ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಗಂಟಲು ನೋವು ನಮ್ಮನ್ನು ತೀರಾ ಇಕ್ಕಟ್ಟಿಗೆ ಸಿಲುಕಿಸಿ ಬಿಡುತ್ತದೆ. ಏಕೆಂದರೆ ಈ ಗಂಟಲು ನೋವು ಬಂದರೆ ನಮಗೆ ಮಾತನಾಡಲು ಕಷ್ಟ ವಾಗುತ್ತದೆ. ಆಹಾರ ಸೇವಿಸಲು ಸಹ ಕಷ್ಟ ವಾಗುತ್ತದೆ. ಪಕ್ಕದಲ್ಲಿದ್ದವರಿಗೆ ಬಿಟ್ಟರೆ ದೂರದಲ್ಲಿರುವವರಿಗೆ ನಮ್ಮ ಮಾತುಗಳು ಕೇಳಿಸುವುದೇ ಇಲ್ಲ. ಆ ಮಟ್ಟಿಗೆ ನಮ್ಮ ಗಂಟಲು ತನ್ನ ಶಕ್ತಿ ಸಾಮರ್ಥ್ಯಗಳನ್ನು ಕಳೆದುಕೊಂಡು ಬಿಡುತ್ತದೆ. ಯೋಚನೆ ಮಾಡ ಬೇಡಿ ಮನೆಯಲ್ಲೆ ಸುಲಭ ರೀತಿಯಲ್ಲಿ ಸರಿಯಾದ ಔಷಧ ತಯಾರಿಸ ಬಹುದು.
ಗಂಟಲು ನೋವಿಗೆ ರಾಮಬಾಣ ಎನಿಸಿಕೊಂಡಿರುವ ಪರಿಹಾರ ಉಪ್ಪು ನೀರು. ಹೌದು ನೀರಿಗೆ ಸ್ವಲ್ಪ ಉಪ್ಪನ್ನು ಬೆರೆಸಿಕೊಂಡು ಅದನ್ನು ಮುಕ್ಕಳಿಸುವ ಮೂಲಕ ನಿಮ್ಮ ಗಂಟಲ ನೋವನ್ನು ನಿವಾರಿಸಿಕೊಳ್ಳಬಹುದು. ಹೇಳಿ ಕೇಳಿ ಉಪ್ಪು ಆಂಟಿಸೆಪ್ಟಿಕ್ ಗುಣಗಳನ್ನು ಹೊಂದಿರುವ ಉತ್ಪನ್ನವಾಗಿದ್ದು, ಅದು ನಿಮ್ಮ ಗಂಟಲಿನಲ್ಲಿರುವ ಸಿಂಬಳದ ಪೊರೆಯು ನಿವಾರಣೆಯಾಗಲು ಸಹಾಯ ಮಾಡುತ್ತದೆ. ಜೊತೆಗೆ ಇದು ನಿಮ್ಮ ಗಂಟಲಿನಲ್ಲಿರುವ ಕಫವು ಸಹ ನಿವಾರಣೆಯಾಗುವಂತೆ ಮಾಡುತ್ತದೆ ಮತ್ತು ಉರಿಬಾವು ನಿಮ್ಮನ್ನು ಕಾಡದಂತೆ ತಡೆಯು ತ್ತದೆ.
ಇಷ್ಟೆ ಅಲ್ಲದೆ ಇದು ನಿಮ್ಮ ಗಂಟಲ ನೋವಿಗೆ ತಕ್ಷಣದ ಪರಿಹಾರವನ್ನು ನೀಡುತ್ತದೆ. ಒಂದು ವೇಳೆ ನಿಮಗೆ ಉಪ್ಪು ಅಷ್ಟಾಗಿ ರುಚಿಸದಿದ್ದಲ್ಲಿ, ಈ ನೀರಿಗೆ ಸ್ವಲ್ಪ ಪ್ರಮಾಣದ ಜೇನು ತುಪ್ಪವನ್ನು ಬೆರೆಸಿಕೊಳ್ಳಿ. ಈ ಮಿಶ್ರಣವನ್ನು ಮುಕ್ಕಳಿಸಿ, ಆದರೆ ನುಂಗಬೇಡಿ. ಮುಕ್ಕಳಿಸಿದ ನೀರನ್ನು ಹೊರಗೆ ಉಗಿಯಿರಿ. ದಿನಕ್ಕೆ ನಾಲ್ಕೈದು ಬಾರಿ ಇದನ್ನು ಮಾಡಿದರೆ ನಿಮ್ಮ ಗಂಟಲು ನೋವು ನಿವಾರಣೆಯಾಗುತ್ತದೆ.
ಬೆಳ್ಳುಳ್ಳಿಯು ಒಂದು ಆಂಟಿ ಬ್ಯಾಕ್ಟೀರಿಯಾ ಅಂಶಗಳು ಇರುವ ಪದಾರ್ಥವಾಗಿದೆ. ಇದರಲ್ಲಿರುವ ಆಂಟಿಸೆಪ್ಟಿಕ್ ಗುಣ ಗಳು ಮತ್ತು ಔ?ಂಯ ಗುಣಗಳು ಗಂಟಲು ನೋವಿಗೆ ಒಳ್ಳೆಯ ಆರಾಮವನ್ನು ನೀಡುತ್ತವೆ. ಅಲ್ಲದೆ ಇದು ಈ ನೋವನ್ನು ಬೇಗ ನಿವಾರಿಸುವ ಮನೆ ಮದ್ದು ಸಹ ಆಗಿದೆ. ಕಚ್ಛಾ ಬೆಳ್ಳುಳ್ಳಿಯನ್ನು ಪ್ರತಿದಿನ ಸೇವಿಸುವುದರಿಂದ ಅಲ್ಲಿಸಿನ್ ಎಂಬ ರಾಸಾಯನಿಕವು ಬಿಡುಗಡೆಯಾಗುತ್ತದೆ. ಇದು ಗಂಟಲಿನಲ್ಲಿ ಬೆಳೆಯುವ ಬ್ಯಾಕ್ಟೀರಿಯಾವನ್ನು ನಿವಾರಿಸಲು ಸಹಾಯ ಮಾಡಿ, ಗಂಟಲು ನೋವು ಬರದಂತೆ ತಡೆಯುತ್ತದೆ.
ಬದಲಿಯಾಗಿ, ನೀವು ಬೆಳ್ಳುಳ್ಳಿ ಎಣ್ಣೆಯನ್ನು ಸಹ ಬಳಸಬಹುದು. ಒಂದು ಲೋಟ ನೀರಿಗೆ ನಾಲ್ಕನೇ ಒಂದು ಭಾಗ ಬೆಳ್ಳುಳ್ಳಿ ರಸವನ್ನು ಬೆರೆಸಿಕೊಳ್ಳಿ. ಇದನ್ನು ದಿನಕ್ಕೊಮ್ಮೆ ಬಾಯಿ ಮುಕ್ಕಳಿಸಲು ಬಳಸಿ. ಅಲ್ಲದೆ ಇದರ ಜೊತೆಗೆ ಆಹಾರದಲ್ಲಿ ದೊರೆಯುವ ಬೆಳ್ಳುಳ್ಳಿಯನ್ನು ಸಹ ಸೇವಿಸಿ. ಒಂದು ವೇಳೆ ನಿಮಗೆ ಇದರ ರುಚಿ ಹಿಡಿಸಲಿಲ್ಲವಾದಲ್ಲಿ, ಬೆಳ್ಳುಳ್ಳಿಯ ಮಾತ್ರೆಗಳನ್ನು ಸೇವಿಸಿ.
ಚಕ್ಕೆಯನ್ನು ಸಹ ಗಂಟಲು ನೋವು ನಿವಾರಿಸಿಕೊಳ್ಳಲು ಬಳಸಬಹುದು. ಒಂದು ಟೀ ಸ್ಪೂನ್ ಚಕ್ಕೆಯ ಪುಡಿಗೆ, ಕರಿ ಮೆಣಸಿನ ಪುಡಿಯನ್ನು ಸೇರಿಸಿ, ಒಂದು ಲೋಟ ಬಿಸಿ ನೀರಿನಲ್ಲಿ ಬೆರೆಸಿಕೊಳ್ಳಿ. ಇದಕ್ಕೆ ನಿಮಗೆ ಅಗತ್ಯವಾದಲ್ಲಿ ಏಲಕ್ಕಿಯನ್ನು ಸಹ ಬೆರೆಸಿಕೊಳ್ಳಿ. ಈ ಎಲ್ಲಾ ಮಿಶ್ರಣವನ್ನು ಚೆನ್ನಾಗಿ ಬೆರೆಸಿ, ನಂತರ ಶೋಧಿಸಿಕೊಳ್ಳಿ. ಈ ಮಿಶ್ರಣವನ್ನು ದಿನಕ್ಕೆ ಎರಡು ಮೂರು ಬಾರಿ ಬಾಯಿ ಮುಕ್ಕಳಿಸಲು ಬಳಸಿ. ಮತ್ತೊಂದು ಆಯ್ಕೆ ಎಂದರೆ ಕೆಲವೊಂದು ಹನಿ ಚಕ್ಕೆ ಎಣ್ಣೆಯನ್ನು ಮತ್ತು ಒಂದು ಟೀ ಸ್ಪೂನ್ ಜೇನುತುಪ್ಪವನ್ನು ಬೆರೆಸಿಕೊಳ್ಳಿ ಇದನ್ನು ದಿನಕ್ಕೆ ಎರಡು ಬಾರಿ ಸೇವಿಸಿ, ಗಂಟಲು ನೋವು ಮತ್ತು ಉರಿಬಾವುನಿಂದ ವಿಮುಕ್ತಿಯನ್ನು ಪಡೆಯಿರಿ.
ಗಂಟಲು ನೋವಿನಿಂದ ಗುಣಮುಖರಾಗಲು ಲಿಂಬೆ ಹಣ್ಣನ್ನು ಬಳಸಬಹುದು. ಇದು ನಿಮ್ಮ ಗಂಟಲಿನಲ್ಲಿರುವ ಸಿಂಬಳವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಲಿಂಬೆರಸ ವನ್ನು ಬಿಸಿ ನೀರಿಗೆ ಬೆರೆಸಿ, ಅದಕ್ಕೆ ಸ್ವಲ್ಪ ಜೇನು ತುಪ್ಪವನ್ನು ಸೇರಿಸಿ ಸೇವಿಸಿ. ಒಂದು ಕಪ್ ಬಿಸಿ ನೀರಿಗೆ ಒಂದು ಟೀ ಸ್ಪೂನ್ ಜೇನು ತುಪ್ಪ ಮತ್ತು ಅದಕ್ಕೆ ಅರ್ಧ ಹೋಳು ಲಿಂಬೆ ಹಣ್ಣಿನ ರಸದ ಅನುಪಾತದಲ್ಲಿ ಇದನ್ನು ತಯಾರಿಸಿಕೊಳ್ಳಿ.
ಚಳಿಗಾಲ ಹತ್ತಿರವಾಗುತ್ತಿದ್ದು, ವಾತಾವರಣದಲ್ಲಿ ಆಗುತ್ತಿರುವ ಬದಲಾವಣೆ ಗಳಿಂದಾಗಿ ನಮ್ಮ ದೇಹದಲ್ಲಿ ಆರೋಗ್ಯವು ಸಹ ಬದಲಾಗು ತ್ತದೆ. ಅದರಲ್ಲಿ ಶೀತ, ಗಂಟಲು ನೋವು, ಕೆಮ್ಮು ಮತ್ತು ಒಮ್ಮೊಮ್ಮೆ ಜ್ವರವು ಸಹ ನಮ್ಮನ್ನು ಭಾದಿಸಬಹುದು ಎಚ್ಚರ ವಹಿಸಿ ಮನೆ ಮದ್ದು ತಯಾರಿಸಿ ತಡೆಗಟ್ಟಿ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಬಾಲಿವುಡ್ನಲ್ಲಿ ಮಹಾಭಾರತ ಸಿನಿಮಾ ಸೆಟ್ಟೇರಲಿದೆ ಎಂಬ ಸುದ್ದಿ ಬಹಳ ದಿನಗಳಿಂದ ಸದ್ದು ಮಾಡ್ತಿದೆ. ನಟ ಅಮೀರ್ ಖಾನ್ ಇಂತಹದೊಂದು ಪ್ರಯತ್ನಕ್ಕೆ ಕೈಹಾಕಿದ್ದು, ಬಹುದೊಡ್ಡ ಬಜೆಟ್ ನಲ್ಲಿ, ಐದು ಸರಣಿಯಾಗಿ ಸಿನಿಮಾ ಮಾಡಲು ಚಿಂತಿಸಿದ್ದರು.ಆದ್ರೀಗ, ಅಮೀರ್ ಖಾನ್ ಗೂ ಮೊದಲು ಮತ್ತೊಬ್ಬ ನಿರ್ಮಾಪಕ ಮಹಾಭಾರತ ಚಿತ್ರಕ್ಕೆ ಚಾಲನೆ ನೀಡಿದ್ದಾರೆ. ಈ ಚಿತ್ರವನ್ನ ದ್ರೌಪದಿ ದೃಷ್ಟಿಕೋನದಲ್ಲಿ ತೋರಿಸಲಾಗುತ್ತಿದ್ದು, ಪಾಂಚಲಿ ಪಾತ್ರಕ್ಕಾಗಿ ಸ್ಟಾರ್ ನಟಿಯನ್ನ ಆಯ್ಕೆ ಮಾಡಿಕೊಳ್ಳಲಾಗಿದೆ. ಯಾರದು? ಮುಂದೆ ಓದಿ. ಖ್ಯಾತ ನಿರ್ಮಾಪಕ ಮಧು ಮಂತೇನಾ ನಿರ್ಮಿಸಲಿರುವ ಮಹಾಭಾರತ ಚಿತ್ರದಲ್ಲಿ…
ಶನಿ ಭಗವಾನನ ‘ಕೆಟ್ಟ ಪ್ರಭಾವ’ದಿಂದ, ಪರಿಣಾಮಗಳಿಂದ ಪಾರಾಗಲು ಭಗವಾನ್ ಹನುಮಂತನ ಪ್ರಾರ್ಥನೆಯೊಂದೇ ಸರ್ವ ಔಷಧಿ.
ಕೋಲಾರ:- ಜಿಲ್ಲೆಯ ಆರು ತಾಲೂಕುಗಳಿಂದ 29 ಜಿಪಂ ಕ್ಷೇತ್ರಗಳನ್ನು ಮತ್ತು 107 ತಾಪಂ ಕ್ಷೇತ್ರಗಳನ್ನು ಗುರುತಿಸಿ ಅವುಗಳ ಗಡಿ ಮತ್ತು ಗಡಿ ವ್ಯಾಪ್ತಿಗೆ ಬರುವ ಗ್ರಾಮಗಳ ಪಟ್ಟಿಯನ್ನು ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ ಪ್ರಕಟಿಸಿದೆ. ಜ.2 ರ ಗೆಜೆಟಿಯರ್‌ನಲ್ಲಿ ಪ್ರಕಟಿಸಿದ್ದು, ಆಕ್ಷೇಪಣೆಗಳಿದ್ದಲ್ಲೆ ಆಯೋಗದ ವೆಬ್‌ಸೈಟ್ ಅಥವಾ ಬೆಂಗಳೂರಿನ ಆಯೋಗದ ಬಹುಮಹಡಿ ಕಟ್ಟಡದ ವಿಳಾಸಕ್ಕೆ ಕಳುಹಿಸುವಂತೆ ಆಹ್ವಾನ ನೀಡಿದೆ. ಕೋಲಾರ ಜಿಲ್ಲೆಯ ಕೆಜಿಎಫ್‌ನಿಂದ 3, ಬಂಗಾರಪೇಟೆ 4, ಶ್ರೀನಿವಾಸಪುರ 5, ಮಾಲೂರು 5, ಮುಳಬಾಗಿಲು 6,…
ಬೇಕಾಗುವ ಸಾಮಗ್ರಿಗಳು: ಚಿಕ್ಕದಾಗಿ ಹೆಚ್ಚಿಟ್ಟುಕೊಂಡ ಎರಡು ಬಟ್ಟಲು ಎಲೆಕೋಸು,ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಹೆಚ್ಚಿದ ಮೀಡಿಯಂ ಸೈಜು ಈರುಳ್ಳಿ, ಕಾನ್೯ ಫ್ಲೋರ್ ಎರಡು ಟೀ ಸ್ಪೂನ್, ಮೈದಾಹಿಟ್ಟು ಎರಡು ಟೀ ಸ್ಪೂನ್, ಅಜಿನ ಮೋಟು ಕಾಲು ಚಮಚ, ಅಚ್ಚ ಕಾರದ ಪುಡಿ 1 ಟೀ ಸ್ಪೂನ್, ಗರಂ ಮಸಾಲ ಅರ್ದ ಟೀ ಸ್ಪೂನ್ ರುಚಿಗೆ ತಕ್ಕಷ್ಟು ಉಪ್ಪು. ಮಾಡುವ ವಿಧಾನ: ಚಿಕ್ಕದಾಗಿ ಹೆಚ್ಚಿಟ್ಟುಕೊಂಡ ಎಲೆಕೋಸನ್ನು ಒಂದು ಬೌಲ್ಗೆ ಹಾಕಿಟ್ಟುಕೊಳ್ಳಿ, ಅದಕ್ಕೆ ಎರಡು ಟೀ ಸ್ಪೂನ್ ಕಾನ್೯ ಫ್ಲೋರ್, ಎರಡು…
ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಮತ್ತು ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿಯವರ ಸ್ಪರ್ಧೆಯಿಂದಾಗಿ ಇಡೀ ದೇಶದ ಗಮನ ಸೆಳೆದಿದೆಮಂಡ್ಯ ಲೋಕಸಭಾ ಕ್ಷೇತ್ರ. ಅದರಲ್ಲೂ ಸುಮಲತಾ ಪರವಾಗಿ ಸ್ಟಾರ್ ನಟರಾದ ದರ್ಶನ್ ಮತ್ತು ಯಶ್ ಪ್ರಚಾರ ನಡೆಸುತ್ತಿದ್ದು ಸಿಎಂ ಸೇರಿದಂತೆ ಜೆಡಿಎಸ್ ನಾಯಕರು ಸುಮಲತಾ ಬೆಂಬಲಿಗರಾದ ಸ್ಟಾರ್ ನಟರ ಮೇಲೆ ವಾಗ್ದಾಳಿಯನ್ನೇ ನಡೆಸಿದ್ದಾರೆ. ಸ್ಟಾರ್ ನಟರನ್ನು ಕಳ್ಳೆತ್ತು ಎಂದು ಸಿಎಂ ಟೀಕಿಸಿದ್ದಕ್ಕೆ ಯಶ್ ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಚಾರದ ವೇಳೆ ಮಾತನಾಡಿದ ಯಶ್, ಯಾರ…
ಗುರುವಾರ, 05/04/2018 ಇಂದಿನ ದಿನ ಭವಿಷ್ಯ, ಖ್ಯಾತ ಆಧ್ಯಾತ್ಮಿಕ ಚಿಂತಕರು, ದೈವಜ್ಞ ಜ್ಯೋತಿಷ್ಯರು ಪಂಡಿತ್ ಸುದರ್ಶನ್ ಭಟ್‘ರವರಿಂದ… ಮೇಷ:– ಬಹುದಿನದ ನೀರಿಕ್ಷಿತ ಕನಸು ಕೈಗೂಡುವುದು. ಎಲ್ಲರಂತೆ ನೀವು ಕೂಡಾ ಸಮಾಜ ಮುಖಿಯಾಗಿ ಉ ನ್ನತ ಅಧಿಕಾರವನ್ನು ಹೊಂದುವಿರಿ. ಇದರೊಂದಿಗೆ ಸಕಾರಾತ್ಮಕ ಚಿಂತನೆಯನ್ನು ಮೈಗೂಡಿಸಿಕೊಂಡಲ್ಲಿ ಒಳಿತಾಗುವುದು. ವೃಷಭ:- ಇವತ್ತಿನ ಕೆಲಸ ಕಾರ್ಯಗಳಲ್ಲಿ ಯಶಸ್ಸು ನಿಮ್ಮದಾಗಲಿದೆ. ಈ ಬಗ್ಗೆ ಈ ಅನುಭೂತಿ ನಿಮ್ಮ ಮನದಲ್ಲಿರಲಿ. ಹೊರಗಡೆ ಸಂತೋಷವನ್ನು ವ್ಯಕ್ತಪಡಿಸಿದಲ್ಲಿ ಹಣಕಾಸಿನ ವಿಷಯದಲ್ಲಿ ನೀವು ಪರರಿಗೆ ಸಹಾಯ ಮಾಡಬೇಕಾಗುವುದು. ಶತ್ರುವನ್ನು ಕೂಡಾ…