ಸಾಧನೆ, ಸುದ್ದಿ, ಸ್ಪೂರ್ತಿ

500 ರೂ ಸಾಲ ಪಡೆದು ಬಿಸಿನೆಸ್ ಆರಂಭಿಸಿದ ಈಕೆ ಈಗ ಕೋಟಿ ಕೋಟಿ ಒಡತಿ, ಕಣ್ಣೀರಿನ ಕಥೆ.

240

ನಾವು ಹುಟ್ಟುವಾಗ ಒಬ್ಬರಾಗಿ ಈ ಪ್ರಪಂಚಕ್ಕೆ ಬರುತ್ತೇವೆ ಮತ್ತು ಸಾಯುವಾಗ ಒಬ್ಬರಾಗಿ ಸಾಯುತ್ತೇವೆ ಮತ್ತು ನಮ್ಮ ಸಾವನ್ನ ಯಾರಿಂದಲೂ ಕೂಡ ತಪ್ಪಿಸಲು ಸಾಧ್ಯವಿಲ್ಲ ಹಾಗೆ ನಮ್ಮ ನೋವನ್ನ ಯಾರು ಭರಿಸಲು ಕೂಡ ಸಾಧ್ಯವಿಲ್ಲ. ನಾವು ಕಷ್ಟದಲ್ಲಿ ಇದ್ದಾಗ ಒಂದು ಹಂತದ ತನಕ ಮಾತ್ರ ಯಾರಾದರೂ ಸಹಾಯ ಮಾಡಬಲ್ಲರು ಆದರೆ ಅದರಿಂದ ಆಚೆ ನಾವೇ ಹೋರಾಡಬೇಕು ಮತ್ತು ನಾವೇ ಬದುಕುವ ದಾರಿಯನ್ನ ಹುಡುಕಾಡಬೇಕು ಯಾಕೆ ಅಂದರೆ ಜೀವನ ಅನ್ನುವುದು ಪ್ರತಿ ಕ್ಷಣದ ಹೋರಾಟ. ಎಲ್ಲಾ ದಾರಿಗಳು ಮುಚ್ಚಿ ಹೋದಾಗ ತನ್ನ ಸ್ವಂತ ದಾರಿಯನ್ನ ಹುಡುಕಿದ ಈ ಮಹಿಳೆ ಈಗ ನೂರಾರು ಮಹಿಳೆಯರಿಗೆ ದಾರಿದೀಪ ಆಗಿದ್ದಾರೆ, ಹಾಗಾದರೆ ಈ ಮಹಿಳೆಯರು ಮತ್ತು ಈಕೆ ಮಾಡಿದ ಸಾಧನೆ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಉತ್ತರ ಪ್ರದೇಶಕ್ಕೆ ಸೇರಿದ ಕೃಷ್ಣ ಯಾದವ್ ಅನ್ನುವ ಮಹಿಳೆಗೆ ಇಬ್ಬರು ಮಕ್ಕಳು, ಜೀವನೋಪಾಯಕ್ಕಾಗಿ ಮನೆಯಲ್ಲಿ ಉಪ್ಪಿನ ಕಾಯಿಯನ್ನ ತಯಾರಿಸಿ ಮಾರಾಟ ಮಾಡುತ್ತಿದ್ದರು, ಆದರೆ ಅದರಿಂದ ಅವರಿಗೆ ಏನು ಲಾಭ ಸಿಗಲಿಲ್ಲ. ಏನು ಲಾಭ ಸಿಗದ ಕಾರಣ ಉದ್ಯಾಯೋಗವನ್ನ ಅರಸಿಕೊಂಡು ಗಂಡ ಮತ್ತು ಮಕ್ಕಳ ಜೊತೆ ದೆಹಲಿಗೆ ಬಂದು ನೆಲೆಸಿದರು ಕೃಷ್ಣ ಯಾದವ್, ಇನ್ನು ದೆಹಲಿಗೆ ಬಂದ ಕೃಷ್ಣ ಯಾದವ್ ಒಂದು ಸಂಸ್ಥೆಯಲ್ಲಿ ಅಡುಗೆಯ ತರಬೇತಿಯನ್ನ ಪಡೆದರು, ಆದರೆ ಅವರಿಗೆ ಯಾವುದೇ ಕೆಲಸ ಸಿಗಲಿಲ್ಲ. ಯಾವುದೇ ಕೆಲಸ ಸಿಗದ ಕಾರಣ ಮತ್ತೇ ಮನೆಯಲ್ಲಿ ಉಪ್ಪಿಯ ಕಾಯಿಯನ್ನ ತಯಾರು ಮಾಡಿ ಮಾರಾಟ ಮಾಡಲು ನಿರ್ಧಾರ ಮಾಡಿದರು ಕೃಷ್ಣ ಯಾದವ್.

ಉಪ್ಪಿಯ ಕಾಯಿಯನ್ನ ತಯಾರು ಮಾಡಲು ಕೈಯಲ್ಲಿ ನೂರು ರೂಪಾಯಿ ಕೂಡ ಇರಲಿಲ್ಲ, ಸ್ನೇಹಿತರ ಬಳಿ 500 ರೂಪಾಯಿ ಸಾಲ ಪಡೆದ ಕೃಷ್ಣ ಯಾದವ್ ಅದೂ ಸಾಕಾಗದೆ ಮತ್ತೇ 3000 ರೂಪಾಯಿ ಸಾಲ ಮಾಡಿ ಉಪ್ಪಿನ ಕಾಯಿಗೆ ಬೇಕಾದ ವಸ್ತುಗಳನ್ನ ತಂದು ಉಪ್ಪಿನ ಕಾಯಿಯನ್ನ ತಯಾರು ಮಾಡಿ ಮನೆಯ ಸುತ್ತಮುತ್ತ ಮಾರಾಟ ಮಾಡಿದರು ಮತ್ತು ಇದರಿಂದ ಆಕೆಗೆ 5250 ರೂಪಾಯಿ ಲಾಭ ಬಂತು. ಇನ್ನು ಈ ಲಾಭದ ಹಣವನ್ನ ಬಂಡವಾಳವಾಗಿ ಮಾಡಿಕೊಂಡ ಇವರು ಮತ್ತೇ ಉಪ್ಪಿನ ಕಾಯಿ ತಯಾರಿ ಮಾಡಿದರು, ಹೀಗೆ ಹಂತ ಹಂತವಾಗಿ ಬೆಳೆದ ಕೃಷ್ಣ ಯಾದವ್ ಮತ್ತೇ ಹಿಂತಿರುಗಿ ನೋಡಲೇ ಇಲ್ಲ, ವಿವಿಧ ರೀತಿಯ ಉಪಿನ ಕಾಯಿ ತಯಾರು ಮಾಡಿ ಮಾರುಕಟ್ಟೆಗೆ ಬಿಟ್ಟರು ಕೃಷ್ಣ ಯಾದವ್. ಹೀಗೆ ದಿನೇ ದಿನೇ ಅವರ ಲಾಭ ಕೂಡ ಹೆಚ್ಚಾಗುತ್ತಾ ಹೋಯಿತು ಮತ್ತು ಉಪ್ಪಿನ ಕಾಯಿ ಕೊಳ್ಳುವವರ ಸಂಖ್ಯೆ ಕೂಡ ಜಾಸ್ತಿ ಆಯಿತು.

ಶ್ರೀಕೃಷ್ಣ ಪಿಕಲ್ಸ್ ಅನ್ನುವ ಹೆಸರಿನಲ್ಲಿ ಕಂಪನಿಯನ್ನ ಆರಂಭ ಮಾಡಿದ ಕೃಷ್ಣ ಯಾದವ್ ಸುಮಾರು 400 ಕ್ಕೂ ಹೆಚ್ಚು ಮಹಿಳೆಯರಿಗೆ ಉದ್ಯೋಗವನ್ನ ಕೊಟ್ಟಿದ್ದಾರೆ. ಈಗಲೂ ಬೇರೆ ಬೇರೆ ರುಚಿಯಲ್ಲಿ ಉಪ್ಪಿನ ಕಾಯಿಯನ್ನ ತಯಾರು ಮಾಡುತ್ತಾ ದೆಹಲಿಯಲ್ಲಿ ದೊಡ್ಡ ಉದ್ಯಮಿಯಾಗಿ ಬೆಳೆದಿದ್ದಾರೆ ಕೃಷ್ಣ ಯಾದವ್, ಇನ್ನು ಈಕೆಯ ಪ್ರತಿಭೆಯನ್ನ ಗುರುತಿಸಿ ಹಲವಾರು ಪ್ರಶಸ್ತಿಗಳು ಅವರಿಗೆ ಬಂದಿದೆ. ಸ್ವಲ್ಪ ಮಟ್ಟಿಗೆ ವಿದ್ಯಾಭ್ಯಾಸ ಮಾಡಿರುವ ಕೃಷ್ಣ ಯಾದವ್ ಅವರು ಈಗ ಕೋಟಿ ಕೋಟಿ ವ್ಯಾಪಾರ ಮಾಡುತ್ತಿದ್ದು ಇತರೆ ಮಹಿಳೆಯರಿಗೆ ಮಾದರಿಯಾಗಿದ್ದಾರೆ. ಕಷ್ಟ ಎಂದು ಅವರಿವರನ್ನ ಮತ್ತು ದೇವರನ್ನ ದ್ವೇಷಿಸದ ಕೃಷ್ಣ ಯಾದವ್ ತನಗೆ ಗೊತ್ತಿರುವ ವಿಷಯವನ್ನೇ ಅಸ್ತ್ರವನ್ನಾಗಿ ಮಾಡಿಕೊಂಡು ಈಗ ದೊಡ್ಡ ಉದ್ಯಮಿಯಾಗಿ ಬೆಳೆದಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ