ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕೋಲಾರ:- ಜಿಲ್ಲೆಯ ಆರು ತಾಲೂಕುಗಳಿಂದ 29 ಜಿಪಂ ಕ್ಷೇತ್ರಗಳನ್ನು ಮತ್ತು 107 ತಾಪಂ ಕ್ಷೇತ್ರಗಳನ್ನು ಗುರುತಿಸಿ ಅವುಗಳ ಗಡಿ ಮತ್ತು ಗಡಿ ವ್ಯಾಪ್ತಿಗೆ ಬರುವ ಗ್ರಾಮಗಳ ಪಟ್ಟಿಯನ್ನು ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ ಪ್ರಕಟಿಸಿದೆ.
ಜ.2 ರ ಗೆಜೆಟಿಯರ್‌ನಲ್ಲಿ ಪ್ರಕಟಿಸಿದ್ದು, ಆಕ್ಷೇಪಣೆಗಳಿದ್ದಲ್ಲೆ ಆಯೋಗದ ವೆಬ್‌ಸೈಟ್ ಅಥವಾ ಬೆಂಗಳೂರಿನ ಆಯೋಗದ ಬಹುಮಹಡಿ ಕಟ್ಟಡದ ವಿಳಾಸಕ್ಕೆ ಕಳುಹಿಸುವಂತೆ ಆಹ್ವಾನ ನೀಡಿದೆ.
ಕೋಲಾರ ಜಿಲ್ಲೆಯ ಕೆಜಿಎಫ್‌ನಿಂದ 3, ಬಂಗಾರಪೇಟೆ 4, ಶ್ರೀನಿವಾಸಪುರ 5, ಮಾಲೂರು 5, ಮುಳಬಾಗಿಲು 6, ಕೋಲಾರ 6 ಸಂಖ್ಯೆಯ ಒಟ್ಟು 29 ಜಿಪಂ ಕ್ಷೇತ್ರಗಳು ಮತ್ತು ಕೆಜಿಎಫ್ ನಿಂದ 12, ಬಂಗಾರಪೇಟೆಯ 16, ಶ್ರೀನಿವಾಸಪುರದ 18, ಮಾಲೂರಿನ 20, ಮುಳಬಾಗಿಲಿನ 20 ಮತ್ತು ಕೋಲಾರದ 20 ತಾಪಂ ಕ್ಷೇತ್ರಗಳು ಸೇರಿದಂತೆ ಒಟ್ಟು 107 ತಾಪಂ ಕ್ಷೇತ್ರಗಳ ಪಟ್ಟಿಯನ್ನು ಪ್ರಕಟಿಸಿದೆ.
ಜಿಪಂ ಕ್ಷೇತ್ರಗಳು
ಕೋಲಾರದಿಂದ ಹುತ್ತೂರು, ಹೋಳೂರು, ಸುಗಟೂರು, ಕ್ಯಾಲನೂರು, ನರಸಾಪುರ, ವಕ್ಕಲೇರಿ, ಮಾಲೂರಿನಿಂದ ತೊರ್ನಹಳ್ಳಿ, ಕುಡಿಯನೂರು, ಲಕ್ಕೂರು, ಮಾಸ್ತಿ, ಟೇಕಲ್, ಬಂಗಾರಪೇಟೆಯಿಂದ ಚಿಕ್ಕಅಂಕಂಡಹಳ್ಳಿ, ದೊಡ್ಡೂರುಕರಪನಹಳ್ಳಿ, ಬೂದಿಕೋಟೆ, ಕಾಮಸಮುದ್ರ, ಕೆಜಿಎ-ನಿಂದ ಪಾರಾಂಡಹಳ್ಳಿ, ಕ್ಯಾಸಂಬಳ್ಳಿ, ಬೇತಮಂಗಲ, ಮುಳಬಾಗಿಲಿನಿಂದ ಆವಣಿ, ತಾಯಲೂರು, ಆಲಂಗೂರು, ನಂಗಲಿ, ಬೈರಕೂರು, ದುಗ್ಗಸಂದ್ರ, ಶ್ರೀನಿವಾಸಪುರದಿಂದ ಯಲ್ದೂರು, ದಳಸನೂರು, ರೋಣೂರು, ರಾಯಲ್ಪಾಡು, ಗೌನಿಪಲ್ಲಿ ಜಿಪಂ ಕ್ಷೇತ್ರಗಳಿರುತ್ತವೆ.
ವಿವಿಧ ತಾಲ್ಲೂಕುಗಳ
ತಾಪಂ ಕ್ಷೇತ್ರಗಳು
ಕೋಲಾರ ತಾಲೂಕಿನಲ್ಲಿ ಹರಟಿ, ಹುತ್ತೂರು, ವಡಗೂರು, ಮಣಿಘಟ್ಟ, ಹೋಳೂರು, ಮುದುವಾಡಿ, ಆರಹಳ್ಳಿ, ಸುಗಟೂರು, ತೊಟ್ಲಿ, ಮದ್ದೇರಿ, ಬೀಚಗೊಂಡನಹಳ್ಳಿ, ಕ್ಯಾಲನೂರು, ರಾಜಕಲ್ಲಹಳ್ಳಿ, ಸೂಲೂರು, ಬೆಳ್ಳೂರು, ನರಸಾಪುರ, ಅರಾಭಿಕೊತ್ತನೂರು, ಕೊಂಡರಾಜನಹಳ್ಳಿ, ಮುದುವತ್ತಿ, ವಕ್ಕಲೇರಿ ತಾಪಂ ಕ್ಷೇತ್ರ.
ಮಾಲೂರು ತಾಲೂಕಿನಲ್ಲಿ ತೊರ್ನಹಳ್ಳಿ, ಶಿವಾರಪಟ್ಟಣ, ದೊಡ್ಡಶಿವಾರ, ಸೊಣ್ಣಹಳ್ಳಿ, ಅರಳೇರಿ, ಕುಡಿಯನೂರು, ಯಶವಂತಪುರ, ಹುಲಿಮಂಗಲ ಹೊಸಕೋಟೆ, ಲಕ್ಕೂರು, ಜಯಮಂಗಲ, ಡಿ.ಎನ್.ದೊಡ್ಡಿ, ಮಾಸ್ತಿ, ದೊಡ್ಡಕಲ್ಲಹಳ್ಳಿ, ಸುಗ್ಗೊಂಡಹಳ್ಳಿ, ದಿನ್ನಹಳ್ಳಿ, ನೂಟವೆ, ಹುಳದೇನಹಳ್ಳಿ, ಟೇಕಲ್ ಹುಣಸೀಕೋಟೆ ತಾಪಂ ಕ್ಷೇತ್ರಗಳು.
ಬಂಗಾರಪೇಟೆ ತಾಲೂಕಿನಲ್ಲಿ ಸೂಲಿಕುಂಟೆ, ಚಿಕ್ಕಅಂಕಂಡಹಳ್ಳಿ, ಕಾರಹಳ್ಳಿ, ಮಾವಹಳ್ಳಿ, ದೊಡ್ಡೂರು ಕರಪನಹಳ್ಳಿ, ಚಿನ್ನಕೋಟೆ, ಬೆಂಗನೂರು, ದೊಡ್ಡವಲಗಮಾದಿ, ಹುಲಿಬೆಲೆ, ಬೂದಿಕೋಟೆ, ಯಳೇಸಂದ್ರ, ಗುಲ್ಲಹಳ್ಳಿ, ಬಲಮಂದೆ, ದೋಣಿಮಡಗು, ಕಾಮಸಮುದ್ರ, ಕೇತಗಾನಹಳ್ಳಿತಾಪಂ ಕ್ಷೇತ್ರಗಳು.
ಕೆಜಿಎಫ್ ತಾಲೂಕಿನಿಂದ ಕಮ್ಮಸಂದ್ರ, ಪಾರಾಂಡಹಳ್ಳಿ, ಮಾರಿಕುಪ್ಪ, ಕೆಂಪಾಪುರ, ಕ್ಯಾಸಂಬಳ್ಳಿ, ಪೀಲವಾರ, ರಾಮಸಾಗರ, ವೆಂಗಸAದ್ರ, ಸುಂದರಪಾಳ್ಯ, ಹಂಗಳ, ಬೇತಮಂಗಲ, ಟಿ.ಗೊಲ್ಲಹಳ್ಳಿ ತಾಪಂ ಕ್ಷೇತ್ರಗಳು.
ಮುಳಬಾಗಿಲು ತಾಲೂಕಿನಿಂದ ಬಲ್ಲ, ಆವಣಿ, ದೇವರಾಯಸಮುದ್ರ, ಕನ್ನಸಂದ್ರ, ಯಳಚೇಪಲ್ಲಿ, ತಾಯಲೂರು, ಸೊನ್ನವಾಡಿ, ಪದ್ಮಘಟ್ಟ, ಆಲಂಗೂರು, ಗುಮ್ಮಕಲ್, ಎನ್.ಚಮಕಲಹಳ್ಳಿ, ನಂಗಲಿ, ಮುಷ್ಠೂರು, ಹೆಬ್ಬಣಿ, ಬೈರಕೂರು, ಅಂಬ್ಲಿಕಲ್, ಗುಡಿಪಲ್ಲಿ, ಎಚ್.ಗೊಲ್ಲಹಳ್ಳಿ, ಆಗರ, ದುಗ್ಗಸಂದ್ರ, ಉತ್ತನೂರು ತಾಪಂ ಕ್ಷೇತ್ರಗಳು.
ಶ್ರೀನಿವಾಸಪುರ ತಾಲೂಕಿನಿಂದ ಸೋಮಯಾಜಲಪಲ್ಲಿ, ಮುತ್ತಕಪಲ್ಲಿ, ಯಲ್ದೂರು, ಲಕ್ಷ್ಮಿ ಸಾಗರ, ಚಲ್ದಿಗಾನಹಳ್ಳಿ, ದಳಸನೂರು, ಜೆ.ತಿಮ್ಮಸಂದ್ರ, ರೋಣೂರು, ಹೊದಲಿ, ತಾಡಿಗೋಳ್, ಕೋಡಿಪಲ್ಲಿ, ನೆಲವೆಂಕಿ, ಪುಲಗೂರಕೋಟೆ, ಗೌಡತಾತನಗಡ್ಡ, ರಾಯಲ್ಪಾಡು, ಅಡ್ಡಗಲ್, ಕೂರಿಗೇಪಲ್ಲಿ, ಗೌನಿಪಲ್ಲಿ ತಾಪಂ ಕ್ಷೇತ್ರಗಳಿರುತ್ತವೆ.
ಕ್ಷೇತ್ರ ವ್ಯಾಪ್ತಿಯ ಗ್ರಾಮಗಳನ್ನು ಆಯೋಗದ ವೆಬ್‌ಸೈಟ್‌ನಲ್ಲಿ ಪರಂಬರಿಸಬಹುದಾಗಿದೆ ಎಂದು ಸೀಮಾ ಆಯೋಗದ ನಿರ್ದೇಶಕ ಕೆ.ಆರ್.ರುದ್ರಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಹಿಂದೂಗಳ ಯುನಿವರ್ಸಲ್ ಹಬ್ಬ ಗಣೇಶ ಚತುರ್ಥಿಗೆ ಇನ್ನೇನು ಮೂರೇ ದಿನ. ಸಾರ್ವಜನಿಕ ಗಣೇಶೋತ್ಸವ ಆಚರಿಸುವ ಕಡೆ, ಗಣೇಶನ ವಿವಿಧ ಭಂಗಿಯ ವಿಗ್ರಹಗಳು ಈಗಾಗಲೇ ಪೆಂಡಾಲ್ ಗೆ ಬಂದು ಸೇರುತ್ತಿವೆ. ದೇಶದ ಎಲ್ಲ ಕಡೆ ಗಣೇಶ ಹಬ್ಬ ಆಚರಿಸಿದರೂ, ಮಹಾರಾಷ್ಟ್ರದಲ್ಲಿ ಒಂದು ಕೈಮೇಲು. ಇಲ್ಲಿ ಕೆಲವೊಂದು ಕಡೆ, ಗಣೇಶನಿಗೆ ವಿಮೆ ಮಾಡಿಸುವ ಪದ್ದತಿಯನ್ನು ರೂಢಿಸಿಕೊಂಡು ಬರಲಾಗಿದೆ. ಗಣೇಶ ಚತುರ್ಥಿ; ಪರಿಸರಸ್ನೇಹಿ ಗಣಪನ ಹಬ್ಬಕ್ಕೆ ದಾವಣಗೆರೆಯಲ್ಲಿ ತಯಾರಿ ಮುಂಬೈ ಸೆಂಟ್ರಲ್ ಭಾಗದ ಕಿಂಗ್ಸ್ ಸರ್ಕಲ್ ನಲ್ಲಿ ಗೌಡ ಸಾರಸ್ವತ ಬ್ರಾಹಣ…
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ. ಇತ್ತ ಚುನಾವಣಾ ಅಧಿಕಾರಿಗಳು ಅವರ ಫಾರ್ಮ್ ಹೌಸ್ ಪರಿಶೀಲನೆ ನಡೆಸಿದ್ದಾರೆ. ಮೈಸೂರಿನ ಟಿ ನರಸೀಪುರ ರಸ್ತೆಯಲ್ಲಿರುವ ತೂಗುದೀಪ ಫಾರ್ಮ್ ಹೌಸ್ನಲ್ಲಿ ಚುನಾವಣಾ ಅಧಿಕಾರಿಗಳು ಬಂದು ಪರಿಶೀಲನೆ ಮಾಡಿದ್ದಾರೆ. ಅಧಿಕಾರಿಗಳು ಸುಮಾರು ಅರ್ಧ ಗಂಟೆಯ ಕಾಲ ಫಾರ್ಮ್ ಹೌಸ್ನಲ್ಲಿರುವ ಇಡೀ ಮನೆ ತಪಾಸಣೆ ಮಾಡಿ ವಾಪಸ್ ಹೋಗಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ. ಇಂದು ಬೆಳಗ್ಗೆ ಸುಮಾರು 10.30ಕ್ಕೆ ಅಧಿಕಾರಿಗಳು ಬಂದಿದ್ದರು. ಸದ್ಯಕ್ಕೆ…
ಮಂಡ್ಯದ ಗಂಡು ರೆಬೆಲ್ ಸ್ಟಾರ್ ಅಂಬರೀಷ್ ಅವರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ, ಅಂಬರೀಷ್ ಅಭಿಮಾನಿಯೊಬ್ಬರು ಧಾರವಾಡದಿಂದ ಬರೋಬ್ಬರಿ 500 ಕೆಜಿ ಪೇಡಾವನ್ನು ಮಂಡ್ಯಕ್ಕೆ ಕಳುಹಿಸುತ್ತಿದ್ದಾರೆ.ಇತ್ತೀಚಿಗೆ ನಡೆದ ಲೋಕಸಭಾ ಚುನಾವಣೆಯ ವೇಳೆ ರಾಜ್ಯದಲ್ಲಿ ಅತಿ ಹೆಚ್ಚು ಗಮನ ಸೆಳೆದಿದ್ದು ಮಂಡ್ಯ ಲೋಕಸಭಾ ಕ್ಷೇತ್ರ. ಅಲ್ಲಿ ನಡೆದ ಜಿದ್ದಾಜಿದ್ದಿಯಲ್ಲಿ ಸುಮಲತಾ ಗೆಲುವು ಸಾಧಿಸಿದ್ದರು. ಮಂಡ್ಯದಲ್ಲಿ ಗೆದ್ದ ಬಳಿಕ ಇದೇ ಮೊದಲ ಬಾರಿಗೆ ಮಂಡ್ಯದಲ್ಲಿ ಸುಮಲತಾ ಅಂಬರೀಷ್ ಸ್ವಾಭಿಮಾನ ಸಮಾವೇಶವನ್ನು ಹಮ್ಮಿಕೊಂಡಿದ್ದು, ಈ ಸಮಾವೇಶಕ್ಕೆ ಧಾರವಾಡದಿಂದ ಮಂಡ್ಯ ಜನತೆಗೆ ಪೇಡಾ ಬಂದಿದೆ….
ಅಳು ಹುಟ್ಟಿನಿಂದಲೇ ನಮ್ಮ ಸಂಗಾತಿ, ನಾವು ಮಕ್ಕಳಾಗಿದ್ದಾಗ ನಮ್ಮ ಭಾವನಾತ್ಮಕ, ಶಾರೀರಿಕ ಅವಶ್ಯಕತೆಗಳಿಗಾಗಿ ಅಳುತ್ತಿದ್ದೆವು, ಇನ್ನು ಭಾವನಾತ್ಮಕ ಕಣ್ಣೀರು ಉಕ್ಕಿ ಬರಲು ಅನೇಕ ಕಾರಣಗಳಿವೆ. ದುಃಖ, ನಿರಾಶೆ, ದೈಹಿಕ ಅಥವಾ ಮಾನಸಿಕ ವೇದನೆ ಇವೆಲ್ಲಾ ನಾವು ಕಣ್ಣೀರಿಡುವಂತೆ ಮಾಡುತ್ತವೆ, ಸಂತೋಷ, ಸಮಾಧಾನ, ಸಾಧನೆಯಂಥ ಸನ್ನಿವೇಶಗಳು ಕೂಡ ಭಾವನಾತ್ಮಕ ಕಣ್ಣೀರು ಬರಿಸುತ್ತವೆ, ಆದರೆ ಇವು ಆನಂದಬಾಷ್ಪಗಳು. ಕೆಲವೊಮ್ಮೆ ಒಬ್ಬರು ಅಳುವುದನ್ನು ನೋಡಿ ಇನ್ನೊಬ್ಬರಿಗೆ ಕಣ್ಣೀರು ಬರುತ್ತದೆ, ನಿಮಗೆ ಗೊತ್ತಿರಲು ಸಾಧ್ಯವಿಲ್ಲ ಅಳುವುದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ, ಅಮೆಕದ ವಿಜ್ಞಾನಿಗಳು…
ಭಾರತೀಯ ಪ್ರಜೆಗಳಲ್ಲಿ ಬಹು ಸಂಖ್ಯಾತರು ಎನಿಸಿಕೊಂಡ ಹಿಂದೂ ಧರ್ಮೀಯರು ಪ್ರತೀ ಮಾಸದಲ್ಲಿ ಯಾವುದಾದರು ಎಳೆಯಲ್ಲಿ ಧಾರ್ಮಿಕ ಹಬ್ಬವನ್ನು ಆಚರಣೆ ಮಾಡುವುದು ಸಂಪ್ರದಾಯ ಮತ್ತು ಇದನ್ನು ಮೈಗೂಡಿಸಿಕೊಂಡು ಬಂದಿದ್ದಾರೆ ಕೂಡ.ಸಾಮಾನ್ಯವಾಗಿ ಎಲ್ಲಾ ಜನಾಂಗದವರು ಆಚರಿಸುವ ಪಿತೃಪಕ್ಷ ಮಹಾಲಯ ಅಮಾವಾಸ್ಯೆ ಮುಗಿದ ತಕ್ಷಣ ನವರಾತ್ರಿ ಆರಂಭವಾಗಿ ಹತ್ತನೇಯ ದಿನ ದಸರಾ ಆಚರಣೆ ಮಾಡುವುದು ನಿಯಮವಾಗಿದೆ.ಆದರೆ ಈ ವರ್ಷ ಅಶ್ವಿಜ ಮಾಸ ಅಧಿಕ ಬಂದಿರುವುದರಿಂದ ಅಂದರೆ ನಿಜ ಅಶ್ವಿಜ, ಅಧಿಕ ಅಶ್ವಿಜ ಎಂದು ಎರಡು ಮಾಸಗಳು ಬಂದಿರುವುದರಿಂದ ದಸರಾ ಹಬ್ಬ ಮಹಾಲಯ…
ನಿಮ್ಮ ದೇಹ ತೂಕವನ್ನು ಬೇಗನೆ ಇಳಿಸಬೇಕೆಂದಿದ್ದರೆ ಬೆಳಗಿನ ಉಪಹಾರವನ್ನು ಬಿಟ್ಟುಬಿಡಿ. ಮಧ್ಯಾಹ್ನ ಊಟದ ವರೆಗೆ ಏನೂ ತಿನ್ನದೆ ಉಪವಾಸ ವಿದ್ದರೆ ಪ್ರತಿನಿತ್ಯ ಸುಮಾರು 350 ರಷ್ಟು ಕಡಿಮೆ ಕ್ಯಾಲೊರಿ ಆಹಾರ ಸೇವಿಸಬಹುದು ಮತ್ತು ಇದರಿಂದ ದೇಹದ ತೂಕವನ್ನು ಇಳಿಸಬಹುದು ಎಂದು ಅಧ್ಯಯನವೊಂದು ಹೇಳುತ್ತದೆ.