ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ರಂಗು ರಂಗಾದ ನಮ್ಮ ದೇಶದಲ್ಲಿ ನಾನಾ ವಿಧಗಳ ಜಾತ್ರೆ, ಮೇಳಗಳು ಆಯೋಜನೆಗೊಳ್ಳುವುದು ಸಾಮಾನ್ಯ. ಅಷ್ಟೆ ಏಕೆ, ಪ್ರಾಣಿಗಳಿಗೆಂದು ಸಮರ್ಪಿತವಾದ ಉತ್ಸವಗಳೂ ಕೂಡ ನಮ್ಮಲ್ಲಿ ಕಂಡುಬರುತ್ತವೆ. ಇಂದಿನ ಈ ಲೇಖನದಲ್ಲಿ ಒಂಟೆಗಳ ಉತ್ಸವದ ಕುರಿತು ತಿಳಿಯಿರಿ. ಇದೊಂದು ವಿಶಿಷ್ಟ ಉತ್ಸವವಾಗಿದ್ದು ರಾಜಸ್ಥಾನ ರಾಜ್ಯದಲ್ಲಿ ಈ ಮೇಳವು ಕಂಡುಬರುತ್ತದೆ
ರಾಜಸ್ತಾನಲ್ಲಿ ಪ್ರತಿವರ್ಷ ಪುಷ್ಕರ್ ಮೇಳ ನಡೆಯುತ್ತದೆ. ಈ ಮೇಳವೇ ಒಂಟೆಗಳಿಗಾಗಿ ಸ್ಪರ್ಧೆಯನ್ನು ಇಟ್ಟಿರುವಂತಹದ್ದು. ಈ ಮೇಳವು ನೋಡಲೂ ತುಂಬಾ ಸುಂದರವಾಗಿರುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಈ ಮೇಳದಲ್ಲಿ ಭಾಗವಹಿಸುತ್ತಾರೆ.

ಪುಷ್ಕರ್ ಪಟ್ಟಣವು ಪುಷ್ಕರ್ ಕೆರೆಯ ತಟದಲ್ಲಿ ನೆಲೆಸಿದ್ದು ಈ ಕೆರೆಯ ನೀರು ಮಾನಸ ಸರೋವರದ ನೀರಿನಷ್ಟೆ ಪವಿತ್ರವಾದುದು ಎಂದು ನಂಬಲಾಗಿದೆ. ಆದ್ದರಿಂದಲೆ ಎಷ್ಟೊ ಜನ ಈ ಕ್ಷೇತ್ರವನ್ನು ತೀರ್ಥ ರಾಜ ಅಂದರೆ ತೀರ್ಥ ಕ್ಷೇತ್ರಗಳ ರಾಜನೆಂದೂ ಸಹ ಸಂಭೋದಿಸುತ್ತಾರೆ. ಪ್ರತಿ ವರ್ಷವು ಇಲ್ಲಿನ ಪುಷ್ಕರ್ ಕೆರೆಯ ಪ್ರದೇಶದಲ್ಲಿ ಆಯೋಜನೆಗೊಳ್ಳುವ ಪುಷ್ಕರ್ ಮೇಳವು ಪ್ರವಾಸಿ ಆಕರ್ಷಣೆಯ ಉತ್ಸವವಾಗಿದೆ. ಜಗತ್ತಿನಲ್ಲಿ ದೊಡ್ಡ ಪ್ರಮಾಣದಲ್ಲಿ ನಡೆಯುವ ಒಂಟೆಗಳ ಉತ್ಸವ ಪೈಕಿ ಒಂದಾಗಿರುವ ಪುಷ್ಕರ್ ಒಂಟೆ ಉತ್ಸವವು ಇತ್ತೀಚೆಗೆ ಕೇವಲ ಒಂಟೆಗಳು ಮಾತ್ರವಲ್ಲದೆ ಇತರೆ ವೈವಿಧ್ಯಮಯ ಕಾರ್ಯಕ್ರಮಗಳಿಂದಲೂ ಸಹ ಆಕರ್ಷಕವಾಗುತ್ತಿದೆ. ವಿಶೇಷವಾಗಿ ವಿದೇಶಿ ಪ್ರವಾಸಿಗರ ನೆಚ್ಚಿನ ಉತ್ಸವವಾಗಿ ಈ ಪುಷ್ಕರ್ ಮೇಳವು ಇಂದು ಕಂಗೊಳಿಸುತ್ತಿದೆ.

ವರ್ಷದಲ್ಲಿ ಐದು ದಿನಗಳ ಕಾಲ ನಡೆಯುವ ಈ ಉತ್ಸವದಲ್ಲಿ ಮುಖ್ಯವಾಗಿ ಒಂಟೆಗಳ ವ್ಯಾಪಾರವು ಪ್ರಥಮ ಆಕರ್ಷಣೆಯಾಗಿದೆ. ಕಾಲ ಉರುಳಿದಂತೆ ಈ ಉತ್ಸವವು ಕೇವಲ ಒಂಟೆಗಳಿಗೆ ಸೀಮತವಾಗಿರದೆ ಇತರೆ ಹಲವು ವಿವಿಧ ಸ್ಪರ್ಧೆಗಳು ಪ್ರವರ್ಧಮಾನಕ್ಕೆ ಬಂದಿವೆ. ಉದಾಹರಣೆಯಾಗಿ “ಮಟ್ಕಾ ಫೋಡ್” (ಗಡಿಗೆ ಒಡೆಯುವುದು), ಉದ್ದ ಮೀಸೆಯ ಸ್ಪರ್ಧೆ, ವಧು ಸ್ಪರ್ಧೆ ಹೀಗೆ ಹಲವು ಆಕರ್ಷಕ ಸ್ಪರ್ಧೆಗಳು ಪ್ರವಾಸಿಗರನ್ನು ಆಕರ್ಷಿಸುತ್ತಿವೆ.
ಹಿಂದೂ ಕ್ಯಾಲೆಂಡರಿನ ಅನುಸಾರ ಕಾರ್ತಿಕ ಏಕಾದಶಿಯಿಂದ ಕಾರ್ತಿಕ ಪೂರ್ಣಿಮೆಯವರೆಗೂ ನಡೆಯುವ ಈ ಉತ್ಸವವು ಒಂಟೆಗಳ ಓಟದ ಸ್ಪರ್ಧೆಯ ಮೂಲಕ ಆರಂಭಗೊಳ್ಳುತ್ತದೆ ಪುಷ್ಕರ್ ಗೆ ಭೇಟಿ ನೀಡಿದಾಗ ಸಮ್ದರ್ಶಿಸಬೇಕಾದ ಒಂದು ಪ್ರಮುಖ ದೇವಾಲಯವೆಂದರೆ ಬ್ರಹ್ಮನ ದೇವಾಲಯ.
ಬ್ರಹ್ಮ ದೇವಸ್ಥಾನವು ಪುಷ್ಕರ್ ಸರೋವರದ ದಂಡೆಯ ಮೇಲೆ ಸ್ಥಿತವಾಗಿದೆ. ಪುಷ್ಕರ್ ನಲ್ಲಿರುವ ಬ್ರಹ್ಮ ದೇವಸ್ಥಾನವು, ಬ್ರಹ್ಮ ದೇವರಿಗೆ ಸಮರ್ಪಿತವಾಗಿರುವ ಭಾರತದಲ್ಲಿ ಕಾಣಸಿಗುವ ಕೆಲವೆ ಕೆಲವು ದೇವಾಲಯಗಳಲ್ಲಿ ಒಂದಾಗಿದೆ. ಇನ್ನು ಪುಷ್ಕರ್ ಪಟ್ಟಣವು ಉತ್ತಮವಾದ ರಸ್ತೆ ಸಂಪರ್ಕ ಹೊಂದಿದ್ದು ಇಲ್ಲಿಗೆ ತೆರಳುವುದು ಸುಲಭವಾಗಿದೆ.
ಈ ಮೇಳದ ಆಕರ್ಷಣೆಯೆಂದರೆ ಜನರು ಈ ಮೇಳಕ್ಕೆ ತಮ್ಮ ಒಂಟೆಗಳನ್ನು ಕರೆದುಕೊಂಡು ಬರುತ್ತಾರೆ. ಒಂಟೆಯನ್ನು ಹೊರತುಪಡಿಸಿ ಇತರ ಪ್ರಾಣಿಗಳೂ ಈ ಉತ್ಸವದಲ್ಲಿ ಭಾಗಿಗೊಳ್ಳುತ್ತವೆ. ಈ ಉತ್ಸವದ ಸೌಂದರ್ಯವನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲು ದೇಶಾದ್ಯಂತದ ಫೋಟೋಗ್ರಾಫರ್‌ಗಳು ಬರುತ್ತಾರೆ. ಈ ಮೇಳದಲ್ಲಿ ಒಂಟೆಗಳಿಗೆ ಸೌಂದರ್ಯ ಸ್ಪರ್ಧೆ ಹಾಗೂ ನೃತ್ಯವನ್ನು ಆಯೋಜಿಸಲಾಗುತ್ತದೆ. ಅದನ್ನು ಹೊರತುಪಡಿಸಿ ಈ ಮೇಳದಲ್ಲಿ ಹಾಡುಗಾರರು, ಜಾದುಗಾರರು ಪಾಲ್ಗೊಳ್ಳುತ್ತಾರೆ.

ದೇಶ ವಿದೇಶಗಳಿಂದ ಜನರು ಈ ಮೇಳವನ್ನು ನೋಡಲು ಬರುತ್ತಾರೆ. ಹಾಗಾಗಿ ಪುಷ್ಕರ್ ಸುತ್ತಮುತ್ತಲಿರುವ ಹೋಟೆಲ್‌ಗಳೆಲ್ಲಾ ತುಂಬಿರುತ್ತವೆ. ಅದಕ್ಕಾಗಿ ನೀವು ಮುಂಚಿತವಾಗಿಯೇ ರೂಮ್ ಬುಕ್ ಮಾಡಿಕೊಳ್ಳುವುದು ಒಳ್ಳೆಯದು.
ಬ್ರಹ್ಮ ಮಂದಿರ ಪುಷ್ಕರ್ ಒಂದು ಧಾರ್ಮಿಕ ತಾಣವೂ ಹೌದು. ಇಲ್ಲಿ ವಿಶ್ವದ ಏಕೈಕ ಬ್ರಹ್ಮ ಮಂದಿರವಿದೆ. ಜನರು ಇಲ್ಲಿನ ಪುಷ್ಕರ್ ಸರೋವರದಲ್ಲಿ ಸ್ನಾನ ಮಾಡಿ ಬ್ರಹ್ಮ ಮಂದಿರದ ದರ್ಶನ ಪಡೆಯುತ್ತಾರೆ.
ಈ ಪಶುಮೇಳದಲ್ಲಿ ನಿಮಗೆ ರಾಜಸ್ತಾನಿ ವಿಧಿ ವಿಧಾನಗಳು, ಸಂಸ್ಕೃತಿಯನ್ನು ಕಾಣಬಹುದು. ಈ ಮೇಳವನ್ನು ಬಹಳ ಸುಂದರವಾಗಿ ಆಚರಿಸಲಾಗುತ್ತದೆ. ಜನರು ತಮ್ಮ ತಮ್ಮ ಒಂಟೆಗಳನ್ನು ಸುಂದರವಾಗಿ ಶೃಂಗರಿಸುತ್ತಾರೆ.
ಪ್ರಯಾಣಿಕರು ಪುಷ್ಕರ್ ಅನ್ನು ಬಸ್ಸು ಮತ್ತು ಟ್ಯಾಕ್ಸಿ ಮೂಲಕವು ತಲುಪಬಹುದಾಗಿದೆ. ಅಜ್ಮೇರ್ ನ ಮುಖ್ಯ ಬಸ್ಸು ತಂಗುದಾಣವು ಪುಷ್ಕರ್ ನಿಂದ 11 ಕಿ.ಮೀ ದೂರದಲ್ಲಿದೆ. ಈ ಬಸ್ ನಿಲ್ದಾಣದಲ್ಲಿ ಬಹುಸಂಖ್ಯೆಯಲ್ಲಿ ಬಸ್ಸುಗಳಿದ್ದು ರಾಜಸ್ಥಾನದ ಇತರೆ ಭಾಗಗಳು ಮತ್ತು ರಾಜಧಾನಿಯಾದ ನವದೆಹಲಿಗೆ ಸಂಪರ್ಕವನ್ನು ಹೊಂದಿವೆ. ಪ್ರವಾಸಿಗರು ಅಜ್ಮೇರ್, ಜೈಪುರ್, ಜೈಸಲ್ಮೇರ್ ಮತ್ತು ದೆಹಲಿಯಿಂದ ವೊಲ್ವೊ, ಡಿಲಕ್ಸ್ ಬಸ್ಸುಗಳ ಸೇವಯನ್ನೂ ಪಡೆಯಬಹುದು.
ಅಜ್ಮೇರ್ ರೈಲು ನಿಲ್ದಾಣವು ಪುಷ್ಕರ್ ಗೆ ಹತ್ತಿರದಲ್ಲಿರುವ ರೈಲು ನಿಲ್ದಾಣ. ಈ ರೈಲು ನಿಲ್ದಾಣವು ಪ್ರಮುಖ ನಗರಗಳಾದ ಆಗ್ರಾ, ನವದೆಹಲಿ, ಅಹ್ಮದಾಬಾದ್ ಮತ್ತು ಜೋಧಪುರ್ ನೊಂದಿಗೆ ಉತ್ತಮವಾದ ಸಂಪರ್ಕವನ್ನು ಹೊಂದಿದೆ. ಶತಾಬ್ದಿ ಎಕ್ಸಪ್ರೆಸ್ಸ್ ಮತ್ತು ಪಿಂಕ್ ಸಿಟಿ ಎಕ್ಸಪ್ರೆಸ್ಸ್ ರೈಲುಗಳು ಅಜ್ಮೇರ್ ಅನ್ನು ನೇರವಾಗಿ ನವದೆಹಲಿ ಮತ್ತು ಜೈಪುರ್ ಗೆ ಸಂಪರ್ಕ ಕಲ್ಪಿಸುತ್ತವೆ
ಜೈಪುರಿನ ಸಂಗನೇರ್ ವಿಮಾನ ನಿಲ್ದಾಣವು ಪುಷ್ಕರ್ ಗೆ ಹತ್ತಿರದ ವಿಮಾನ ನಿಲ್ದಾಣವಾಗಿದೆ. ಈ ವಿಮಾನ ನಿಲ್ದಾಣವು ಪುಷ್ಕರ್ ಗೆ 138 ಕಿ.ಮೀ ದೂರದಲ್ಲಿದ್ದು ಭಾರತದ ಪ್ರಮುಖ ನಗರಗಳೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಇನ್ನು ಸಂಗನೇರ್ ನಿಂದ ಪುಷ್ಕರ್ ಗೆ ತಲುಪಲು ಟ್ಯಾಕ್ಸಿ ಅಥವಾ ಕ್ಯಾಬ್ ಸೇವೆ ಪಡೆಯಬಹುದು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಅತ್ಯುನ್ನತ ಪ್ರೇಮದ ಐತಿಹಾಸಿಕ ಸ್ಮಾರಕವಾಗಿರುವ ಆಗ್ರಾದ ವಿಶ್ವ ಪ್ರಸಿದ್ಧ ತಾಜ್ ಮಹಲ್ ಈಚಿನ ದಿನಗಳಲ್ಲಿ ಒಳ್ಳೆಯ ಮತ್ತು ಕೆಟ್ಟ ಸುದ್ದಿಗಳಿಗಾಗಿ ಮುಖ್ಯ ಶೀರ್ಷಿಕೆಯಲ್ಲಿ ರಾರಾಜಿಸುವಂತಾಗಿದೆ.
ॐ ‘ಗೆ ಕೇವಲ ಧಾರ್ಮಿಕ ಮಹತ್ವ ಅಲ್ಲದೇ ಶಾರೀರಿಕ ಮಹತ್ವ ಕೂಡಾ ಇದೆ ಎಂಬುದು ನಿಮಗೆ ತಿಳಿದಿದೆಯೇ.? ॐ ಓಂ ವಿಶ್ವದಲ್ಲಿನ ಪ್ರಮುಖ ಶಬ್ದಗಳಲ್ಲಿ ಒಂದಾಗಿದೆ ಎಂದು ನಂಬಲಾಗಿದೆ. ಪ್ರತಿದಿನ ಓಂ ಅನ್ನು ಪಠಿಸುವುದರಿಂದ ನಿಮ್ಮ ಜೀವನಕ್ಕೆ ಧನಾತ್ಮಕತೆಯನ್ನು ತರಲು ಸಹಾಯ ಮಾಡುತ್ತದೆ. ಇದು ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಇನ್ನೂ ಅನೇಕ ಪ್ರಯೋಜನಗಳನ್ನು ಹೊಂದಿದೆ. ॐ ಓಂ ವಿಶ್ವದಲ್ಲಿನ ಪ್ರಮುಖ ಶಬ್ದಗಳಲ್ಲಿ ಒಂದಾಗಿದೆ ಎಂದು ನಂಬಲಾಗಿದೆ. ಈ ಸಂಪೂರ್ಣ ಬ್ರಹ್ಮಾಂಡವನ್ನು ಸೃಷ್ಟಿಸುವ ಹಿಂದೆ ಇದ್ದ…
ಕಪ್ಪುಹಣ ಹೊಂದಿರುವ ಅನುಮಾನಾಸ್ಪದ ಖಾತೆಯ ಮಾಹಿತಿಗಳನ್ನು ಭಾರತದೊಂದಿದೆ ಹಂಚಿಕೊಳ್ಳುವುದಾಗಿ ಸ್ವಿಡ್ಜರ್ ಲ್ಯಾಂಡ್
ಭಾನುವಾರ , 1/04/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ… ಮೇಷ:– ದಾರ್ಶನಿಕ ಸಂತರ ಸಮಾಗಮದಿಂದ ಆಧ್ಯಾತ್ಮ ಜೀವನಕ್ಕೆ ಹೊಸ ಆಯಾಮ. ದೇಹಾರೋಗ್ಯದ ಬಗ್ಗೆ ಗಮನ ಹರಿಸಬೇಕು. ಸಣ್ಣ ಸಣ್ಣ ವಿಚಾರಗಳಲ್ಲಿ ಕೋಪತಾಪಗಳಿಂದ ಉದ್ವೇಗಗೊಳ್ಳುವಿರಿ. ಶುಭಮಂಗಲ ಕಾರ್ಯಗಳಿಗೆ ಆಗಾಗ ಖರ್ಚುವೆಚ್ಚಗಳಿರುತ್ತವೆ. ಹಿಡಿತ ಬಲವಿರಬೇಕು. ಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ಅವಕಾಶಗಳು ದೊರಕಲಿವೆ. ವೈಯಕ್ತಿಕ ಸಮಸ್ಯೆಗಳಿಗೆ ಪರಿಹಾರ. ವೃಷಭ:- ಆರೋಗ್ಯ ಸುಧಾರಿಸುತ್ತದೆ. ದೂರ ಸಂಚಾರದಲ್ಲಿ ಜಾಗ್ರತೆ ವಹಿಸಬೇಕು. ಸನ್ಮಾರ್ಗದಲ್ಲಿ ಸಾಗುವುದರಿಂದ ಕುಟುಂಬ ಬಾಧ್ಯತೆಗಳ ನಿರ್ವಹಣೆ ಸರಾಗವಾಗಲಿದೆ. ಅವಿವಾಹಿತರಿಗೆ ಸಂಬಂಧಗಳು ಕೂಡಿಬರಲಿವೆ….
ರೈತ ನಾಯಕ ,ಶಾಸಕ ಕೆ ಎಸ್ ಪುಟ್ಟಣ್ಣಯ್ಯ (69) ಹೃದಯಾಘಾಯದಿಂದ ರವಿವಾರ ರಾತ್ರಿ ನಿಧನರಾಗಿದ್ದಾರೆ.ಮಂಡ್ಯ ನಗರದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಕಬಡ್ಡಿ ಪಂದ್ಯವನ್ನು ವೀಕ್ಷಿಸುತ್ತಿರುವ ಸಂದರ್ಭದಲ್ಲಿ ಹಠಾತ್ ಕುಸಿದುಬಿದ್ದ ಪುಟ್ಟಣ್ಣಯ್ಯ ಅವರನ್ನು ತಕ್ಷಣ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಮೈ ನವಿರೇಳಿಸುವ ಅತ್ಯದ್ಭುತ ಆಲ್ಬಂ ಒಂದನ್ನು ರೋರಿಂಗ್ ಸ್ಟಾರ್ ಶ್ರೀ ಮುರುಳಿ ರವರು ಬಿಡುಗಡೆ ಮಾಡಿದ್ದಾರೆ.. ಅದೇ “ತಾಯಿ ಕನ್ನಡ”.. ಹೆಣ್ಣನ್ನು ಪ್ರಧಾನವಾಗಿಟ್ಟುಕೊಂಡು ಮಾಡಿರುವ ಈ ಕನ್ನಡದ ಆಲ್ಬಂಗೆ ಬಿಡುಗಡೆಯಾದ ಕೆಲವೇ ಘಂಟೆಗಳಲ್ಲಿ ಎಲ್ಲಾ ಕಡೆಯಿಂದ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ..