ಸುದ್ದಿ

‘ಗುರು ಪೂರ್ಣಿಮೆ’ಯ ವಿಷೆಶತೆ ಏನು ಗೊತ್ತಾ…?

275

ಗುರು ಪೂರ್ಣಿಮೆ ಅಥವಾ ವ್ಯಾಸ ಪೂರ್ಣಿಮೆ ಎಂದು ಕರೆಯಲ್ಪಡುವ ಆಶಾಢ ಮಾಸದ ಹುಣ್ಣಿಮೆಯೊಂದಿಗೆ ದಕ್ಷಿಣಾಯಣ ಪ್ರಾರಂಭವಾಗುತ್ತದೆ. ಆಶಾಢ ತಿಂಗಳ ಶುಕ್ಲ ಹುಣ್ಣಿಮೆಯನ್ನು ಗುರುಗಳಿಗೆ ಗೌರವ ರೂಪದಲ್ಲಿ ಆಚರಿಸಲಾಗುತ್ತದೆ. ಈ ಬಾರಿ ಗುರು ಪೂರ್ಣಿಮಾ ಜುಲೈ 16 ರಂದು ಅಂದರೆ ಮಂಗಳವಾರ ಬಂದಿದೆ. ಗುರುವನ್ನು ಯಾವಾಗಲೂ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ ಎಂದು ಪರಿಗಣಿಸಲಾಗುತ್ತದೆ.

ಈ ಹಬ್ಬವನ್ನು ವೇದ ಮಹರ್ಷಿಗೆ ಅರ್ಪಿಸಲಾಗುತ್ತದೆ. ವೇದ, ಉಪನಿಷತ್ತು ಮತ್ತು ಪುರಾಣಗಳನ್ನು ಪಠಿಸುವ ವೇದ ವ್ಯಾಸ್ ಜಿ ಅವರನ್ನು ಮಾನವಕುಲದ ಮೂಲ ಗುರು ಎಂದು ಪರಿಗಣಿಸಲಾಗುತ್ತದೆ.

ವೇದ ಮಹರ್ಷಿ ಕ್ರಿ.ಪೂ 3000 ರಲ್ಲಿ ಆಶಾದ್ ಹುಣ್ಣಿಮೆಯಂದು ಜನಿಸಿದರು. ಅವರ ಗೌರವಾರ್ಥವಾಗಿ, ಪ್ರತಿವರ್ಷ ಆಶಾಢ ಶುಕ್ಲ ಪೂರ್ಣಿಮವನ್ನು ಗುರು ಹುಣ್ಣಿಮೆಯೆಂದು ಆಚರಿಸಲಾಗುತ್ತದೆ. ಇದೇ ದಿನ ವೇದವ್ಯಾಸರು ಬ್ರಹ್ಮಸೂತ್ರ ಬರೆಯಲು ಪ್ರಾರಂಭಿಸಿದ್ದು ಮತ್ತು ಏಕಲವ್ಯ ತಮ್ಮ ಗುರುಗಳೆಂದು ನಂಬಿದ್ದ ದ್ರೋಣಾಚಾರ್ಯರಿಗೆ ತನ್ನ ಬಲಗೈ ಹೆಬ್ಬೆರಳನ್ನು ನೀಡಿದ್ದು.

ಗುರು ಪೂರ್ಣಿಮೆ ದಿನದಂದು ಅನೇಕ ಜನರು ತಮ್ಮ ದೈವಾಧಿನರಾದ ಗುರು ಅಥವಾ ಬ್ರಾಹ್ಮಣ ಸಂತರ ಪುಣ್ಯಭೂಮಿ, ಪಾದುಕೆಗೆ ಧೂಪ, ದೀಪ, ಹೂವು, ಚಂದನ, ನೈವೇದ್ಯ ಇತ್ಯಾದಿಗಳಿಂದ ವಿಧಿವತ್ತಾಗಿ ಪೂಜಿಸುತ್ತಾರೆ. ಗುರುವನ್ನು ಬ್ರಹ್ಮನಿಗೆ ಹೋಲಿಸಲಾಗುತ್ತೆ.

ಬ್ರಹ್ಮನು ಒಂದು ಜೀವಿಯನ್ನು ಸೃಷ್ಟಿಸಿದ್ರೆ, ಅದೇ ರೀತಿ ಗುರು ತನ್ನ ಶಿಷ್ಯನನ್ನು ತಿದ್ದಿ ಒಬ್ಬ ಸಜ್ಜನನಾಗಿ ಮಾಡುತ್ತಾನೆ. ನಮ್ಮಲ್ಲಿನ ಅಜ್ಞಾನವನ್ನು ಹೋಗಲಾಡಿಸುವ ಗುರುವಿಗೆ ತಂದೆ-ತಾಯಿರಷ್ಟೇ ಪವಿತ್ರ ಸ್ಥಾನ ನೀಡಲಾಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಕಾನೂನು

    ತ್ರಿವಳಿ ತಲಾಖ್‌ ರದ್ದು! ಸುಪ್ರಿಂ ಕೋರ್ಟ್‌ನ ಐತಿಹಾಸಿಕ ತೀರ್ಪು…

    ತ್ರಿವಳಿ ತಲಾಖ್‌ನ ಸಾಂವಿಧಾನಿಕ ಸಿಂಧುತ್ವದ ಬಗ್ಗೆ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಜೆ.ಎಸ್ ಖೇಹರ್ ನೇತೃತ್ವದ ಪಂಚ ಸದಸ್ಯರ ನ್ಯಾಯಪೀಠ ಐತಿಹಾಸಿಕ ತೀರ್ಪು ಪ್ರಕಟಿಸಿದ್ದು ತ್ರಿವಳಿ ತಲಾಖ್‌ ಅನ್ನು ರದ್ದು ಪಡಿಸಿದೆ.

  • Motivation

    ಓಂ “ॐ ” ಮಂತ್ರ ಪಠಿಸಿ, ಸರ್ವ ರೋಗ ನಿವಾರಿಸಿ !

    ॐ ‘ಗೆ ಕೇವಲ ಧಾರ್ಮಿಕ ಮಹತ್ವ ಅಲ್ಲದೇ ಶಾರೀರಿಕ ಮಹತ್ವ ಕೂಡಾ ಇದೆ ಎಂಬುದು ನಿಮಗೆ ತಿಳಿದಿದೆಯೇ.? ॐ  ಓಂ ವಿಶ್ವದಲ್ಲಿನ ಪ್ರಮುಖ ಶಬ್ದಗಳಲ್ಲಿ ಒಂದಾಗಿದೆ ಎಂದು ನಂಬಲಾಗಿದೆ. ಪ್ರತಿದಿನ ಓಂ ಅನ್ನು ಪಠಿಸುವುದರಿಂದ ನಿಮ್ಮ ಜೀವನಕ್ಕೆ ಧನಾತ್ಮಕತೆಯನ್ನು ತರಲು ಸಹಾಯ ಮಾಡುತ್ತದೆ. ಇದು ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಇನ್ನೂ ಅನೇಕ ಪ್ರಯೋಜನಗಳನ್ನು ಹೊಂದಿದೆ. ॐ  ಓಂ ವಿಶ್ವದಲ್ಲಿನ ಪ್ರಮುಖ ಶಬ್ದಗಳಲ್ಲಿ ಒಂದಾಗಿದೆ ಎಂದು ನಂಬಲಾಗಿದೆ. ಈ ಸಂಪೂರ್ಣ ಬ್ರಹ್ಮಾಂಡವನ್ನು ಸೃಷ್ಟಿಸುವ ಹಿಂದೆ ಇದ್ದ…

  • ಸುದ್ದಿ

    ವಿದ್ಯಾರ್ಥಿಗಳೇ ಎಚ್ಚರ, ಕಾಲೇಜ್​ಗೆ ಮೊಬೈಲ್​ ತೆಗೆದುಕೊಂಡು ಹೋದರೆನಿಮ್ಮ ಪೋನ್ ಆಗಬಹುದು ಪೀಸ್ ಪೀಸ್​​…!!ಯಾಕೆ ಗೊತ್ತ?

    ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಚೈತನ್ಯ ಪಿಯು ಕಾಲೇಜಿನಲ್ಲಿ ಮೊಬೈಲ್​ ಬ್ಯಾನ್ ಮಾಡಿ ಕಾಲೇಜು ಆಡಳಿತ ಆದೇಶ ಹೊರಡಿಸಿತ್ತು. ಆ ಕಾಲೇಜು ಆವರಣದಲ್ಲಿ, ಕ್ಲಾಸ್​ನಲ್ಲಿ ಮೊಬೈಲ್​ ಬ್ಯಾನ್​ ಮಾಡಿ ಆದೇಶ ಹೊರಡಿಸಲಾಗಿತ್ತು. ಆದರೆ ವಿದ್ಯಾರ್ಥಿಗಳು ಮಾತ್ರ ಉಪನ್ಯಾಸಕರ ಕಣ್ಣುತಪ್ಪಿಸಿ ಮೊಬೈಲ್​ ಬಳಸುತ್ತಿದ್ದರು. ಇದು ಪ್ರಿನ್ಸಿಪಾಲ್​ ಗಮನಕ್ಕೆ ಬಂದಿದ್ದೆ ತಡ ವಿದ್ಯಾರ್ಥಿಗಳ ಮೊಬೈಲ್​​ ಪುಡಿ ಪುಡಿಯಾಗಿದ್ದು, ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್​ ಆಗಿದೆ. ಆದರೂ ಪಿಯು ವಿದ್ಯಾರ್ಥಿಗಳು ಕದ್ದುಮುಚ್ಚಿ ಮೊಬೈಲ್​ ಬಳಸುತ್ತಿದ್ದರು. ಇದನ್ನು ಗಮನಿಸಿದ…

  • ಸುದ್ದಿ

    ಈ ಕಂಪನಿಯಲ್ಲಿ ವಾರಕ್ಕೆ ಮೂರು ದಿನ ರಜೆ……!

    ಆರಂಭದಲ್ಲಿ ವಾರದಲ್ಲಿ ಒಂದು ದಿನ ರಜೆ ಪಡೆಯಲು ವಿಶ್ವದ ಜನರು ಪರದಾಡಿದ್ದರು. ನಂತ್ರ ಕೆಲ ಕಂಪನಿಗಳು ವಾರದಲ್ಲಿ ಎರಡು ದಿನ ರಜೆ ನೀಡಲು ಶುರು ಮಾಡಿದ್ವು. ಇಷ್ಟಾದ್ರೂ ಉದ್ಯೋಗಿಗಳು ವಾರದಲ್ಲಿ ಮೂರು ದಿನ ರಜೆ ಸಿಕ್ಕರೆ ಎಷ್ಟು ಚೆಂದವೆಂದು ಆಲೋಚನೆ ಮಾಡ್ತಾರೆ. ಭಾರತದಲ್ಲಿ ಇದು ಇನ್ನೂ ಸಾಧ್ಯವಾಗಿಲ್ಲ. ಆದ್ರೆ ಬ್ರಿಟನ್ ಕಂಪನಿಯೊಂದು ಉದ್ಯೋಗಿಗಳಿಗೆ ಖುಷಿ ಸುದ್ದಿ ನೀಡಿದೆ. ಪೋರ್ಟ್ಕುಲಸ್ ಲೆಗ್ಸ್ ಹೆಸರಿನ ಕಂಪನಿ ವಾರದಲ್ಲಿ ಮೂರು ದಿನ ರಜೆ ನೀಡುವುದಾಗಿ ಹೇಳಿದೆ. ಅಂದ್ರೆ ಕೆಲಸಗಾರರು ವಾರದಲ್ಲಿ ನಾಲ್ಕು…

  • ಸುದ್ದಿ

    MP ಪ್ರತಾಪ್ ಸಿಂಹರವರನ್ನು ಕಸ್ಟಡಿಗೆ ತೆಗೆದುಕೊಂಡ ಪೊಲೀಸರು!ಈ ಸುದ್ದಿ ನೋಡಿ…

    ಬಹುಭಾಷ ನಟ ಪ್ರಕಾಶ್ ರೈ ಸಲ್ಲಿಸಿದ್ದ ಮಾನನಷ್ಟ ಕೇಸಿನಲ್ಲಿ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಮೈಸೂರು ಸಂಸದ ಪ್ರತಾಪ್ ಸಿಂಹ ವಿರುದ್ಧ ಕೋರ್ಟ್ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿತ್ತು. ಇಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಪ್ರತಾಪ್ ಸಿಂಹ ಹಾಜರಾಗಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಧೀಶರ ಆದೇಶದ ಮೇರೆಗೆ ಪೊಲೀಸರು ಪ್ರತಾಪ್ ಸಿಂಹ ಅವರನ್ನು ಕಸ್ಟಡಿಗೆ ಪಡೆದು ಕೂರಿಸಿದ್ದಾರೆ. ಮತ್ತೆ ರೀ ಕಾಲ್ ಮಾಡುವವರೆಗೆ ಕಸ್ಟಡಿಗೆ ಪಡೆಯುವಂತೆ ಪೊಲೀಸರಿಗೆ ಕೋರ್ಟ್ ಸೂಚನೆ ನೀಡಿದೆ….