ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಗಲ್ಫ್ ದೇಶಗಳಲ್ಲಿ ,ಮುಖ್ಯವಾಗಿ ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ಕಠಿನವಾಗಿ ಕಾನೂನನ್ನು ಜಾರಿಗೊಳಿಸುತ್ತಾರೆ. ನಿಬಂಧನೆಗಳನ್ನು ಉಲ್ಲಂಘಿಸಿದರೆ, ಯಾರಿಗೇ ಆಗಲಿ ಶಿಕ್ಷೆ ತಪ್ಪಿದ್ದಲ್ಲ. ಆದುದರಿಂದ ಇತರೆ ದೇಶಗಳಿಂದ ಬಂದವರು ಅಲ್ಲಿನ ಕಾನುನುಗಳನ್ನು ಅರಿತುಕೊಂಡಿರಬೇಕು.

ಇಲ್ಲದಿಲ್ಲಲ್ಲಿ ಜೈಲುಪಾಲಾಗ ಬೇಕಾಗುತ್ತದೆ. ಇಂತಹುದೇ ಒಂದು ಘಟನೆ ಇತ್ತೀಚೆಗೆ ಬೆಳಕಿಗೆ ಬಂದಿದೆ. 32 ವರ್ಷ ವಯಸ್ಸಿನ ಒಬ್ಬ ಮಹಿಳೆ ಯೂಎಇ ದೇಶದ ಅಬುದಾಬಿ ನಗರದ ಒಂದು ಫ್ಲ್ಯಾಟ್ ನಲ್ಲಿ ವಾಸಿಸುತ್ತಿದ್ದಳು. ಮದುವೆಯಾಗದ ಆ ಯುವತಿ, ತನ್ನ ದೇಶದವನೊಡನೆ ಶಾರೀರಿಕವಾಗಿ ಒಂದಾದಳು.

ಈ ವಿಷಯ ಗೊತ್ತಾಗಿ ಪೊಲೀಸರು ಕೇಸ್ ಹಾಕಿದರು. ಮದುವೆಯಾಗದೆಯೇ, ಮುತ್ತಿಟ್ಟದ್ದು ಹಾಗೂ ಶಾರೀರಿಕ ಸಂಬಂಧ ಬೆಳೆಸಿದ್ದಳು ಎಂಬ ಕಾರಣಗಳನ್ನು ನಮೂದಿಸಿದ್ದರು. ಈ ನಿಟ್ಟಿನಲ್ಲಿ ಆ ಯುವತಿ ಕೋರ್ಟ್ ಗೆ ಹಾಜರಾದಳು.

‘ ಮದುವೆಯಾಗದೆಯೇ ಲೈಂಗಿಕ ಕ್ರಿಯೆಯಲ್ಲಿ ತೊಡಗ ಬಾರದೆಂದು ನಿನಗೆ ಗೊತ್ತಿಲ್ಲವೇ?’ ಎಂದು ನ್ಯಾಯಮೂರ್ತಿಗಳು ಪ್ರಶ್ನಿಸಿದಾಗ, ನನಗೆ ಗೊತ್ತಿಲ್ಲ ಎಂದಳು. ಗೊತ್ತಿಲ್ಲ ಎಂದು ಹೇಳಲು ಇರುವ ಆಧಾರಗಳನ್ನು ನೀಡಬೇಕೆಂದು ಮುಂದೂಡಿದರು.

ಮತ್ತೊಂದು ಕೇಸ್ ನಲ್ಲಿ ಮುದುವೆಯಾಗದೆಯೇ ಮುತ್ತಿಟ್ಟುಕೊಂಡರು ಎಂಬ ಕಾರಣಕ್ಕಾಗಿ ಮತ್ತೊಂದು ಜೋಡಿಯ ಮೇಲೆ ಕೇಸ್ ನಮೂದಿಸಿದ್ದರು. ನಾವು ಮುತ್ತಿಡಲಿಲ್ಲ ಎಂದು ಆಪಾದಿತರು ಕೋರ್ಟ್ ನಲ್ಲಿ ವಾದಿಸುತ್ತಿದ್ದರು. ತಪ್ಪು ಮಾಡಿದ್ದಲ್ಲದೇ..ಮಾಡಿಲ್ಲವೆಂದು ವಾದಿಸುತ್ತೀರಾ? ತಪ್ಪು ಮಾಡಲಿಲ್ಲವೆಂಬುದಕ್ಕೆ ಆಧಾರಗಳನ್ನು ಒದಗಿಸಿ ಎಂದು ಕೇಸನ್ನು ಮುಂದೂಡಿದರು.

ಮದುವೆಯಾಗದೆ ಇಂತಹ ಕೆಲಸಗಳನ್ನು ಮಾಡಿದರೆ ಶಿಕ್ಷೆಯಿಂದ ತಪ್ಪಿಸಿಕೊಳ್ಳಲಾಗದೆಂದು ಎಲ್ಲರೂ ತಿಳಿದುಕೊಳ್ಳಬೇಕೆಂದು ಈ ಸಂದರ್ಭದಲ್ಲಿ ನ್ಯಾಯಮೂರ್ತಿ ವ್ಯಾಖ್ಯಾನಿಸಿದರು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಇಲ್ಲ, ನಾನು ವಾಟ್ಸ್ಯಾಪ್ ಯೂಸ್ಮಾಡ್ತಿಲ್ಲ… ಹಾಗಂತ ಯಾರಾದರು ಹೇಳಿದರೆ , ಇವನ್ಯಾರೋ ಗುಗ್ಗು ಅಂತ ನೋಡೋ ಕಾಲ ಇದು.ಯಾಕಂದ್ರೆ, ಹಳ್ಳಿ ಯಿಂದ ದಿಲ್ಲಿಯವರಿಗೆ, ಹೈದನಿಂದ ವೃದ್ಧರವರೆಗೆ ಎಲ್ಲರೂ ವಾಟ್ಸ್ಯಾಪ್ ಬಳಸುವವರೇ. ಆದರೆ, ಜನರನ್ನು ಬೆಸೆಯುವ ವಾಟ್ಸ್ಯಾಪ್ಈಗ ಹಳಿ ತಪ್ಪಿದ ರೈಲಿನಂತಾಗಿರುವುದು ಸುಳ್ಳಲ್ಲ. ವಾಟ್ಸ್ಯಾಪ್ಅನ್ನೋದು ಗೀಳು ರೋಗವಾಗಿ ಬದುಕನ್ನು ಆವರಿಸುತ್ತಿರೋದು ಹೆಚ್ಚಿನವರ ಗಮನಕ್ಕೆ ಬಂದಿಲ್ಲ.
ಡ್ಯಾಡಿ, ನೀನು ನಿನ್ನ ಬಳಿ ಹಣ ಇಲ್ಲ ಅಂತ ಹೇಳ್ತೀಯ. ಆದ್ರೆ ನಮ್ಮ ಬಳಿ ಈ ಮನೆನಾದ್ರೂ ಇದೆ. ಪ್ಲೀಸ್ ಈ ಮನೆಯನ್ನ ಮಾರಿ ನನ್ನ ಚಿಕಿತ್ಸೆಗೆ ಹಣ್ಣ ಕಟ್ಟಿ ಡ್ಯಾಡಿ. ಇಲ್ಲ ಅಂದ್ರೆ ನಾನು ಹೆಚ್ಚು ದಿನ ಬದುಕಲ್ಲ ಅಂತ ಹೇಳಿದ್ದಾರೆ. ಪ್ಲೀಸ್ ಏನಾದ್ರೂ ಮಾಡಿ ನನ್ನ ಉಳಿಸ್ಕೋ ಡ್ಯಾಡಿ….. ಹೀಗಂತ 13 ವರ್ಷದ ಹೆಣ್ಣುಮಗಳೊಬ್ಬಳು ತನ್ನ ಕ್ಯಾನ್ಸರ್ ಚಿತ್ಸೆಗಾಗಿ ಹಣ ಕೊಡಿ ಅಂತ ಅಪ್ಪನನ್ನ ಬೇಡಿದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮತ್ತೊಂದು ವಿಪರ್ಯಾಸವೆಂದರೆ ಮೇ 14ರಂದು ಈ ಬಾಲಕಿ ಸಾವನ್ನಪ್ಪಿದ್ದಾಳೆ.
ಅರಿಶಿನ ಹಾಲು (ಹಾಲಿಗೆ ಅರಿಶಿನ ಸೇರಿಸಿ ಕುಡಿಯುವುದು) ಕುಡಿಯುವ ರೂಢಿ ನಮ್ಮ ಭಾರತೀಯ ಸಂಪ್ರದಾಯದಲ್ಲಿ ಮೊದಲಿನಿಂದಲೂ ಇದೆ. ಇದನ್ನು ಚಿನ್ನದ ಹಾಲು ಎಂದೂ ಕರೆಯುತ್ತಾರೆ. ಅದರ ಬಣ್ಣ ನೋಡಿ ಮಾತ್ರವಲ್ಲ, ಪ್ರಯೋಜನಗಳನ್ನು ನೋಡಿ. ಅತ್ಯದ್ಭುತ ಪೌಷ್ಠಿಕಾಂಶಗಳನ್ನು ಹೊಂದಿರುವ ಅರಿಶಿನ ಹಾಲನ್ನು ಕುಡಿಯುವುದರಿಂದ ಅನೇಕ ಕಾಯಿಲೆಗಳು ದೂರ ವಾಗುವುದಲ್ಲದೆ, ನಿಮ್ಮ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಪ್ರತಿದಿನ ಅರಿಶಿನ ಹಾಲನ್ನು ಕುಡಿಯುವುದರಿಂದ ಆರೋಗ್ಯಕ್ಕೆ ಆಗುವ ಲಾಭಗಳು ಇಲ್ಲಿವೆ ನೋಡಿ ರಕ್ತವನ್ನು ಶುದ್ಧೀಕರಿಸುತ್ತದೆ : ಅರಿಶಿನ ಹಾಲು ರಕ್ತವನ್ನು ಶುದ್ಧೀಕರಿಸುತ್ತದೆ….
ಲೂಧಿಯಾನದ ಅಬ್ದುಲ್ಲಾಪುರ ಬಸ್ತಿ ಪ್ರದೇಶದಲ್ಲಿ ಮಕ್ಕಳಿಗೆ ಬಲವಂತವಾಗಿ ಪೊಲೀಯೋ ಡ್ರಾಪ್ಸ್ ನೀಡಲಾಗುತ್ತಿದೆ ಎಂಬ ಆರೋಪಗಳ ನಡುವೆಯೇ ಒಂದೂವರೆ ವರ್ಷ ಪ್ರಾಯದ ಬಾಲಕ, ಪೊಲೀಯೋ ಡ್ರಾಪ್ಸ್ ನೀಡಲಾದ ಅರ್ಧ ತಾಸಿನೊಳಗೆ ಮೃತಪಟ್ಟ ದಾರುಣ ಘಟನೆ ನಡೆದಿದೆ.
ರಾಜೇಂದ್ರ ಸಿಂಗ್ ಹಾಗೂ ಅವರ ಪತ್ನಿ ಚಂಚಲ್ ಕೌರ್ ಮೂಲತಃ ರಾಜಸ್ಥಾನದ ಅಜ್ಮೇರ್ ನವರಾಗಿದ್ದು, ಈ ದಂಪತಿಗೆ 11 ವರ್ಷದ ಮಗನಿದ್ದಾನೆ. ರಾಜೇಂದ್ರ ಭಾರತೀಯ ರೈಲ್ವೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇತ್ತ ಅವರ ಪತ್ನಿ ಚಂಚಲ್ ಸರ್ಕಾರಿ ಸ್ಟ್ಯಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಇಬ್ಬರು ಇಂದೋರ್ ಬಳಿಯ ಹಳ್ಳಿಯೊಂದರಲ್ಲಿ ಒಂದೂವರೆ ಎಕರೆ ಜಮೀನು ಖರೀದಿಸಿದ್ದು ಅಲ್ಲಿ ಅವರು ತಮ್ಮ ಮಗ ಗುರುಭಕ್ಷ್ ಸಿಂಗ್ಗೆ ರೈತನಾಗಲು ತರಬೇತಿ ನೀಡುತ್ತಿದ್ದಾರೆ. ನಾವು ದೊಡ್ಡ ನಗರದಲ್ಲಿ ವಾಸಿಸುತ್ತಿರಬಹುದು. ಲಕ್ಷಗಟ್ಟಲೇ ಹಣವನ್ನು ಸಂಪಾದನೆ…
ಐತಿಹಾಸಿಕ ಬೆಂಗಳೂರು ನಗರವನ್ನು ಸ್ವಚ್ಛ ಹಾಗೂ ಸುಂದರವಾಗಿ ಉಳಿಸಿಕೊಳ್ಳುವ ಪ್ರಯತ್ನಗಳು ಇತ್ತೀಚಿಗೆ ಹೆಚ್ಚುತ್ತಿದ್ದು ಇಂತಹುದೇ ಅಭಿಯಾನವೊಂದರ ಭಾಗವಾಗಿ ಯುವಬ್ರಿಗೇಡ್ ಕೆಂಪೇಗೌಡ ನಗರಿಯ ಐತಿಹಾಸಿಕ ವೃಷಭಾವತಿ ನದಿ ಉಳಿಸಲು ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದೆ. ಯುವಬ್ರಿಗೇಡ್ ನ ಈ ಪ್ರಯತ್ನ ಕ್ಕೆ ಗೋಲ್ಡನ್ ಸ್ಟಾರ್ ಗಣೇಶ ಕೈಜೋಡಿಸಿದ್ದು, ಇದೇ ಸಪ್ಟೆಂಬರ್ ೨೨ ರಂದು ಭಾನುವಾರ ನಡೆಯುವ ಮ್ಯಾರಥಾನ್ ನಲ್ಲಿ ಪಾಲ್ಗೊಳ್ಳಲಿದ್ದಾರೆ. ಸಪ್ಟೆಂಬರ್ ೨೨ ರಂದು ಭಾನುವಾರ, ವೃಷಭಾವತಿ ಸ್ವಚ್ಛತೆ ಗಾಗಿ ಕೆಂಗೇರಿ ಗಣಪತಿ ದೇವಾಲಯದಿಂದ ಬೆಂಗಳೂರು ವಿವಿವರೆಗೆ ಮ್ಯಾರಥಾನ್ ನಡೆಯಲಿದೆ….