ಸ್ಪೂರ್ತಿ

ಈ 15 ವರ್ಷದ ಬಾಲಕ ತನ್ನ ತಾಯಿಯ ಕಷ್ಟ ನೋಡಲಾರದೆ ಮಾಡಿದ್ದೇನು ಗೋತ್ತಾ..?ತಿಳಿಯಲು ಈ ಲೇಖನ ಓದಿ..

341

ತನ್ನ ಮಕ್ಕಳು ಎಂದಿಗೂ ಸುಖವಾಗಿರಲಿ ಎಂಬುದಾಗಿ ಬಯಸುವ ತಾಯಿ. ಎಲ್ಲ ಕಷ್ಟವನ್ನು ತಾನೇ ಹೊತ್ತು ಕೊಳ್ಳುತ್ತಾಳೆ ಅಲ್ಲದೆ. ತನ್ನ ಮಕ್ಕಳಿಗೆ ಒಳ್ಳೇದನ್ನೇ ಬಯಸುತ್ತಾಳೆ. ಆದರೆ ಮಕ್ಕಳು ದೊಡ್ಡವರಾದ ಮೇಲೆ ಕೆಲ ಮಕ್ಕಳು ತನ್ನ ತಾಯಿಯನ್ನು ಉತ್ತಮವಾಗಿ ನೋಡಿ ಕೊಂಡರೆ ಮತ್ತೆ ಕೆಲವರು ತಮ್ಮಿಂದ ದೂರ ಇಟ್ಟಿರುತ್ತಾರೆ. ಸತ್ತ ಮೇಲೆ ತಂದೆ ತಾಯಿಯರಿಗೋಸ್ಕರ ಏನೇನೋ ಮಾಡುವ ಬದಲು ಇದ್ದಾಗ ಅವರ ಕಷ್ಟಕ್ಕೆ ಸ್ಪಂದಿಸುವುದೇ ನಿಜವಾದ ಮಕ್ಕಳು.

ತನ್ನ ತಾಯಿಯ ಕಷ್ಟ ನೋಡಲಾರದೆ ಈ ೧೫ ವರ್ಷದ ಪೋರ ಮಾಡಿದ್ದೇನು ಗೋತ್ತಾ..?

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಶೆಟ್ಟಿಸಾರ ಗ್ರಾಮದ 15 ವರ್ಷದ ಹುಡುಗ ಪವನ್ ಕುಮಾರ್ ತನ್ನ ತಾಯಿ ನೀರು ತರಲು ತುಂಬಾನೇ ಕಷ್ಟ ಪಡುತ್ತಿದ್ದರು ಆಗಾಗಿ ತನ್ನತಾಯಿ ಪ್ರತಿ ದಿನ ಪಡುವ ಕಷ್ಟ ನೋಡಲಾರದೆ ತಾನು ಬಾವಿಯನ್ನು ಅಗೆದು ನೀರು ತೆಗೆದಿದ್ದಾನೆ.

ಇದರ ಬಗ್ಗೆ ಆ 15 ರ ಪೋರ ಹೇಳೋದಾದರೂ ಏನು..?

ನನ್ನ ಅಮ್ಮ ಪ್ರತಿ ದಿನ ನೀರು ತರಲು ದೂರದ ಸ್ಥಳಕ್ಕೆ ಹೋಗ ಬೇಕಾಗಿತ್ತು ಹಾಗು ಅವರು ತುಂಬಾನೇ ಕಷ್ಟ ಪಡುತ್ತಿದ್ದರು ಆಗಾಗಿ ನಾನು ಈ ಕೆಲಸ ಮಾಡಲು ಮುಂದಾದೆ ನಾನು ಬಾವಿ ತೋಡಲು ಆರಂಭಿಸಿದ ನನಗೆ 40 ಅಡಿ ಅಗೆತ ಆದ ನಂತರ ಕೈಮುರಿಯಿತು.

40 ಅಡಿ ಅಗೆದ ನಂತರವೂ ನೀರು ಬರದಿದ್ದರಿಂದ ತುಂಬಾ ನಿರಾಶೆ ಆಗಿತ್ತು. ಆದರೆ, ಇಬ್ಬರು ವೃತ್ತಿಪರ ಬಾವಿ ತೋಡುವವರ ಸಹಕಾರದಿಂದ ಇನ್ನೂ ಹತ್ತು ಅಡಿ ತೋಡಿದಾಗ ನೀರು ಜಿನುಗಿತು ಎಂದು ಪವನ್ ಹೇಳುತ್ತಾನೆ. ಈ ಬಾವಿಯ ನೀರನ್ನು ಪವನ್ ಮನೆಯವರು ಮಾತ್ರವಲ್ಲ ಅಕ್ಕಪಕ್ಕದವರೂ ಉಪಯೋಗಿಸಿ ಕೊಳ್ಳುತ್ತಿದ್ದಾರೆ.

ಅದೇನೇ ಇರಲಿ ತಮ್ಮ ತಂದೆ ತಾಯಿಗಳ ಕಷ್ಟವನ್ನು ಆಲಿಸದ ಹಾಗು ಲೆಕ್ಕಕ್ಕೆ ಹಾಕಿ ಕೊಳ್ಳದ ಮಂದಿಯ ಮುಂದೆ ಈ 15 ವರ್ಷದ ಪೋರನ ಕೆಲಸಕ್ಕೆ ಸೆಲ್ಯೂಟ್ ಹೊಡಿಯಲೇ ಬೇಕು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ