ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಒಬ್ಬೊಬ್ಬರಿಗೆ ಒಂದೊಂದು ರೀತಿಯ ದುಶ್ಚಟವಿರುವುದು ಸಾಮಾನ್ಯ. ಕೆಲವರು ತೀವ್ರ ಒತ್ತಡವಿರುವಾಗ ಉಗುರು ಕಚ್ಚುವ ಕೆಟ್ಟ ಅಭ್ಯಾಸ ಬೆಳೆಸಿಕೊಂಡಿರುತ್ತಾರೆ. ಇದನ್ನು ಬಿಡಬೇಕೆಂದರೂ ಸಾಧ್ಯವಾಗುವುದಿಲ್ಲ.

ಸಣ್ಣವರಿದ್ದಾಗ, ಅಷ್ಟೇ ಏಕೆ ದೊಡ್ಡವರೂ ಕೂಡ ಆಗಾಗ ಉಗುರು ಕಚ್ಚುವುದನ್ನು ನೋಡಿರುತ್ತೇವೆ. ಒತ್ತಡದಲ್ಲಿ ಅಥವಾ ಕೆಲವೊಮ್ಮೆ ಅದನ್ನೇ ರೂಢಿ ಮಾಡಿಕೊಂಡವರು ಉಗುರು ಕಚ್ಚುತ್ತಾರೆ. ಹೀಗೆ ಉಗುರು ಕಚ್ಚುವವರು ಪರ್ಫೆಕ್ಷನಿಸ್ಟ್ ಆಗಿರುತ್ತಾರೆ ಎಂದು ವರದಿಯೊಂದು ಹೇಳಿದೆ.
![]()
ಉಗುರು ಕಚ್ಚುವುದು, ತಲೆ ಕೆರೆದುಕೊಳ್ಳುವುದು, ಬೆರಳ ತುದಿಯ ಚರ್ಮ ಕಡಿಯುವುದು ಮೊದಲಾದ ಸ್ವಭಾವ ಹೊಂದಿದ್ದ ಹಾಗೂ ಹೊಂದಿರದವರನ್ನು ಅಧ್ಯಯನಕ್ಕೆ ಒಳಪಡಿಸಲಾಗಿದ್ದು, ಸರಳ, ಕ್ಲಿಷ್ಟ, ಮೊದಲಾದ ರೀತಿಯ ಕೆಲಸವನ್ನು ಅವರಿಗೆ ವಹಿಸಲಾಗಿತ್ತು ಅದರಲ್ಲಿ ಉಗುರು ಕಚ್ಚುವವರು ತಮಗೆ ನೀಡಲಾಗಿದ್ದ ಪರೀಕ್ಷೆಗಳನ್ನು ಯಶಸ್ವಿಯಾಗಿ ಮುಗಿಸಿದ್ದಾರೆ.

ಈ ಸ್ವಭಾವ ಹೊಂದಿರದವರು ಒತ್ತಡ ತಡೆದುಕೊಳ್ಳಲಿಕ್ಕೆ ಸಾಧ್ಯವಾಗದೇ ಉಗುರು ಕಚ್ಚಿಕೊಳ್ಳುವ ಪರಿಸ್ಥಿತಿ ಎದುರಾಗಿತ್ತು ಎಂದು ಹೇಳಲಾಗಿದೆ. ಉಗುರು ಕಚ್ಚುವವರು ಪರ್ಫೆಕ್ಷನಿಸ್ಟ್ ಆಗಿದ್ದಾರೆಂಬುದು ಅಧ್ಯಯನದಲ್ಲಿ ತಿಳಿದುಬಂದಿದ್ದು, ಇಂತವರಿನ್ನು ಖುಷಿಪಡಬಹುದು. ಕೆಲವರು ತಮಗೆ ವಹಿಸಿದ ಕೆಲಸ ಪೂರ್ಣಗೊಳಿಸದಿದ್ದಾಗ ಒತ್ತಡಕ್ಕೆ ಒಳಗಾಗುತ್ತಾರೆ ಎನ್ನಲಾಗಿದೆ.

ಉಗುರು ಕಚ್ಚುವುದು ಕ್ಯಾಲ್ಶಿಯಂ ಕೊರತೆಯ ಲಕ್ಷಣ ಎನ್ನುವವರೂ ಇದ್ದಾರೆ. ಅದೇನೇ ಇದ್ದರೂ ಈ ದುಶ್ಚಟ ಬಿಡುವ ಸರಳ ಉಪಾಯ ಏನಿದೆ ನೋಡೋಣ.ನಮಗೆ ನೆನಪಿರಬಹುದು. ಚಿಕ್ಕ ಮಗುವಾಗಿದ್ದಾಗ ತಾಯಿ ಎದೆ ಹಾಲು ಬಿಡಿಸಲು ಕಹಿ ಸವರುವ ಉಪಾಯ. ಅದನ್ನೇ ಇಲ್ಲೂ ಅಳವಡಿಸಿಕೊಳ್ಳಬಹುದು. ಕೈಗೆ ನೈಲ್ ಪಾಲಿಶ್ ಅಥವಾ ಕಹಿಯಾದ ವಸ್ತುವನ್ನೇನಾದರೂ ಸವರಿಕೊಳ್ಳುವುದು ಉತ್ತಮ ಉಪಾಯ.

ಉಗುರು ಕಚ್ಚುವುದರಿಂದ ದೇಹದ ಮೇಲಾಗುವ ಪರಿಣಾಮಗಳೂ ಅಷ್ಟೇ ಗಂಭೀರ. ಉಗುರಿನಲ್ಲಿರುವ ಕಶ್ಮಲ ಹೊಟ್ಟೆ ಸೇರುವುದರಿಂದ ಜಂತು ಹುಳದ ತೊಂದರೆ ಅನುಭವಿಸಬೇಕಾದೀತು. ಉಗುರಿನ ಸುತ್ತಲಿನ ಚರ್ಮ ಅಂದಗೆಡುವುದು ಮಾತ್ರವಲ್ಲ, ಊದಿಕೊಂಡಂತೆ ಆಗಬಹುದು.

ಅಲ್ಲದೆ ಉಗುರು ಕಚ್ಚುವುದರಿಂದ ಹಲ್ಲು ಬಲಹೀನವಾಗಬಹುದು ಮತ್ತು ಅಂದಗೆಡಬಹುದು. ಎಲ್ಲಕ್ಕಿಂತ ಹೆಚ್ಚಾಗಿ ಕೈ ಬೆರಳುಗಳು ಅಂದಗೆಡುವುದು ಮಾತ್ರವಲ್ಲ, ನೋಡುಗರಿಗೆ ಅಸಹ್ಯವಾಗಿ ಕಾಣಬಹುದು. ಹಾಗಾಗಿ ಉಗುರು ಕಚ್ಚುವ ಅಭ್ಯಾಸವಿದ್ದರೆ ಆದಷ್ಟು ಬೇಗ ಬಿಡುವುದು ಒಳ್ಳೆಯದು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಈಗಂತೂ ವಿಧ್ಯಾರ್ಥಿ ಮತ್ತು ಶಿಕ್ಷಕರ ನಡುವಿನ ಗುರು ಶಿಷ್ಯರ ಸಂಬಂದ ಮೊದಲಿನ ಹಾಗೆ ಇಲ್ಲ.ಆದರೆ ಕೆಲವು ಶಿಕ್ಷಕರು ವಿಧ್ಯಾರ್ಥಿಗಳಿಗೆ ತೋರಿಸುವ ಪ್ರೀತಿ ಮತ್ತು ಕಲಿಸುವ ರೀತಿ ವಿಧ್ಯಾರ್ಥಿ ಶಿಕ್ಷಕರ ನಡುವೆ ಒಂದು ಬಿಡಿಸಲಾರದ ಅನುಬಂದವನ್ನೇ ಹುಟ್ಟು ಹಾಕುತ್ತದೆ. ಅಂತಹ ಶಿಕ್ಷಕರು ಒಂದು ವೇಳೆ ಬೇರೊಂದು ಶಾಲೆಗೇ ವರ್ಗಾವಣೆಯಾದರೆ ವಿಧ್ಯಾರ್ಥಿಗಳು ಮತ್ತು ಆ ಶಿಕ್ಷಕ ಪಡುವ ಯಾತನೆ ಅಷಿಷ್ಟಲ್ಲ.ಇದಕ್ಕೊಂದು ನೈಜ ಉದಾಹರಣೆ ಎಂಬಂತೆ ತಮಿಳುನಾಡಿನ ಶಾಲೆಯೊಂದರಲ್ಲಿ ಘಟನೆ ನಡೆದಿದೆ. ತಮ್ಮ ಪ್ರೀತಿಯ ಶಿಕ್ಷಕ ವರ್ಗವಾಗಿ ಬೇರೆ ಶಾಲೆಗೆ ಹೋಗುವುದು…
ಜೀವನದಲ್ಲಿ ಮುಂದೆ ಏಳಿಗೆ ಹೊಂದಬೇಕಾದರೆ ಪಾಲಿಸ ಬೇಕಾದ ನಿಯಮಗಳು,ಇತರರೊಡನೆ ವ್ಯವಹರಿಸ ಬೇಕಾದ ರೀತಿ,ಸಮಾಜದಲ್ಲಿ ನಮ್ಮ ನಡೆ ಹೇಗಿರಬೇಕು.ಮುಂತಾದ ಅನೇಕ ಅಂಶಗಳ ಬಗ್ಗೆ ಚಾಣಕ್ಯನು ನಮಗೆ ಅನೇಕ ನೀತಿಗಳನ್ನು ಬೋಧಿಸಿದ್ದಾನೆ. ನಮ್ಮ ಪ್ರಗತಿಗೆ ಅನೇಕ ಸಂದರ್ಭಗಳಲ್ಲಿ ಇವೆಲ್ಲವೂ ಉಪಯೋಗಕ್ಕೆ ಬರುತ್ತವೆ. ಚಾಣಕ್ಯ ಇವಷ್ಟನ್ನೇ ಅಲ್ಲದೆ,ಸ್ತ್ರೀಯರ ಬಗ್ಗೆಯೂ ಹಲವು ವಿಷಯಗಳನ್ನು ತಿಳಿಸಿದ್ದಾನೆ. 1.ಯಾವುದೇ ವಿಷಯವಾಗಲೀ,ಸ್ತ್ರೀಯು ತನ್ನ ಗಂಡನ ಅನುಮತಿ ಪಡೆದುಕೊಳ್ಳ ಬೇಕಂತೆ.ಇಲ್ಲವಾದಲ್ಲಿ ಗಂಡನ ಆಯುಷ್ಯ ಕಡಿಮೆಯಾಗುತ್ತದಂತೆ. 2.ಸುಳ್ಳುಹೇಳುವುದು, ಸ್ವಾರ್ಥ,ಅಸೂಯೆ,ಕಠಿಣವಾಗಿ ವರ್ತಿಸುವುದು,ಮೂರ್ಖತ್ವ,ಪರಿಶುಭ್ರತೆಯನ್ನು ಪಾಲಿಸದಿರುವುದು,ಕ್ರೂರತ್ವ ಮುಂತಾದ ಆಂಶಗಳು ಸ್ತ್ರೀಯರಲ್ಲಿ ಪ್ರಧಾನವಾಗಿರುತ್ತವೆ. ಇವುಗಳಿಂದಾಗಿ ಅನೇಕ…
ಪಿ.ಯು.ಸಿ ಪರೀಕ್ಷೆಗೆ ಸಿದ್ಧತೆ ನಡೆಸಿರುವ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಇಲ್ಲಿದೆ.ಮಾರ್ಚ್ 1 ರಿಂದ 17 ರ ವರೆಗೆ ದ್ವಿತೀಯ ಪಿ.ಯು.ಸಿ. ಪರೀಕ್ಷೆ ನಡೆಯಲಿದೆ. ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ಕೆ.ಎಸ್.ಆರ್.ಟಿ.ಸಿ. ವಿಶೇಷ ಸೌಲಭ್ಯ ಕಲ್ಪಿಸಿದೆ.
ಸಿಂಧನೂರು : ಕ್ಷೇತ್ರದಿಂದ ಆಯ್ಕೆಯಾದ ಶಾಸಕರು ಇಚ್ಛೆ ಬಂದಂತೆ ನಡೆದುಕೊಳ್ಳುವುದು ಸರಿಯಲ್ಲ. ಕಾನೂನು ತಿದ್ದುಪಡಿ ಮಾಡಬೇಕು ಎಂದು ರೈತ ಯುವ ಮುಖಂಡ ರವಿಗೌಡ ಮಲ್ಲದಗುಡ್ಡ ಆಗ್ರಹಿಸಿದ್ದಾರೆ ರಾಜ್ಯದಲ್ಲೂ ಸಂವಿಧಾನಾತ್ಮಕವಾಗಿ ವಜಾಗೊಳಿಸುವ ಕೆಲಸ ಆಗಬೇಕು. ಕ್ಷೇತ್ರದ ಅಭಿವೃದ್ದಿ ಮರೆತು ಸೀಟಿಗಾಗಿ ಪ್ರತಿದಿನ ಕಚ್ಚಾಡುತ್ತಿರುವ ಶಾಸಕರಿಗೆ ತಕ್ಕ ಪಾಠ ಕಲಿಸಬೇಕಾದ ಕ್ಷೇತ್ರದಲ್ಲಿ ಅವರ ವಿರುದ್ದ ಎರಡನೇ ಸ್ತಾನದಲ್ಲಿ ಸೋತಿರುವ ಅಭ್ಯರ್ಥಿಯನ್ನು ಆ ಕ್ಷೇತ್ರದ ಮುಂದಿನ ಶಾಸಕರು ಎಂದು ಕಾನೂನು ಜಾರಿಗೆ ಬರಬೇಕು. ಆಗ ಮಾತ್ರ ಪಕ್ಷೆ ನಿಷ್ಠೆ ಹಾಗು ಕ್ಷೇತ್ರದ…
ಮೊದಲದಿನ 4 ಲಕ್ಷ ಮಕ್ಕಳಿಗೆ ಉಚಿತ ಲಸಿಕೆ ರಾಜ್ಯದಲ್ಲಿ 15-18ವರ್ಷದ ಮಕ್ಕಳಿಗೆ ಕೋವಿಡ್ ಲಸಿಕೆ ವಿತರಣೆ ಅಭಿಯಾನ ಆರಂಭವಾಗಿದೆ.ಮೊದಲದಿನ 4.03 ಲಕ್ಷಕ್ಕೂ ಅಧಿಕ ಮಕ್ಕಳಿಗೆ ಉಚಿತ ಲಸಿಕೆ ನೀಡಲಾಗಿದೆ.ಆ ಮೂಲಕ ಶೇ.63 ಗುರಿ ಸಾಧನೆ ಮಾಡಲಾಗಿದೆ. ಸೋಮವಾರ ರಾಜ್ಯಾದ್ಯಂತ ನಡೆದ ಲಸಿಕೆ ಅಭಿಯಾನದಲ್ಲಿ 6,38,891 ಮಕ್ಕಳಿಗೆ ಉಚಿತ ಲಸಿಕೆ ಹಾಕುವ ಗುರಿ ಹೊಂದಲಾಗಿತ್ತು.ಈ ಪೈಕಿ (ಸಂಜೆ 7:30ರವೆರಗೂ) 4,03,928 ಮಕ್ಕಳಿಗೆ ಉಚಿತ ಲಸಿಕೆ ನೀಡಲಾಗಿದೆ.ಈ ವಯೋಮಾನದ ಎಲ್ಲ ಮಕ್ಕಳಿಗೂ ಕೋವ್ಯಾಕ್ಸೀನ್ ಹಾಕಿರುವುದರಿಂದ 28ದಿನಗಳ ನಂತರ 2ನೇ ಡೋಸ್…
![]()
ಪ್ರತಿಬಾರಿ ಆಲೂಗಡ್ಡೆಯನ್ನ ಬೇಯಿಸುವಾಗ ಎಲ್ಲರಲ್ಲೂ ಕಾಡುವ ಪ್ರಶ್ನೆ ಎಂದರೆ ಆಲೂಗಡ್ಡೆ ಬೇಯುವಾಗ ಒಡೆದುಹೋಗುತ್ತದೆ ಎಂಬುದು. ಆಲೂಗಡ್ಡೆ ಒಡೆದು ಅದರೊಳಗೆ ನೀರು ಸೇರಿ ಆಲೂಗಡ್ಡೆಯ ರುಚಿ ಹಾಳಾಗುತ್ತದೆ.