ಸುದ್ದಿ

ಕೇವಲ 850ರೂಪಾಯಿಗೆ ತೆಗೆದುಕೊಂಡಿದ್ದ ಉಂಗುರ ಮಾರಿದಾಗ ಸಿಕ್ಕಿದ್ದು 4.5 ಕೋಟಿ ರೂಪಾಯಿ!ಅಚ್ಚರಿ ಆದರೂ ಇದು ನಿಜ…

180

ಹೆಚ್ಚಿನ ಸಂಖ್ಯೆಯ ಮಹಿಳೆಯರಿಗೆ ಬೆಲೆ ಬಾಳುವ ಆಭರಣಗಳು ತಮ್ಮದಾಗಬೇಕು ಎಂಬ ಆಸೆ ಇರುತ್ತದೆ. ಆರ್ಥಿಕವಾಗಿ ಚಿನ್ನದ ಆಭರಣ ಖರೀದಿಸಲು ಸಾಧ್ಯವಾಗದಿದ್ದಾಗ ಮಾರುಕಟ್ಟೆಯಲ್ಲಿ ದೊರೆಯುವ ನಕಲಿ ಆಭರಣಗಳನ್ನು ಖರೀದಿಸುತ್ತಾರೆ. ಅಂತೆಯೇ ಇಂಗ್ಲೆಂಡ್ ನಿವಾಸಿಯ ಮಹಿಳೆ 33 ವರ್ಷಗಳ ಹಿಂದೆ ಮಾರುಕಟ್ಟೆಯಲ್ಲಿ 850 ರೂ.ಗೆ ಖರೀದಿಸಿದ್ದ ವಜ್ರದ ಉಂಗುರ ಇಂದು ಬರೋಬ್ಬರಿ 6.5 ಕೋಟಿ ರೂ.ಗೆ ಮಾರಾಟವಾಗಿದೆ.

ವಜ್ರದ ಉಂಗುರ ಧರಿಸಬೇಕೆಂದು ಆಸೆ ಪಟ್ಟಿದ್ದ ಲಂಡನ್ ನಿವಾಸಿ 33 ವರ್ಷಗಳ ಹಿಂದೆ ಡೆಬ್ರಾ ಗಾಂಡರ್ಡ್(55), ರಸ್ತೆ ಬದಿಯ ಅಂಗಡಿಯಲ್ಲಿ 850 ರೂ. ನೀಡಿ ರಿಂಗ್ ಖರೀದಿಸಿದ್ದರು. ಹೀಗೆ ಹಲವು ವರ್ಷ ಉಂಗುರವನ್ನು ಧರಿಸಿದ್ದ ಡೆಬ್ರಾ ಇತ್ತೀಚೆಗೆ ಅದನ್ನು ಮಾರಲು ನಿರ್ಧರಿಸಿದ್ದರು. ಹೀಗಾಗಿ ಸಮೀಪದ ಅಂಗಡಿಗೆ ತೆರಳಿದಾಗ ಅದು ನಕಲಿ ಅಲ್ಲ ಅಸಲಿ ಎಂಬುದಾಗಿ ಗೊತ್ತಾಗಿದೆ.

ಅಂಗಡಿಯವನ ಮಾತು ನಂಬದ ಡೆಬ್ರಾ ನಗರದ ಪ್ರಸಿದ್ಧ ವಜ್ರ ವ್ಯಾಪಾರಿ ಬಳಿ ತೆರಳಿ ಉಂಗುರದ ಗುಣಮಟ್ಟವನ್ನು ಪರೀಕ್ಷೆ ಮಾಡಿಸಿದ್ದಾರೆ. ಈ ವೇಳೆ ವ್ಯಾಪಾರಿ ನಿಮ್ಮ ಉಂಗುರ 26.27 ಕ್ಯಾರಟ್ ವಜ್ರದ ಹರಳನ್ನು ಹೊಂದಿದೆ. ಪ್ರಾಚೀನ ಕಾಲದ ಉಂಗುರ ಇದಾಗಿದ್ದು, ಪ್ರದರ್ಶನಕ್ಕಿರಿಸಿ ಮಾರುವುದರಿಂದ ಹೆಚ್ಚಿನ ಹಣ ನಿಮ್ಮದಾಗಲಿದೆ ಎಂದು ಸಲಹೆ ನೀಡಿದ್ದರು.

ವ್ಯಾಪಾರಿಯ ಸಲಹೆ ಮೇರೆಗೆ ಉಂಗುರವನ್ನು ಡೆಬ್ರಾ ಪ್ರದರ್ಶನಕ್ಕೆ ಇರಿಸಿದ್ದರು. ಈ ವೇಳೆ ನಗರದ ಖ್ಯಾತ ವ್ಯಕ್ತಿಯೊಬ್ಬರು ಹರಾಜಿನಲ್ಲಿ 6 ಕೋಟಿ 86 ಲಕ್ಷ ರೂ. ನೀಡಿ ಖರೀದಿಸಿದ್ದಾರೆ. ತೆರಿಗೆ ಕಡಿತಗೊಳಿಸಿದಾಗ ಡೆಬ್ರಾರ ಪಾಲಿಗೆ 4.5 ಕೋಟಿ ರೂ. ಬಂದಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ