ಸುದ್ದಿ

ಇಷ್ಟು ದಿನ ಸ್ಯಾಂಡಲ್​ವುಡ್​ನಲ್ಲಿ ಮಿಂಚಿದ ದರ್ಶನ್ ಈಗ ಮಾಲಿವುಡ್​ನಲ್ಲಿ ತೆರೆಕಾಣಲಿದ್ದಾರೆ,…

22

ಚಾಲೆಂಜಿಂಗ್​ ಸ್ಟಾರ್​ ದರ್ಶನ್​  ಅಂದರೆ ಯಾರಿಗೆ  ತಾನೇ ಇಷ್ಟ ಇರಲ್ಲ ಹೇಳಿ, ಇಷ್ಟು ದಿನ ಸ್ಯಾಂಡಲ್​ವುಡ್​ನಲ್ಲಿ ಮಿಂಚಿದವರು. ಈಗ ಅವರು ಮಾಲಿವುಡ್​ಗೆ ಕಾಲಿಡುತ್ತಿದ್ದಾರೆ. ಹಾಗಂತ ಅವರು ಯಾವುದೇ ಮಲಯಾಳಂ ಸಿನಿಮಾ ಮಾಡುತ್ತಿದ್ದಾರೆ ಅಂತ ಅಲ್ಲ , ಅವರು ಯಾವ ಸಿನಿಮಾ ಮಾಡಲು ಒಪ್ಪಿಕೊಂಡಿಲ್ಲ . ಅಸಲಿ ವಿಚಾರ ಏನೆಂದರೆ, ‘ಕುರಕ್ಷೇತ್ರ’ ಸಿನಿಮಾ ಮಲಯಾಳಂನಲ್ಲಿ ನಾಳೆ ತೆರೆಕಾಣುತ್ತಿರುವ  ಕಾರಣಕ್ಕಾಗಿ ಈ ಸಮಾಚಾರ ಹುಟ್ಟುಹಾಕಿದೆ.

ದರ್ಶನ್​, ಹಿರಿಯ ನಟ ಅಂಬರೀಶ್​, ನಟ ನಿಖಿಲ್​ ಕುಮಾರಸ್ವಾಮಿ, ರವಿಚಂದ್ರನ್​ ಸೇರಿ ಅನೇಕರು ಈ ಸಿನಿಮಾಗಳಲ್ಲಿ ನಟಿಸಿದ್ದಾರೆ . ಈಗ ಈ ಒಂದು  ಸಿನಿಮಾ ಮಲಯಾಳಂಗೆ ಡಬ್​​ ಆಗಿ ತೆರೆಕಾಣಲಿದೆ . ‘ಕುರಕ್ಷೇತ್ರ’ ಸಿನಿಮಾ ಕನ್ನಡದಲ್ಲಿ ಭಾರೀ ಜನಮನ್ನಣೆ ಪಡೆದುಕೊಂಡಿತ್ತು. ಈ ಸಿನಿಮಾ ಒಟ್ಟು 100 ಕೋಟಿ ರೂ. ಗಿಂತ ಅಧಿಕ ಕಲೆಕ್ಷನ್​ ಮಾಡಿದೆ ಎನ್ನಲಾಗುತ್ತಿದೆ. ಮಲಯಾಳಂನಲ್ಲಿ ಈ ಸಿನಿಮಾವನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೆ ಎನ್ನುವುದೇ ಎಲ್ಲರಿಗೂ  ಕುತೂಹಲವನ್ನು  ಉಂಟು ಮಾಡಿದೆ.

ದರ್ಶನ್​ ನಟಿಸಿರುವ  ಸಾಕಷ್ಟು ಸಿನಿಮಾಗಳು ಈಗಾಗಲೇ ಮಲಯಾಳಂಗೆ ಡಬ್​ ಆಗಿ ಯೂಟ್ಯುಬ್​ನಲ್ಲಿ ಹರಿದಾಡುತ್ತಿರುವ ವಿಷಯ ನಮಗೆಲ್ಲರಿಗೂ ತಿಳಿದಿದೆ . ಹೀಗಾಗಿ ದರ್ಶನ್​ಗೆ
ಮಲಯಾಳಂನಲ್ಲಿಯೂ  ಸಹ  ದೊಡ್ಡ ಅಭಿಮಾನಿ ಬಳಗವಿದೆ ಎನ್ನಲಾಗಿದೆ . ಹೀಗಾಗಿ ಸಿನಿಮಾ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುವ ನಿರೀಕ್ಷೆಯೂ  ಇದೆ. ಕುರುಕ್ಷೇತ್ರ ಮಹಾ ಕಾವ್ಯ ಮಹಾಭಾರತದ ಕ್ಲೈಮ್ಯಾಕ್ಸ್ ಆಗಿರುವ ಕಾರಣ,  ಜನರಿಗೆ ಈ ಸಿನಿಮಾ ಹೆಚ್ಚು ಇಷ್ಟವಾಗಿತ್ತು. ಈ ಸಿನಿಮಾ 3ಡಿ ಯಲ್ಲಿಯೂ  ತೆರೆಕಂಡಿದ್ದು ಮತ್ತೊಂದು ವಿಶೇಷವಾಗಿದೆ .

ದರ್ಶನ್​ ಸದ್ಯ, ‘ಒಡೆಯ’ ಹಾಗೂ ‘ರಾಬರ್ಟ್​’ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಎರಡೂ ಸಿನಿಮಾಗಳು ಭಾರೀ ನಿರೀಕ್ಷೆ ಹುಟ್ಟು ಹಾಕಿವೆ. ಇದಲ್ಲದೆ, ಪ್ರಜ್ವಲ್​ ದೇವರಾಜ್​ ಅಭಿನಯದ ‘ಇನ್ಸ್​​ಪೆಕ್ಟರ್​ ವಿಕ್ರಂ’ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡುತ್ತಿದ್ದಾರಂತೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ