ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನಟ, ನಟಿಯರು ಶೂಟಿಂಗ್‌ಗೆ ತೆರಳುವಾಗ ಅವರೊಂದಿಗೆ “ವ್ಯಾನಿಟಿ ವ್ಯಾನ್’ ಕೂಡಾ ತೆರಳುವುದು ಸಾಮಾನ್ಯ. ಕೆಲವರದ್ದು ಸಾಮಾನ್ಯ ಸೌಲಭ್ಯ ಇರುವ ವ್ಯಾನ್ ಆದರೆ ಇನ್ನು ಕೆಲವರನ್ನು ಅತ್ಯಾಧುನಿಕ ಸೌಲಭ್ಯ ಇರುವ ವ್ಯಾನಿಟಿ ವ್ಯಾನ್. ಈ ಅತ್ಯಾಧುನಿಕ ವ್ಯಾನಿಟಿ ವ್ಯಾನ್ ಹೊಂದಿರುವವರ ಸಾಲಿಗೆ ಇದೀಗ ನಟ ಶಾರುಖ್ ಖಾನ್ ಕೂಡಾ ಸೇರ್ಪಡೆಯಾಗಿದ್ದಾರೆ.

ಬಾಲಿವುಡ್ ಬಾದ್ ಶಾ ಶಾರುಕ್ ಖಾನ್ ಅವರಿಗೆ ದುಬಾರಿ ವೆಚ್ಛದ ಐಷಾರಾಮಿ ಕಾರುಗಳೆಂದರೆ ಸಖತ್ ಕ್ರೇಜ್. ಐಷಾರಾಮಿ ಕಾರುಗಳನ್ನು ಖರೀದಿಸುವುದು, ಅವುಗಳಲ್ಲಿ ಜಾಲಿ ರೈಡ್ ಹೋಗುವುದೆಂದರೆ ಖುಷಿಯೋ ಖುಷಿ. ಅವರಲ್ಲಿರುವ ದುಬಾರಿ ವಾಹನಗಳ ಸಾಲಿಗೆ ಹೊಸದರ ಸೇರ್ಪಡೆಯಾಗುತ್ತಲೇ ಇರುತ್ತದೆ.

ಶಾರುಖ್ ಇತ್ತೀಚಿಗೆ ವೋಲ್ವೋ ಕಂಪನಿಯ ಬಿ 9 ಆರ್ ವ್ಯಾನ್ ಖರೀದಿಸಿದ್ದು, ಬಳಿಕ ಅದನ್ನು ಭಾರತದ ಖ್ಯಾತ ವಾಹನ ವಿನ್ಯಾಸಕಾರ ದಿಲೀಪ್ ಛಾಬ್ರಿಯಾ ಮರು ವಿನ್ಯಾಸಗೊಳಿಸಿದ್ದಾರೆ. ಸಕಲ ಸೌಲಭ್ಯ ಒಳಗೊಂಡಿರುವ ಈ ವ್ಯಾನ್‌ನ ಬೆಲೆ 4 ಕೋಟಿ ರೂ. ಎನ್ನಲಾಗಿದೆ

ಅಂದ ಹಾಗೇ ಶೂಟಿಂಗ್ ಸ್ಥಳಕ್ಕೆ ಕೊಂಡೊಯ್ಯಲು ಅತ್ಯಾಧುನಿಕ ಸೌಲಭ್ಯವುಳ್ಳ ವ್ಯಾನಿಟಿ ವ್ಯಾನ್ ಒಂದು ಶಾರೂಕ್ ಖಾನ್ ರ ಬಳಿ ಇದೆ. ಕ್ಯಾರಾವಾನ್ ನಲ್ಲಿ ಇರುವ ಸೌಲಭ್ಯಗಳಿಗಿಂತ ಅತಿ ಹೆಚ್ಚು ಸೌಕರ್ಯ ಹಾಗೂ ಅತ್ಯಾಧುನಿಕ ಮಾದರಿಯ ವಿನ್ಯಾಸದ ವಿಶೇಷ ವ್ಯಾನಿಟಿ ವ್ಯಾನ್ ಇದಾಗಿದೆ.

ಶಾರುಕ್ ಗಾಗಿಯೇ ರೆಡಿಯಾಗಿರುವ ಈ ಅತ್ಯಾಧುನಿಕ ವ್ಯಾನ್ ಸಿದ್ಧಪಡಿಸಿದವರು ಪ್ರಖ್ಯಾತ ವಾಹನ ವಿನ್ಯಾಸಕಾರ ದಿಲೀಪ್ ಛಬ್ರಿಯಾ. ಈ ವ್ಯಾನ್ ಅನ್ನು ಶಾರುಕ್ ಅಗತ್ಯಕ್ಕೆ ತಕ್ಕಂತೆ ಮರು ವಿನ್ಯಾಸಗೊಳಿಸಿ ಸಿದ್ಧಪಡಿಸಲು 3 ತಿಂಗಳು ತೆಗೆದುಕೊಂಡಿದ್ದಾರೆ.ಇದಕ್ಕಾಗಿ ಬರೋಬ್ಬರಿ 4 ಕೋಟಿ ರೂ. ವೆಚ್ಚ ಮಾಡಲಾಗಿದೆ. ಇದರಲ್ಲಿ ಅತ್ಯಾಧುನಿಕ ವಿಶ್ರಾಂತಿ ಕೊಠಡಿ, ವೈಫೈ, ಟಾಯ್ಲೆಟ್, ಕಿಚನ್, ಸೆಟಲೈಟ್ ಟಿವಿ ಸೇರಿದಂತೆ ಸಕಲ ಸೌಲಭ್ಯಗಳಿವೆ. ಅಲ್ಲದೇ ಪ್ರತ್ಯೇಕ ಮೇಕಪ್ ರೂಮ್ ಕೂಡಾ ಇದರಲ್ಲಿದೆ.

ಹೊರನೋಟದಂತೆ ಒಳಗೂ ಅತ್ಯಂತ ಸುಂದರವಾಗಿರುವ ಈ ವ್ಯಾನ್ 280 ಚದರಅಡಿ ವಿಸ್ತೀರ್ಣ ಹೊಂದಿದ್ದು, ಒಳಗಡೆ 4 ಕೋಣೆಯನ್ನು ಹೊಂದಿದೆ. ಈ ಪೈಕಿ ಒಂದು ಮೀಟಿಂಗ್ ರೂಂ, ಮತ್ತೂಂದು ಬೆಡ್‌ರೂಂ ಮತ್ತೂಂದು ಶೌಚಾಲಯ ಇನ್ನೊಂದು ಮೇಕಪ್ ಕಮ್ ಬಟ್ಟೆ ಬದಲಾವಣೆ ಕೋಣೆ.

ಇದರ ಜೊತೆ ವ್ಯಾನ್‌ನಲ್ಲಿ ಹೈಡ್ರಾಲಿಕ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಇದರ ಮೂಲಕ ಅಗತ್ಯ ಬಿದ್ದರೆ ವಾಹನದಿಂದ ಹೊರಗೆ ಚಾಚಿಕೊಂಡಿರುವಂತೆ ಇನ್ನೊಂದು ಕೋಣೆಯನ್ನೂ ಸೃಷ್ಟಿಸ ಬಹುದಾಗಿದೆ. ಇಡೀ ವ್ಯಾನ್ ವೈಫೈ ವ್ಯವಸ್ಥೆ ಹೊಂದಿದ್ದು, ಎಲ್ಲಾ ನಾಲ್ಕು ಕೋಣೆಗಳಲ್ಲೂ ಆ್ಯಪಲ್ ಟೀವಿ ಅಳವಡಿಸಲಾಗಿದೆ. ಉಪಗ್ರಹ ಸಂಪರ್ಕ ಇರುವ 4ಕೆ ಸೀರೀಸ್‌ನ ಟೀವಿ, ಸಣ್ಣ ಕಿಚನ್ ಕೂಡಾ ಇದೆ. ವ್ಯಾನ್‌ಗೆ ಗ್ಲಾಸ್ ಫ್ಲೋರಿಂಗ್ ಮಾಡಲಾಗಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ದಿನನಿತ್ಯ ಅಡುಗೆ ಮಾಡುವುದು ಸಾಮಾನ್ಯ. ಅದರಲ್ಲೂ ನಾವು ತಿನ್ನುವ ಪ್ರಮುಖ ಅಡುಗೆ ಪದಾರ್ತವೆಂದರೇ ಅಕ್ಕಿ. ನಮ್ಮ ದೇಹದ ಪೌಷ್ಟಿಕತೆಗೆ ಬೇಕಾದ ಅಕ್ಕಿಯನ್ನು ಅನ್ನ ಮಾಡುವಾಗ ಅದನ್ನು ಚೆನ್ನಾಗಿ ತೊಳೆದು ಬಳಸುತ್ತೇವೆ. ಆ ನೀರನ್ನು ಚೆಲ್ಲುತ್ತೇವೆ. ಆದರೆ ಚೆಲ್ಲುವ ಮುನ್ನ ಈ ಸುದ್ದಿಯತ್ತ ಗಮನಿಸಿ. ನಮ್ಮ ಸಧೃಡ ಕೂದಲಿಗೆ ವಿಧ-ವಿಧವಾದ ಎಣ್ಣೆ, ಶ್ಯಾಂಪೂ, ಹೇರ್ ಪ್ಯಾಕ್ ಬಳಸುತ್ತೇವೆ. ಅದರಲ್ಲೂ ಕೂದಲು ಉದುರುವ ಸಮಸ್ಯೆ ಇದ್ದರಂತೂ ಎಲ್ಲರ ಸಲಹೆ ಪಡೆದು ದಿನಕ್ಕೊಂದು ಮನೆ ಮದ್ದು ಮಾಡುತ್ತೇವೆ. ಆದರೆ ಇಷ್ಟೆಲ್ಲ ಮಾಡುವ…
ಮಳೆ ಬಂದ್ರೆ ಸಾಕು ಬೆಂಗಳೂರಿಗರಿಗೆ ಭಯ.ಯಾಕೆಂದ್ರೆ ಎಲ್ಲಿ ಏನಾಗುತ್ತೆ ಗೊತ್ತಿಲ್ಲ. ಯಾವ ಮೋರಿಯಿಂದ ನೀರು ಹೊರಬಂದು ಮನೆಗಳಿಗೆ ನುಗ್ಗುತ್ತೋ ಎನ್ನುವ ಭಯ. ಎಲ್ಲಿ ಟ್ರಾಫಿಕ್ ಜಾಮ್ ಆಗುತ್ತೋ ಅನ್ನೋ ಭಯ.ಇವೆಲ್ಲದರ ನಡುವೆ ಇನ್ನೊಂದು ಭಾಗ್ಯ ಬೆಂಗಳೂರಿಗರಿಗೆ ಸೇರಲಿದೆ.
ಕೋಲಾರ ಜಿಲ್ಲೆಯ ಕಾಮಸಮುದ್ರಂ ಪೊಲೀಸ್ ಠಾಣೆ, ಬಂಗಾರಪೇಟೆ ತಾಲ್ಲೂಕು, ಕೆ.ಜಿ.ಎಫ್. ಉಪ-ವಿಭಾಗದ ಸರಹದ್ದಿನ ಬಂಗಾರಪೇಟೆ ತಾಲ್ಲೂಕು, ಹೊಸಕೋಟೆ ಗ್ರಾಮದ ವಾಸಿ ಆನಂದ್ ಬಿನ್ ಮುನಿವೆಂಕಟಪ್ಪ ಮತ್ತು ಕೆ.ಜಿ.ಎಫ್. ತಾಲ್ಲೂಕು, ಕ್ಯಾಸಂಬಳ್ಳಿ ಹೋಬಳಿ, ತಿಮ್ಮಾಪುರ ಗ್ರಾಮದ ವಾಸಿ ಕಾಂತ್‌ರಾಜ್ ಬಿನ್ ವೆಂಕಟೇಶಪ್ಪ ಮತ್ತು ಎ.ಕೆ. ಕಾಲೋನಿ, ಕಾಮಸಮದ್ರಂ, ಬಂಗಾರಪೇಟೆ ತಾಲ್ಲೂಕಿನ ವಾಸಿ ಪ್ರವೀಣ್ ಕೆ. ಬಿನ್ ಕೋದಂಡಪ್ಪ, ಮತ್ತು ಬೆಂಗನೂರು ಗ್ರಾಮ, ಬಂಗಾರಪೇಟೆ ತಾಲ್ಲೂಕಿನ ವಾಸಿ ವೇಣು ಬಿನ್ ಗೋವಿಂದಪ್ಪರವರುಗಳು ದಿನಾಂಕ 18-02-2022 ರಂದು ಆಪ್ರಾಪ್ತ ಬಾಲಕಿಯನ್ನು ಅಪಹರಿಸಿಕೊಂಡು…
ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(26 ಜನವರಿ, 2019) ಹಣದ ಲಾಭ ನಿಮ್ಮ ನಿರೀಕ್ಷೆಯಂತಿರುವುದಿಲ್ಲ. ಇಂದು ನೀವು ಮನೆಯಲ್ಲಿ ಸೂಕ್ಷ್ಮಸಮಸ್ಯೆಯನ್ನು ಬಗೆಹರಿಸಲು ನಿಮ್ಮ…
ಕೋಲಾರ: ಕೋಲಾರ ತಾಲೂಕಿನ ಖಾಜಿಕಲ್ಲಹಳ್ಳಿ ಗ್ರಾಮದ ಬಳಿಯ ಮಾಲೂರು ಅರಣ್ಯ ವಲಯದಲ್ಲಿ ಸುಮಾರು 20 ಎಕರೆ ಪ್ರದೇಶದಲ್ಲಿ WRRC (Wildlife Rescue and Rehabilitation Centre) ಅವರು ಆನೆಗಳ ಆರೈಕೆ ಕೇಂದ್ರವನ್ನು ಸ್ಥಾಪನೆ ಮಾಡಿದ್ದಾರೆ. ಈ ಕೇಂದ್ರದಲ್ಲಿ ದುರ್ಗಾ, ಅನೀಶಾ, ಗೌರಿ ಹಾಗೂ ಜಾನುಮಣಿ ಎಂಬ ನಾಲ್ಕು ಹೆಣ್ಣಾನೆಗಳಿವೆ. ಬೆಂಗಳೂರಿನಿಂದ ದುರ್ಗಾ, ತಮಿಳುನಾಡಿನ ತೂತುಕುಡಿಯಿಂದ ಅನಿಶಾ, ನಂಜನಗೂಡಿನಿಂದ ಗೌರಿ ಹಾಗೂ ಗೋವಾದಿಂದ ಜಾನುಮಣಿ ಎಂಬ ಆನೆಗಳನ್ನು ಇಲ್ಲಿಗೆ ತಂದು ಆರೈಕೆ ಮಾಡಲಾಗುತ್ತಿದೆ. ಸದ್ಯ ನಾಲ್ಕು ಆನೆಗಳಿದ್ದು, ಮುಂದಿನ…
ಬ್ರೆಜಿಲ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಪಬ್ಲಿಕ್ ಸಾರಿಗೆ ಸಮ್ಮೇಳನ ಮತ್ತು ಪ್ರದರ್ಶನದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ(ಕೆಎಸ್‌ಆರ್‌ಟಿಸಿ) ವೋಲ್ವೊ ಬಸ್‌ಗಳು ರಿಪೇರಿಯಿಲ್ಲದೆ 20 ಲಕ್ಷ ಕಿ.ಮೀ. ಕ್ರಮಿಸಿ 2 ಮಿಲಿಯನ್ ಕ್ಲಬ್‌ಗೆ ಸೇರ್ಪಡೆಯಾಗಿ ಜಾಗತಿಕ ಮನ್ನಣೆ ಗಳಿಸಿವೆ. ರಾಜ್ಯ ಮತ್ತು ಹೊರ ರಾಜ್ಯದಲ್ಲಿ ಓಡುತ್ತಿರುವ ವೋಲ್ವೊ ಬಸ್‌ಗಳು ಹೆಚ್ಚಿನ ಮೈಲೇಜ್ ನೀಡುವ ಜತೆಗೆ, ರಿಪೇರಿಯಿಲ್ಲದೆ 20 ಲಕ್ಷ ಕಿ.ಮೀ ಸಂಚರಿಸಿವೆ. ಈ ಹಿನ್ನೆಲೆಯಲ್ಲಿ ಬ್ರೆಜಿಲ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಪಬ್ಲಿಕ್ ಸಾರಿಗೆ ಸಮ್ಮೇಳನ ಮತ್ತು ಪ್ರದರ್ಶನದಲ್ಲಿ ವೋಲ್ವೊ ಬಸ್…