯವಾಗಿ ಏಕವಾಗಿ, ಸ್ಥಿರವಾಗಿ ವಿಹರಿಸುವಂತಹುವೇ ಸಮಾಧಿ ಎನಿಸುತ್ತದೆ.
ಸಮಾಧಿ ಸ್ವರೂಪ
ಸಮಾಧಿಯು ಚಿತ್ತ ಏಕಾಗ್ರತೆಯ ಸ್ಥಿತಿಯಾಗಿದೆ. ಇಲ್ಲಿ ಒಂದು ವಿಷಯದ ಮೇಲೆ ಪೂರ್ಣ ಏಕಾಗ್ರವಹಿಸಿ ಮಿಕ್ಕೆಲ್ಲದರಿಂದ ವಿಮುಖರಾಗುತ್ತೇವೆ. ಇದಕ್ಕೆ ಪಾಳಿಯಲ್ಲಿ ಬಹಳಷ್ಟು ಸಮಾನಾರ್ಥಕ ಪದಗಳಿವೆ. ಝಾನ/ಧ್ಯಾನ/ಭಾವನ/ಸಮಾಪತ್ತಿ ಇತ್ಯಾದಿ.
ಎಲ್ಲಾ ಕುಶಲಸ್ಥಿತಿಗಳಿಗೆ ಸಮಾಧಿಯೇ ನಾಯಕವಾಗಿದೆ. ಇಲ್ಲಿ ಒಂದೇ ವಿಷಯ ವಸ್ತುವಿನ ಮೇಲೆ ಮನಸ್ಸು ಮತ್ತು ಎಲ್ಲಾ ಮಾನಸಿಕ ಕುಶಲ ಸ್ಥಿತಿಗಳು ಏಕಾಗ್ರವಾಗುವುದರಿಂದ ಇದಕ್ಕೆ ಕುಶಲ ಸ್ಥಿತಿಗಳ ಸಮಗ್ರತೆ ಎನ್ನುವೆವು. ಎಲ್ಲಾ ಮಾನಸಿಕ ಸ್ಥಿತಿಗಳು ಬಾಗುವುದರಿಂದ, ಹಿಂಬಾಲಿಸುವುದರಿಂದ, ಕೇಂದ್ರೀಕೃತವಾಗುವುದರಿಂದ ಸಮವಾಗಿ, ಸರಿಯಾಗಿ, ಏಕ ವಿಷಯದ ಮೇಲೆ ಹರಿಸುವುದರಿಂದ ಇದು ಸಮಾಧಿಯಾಗಿದೆ.
ಸಮಾಧಿಯ ಲಕ್ಷಣವೇನೆಂದರೆ ನೆಲಸುವಿಕೆ ಮತ್ತು ಚದುರಿ ಹೋಗದಿರುವಿಕೆ. ಸಮಾಧಿಯ ಕ್ರಿಯೆಯೆ ಚದುರುವುದನ್ನು ತೆಗೆದುಹಾಕುವಿಕೆ, ಚಿತ್ತದ ಅಚಲತೆಯಿಂದ ಇದು ವ್ಯಕ್ತವಾಗುತ್ತದೆ. ಸಮಾಧಿಗೆ ತತ್ಕ್ಷಣದ ಕಾರಣವೇನೆಂದರೆ ಆನಂದಿಸುವಿಕೆ. ಆನಂದ, ಉತ್ಸಾಹದಿಂದ ಏಕಾಗ್ರವಾದಾಗ ಚಿತ್ತವು ಕಶ್ಮಲಗಳಿಂದ ಮುಕ್ತವಾಗುತ್ತದೆ. ಹೀಗೆ ಯಾವುದಕ್ಕೂ ಅವಲಂಬಿತವಾಗದೆ, ಅಚಲವಾಗಿ, ಅಭಾಧಿತವಾಗಿ, ತಡೆಗಳಿಂದ ದೂರವಾಗಿ, ಏಕವಾಗಿ, ಸ್ಥಿರವಾಗಿ, ಶಾಂತಿ ಮತ್ತು ಸುಖಗಳಿಂದ ಮನಸ್ಸು ಕೇಂದ್ರೀಕೃತವಾಗಿ ಸಮನ್ವಯವಾಗಿ, ವರ್ತಮಾನದಲ್ಲಿ ನೆಲೆಸಿ, ವಿಹರಿಸುವಂತಹುದೇ ಸಮಾಧಿಯಾಗಿದೆ.
ಧ್ಯಾನವೆಂದರೆ ಸತ್ಯವನ್ನು ಸಾಕ್ಷಾತ್ಕರಿಸುವುದು,
ಕಹಿಯಾದ ಸತ್ಯ, ಕಠೋರವಾದ ಸತ್ಯಗಳನ್ನು ಜೀಣರ್ಿಸಿಕೊಳ್ಳುವುದು.
ಅದಕ್ಕಾಗಿ ಸದಾಕಾಲ ಜಾಗರೂಕತೆಯಿಂದ ತಮ್ಮನ್ನೇ (ಉಸಿರಾಟವನ್ನು ಶರೀರ ಮತ್ತು ಚಿತ್ತವನ್ನು) ವೀಕ್ಷಿಸುವುದು.
ತಮ್ಮಲ್ಲಿ ನಡೆಯುವ ಎಲ್ಲಾ ಆಗುಹೋಗುವಿಕೆಗಳನ್ನು ನಿಷ್ಪಕ್ಷಪಾತವಾಗಿ, ಏಕಾಗ್ರತೆಯಿಂದ ಯಾವುದೇ ಭಂಗವಿಲ್ಲದೆ, ಯಾವುದೇ ಅಡಚಣೆಯಿಲ್ಲದೆ ವಿರಾಗದಿಂದ ವೀಕ್ಷಿಸುವುದಾಗಿದೆ ಮತ್ತು ವಿಮುಕ್ತಿ ಹೊಂದುವುದಾಗಿದೆ.
ಎಲ್ಲಾ ಜ್ಞಾನಗಳಿಗಿಂತ ಶ್ರೇಷ್ಠ ಜ್ಞಾನ ನಮ್ಮನ್ನೇ ಅರಿಯುವ ಜ್ಞಾನವಾಗಿದೆ.
ಎಲ್ಲಾ ಸುಖಗಳಿಗಿಂತ ಶ್ರೇಷ್ಠ ಸುಖ ನಮ್ಮಲ್ಲೇ ಇರುವ ನಿಬ್ಬಾಣದ ಸುಖವಾಗಿದೆ.
ಎಲ್ಲಾ ಉನ್ನತಿಗಳಿಗಿಂತ ಶ್ರೇಷ್ಠ ಉನ್ನತಿ ಈ ಧ್ಯಾನೋನ್ನತಿಯಾಗಿದೆ.
ಯಾರಿಗೆ ಯಾವ ಧ್ಯಾನ ?
ಬೌದ್ಧರ ಧ್ಯಾನವು ಕೇವಲ ಜ್ಞಾನಿಗಳಿಗೆ ಮಾತ್ರವಲ್ಲ, ಸರ್ವರಿಗೂ, ಇಲ್ಲಿ ಅವರವರ ಪ್ರಚನ್ನತೆಗೆ ತಕ್ಕಂತೆ ಧ್ಯಾನಗಳಿವೆ.
ಭಕ್ತರಿಗೆ ಬುದ್ದಾನುಸತಿ ಧ್ಯಾನ
ಕೋಪಿಷ್ಟರಿಗೆ ಮೆತ್ತಾ ಧ್ಯಾನ
ಸೇವಾಮನೋಭಾವದವರಿಗೆ ಕರುಣಾ ಧ್ಯಾನ
ಅತೀಂದ್ರಿಯಾವಸ್ಥೆಯಲ್ಲಿ ಆಸಕ್ತರಿಗೆ ಕಸಿನಾ ಧ್ಯಾನ
ದೇಹ ಲೋಭಿಗಳಿಗೆ ಅಶುಭಾ ಧ್ಯಾನ
ಹೊಟ್ಟೆಬಾಕರಿಗೆ ಆಹಾರ ಪತಿಕೂಲ ಧ್ಯಾನ
ಅಸೂಯೆಪರರಿಗೆ ಮುದಿತಾ ಧ್ಯಾನ
ನ್ಯಾಯಪರರಿಗೆ ಉಪೇಕ್ಖಾ ಧ್ಯಾನ
ಬುದ್ಧಿವಂತರಿಗೆ ಹಲವು ಧ್ಯಾನ
ಚಂಚಲಿಗರಿಗೆ ಮತ್ತು ಸರ್ವರಿಗೂ ಅನಾಪಾನಸತಿ ಧ್ಯಾನ
ವಿಮುಕ್ತ ಆಕಾಂಕ್ಷಿಗಳಿಗೆ ವಿಪಶ್ಶನ ಧ್ಯಾನ
ಹೀಗೆ ಸರ್ವರೂ ಧ್ಯಾನದಲ್ಲಿ ಲಾಭ ಪಡೆಯುತ್ತಾರೆ.
ಧ್ಯಾನ-ಸಮಾಧಿಯು ಏತಕ್ಕಾಗಿ ? ಅದರ ಲಾಭಗಳೇನು ?
ಧ್ಯಾನದ ಲಾಭಗಳು ಅಪಾರ, ಅನಂತವಾಗಿದೆ ಮತ್ತು ಮಾಡುವ ಸರ್ವರಿಗೂ ಲಾಭದಾಯಕವಾಗಿದೆ. ಬೌದ್ಧರ ಧ್ಯಾನವಂತು ಸರಳವಾಗಿದೆ, ಸುರಕ್ಷಿತವಾಗಿದೆ ಮತ್ತು ಅತ್ಯಂತ ಪರಿಣಾಮಕಾರಿಯಾಗಿದೆ. ಇದಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ ಮತ್ತು ವಿಜ್ಞಾನಿಗಳಿಂದಲೂ ಅಧ್ಯಯನಕ್ಕೆ ಒಳಪಟ್ಟು ಪ್ರಶಂಸನೀಯವಾಗಿದೆ. ವೈದ್ಯರಿಂದಲೂ ಶ್ಲಾಘನೆಗೆ ಸಲಹೆಗೆ ಗುರಿಯಾಗಿದೆ. ಇದರ ಲಾಭಗಳನ್ನು ಈ ರೀತಿಯಾಗಿ ವಿಂಗಡಿಸಬಹುದು.
. ಆರೋಗ್ಯಕರ ಲಾಭಗಳು
. ಲೌಕಿಕ ಲಾಭಗಳು ಮತ್ತು ವ್ಯಕ್ತಿ ವಿಕಸನ ಲಾಭಗಳು
. ಅಲೌಕಿಕ ಲಾಭಗಳು
. ಲೋಕೋತ್ತರ ಲಾಭಗಳು ಮತ್ತು ಬುದ್ಧತ್ವ
. ಧ್ಯಾನದ ಆರೋಗ್ಯಕರ ಲಾಭಗಳು :
ಮಾನವ ಇಂದು ಇಂದ್ರೀಯ ಸುಖಗಳಿಗೆ ದಾಸನಾಗಿ, ಅದನ್ನು ಪ್ರಾಪ್ತಿಗೊಳಿಸಲು ಹಣ ಗಳಿಕೆಯ ಹಿಂದೆ ಬಿದ್ದು, ನಿರಂತರ ಅತೃಪ್ತನಾಗಿ, ನಾನಾ ಒತ್ತಡಗಳಿಗೆ ಗುರಿಯಾಗಿ ರೋಗಿಯಾಗಿದ್ದಾನೆ. ಸದಾ ಸುಖಗಳ ಹಿಂದೆ ಬಿದ್ದು ಅದರ ಪ್ರಾಪ್ತಿಗೆ ಹೊರಟಾಗ ವಿರೋಧಗಳನ್ನು ಎದುರಿಸಲಾರದೆ, ಕುಪಿತನಾಗಿ ಕ್ರೋಧವುಳ್ಳವನಾಗಿ, ಚಿಂತಿತನಾಗಿ, ಭಯಗೊಂಡು ಮಾನಸಿಕ ಅಸ್ಥಿರವುಳ್ಳವನಾಗಿ ವ್ಯವಸ್ಥಿತ ಬದುಕಿನಿಂದ ಬಿದ್ದು ಶಾರೀರಿಕವಾಗಿ, ಮಾನಸಿಕವಾಗಿ, ನೈತಿಕವಾಗಿ, ಬೌದ್ಧಿಕವಾಗಿ ಹಾಳಾಗಿದ್ದಾನೆ. ಮಾನವನಿಗೆ ಕೆಲಸಗಳನ್ನು ನಿರ್ವಹಿಸಲು ಅಸಮರ್ಥಗೊಂಡಾಗ, ಅಥವಾ ಇಷ್ಟಗಳು ಕೈಗೂಡದೆ ಹೋದಾಗ ಅಥವಾ ನಿರಂತರ ಕಷ್ಟಗಳು ಸಮಸ್ಯೆಗಳು ಬಂದಾಗ ಆತನು ಕ್ರೋಧವುಳ್ಳವನಾಗುತ್ತಾನೆ, ಚಿಂತಿತನಾಗುತ್ತಾನೆ. ಭಯಗೊಳ್ಳುತ್ತಾನೆ. ಹೀಗೆ ಒತ್ತಡಗಳು ಹೆಚ್ಚಾಗಿ ಅವಿಶ್ರಾಂತಿಯು ತಲೆದೋರುತ್ತದೆ. ಕ್ಷೊಭೆಯಿಂದ ಮನಸ್ಸು ಕೂಡ ಅನೇಕ ರೋಗಗಳು ತಲೆದೋರುತ್ತವೆ. ಆದರೆ ಧ್ಯಾನದಿಂದ ಅವೆಲ್ಲಾ ರೋಗಗಳು ಇನ್ನಿಲ್ಲವಾಗುತ್ತದೆ.
1. ಮೊದಲಿಗೆ ಆಳವಾದ ವಿಶ್ರಾಂತಿಯು ದೊರೆತು ಒತ್ತಡಗಳಿಂದ ಮುಕ್ತನಾಗುತ್ತಾನೆ. ಆತನು 10 ನಿಮಿಷ ಧ್ಯಾನ ಮಾಡಲಿ ಅದು ಪರಿಣಾಮಕಾರಿಯಾಗಿರುತ್ತದೆ.
2. ಖಿನ್ನತೆ, ಚಿಂತೆ, ಭಯದಿಂದ ಮನಸ್ಸು ದೂರವಾಗುತ್ತದೆ. ಕೋಪ ನಿಯಂತ್ರಣಕ್ಕೆ ಬರುತ್ತದೆ.
3. ಧ್ಯಾನದ ವಿಶ್ರಾಂತಿಯುತ ಆನಂದ, ಶಾಂತತೆಯಿಂದಾಗಿ, ದೇಹದಲ್ಲಿ ಅಟ್ರಿನಾಲಿನ್ ಮತ್ತಿತರ ಹಾಮರ್ೊನ್ಗಳಾದ, ಸೆರೊಟೊನಿನ್ ಮತ್ತು ಎಂಡೊಪಿನ್ಗಳ ಸ್ರವಿಕೆಯಾಗುತ್ತದೆ. ಹಾಗು ಈ ರೀತಿಯ ರಾಸಾಯನಿಕ ಸ್ರವಿಕೆಯಿಂದಾಗಿ ಶರೀರವು ಪ್ರಪುಲ್ಲಿತವಾಗಿ, ರೋಗ ನಿರೋಧಕ ಶಕ್ತಿ ವೃದ್ಧಿಗೊಂಡು, ಹೃದಯಬಡಿತ ಆರೋಗ್ಯದ ಹಂತದಲ್ಲಿದ್ದು, ಆಮ್ಲಜನಕವು ಹೆಚ್ಚಾಗಿ ದೇಹಕ್ಕೆ ದೊರೆತು, ರಕ್ತಚಲನೆ ಬಾಧರಹಿತವಾಗಿ ಚಾಲನೆಗೊಂಡು ರಕ್ತ ಒತ್ತಡವು ಸಾಮಾನ್ಯ ಸ್ಥಿತಿಗೆ ಬರುತ್ತದೆ. ಮಾಂಸಖಂಡಗಳ ಬಿಗಿವು ಸಡಿಲವಾಗುತ್ತದೆ. ದೇಹವು ಸಮತೋಲನ ಸ್ಥಿತಿಗೆ ಬರುತ್ತದೆ.
4. ರಕ್ತದಲ್ಲಿನ ಲಾಕ್ಟೆಟ್ನ್ನು ಕಡಿಮೆ ಮಾಡುತ್ತದೆ.
5. ಮೈಗ್ರೆನ್ನಂತಹ ತಲೆನೋವು ವಾಸಿಯಾಗುತ್ತದೆ.
6. ನಿದ್ರಾರಹಿತತೆ ದೂರವಾಗಿ, ಸುಖನಿದ್ರೆ ಪ್ರಾಪ್ತಿಯಾಗುತ್ತದೆ ಮತ್ತು ಸುಂದರ ಸ್ವಪ್ನಗಳನ್ನು ಕಾಣುತ್ತಾರೆ.
7. ಹೃದಯ ರೋಗವನ್ನು ಕಡಿಮೆ ಮಾಡುತ್ತದೆ.
8. ದೇಹ ತೂಕವನ್ನು ಇಳಿಸುತ್ತದೆ.
9. ಮಾನಸಿಕ ಅಸ್ವಸ್ಥತೆಯನ್ನು ಗುಣಪಡಿಸುತ್ತದೆ.
10. ಮಾನಸಿಕ ನಿಯಂತ್ರಣ ಹೆಚ್ಚಿಸುತ್ತದೆ.
11. ಬುದ್ಧಿಮಾಂಧ್ಯತೆ ಮತ್ತು ಮರೆವು ನಿವಾರಿಸುತ್ತದೆ.
12. ದುಶ್ಚಟಗಳಿಂದ ಮುಕ್ತಿ ದೊರಕಿಸುತ್ತದೆ.
13. ನಕರಾತ್ಮಕ ಯೋಚನೆಗಳಿಂದ ವಿಮುಕ್ತಿ ನೀಡಿಸುತ್ತದೆ.
14. ದೇಹದ ಕಾಂತಿ ಮತ್ತು ಮುಖದ ಪ್ರಸನ್ನತೆ ತೇಜಸ್ಸು ಹೆಚ್ಚಿಸುತ್ತದೆ.
15. ಅಲಜರ್ಿ, ಆಥ್ರರ್ಿಟಿಸ್ ನಂತಹ ದೀರ್ಘಕಾಲಿಕ ವ್ಯಾಧಿಗಳು ಗುಣವಾಗುತ್ತದೆ.
16. ಕಣ್ಣಿನ ದೃಷ್ಟಿ ಸರಿಹೋಗುತ್ತದೆ.
17. ಸ್ತ್ರೀರೋಗಗಳು ನಿವಾರಣೆಯಾಗುತ್ತವೆ.
18. ದೇಹ ನಿರೋಧಕ ಶಕ್ತಿ ವೃದ್ಧಿಯಾಗಿ ವೈರಸ್ನ ಚಟುವಟಿಕೆ ಕ್ಷೀಣವಾಗುತ್ತದೆ. ಇತ್ಯಾದಿ…
. ಧ್ಯಾನದ ಲೌಕಿಕ ಲಾಭಗಳು ಮತ್ತು ವ್ಯಕ್ತಿ ವಿಕಸನ ಲಾಭಗಳು:
ಧ್ಯಾನಿಗೆ ಅನೇಕ ವಿಧವಾದ ಲೌಕಿಕ ಲಾಭಗಳಾಗುತ್ತವೆ. ಆದರೆ ಆಳವಾದ ಧ್ಯಾನಿಗೆ ಮಾತ್ರ ಕೆಳಕಂಡ ಲಾಭಗಳಾಗುತ್ತವೆ.
1. ಎಲ್ಲಾ ರೀತಿಯ ಶಾರೀರಿಕ ಮಾನಸಿಕ ಮತ್ತು ಭೌದ್ಧಿಕ ಸಮತೋಲನ ಏರ್ಪಡುತ್ತದೆ.
2. ಮನಸ್ಸಿಗೆ ವಿಶ್ರಾಂತಿ, ಸುಖ, ಆನಂದ ಮತ್ತು ಶಾಂತಿ ಸಿಗುತ್ತದೆ.
3. ಮನಸ್ಸನ್ನು ನಿರ್ವಹಿಸುವ ಜ್ಞಾನ ಸಿಗುತ್ತದೆ.
4. ಇಚ್ಛಾಶಕ್ತಿಯನ್ನು ವೃದ್ಧಿಸುತ್ತವೆ ಮತ್ತು ಪ್ರಬಲ ಶ್ರದ್ಧೆಯುತ ವ್ಯಕ್ತಿತ್ವ ನಿಮರ್ಾಣವಾಗುತ್ತದೆ.
5. ಮಾನಸಿಕ ಶಕ್ತಿ ಸಂವರ್ಧನೆಯಾಗಿ ಅತ್ಯಂತ ದೃಢನಿಧರ್ಾರದ ವ್ಯಕ್ತಿಯಾಗುತ್ತಾರೆ ಮತ್ತು ಪ್ರಯತ್ನಶಾಲಿಗಳಾಗುತ್ತಾರೆ.
6. ನೈತಿಕತೆಗೆ ವಾಲುತ್ತಾರೆ. ಸಚಾರಿತ್ರ್ಯವಂತರಾಗುತ್ತಾರೆ.
7. ಅತ್ಯಂತ ಎಚ್ಚರಿಕೆವುಳ್ಳವರಾಗಿದ್ದು, ಸ್ಮೃತಿವಂತರಾಗಿ ಜ್ಞಾಪಕಶಕ್ತಿಯು ವೃದ್ಧಿಯಾಗುತ್ತದೆ.
8. ಪ್ರತಿಯೊಂದು ಕಾರ್ಯವು ಏಕಾಗ್ರತೆಯಿಂದ ಮತ್ತು ಸುವ್ಯವಸ್ಥೆಯಿಂದ ಮಾಡುತ್ತಾರೆ.
9. ಅತ್ಯಂತ ಮೇಧಾವಿಗಳಾಗಲು ಮನಸ್ಸು ಸಿದ್ಧವಾಗುತ್ತದೆ, ಜ್ಞಾನಿಗಳಾಗುತ್ತಾರೆ. ತೋರಿಕೆಯ ಆಚೆಯದನ್ನು ಕಾಣುವ ಸಾಮಥ್ರ್ಯ ಲಭಿಸುತ್ತದೆ. ವ್ಯವಸ್ಥಿತವಾಗಿ ಕಾರ್ಯಶೀಲತೆ ಹೆಚ್ಚಳ ಮತ್ತು ಸ್ವಸಂಶೋಧಕರಾಗುತ್ತಾರೆ.
10. ಅತ್ಯಂತ ಶಾಂತಚಿತ್ತರಾಗಿದ್ದು, ಏನೋ ಹೋದರೂ ಕಳವಳವಿಲ್ಲ, ವಿಲಾಪವಿಲ್ಲ. ಏನೇ ಲಭಿಸಿದರೂ ಸಂತೋಷವಿಲ್ಲ, ಕುಣಿದಾಡುವಿಕೆ ಇಲ್ಲ. ಕೋಪವಿಲ್ಲ, ಚಿಂತೆ-ಭಯಗಳು ಮೊದಲೇ ಇಲ್ಲ. ಆತ ಸಮಚಿತ್ತತೆಯುಳ್ಳ ಸ್ಥಿತಪ್ರಜ್ಞಾತೆ ಪಡೆದಿರುತ್ತಾನೆ, ಲೋಭರಹಿತರಾಗುತ್ತಾರೆ.
11. ವಿಶ್ವಭಾತೃತ್ವವುಳ್ಳವರಾಗಿ ಸರ್ವಮಾನವರಲ್ಲಿ, ಸರ್ವಜೀವಿಗಳಲ್ಲಿ ಭೇದಭಾವ ಕಾಣದೆ ಸರ್ವರಲ್ಲಿ ಒಂದಾಗಿ ನಿಸ್ವಾರ್ಥ ಪ್ರೀತಿ ಮತ್ತು ದ್ವೇಷರಹಿತ ಪ್ರೀತಿ ಮತ್ತು ಜ್ಞಾನಯುತ ಪ್ರೀತಿ ಹಂಚುತ್ತಾರೆ.
12. ವಿದ್ಯಾಥರ್ಿಗಳಲ್ಲಿ ಜಾಗರೂಕತೆ, ಸ್ಮರಣಶಕ್ತಿ, ಜ್ಞಾನ ಪ್ರೇಮವುಂಟಾಗುತ್ತದೆ. ಏಕಾಗ್ರತೆ ಹರಿತವಾಗಿ ಜ್ಞಾಪಕಶಕ್ತಿ ಮತ್ತು ಜ್ಞಾನ ಎರಡೂ ವೃದ್ಧಿಯಾಗುತ್ತದೆ.
13. ಎಲ್ಲಾ ಬಗೆಯ ವೃತ್ತಿಯವರಲ್ಲಿ ಒತ್ತಡವಿಲ್ಲದೆ ಕಾರ್ಯಮಾಡುವ ಸಾಮಥ್ರ್ಯ ಹೆಚ್ಚುತ್ತದೆ.
14. ಮನಶುದ್ಧತೆ, ಮನಪರಿವರ್ತನೆ ಮತ್ತು ಮನೋವಿಕಾಸವಾಗುತ್ತದೆ.
15. ಅಪಾರ ಸಹನೆಯು ವೃದ್ಧಿಯಾಗಿ, ಕ್ಷಮಾಶೀಲವಂತರು ಆಗುತ್ತಾರೆ.
16. ಇಂದ್ರೀಯಗಳ ಚಟುವಟಿಕೆ ಮತ್ತು ಮನಸ್ಸಿನ ಕಾರ್ಯಶೀಲತೆ ಅರ್ಥವಾಗಿ ಚಾಪಲ್ಯವು ನೀಗಿ, ಚಟಗಳಿಂದ ಮತ್ತು ದುಶ್ಚಟಗಳಿಂದ ಪಾರಾಗಿ ನಿಯಂತ್ರಿತ ಮನಸ್ಸನ್ನು ಪಡೆಯುತ್ತಾರೆ.
17. ಗಮನಹರಿಸುವ ಸಾಮಥ್ರ್ಯ ಹೆಚ್ಚಳವಾಗುತ್ತದೆ.
18. ಶರೀರದ ಮೇಲೆ, ಅಂಗಾಗಗಳ ಮೇಲೆ ಹತೋಟಿ ಸಿಗುತ್ತದೆ.
. ಧ್ಯಾನದ ಅಲೌಕಿಕ ಲಾಭಗಳು (ಅಭಿಜ್ಞಾ)
ಧ್ಯಾನದ ಅಲೌಕಿಕ ಲಾಭಗಳು ಅತ್ಯಂತ ಆಳವಾಗಿ ಧ್ಯಾನ ಮಾಡುವವರಿಗೆ ಮತ್ತು ಕನಿಷ್ಠ ಚತುರ್ಥ ಸಮಾಧಿ ಪ್ರಾಪ್ತಿ ಮಾಡಿದವರಿಗೆ ಮಾತ್ರ ಲಭಿಸುತ್ತದೆ. ಇವು ನಂಬಲು ಕಷ್ಟವಾದರೂ, ಸತ್ಯವಾಗಿದೆ.
1. ಧ್ಯಾನಿಗೆ ಮನೋಲ್ಲಾಸ, ಹಗುರತನದ ಭಾವನೆ ಮತ್ತು ದಿವ್ಯ ಆನಂದ ಹಾಗು ಪರಮಶಾಂತತೆಯ ಅನುಭೂತಿಯುಂಟಾಗುತ್ತದೆ.
2. ಮಾನಸಿಕ ಕಲ್ಮಶಗಳನ್ನು, ತಡೆಗಳನ್ನು ದಾಟಿರುವುದಕ್ಕಾಗಿ ಅವರಿಗೆ ಸ್ವತಂತ್ರತೆಯ, ಆರೋಗ್ಯದ, ಮುಕ್ತಿಯ, ಸರಿದಾರಿಗೆ ಬಂದಂತಹ ದಿವ್ಯಸುಖ ಲಭಿಸುತ್ತದೆ.
3. ದಿವ್ಯಸ್ವಪ್ನ, ದಿವ್ಯಾನುಭವ, ಧ್ಯಾನದಲ್ಲಿ ಬೆಳಕುಗಳನ್ನು, ದಿವ್ಯದರ್ಶನ, ಹಗುರತನ, ಇಡೀ ಶರೀರದಲ್ಲಿ ಆನಂದದ ಅನುಭವವುಂಟಾಗುತ್ತದೆ. ಭವಿಷ್ಯದ ಘಟನೆಗಳು ಮೊದಲೇ ಗೊತ್ತಾಗುವಿಕೆ ಇವೆಲ್ಲಾ ಲಭಿಸುತ್ತದೆ. ಧ್ಯಾನಿಯಲ್ಲಿ ಜನರಿಗೆ ಗೌರವ ಮೂಡುತ್ತದೆ. ಆತನ ಕೀತರ್ಿಯು ಹಬ್ಬುತ್ತದೆ.
4. ಆತನ ಮನಸ್ಸು, ಪ್ರಶಾಂತವಾಗುತ್ತದೆ, ಪರಿಶುದ್ಧವಾಗುತ್ತದೆ, ಸುಸಂಸ್ಕೃತ ವಾಗುತ್ತದೆ, ಕಲ್ಮಶರಹಿತವಾಗುತ್ತದೆ, ತಿಳಿಯಾಗುತ್ತದೆ. ಪಾಪರಹಿತವಾಗುತ್ತದೆ. ಕೌಶಲ್ಯಯುತವಾಗಿ, ಮೆದುವಾಗಿ, ಮಣಿಯು ವಂತಾಹದ್ದಾಗುತ್ತದೆ, ಕಾರ್ಯಶೀಲವಾಗುತ್ತದೆ, ದೃಢವಾಗುತ್ತದೆ ಮತ್ತು ಪರಮಶಾಂತವಾಗಿರುತ್ತದೆ, ಅಕ್ಷೊಭ್ಯವಾಗಿರುತ್ತದೆ. ಈ ರೀತಿಯ ಮನಸ್ಸಿನಿಂದ ಆತನು ವಿಭಿನ್ನರೀತಿಯ ಪವಾಡಗಳನ್ನು ಮಾಡುವವನು ಆಗುತ್ತಾನೆ.
5. ಆತನು ಅನೇಕ ಶರೀರಗಳನ್ನು ಏಕಕಾಲದಲ್ಲಿ ಪಡೆಯುವವನಾಗುತ್ತಾನೆ. ಹಾಗೆಯೇ ಒಬ್ಬನು ಆಗುತ್ತಾನೆ.
6. ಮಾಯವಾಗುತ್ತಾನೆ, ಹಾಗೆಯೇ ಪ್ರತ್ಯಕ್ಷವಾಗುತ್ತಾನೆ.
7. ಯಾವರೀತಿಯ ಅಡ್ಡಿ ಇಲ್ಲದೆ ಗೋಡೆ, ಪರ್ವತಗಳನ್ನು ತೂರಿ ಹೋಗುತ್ತಾನೆ.
8. ಗಾಳಿಯಲ್ಲಿ ಹಾರುತ್ತಾನೆ, ಆಕಾಶದಲ್ಲಿ ನಡೆಯುತ್ತಾನೆ, ನಿಲ್ಲುತ್ತಾನೆ, ಪಕ್ಷಿಯಂತೆ ಹಾರಿ ಹೋಗುತ್ತಾನೆ.
9. ನೀರಿನಲ್ಲಿ ನಡೆಯುತ್ತಾನೆ.
10. ಭೂಮಿಯಲ್ಲಿ ಮುಳುಗುತ್ತಾನೆ.
11. ಚಂದ್ರನನ್ನು ಮುಟ್ಟುವಂತಹವನು ಆಗುತ್ತಾನೆ.
12. ಶರೀರದ ರೂಪಗಳನ್ನು ಬದಲಾಯಿಸಿ ಇಚ್ಛಿತ ರೂಪ, ಶರೀರಗಳನ್ನು ಪಡೆಯುತ್ತಾನೆ.
13. ರೋಗಗಳನ್ನು ನಿಯಂತ್ರಿಸುತ್ತಾನೆ ಮತ್ತು ವಾಸಿ ಮಾಡುತ್ತಾನೆ.
14. ಮುಪ್ಪನ್ನು ಇಚ್ಛಿಸಿದರೆ ದೂರವಿಡುತ್ತಾನೆ.
15. ಇಚ್ಛಿಸಿದರೆ ಕಲ್ಪಕಾಲ ಜೀವಿಸುತ್ತಾನೆ.
16. ದಿವ್ಯವಾದ ಕಿವಿಯಿಂದ ಮಾನವರ, ದೇವತೆಗಳ, ಬ್ರಹ್ಮರ, ಎಲ್ಲರ ವಾಣಿಯನ್ನು ಕೇಳಬಲ್ಲವನಾಗುತ್ತಾನೆ. ಹತ್ತಿರದ ದೂರದ ಸೂಕ್ಷ್ಮವಾಗಿರುವ ಪ್ರಬಲವಾದ ಶಬ್ದಗಳನ್ನೆಲ್ಲಾ ಆಲಿಸುವಂತಾಗುತ್ತಾನೆ.
17. ಪರರ ಮನಸ್ಸುಗಳನ್ನು ಓದುವಂತಹವನು ಆಗುತ್ತಾನೆ. ಇವರ ಮನಸ್ಸು ರಾಗದಿಂದ, ದ್ವೇಷದಿಂದ, ಮೋಹದಿಂದ, ಅಥವಾ ಏಕಾಗ್ರತೆಯಿಂದಿದೆ, ಸ್ವತಂತ್ರದಿಂದಿದೆ, ಸ್ನೇಹದಿಂದಿದೆ ಎಂದೆಲ್ಲಾ ಅವರ ಮನಸ್ಸಿನ ಯೋಚನೆಗಳನ್ನು ಸ್ಥಿತಿ ಅರಿಯುವಂತಾಗುತ್ತಾರೆ.
18. ಹಾಗೆಯೇ ಹಿಂದಿನ ಜನ್ಮಗಳನ್ನು ಅರಿಯುತ್ತಾರೆ. 1, 2, ಅಥವಾ 100, 1000 ಅಥವಾ ಕಲ್ಪ, ಅಥವಾ ಹಲವಾರು ಕಲ್ಪಗಳಷ್ಟು ಹಿಂದಿನ ಜನ್ಮಗಳನ್ನು ಸ್ಮರಿಸುತ್ತಾರೆ. ಎಲ್ಲಿ ಹುಟ್ಟಿ, ಏನಾಗಿ, ನಂತರ ಏನಾದೆವು ಎಂದೆಲ್ಲಾ ಕಾಣುತ್ತಾರೆ.
19. ನಂತರ ದಿವ್ಯಚಕ್ಷುವಿನಿಂದ ಕೆಟ್ಟ ಮತ್ತು ಒಳ್ಳೆಯ ಕರ್ಮಗಳಿಗೆ ಫಲಗಳನ್ನು ಕಾಣುತ್ತಾರೆ. ಈ ರೀತಿ ಮಿಥ್ಯಾದೃಷ್ಟಿಯಿಂದ, ಕುಕರ್ಮದಿಂದ, ಕೆಟ್ಟ ಮನಸ್ಸಿನಿಂದ ಮತ್ತು ಕುವಾಚದಿಂದ ಈ ರೀತಿಯ ಹೀನಸ್ಥಿತಿ ದೊರಕಿತ್ತು. ಅಥವಾ ಆ ರೀತಿಯ ಸಮ್ಮದೃಷ್ಟಿಯಿಂದ, ಸುಕರ್ಮದಿಂದ ಸುಮನಸ್ಸಿನಿಂದ ಮತ್ತು ಸುವಾಚದಿಂದ ಈ ಸುಗತಿ ಲಭಿಸುವುದು ಎಂದೆಲ್ಲಾ ಕರ್ಮ ನಿಯಮ ಅರಿಯುತ್ತಾರೆ.
20. ಹಾಗೆಯೇ ಭವಿಷ್ಯವನ್ನು ಅರಿಯುತ್ತಾರೆ. ಮುಂದೆ ತಾವು ಅಥವಾ ಪರರು ಎಲ್ಲೆಲ್ಲಿ ಹುಟ್ಟುಬಹುದು ಅಥವಾ ಮುಂದಿನ ಬುದ್ಧರು ಯಾರು ಎಂದೆಲ್ಲಾ ಅರಿಯಬಹುದು.
21. ಇಚ್ಛಿಸಿದಂತೆ ನಡೆಯುವ ಪವಾಡ ಪಡೆಯುತ್ತಾರೆ.
22. ಮನಸ್ಸಿನ ಪೂರ್ಣ ನಿಯಂತ್ರಣ, ಪೂರ್ಣ ನಿಗ್ರಹ ಮತ್ತು ಪೂರ್ಣ ಮನೋಪ್ರಭುತ್ವ ಪಡೆಯುತ್ತಾರೆ.
23. ಇಚ್ಛಿಸಿದ್ದನ್ನು ಸೃಷ್ಠಿಮಾಡುತ್ತಾರೆ.
24. ಸಶರೀರಿಯಾಗಿ ಬ್ರಹ್ಮಲೋಕ, ಸ್ವರ್ಗಲೋಕ, ಇತರ ಲೋಕಗಳಿಗೆ ಕ್ಷಣಾರ್ಧದಲ್ಲಿ ಹೋಗುತ್ತಾರೆ ಮತ್ತು ಬರುತ್ತಾರೆ ಇತ್ಯಾದಿ…
ಈ ಬಗೆಯ ಪವಾಡಗಳನ್ನು ಸಾಧಿಸಲು 10 ಕಸಿನಾ ಧ್ಯಾನಗಳನ್ನು ಸಮಥಾ, ಮತ್ತು ಅರೂಪ ಸಮಾಧಿಗಳನ್ನು ಸಿದ್ಧಿಸಬೇಕಾಗುತ್ತದೆ. ಬುದ್ಧರ ಶಿಷ್ಯರಿಗೆ ಇವುಗಳಲ್ಲಿ ಹೇರಳವಾದ ಪ್ರಭುತ್ವವಿರುತ್ತದೆ. ಆದರೆ ಬುದ್ಧರಿಗಂತೂ ಮಿತಿಯಿಲ್ಲದ ಅಪಾರ ಪ್ರಭುತ್ವ ಮತ್ತು ಶಕ್ತಿಯಿರುತ್ತದೆ. ಆದ್ದರಿಂದಲೇ ಬುದ್ಧರಿಗೆ ಸಾಟಿ ಮತ್ತೊಬ್ಬ ಬುದ್ಧರೇ ಆಗಿರುತ್ತಾರೆ ಹೊರತು ಯಾವುದೇ ಸಾಮಾನ್ಯಸಿದ್ಧರಲ್ಲ. ಏಕೆಂದರೆ ಅದಕ್ಕೆ ಬೇಕಾಗುವಷ್ಟು ಪುಣ್ಯ, ಸಾಧನೆ, ಸಮಾಧಿಗಳನ್ನು ಜನ್ಮ ಜನ್ಮದಲ್ಲಿ ಗಳಿಸಿರುತ್ತಾರೆ.
. ಧ್ಯಾನದ ಲೋಕೋತ್ತರ ಲಾಭಗಳು ಮತ್ತು ಬುದ್ಧತ್ವ :
ಲೋಕೋತ್ತರ ಲಾಭಗಳು :
1. ಇಲ್ಲಿ ಸಾಧಕನು ನಾಲ್ಕು ಆರ್ಯ ಸತ್ಯಗಳ ದರ್ಶನ ಪಡೆಯುತ್ತಾನೆ, ಸಂಬೋಧಿಯನ್ನು ಪ್ರಾಪ್ತಿ ಮಾಡುತ್ತಾನೆ.
2. ಸಪ್ತ ವಿಶುದ್ಧಿ ಸಾಧಿಸುತ್ತಾನೆ.
3. ವಿಮುಕ್ತಿ ಪಡೆಯುತ್ತಾನೆ.
4. ತ್ರಿಲಕ್ಷಣ ಜ್ಞಾನ ಪಡೆಯುತ್ತಾನೆ.
5. ಮಾರ್ಗ ಮತ್ತು ಫಲ ಪಡೆಯುತ್ತಾನೆ.
6. ನಿಬ್ಬಾಣವನ್ನು ಸಾಕ್ಷಾತ್ಕಾರ ಮಾಡಿಕೊಳ್ಳುತ್ತಾನೆ.
7. ಜನ್ಮಗಳ ಅಂತ್ಯ ಮಾಡುತ್ತಾನೆ.
8. ಜನನ, ಮರಣದ ಚಕ್ರವ್ಯೂಹದಿಂದ ಬಿಡುಗಡೆ ಪಡೆಯುತ್ತಾನೆ.
9. ಸರ್ವ ದುಃಖಗಳ ನಿಶ್ಯೇಷ ಅಂತ್ಯ ಮಾಡುತ್ತಾನೆ.
10. ಅರಹಂತನಾಗುತ್ತಾನೆ.
ಬುದ್ಧತ್ವ :
ಬುದ್ಧತ್ವ ಸಾಧಾರಣವಾದುದಲ್ಲ. ಅದನ್ನು ಸಾಧಿಸಲು ಏಕಜನ್ಮ ಸಾಕಾಗುವುದಿಲ್ಲ. ಅಸಂಖ್ಯಾತ ಕಾಲದಲ್ಲಿ ಅಸಂಖ್ಯಾತ ಜನ್ಮಗಳಲ್ಲಿ ನಿರಂತರ ದಾನ, ಶೀಲ, ಸಮಾಧಿ, ಪ್ರಜ್ಞಾ, ಬಲ ಮತ್ತು 30 ಪಾರಮಿಗಳನ್ನು ಪರಿಪೂರ್ಣಗೊಳಿಸಬೇಕಾಗುತ್ತದೆ. ಪ್ರಜ್ಞಾ ಮತ್ತು ಕರುಣೆಯ ಪರಿಪೂರ್ಣ ಸಂಗಮ ಮಾಡಬೇಕಾಗುತ್ತದೆ. ಅದಕ್ಕೆ ಮುನ್ನ ಬೋಧಿಸತ್ವನಾಗಲು 8 ಅರ್ಹ ಗುಣಗಳನ್ನು ಪಡೆಯಬೇಕಾಗುತ್ತದೆ. ಇವೆಲ್ಲಕ್ಕೂ ಧ್ಯಾನವು ಒಂದು ಪ್ರಮುಖ ಅಂಗವೇ ಆಗಿದೆ. ಪರಮಪೂಜ್ಯ ಬುದ್ಧ ಘೋಷರವರ ಪ್ರಕಾರ ನಾಲ್ಕು ಬ್ರಹ್ಮವಿಹಾರದ ಧ್ಯಾನದಿಂದ ದಶಪಾರಾಮಿ ಪೂರ್ಣವಾಗುತ್ತದೆ.
ಬೌದ್ಧರಲ್ಲದವರು ಕೇವಲ ಆರೋಗ್ಯ ದೃಷ್ಟಿಯಿಂದ, ಲೌಕಿಕ ದೃಷ್ಟಿಯಿಂದ, ಅಥವಾ ಅಲೌಕಿಕ ಗುರಿಯಿಂದ ಸಾಧನೆ ಮಾಡುತ್ತಾರೆ ಅಥವಾ ಕಾಲ್ಪನಿಕ ದೇವರಲ್ಲಿ ಧ್ಯಾನ ಮಾಡುತ್ತಾರೆ.
ಆದರೆ ಬೌದ್ಧರು ಸಮ್ಮ ಸಂಬೋಧಿ ಪ್ರಾಪ್ತಿ ಮತ್ತು ನಿಬ್ಬಾಣ ಪ್ರಾಪ್ತಿಗೆ ಸಾಧನೆ ಮಾಡುತ್ತಾರೆ. ಅಂದರೆ ತಮ್ಮ ವಿಮುಕ್ತಿಗೆ ಸರ್ವಜೀವಿಗಳ ಹಿತಕ್ಕಾಗಿ ಮತ್ತು ದುಃಖವಿಮುಕ್ತಿಗಾಗಿ, ಸುಖಕ್ಕಾಗಿ ಹಾಗು ಕರುಣಾ ಪ್ರಜ್ಞಾಗಳ ಪರಿಪೂರ್ಣ ವಿಕಾಸಕ್ಕಾಗಿ ಬುದ್ಧತ್ವಕ್ಕಾಗಿ ಧ್ಯಾನ ಮಾಡುತ್ತಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
*ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ* ಮನುಕುಲವನ್ನೇ ಬೆಚ್ಚಿ ಬೀಳಿಸುವ ಹೃದಯ ವಿದ್ರಾವಕ ಘಟನೆ ಕಾಶ್ಮೀರದಲ್ಲಿ ನಡೆದಿದ್ದು, ಏನೂ ತಿಳಿಯದ ಕಂದಮ್ಮನ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿರುವುದರಿಂದ ಇಡೀ ಭಾರತವೇ ತಲೆ ತಗ್ಗಿಸುವಂತಾಗಿದೆ.ಪಾಪ ಏನೂ ತಿಳಿಯದ ಮುಗ್ದ ಬಾಲಕಿ ಇವರಿಗೆ ಏನು ಮಾಡಿತ್ತು. ಅತ್ಯಾಚಾರ ನಡೆಸಿ, ಕೊಲೆ ಮಾಡಿದವರು ಯಾರೀ ಆಗಿರಲಿ ಅವರಿಗೆ ಕೊಡುವ ಶಿಕ್ಷೆ, ಬೇರೆಯವರಿಗೂ ಪಾಟವಾಗಬೇಕು. ಇದರಲ್ಲಿ ಯಾವುದೇ ಧರ್ಮ, ರಾಜಕೀಯ ದಯವಿಟ್ಟು ಮಾಡ ಬೇಡಿ.ನಮ್ಮ ಬೇಡಿಕೆ ಆರೋಪಿಗಳಿಗೆ ಕಠಿಣ ಶಿಕ್ಷೆ…
ಮೈಸೂರಿನಲ್ಲಿ ನಡೆದ ಯುವ ದಸರಾ ಕಾರ್ಯಕ್ರಮ ವಿಶೇಷ ಘಟನೆಗೆ ಸಾಕ್ಷಿಯಾಗಿದೆ. ನಿವೇದಿತಾ ಗೌಡಗೆ ಚಂದನ್ ಶೆಟ್ಟಿ ಉಂಗುರ ತೊಡಿಸಿದ್ದಾರೆ. ‘ಬಿಗ್ ಬಾಸ್’ನಲ್ಲಿ ಸ್ಪರ್ಧಿಗಳಾಗಿದ್ದ ಚಂದನ್ ಶೆಟ್ಟಿ ಮತ್ತು ನಿವೇದಿತಾ ದಾಂಪತ್ಯ ಜೀವನಕ್ಕೆ ಕಾಲಿಡಲು ಮೈಸೂರು ದಸರಾ ವೇದಿಕೆಯಲ್ಲೇ ಮುನ್ನುಡಿ ಬರೆದಿದ್ದಾರೆ. ಯುವ ದಸರಾದಲ್ಲಿ ನಿವೇದಿತಾ ಅವರಿಗೆ ಪ್ರಪೋಸ್ ಮಾಡಿದ ಚಂದನ್ ಶೆಟ್ಟಿ ಉಂಗುರ ತೊಡಿಸಿದ್ದಾರೆ. ಮೈಸೂರಿನಲ್ಲಿ ನಡೆದ ಯುವ ದಸರಾ ಕಾರ್ಯಕ್ರಮ ರಂಗೇರಿದ್ದು ಕಾರ್ಯಕ್ರಮ ಮುಗಿಯುವ ವೇಳೆಯಲ್ಲಿ ಚಂದನ್ ಶೆಟ್ಟಿ ವೇದಿಕೆಯಲ್ಲಿಯೇ ಐ ಲವ್ ಯು ಹೇಳಿದ್ದಾರೆ….
ಟೀಂ ಇಂಡಿಯಾ ಮಹಿಳಾ ತಂಡದ ಸ್ಟಾರ್ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಸದ್ಯದಲ್ಲೇ ಹಸೆಮಣೆ ಏರುತ್ತಿದ್ದಾರೆ.ಈ ವಿಚಾರವನ್ನು ಸ್ವತಃ ವೇದಾ ಅವರೇ ರಿವೀಲ್ ಮಾಡಿದ್ದಾರೆ. ಕನ್ನಡ ನಾಡಿನ ವೇದಾ ಮೂಲತಃ ಚಿಕ್ಕಮಗಳೂರು ಜಿಲ್ಲೆ ಕಡೂರಿನವರಾಗಿದ್ದು ತಾವು ವಿವಾಹವಾಗುತ್ತಿರುವ ಲಲಿತ್ ಚೌಧರಿ ಎಂಬ ಯುವಕನ ಫೋಟೋವನ್ನು ಪೋಸ್ಟ್ ಮಾಡಿದ್ದರು. ವೇದಾ ಅವ್ರ ಪೋಸ್ಟ್ ಅನುಸಾರ ಅವರು ಲಲಿತ್ ಚೌಧರಿ ಎಂಬ ಯುವಕನನ್ನು ವರಿಸಲಿದ್ದಾರೆ. ಆದರೆ ಆ ಯುವಕನ ಕುರಿತಂತೆಯಾಗಲಿ, ವಿವಾಹದ ದಿನಾಂಕ ಸ್ಥಳದ ಮಾಹಿತಿಯಾಗಲಿ ಇನ್ನೂ ಲಭ್ಯವಾಗಿಲ್ಲ. ಶೀಘ್ರವೇ ಈ…
ನಮ್ಮ ಭಾರತದಲ್ಲಿ ಲಿವ್ ಇನ್ ರಿಲೇಷನ್ಶಿಪ್ ಈ ಮಾತು ಕೇಳಿದರೆ ಜನರು ಪ್ರತಿಕ್ರಿಯಿಸುವ ರೀತಿ ಬೇರೆಯೇ ಇರುತ್ತದೆ. ಯಾಕೆಂದರೆ ಇದು ನಮ್ಮ ಭಾರತೀಯ ಸಂಸ್ಕೃತಿ ಅಲ್ಲ, ಪಾಶ್ಚಿಮಾತ್ಯ ಸಂಸ್ಕೃತಿ. ಈ ಸಂಸ್ಕೃತಿ ಭಾರತದಲ್ಲಿ ತೀರಾ ಹೊಸತು.
ಹೆಸರು ಹಾಗೂ ವ್ಯಕ್ತಿ ಮಧ್ಯೆ ಒಂದು ಬಂಧವಿದೆ. ಅನೇಕ ಗಣ್ಯರು, ಸೆಲೆಬ್ರಿಟಿಗಳು ಯಶಸ್ಸಿಗಾಗಿ ತಮ್ಮ ಹೆಸರನ್ನು ಬದಲಿಸಿಕೊಂಡಿದ್ದಾರೆ. ಹೆಸ್ರು ಪ್ರತಿಯೊಬ್ಬ ವ್ಯಕ್ತಿ ಮೇಲೂ ಪರಿಣಾಮ ಬೀರುತ್ತದೆ. ಪ್ರತಿಯೊಂದು ಅಕ್ಷರಕ್ಕೂ ತನ್ನದೇ ಆದ ಶಕ್ತಿ ಹಾಗೂ ಗುಣಲಕ್ಷಣವಿದೆ. ನಿಮ್ಮ ಹೆಸ್ರು ಯಾವ ಅಕ್ಷರದಿಂದ ಶುರುವಾಗ್ತಿದೆ ಎಂಬುದರ ಮೇಲೆ ನಿಮ್ಮ ಸ್ವಭಾವವನ್ನು ಹೇಳಬಹುದು. ಕೆಲ ಅಕ್ಷರಗಳನ್ನು ಪ್ರಭಾವಶಾಲಿ ಎನ್ನಲಾಗುತ್ತದೆ. ಎ, ಜೆ, ಒ ಮತ್ತು ಎಸ್ ಅಕ್ಷರಗಳು ಪ್ರಭಾವಶಾಲಿಯಾಗಿರುತ್ತವೆ. ನಿಮ್ಮ ಅಕ್ಷರ ಎ ನಿಂದ ಶುರುವಾಗ್ತಿದ್ದರೆ ನಿಮ್ಮ ಸ್ವಭಾವದ ಬಗ್ಗೆ…
ಕ್ರೂರ ಬ್ರಿಟೀಷರು ನಮ್ಮ ದೇಶವನ್ನು ವಸಾಹತುವನ್ನಾಗಿ ಮಾಡಿದರು ಮತ್ತು ನಮ್ಮ ಸರಕುಗಳನ್ನು ಕಳವು ಮಾಡಿದರು, ಆದರೆ ಅವರು ತಮ್ಮ ‘ಫನ್ನಿ’ ಭಾಷೆಯನ್ನೂ ಬಿಟ್ಟು ಅದನ್ನು ಭಾರತದ ಅಧಿಕೃತ ಭಾಷೆಯಾಗಿ ಮಾಡಿದರು.