ಸುದ್ದಿ

ಗುಂಡೇಟಿಗೆ ಬಲಿಯಾದ ಟಿಕ್ ಟಾಕ್ ಖ್ಯಾತಿಯ ಮೋಹಿತ್…..!

618

ಸಾಮಾಜಿಕ ಜಾಲತಾಣದಲ್ಲಿ ಹೆಸರು ಮಾಡಿದ್ದ 24 ವರ್ಷದ ಮೋಹಿತ್ ಮೋರ್ ಅವರನ್ನು ಮೂವರು ಅಪರಿಚಿತ ವ್ಯಕ್ತಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ಟಿಕ್ ಟಾಕ್ ಮೂಲಕ ಅರ್ಧ ಮಿಲಿಯನ್ ಸಂಖ್ಯೆಯ ಫಾಲೋಯರ್ಸ್ ಗಳನ್ನು ಹೊಂದಿರುವ ಮೋಹಿತ್ ಅವರು ಫಿಟ್ ನೆಸ್ ಗೆ ಸಂಬಂಧಿಸಿದಂತೆ ನಿರಂತರವಾಗಿ ವಿಡಿಯೋ ಅಪ್ ಲೋಡ್ ಮಾಡುತ್ತಿದ್ದರು.


ಮಂಗಳವಾರ ಸಂಜೆ ಐದು ಗಂಟೆ ವೇಳೆಗೆ ನಜಾಫ್ ಗಡದಲ್ಲಿ ಅವರು ಗೆಳೆಯನೊಂದಿಗೆ ಮಾತನಾಡುತ್ತಿದ್ದಾಗ ಈ ಘಟನೆ ನಡೆದಿದ್ದು, ಏಕಾಏಕಿ ಮೂರು ಜನ ದಾಳಿ ಮಾಡಿದ್ದು, ಸಿಸಿ ಟಿವಿಯಲ್ಲಿ ಇಡೀ ಘಟನೆ ದಾಖಲಾಗಿದೆ. ದಾಳಿ ಮಾಡಿದ ಮೂವರ ಪೈಕಿ ಇಬ್ಬರು ಹೆಲ್ಮೆಟ್ ಧರಿಸಿದ್ದರಿಂದ ಅವರ ಮುಖ ಕಾಣಿಸಿಲ್ಲ. ಇನ್ನೊಬ್ಬನ ಮುಖ ಸ್ಪಷ್ಟವಾಗಿ ಗೋಚರಿಸಿದೆ. ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಟಿಕ್ ಟಾಕ್ ಖಾತೆ, ಪೋನ್ ಕಾಲ್ ಲಿಸ್ಟ್ ಗಳನ್ನು ಪರಿಶೀಲಿಸುತ್ತಿದ್ದು, ದಾಳಿ ಮಾಡಿದವರನ್ನು ಪತ್ತೆ ಹಚ್ಚಲಾಗುತ್ತದೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ