ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮಂಡ್ಯ ಲೋಕಸಭೆ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ತೆರೆ ಬೀಳುವ ಹಂತಕ್ಕೆ ಬಂದಿದ್ದು, ಕೊನೆ ಕ್ಷಣದಲ್ಲಿ ಮಾತಿನ ಸಮರ ಜೋರಾಗಿದೆ.
ಇಷ್ಟು ದಿನ ಜೋಡೆತ್ತುಗಳೆಂದು ದರ್ಶನ್ ಮೇಲೆ ಮುಗಿಬಿದ್ದಿದ್ದ ಸಿಎಂ ಕುಮಾರಸ್ವಾಮಿ, ಡಿ ಬಾಸ್ ಅಂತೆ ಎಂದೆಲ್ಲಾ ಟೀಕಿಸಿದ್ದರು. ಇಂದು ನಟ ಯಶ್ ವಿರುದ್ಧ ಕೆಂಡಕಾರಿದ್ದಾರೆ.
ನಾನು ಕಲಾವಿದರೆಂದು ಗೌರವ ಕೊಟ್ಟಿದ್ದೆ. ಅವನ್ಯಾವನೋ ನನ್ನ ಪಕ್ಷವನ್ನೇ ಟೀಕಿಸುತ್ತಾನೆ ಎಂದಿದ್ದಾರೆ. ಚುನಾವಣೆ ಪ್ರಚಾರದ ವೇಳೆ ಮಾತನಾಡಿದ ಸಿಎಂ, ನನ್ನ ಪಕ್ಷವನ್ನು ಕಳ್ಳರ ಪಕ್ಷ ಅಂತಾನೆ. ಹಳ್ಳಿ ಕಡೆ ಬಂದು ನಮ್ಮ ಪಕ್ಷ ಟೀಕಿಸುತ್ತಾನೆ. ನಮ್ಮ ಕಾರ್ಯಕರ್ತರು ಸುಮ್ಮನೆ ಇರೋದು ನನಗೆ ತೊಂದರೆ ಆಗ್ತದೆ ಅಂತ. ನನಗೋಸ್ಕರ ಕಾರ್ಯಕರ್ತರು ಬಾಯಿ ಮುಚ್ಕೊಂಡು ಇದ್ದಾರೆ ಎಂದು ಹೇಳಿದ್ದಾರೆ.
ನಾನು ನಿರ್ಮಾಪಕನೇ, ಇಂಥವರನ್ನು ಹಾಕಿಕೊಂಡು ಸಿನಿಮಾ ಮಾಡಿದ್ದೇನೆ. ನಿರ್ಮಾಪಕರು ಇದ್ದರೇನೆ ಇವರೆಲ್ಲ ಬದುಕುವುದು. ಸಿನಿಮಾದಲ್ಲಿ ಬರೋದೆಲ್ಲ ನಿಜವಲ್ಲ, ಸಿನಿಮಾದಲ್ಲಿ ಬರೋದು ನಂಬಬೇಡಿ. ಅವನ್ಯಾವನೋ ಯಶ್ ಅಂತೆ. ಅವನಿಗೆ ಇನ್ನೂ ಗೊತ್ತಿಲ್ಲ. ನಮ್ಮಂತಹ ನಿರ್ಮಾಪಕರಿದ್ದರೆ ಇವರೆಲ್ಲ ಬದುಕುವುದು ಎಂದು ಹೇಳಿದ್ದಾರೆ.
ಪರದೆ ಮೇಲೆ ನೋಡಿದ್ದನ್ನೆಲ್ಲ ಸತ್ಯವೆಂದು ನಂಬಬೇಡಿ, ನಿಮ್ಮ ಜೀವನವೇ ಸತ್ಯ ನಿಜವಾದ ಸತ್ಯ. ಯಶ್ ನಮ್ಮ ಪಕ್ಷವನ್ನೇ ಕಳ್ಳರ ಪಕ್ಷ ಅಂತಾನೇ. ನಮ್ಮ ಕಾರ್ಯಕರ್ತರು ಕುಮಾರಣ್ಣನಿಗೆ ತೋಂದರೆಯಾದೀತೆಂದು ಬಾಯಿಮುಚ್ಚಿಕೊಂಡು ಇದ್ದಾರೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಇಂಗ್ಲೆಂಡ್, ವೈದ್ಯ ಲೋಕ ಅದೆಷ್ಟು ಮುಂದುವರೆದಿದೆ ಎಂದರೆ ಮಾನವನ ರೋಗಗಳಿಗೇನು? ಪ್ರಾಣಿ, ಜಲಚರಗಳ ರೋಗಗಳಿಗೂ ಇದೀಗ ವೈದ್ಯರು ಚಿಕಿತ್ಸೆ ನೀಡುತ್ತಾರೆ. 1 ಗ್ರಾಂ ಮೀನಿನ ಯಶಸ್ವಿ ಶಸ್ತ್ರ ಚಿಕಿತ್ಸೆ ಮೌಲಿ ಪ್ರಜಾತಿಯ ಗೋಲ್ಡ್ ಫಿಶ್’ಗೆ ಯಶಸ್ವಿ ಶಸ್ತ್ರಚಿಕಿತ್ಸೆ, ಗೋಲ್ಡ್ ಫಿಶ್ ಹೊಟ್ಟೆಯಲ್ಲಿದ್ದ ಟ್ಯೂಮರ್ ಹೊರ ತೆಗೆದ ವೈದ್ಯೆ ಸೋನ್ಯಾ ಮೈಲ್ಸ್ ಶಸ್ತ್ರಚಿಕಿತ್ಸೆಗೆ 8,800 ರೂ ಖರ್ಚು. ಅದರಂತೆ ಇಂಗ್ಲೆಂಡ್’ನ ಬ್ರಿಸ್ಟಸ್’ನ ವೈದ್ಯೆ ಸೋನ್ಯಾ ಮೈಲ್ಸ್ ಕೇವಲ 1 ಗ್ರಾಂ ತೂಕದ ಮೌಲಿ ಪ್ರಜಾತಿಯ ಗೋಲ್ಡ್ ಫಿಶ್’ಗೆ ಶಸ್ತ್ರ…
ಬಿಗ್ ಬಾಸ್ ಮನೆಯಲ್ಲಿ ಸಂಡೇ ಪಂಚಾಯಿತಿ ನಡೆದಿದೆ. ಅಂತಿಮವಾಗಿ ಮನೆಯಿಂದ ಚೈತ್ರಾ ಕೊಟ್ಟೂರು ಹೊರಗೆ ಬಂದಿದ್ದಾರೆ. ನಾಲ್ಕನೇ ವಾರ ಎಲಿಮಿನೇಶನ್ ನಲ್ಲಿ ಚೈತ್ರಾ ಹೊರಗೆ ಬಂದಿದ್ದಾರೆ. ಯಸ್ ಮತ್ತು ನೋ ಪ್ರಶ್ನೆಗಳ ಮೂಲಕ ಅನೇಕ ವಿಚಾರಗಳನ್ನು ಸುದೀಪ್ ಕೆಣಕಿದರು. ಮೊದಲನೇ ವಾರ ಗುರುಲಿಂಗ ಸ್ವಾಮೀಜಿ, ಎರಡನೇ ವಾರ ಚೈತ್ರಾ ವಾಸುದೇವನ್ ಮತ್ತು ಮೂರನೇ ವಾರ ದುನಿಯಾ ರಶ್ಮಿ ಹೊರಗೆ ಬಂದಿದ್ದಾರೆ. ರಾಜು. ತಾಳಿಕೋಟೆ ಅಂತಿಮ ಘಟ್ಟದವರೆಗೆ ಬಂದು ಸೇಫ್ ಆಗಿದ್ದಾರೆ. ಎರಡು ತಿಂಗಳು ಆದ ಮೇಲೆ ನಾನೊಂದು…
ಆ ಮುದ್ದಿನ ಶ್ವಾನ ಆರು ಮಂದಿಯ ಜೀವ ಉಳಿಸಿದೆ…! ಅಚ್ಚರಿಯಾದರೂ ಇದು ನಿಜ. ಈ ಘಟನೆ ನಡೆದಿದ್ದು ಒಡಿಸ್ಸಾದ ಕೊರಪುತ್ ಜಿಲ್ಲೆಯಲ್ಲಿ. ಶಂಕರ್ ಪ್ರಸಾದ್ ತ್ರಿಪಾಠಿ ಎಂಬವರ ಮನೆಗೆ ಭಾನುವಾರ ಬೃಹತ್ ಸರ್ಪ ಎಂಟ್ರಿ ಕೊಟ್ಟಿತ್ತು. ಮನೆಯವರು ತಮ್ಮ ಕೆಲಸದಲ್ಲಿ ನಿರತರಾಗಿದ್ದ ಕಾರಣ ಈ ಹಾವನ್ನು ಯಾರೂ ಗಮನಿಸಿರಲಿಲ್ಲ. ಇದು ನೇರವಾಗಿ ಮನೆಯೊಳಗೆ ಹೋಗಿ ಬಚ್ಚಿಟ್ಟುಕೊಳ್ಳಲು ಯತ್ನಿಸಿತ್ತು. ಆದರೆ, ಅದೃಷ್ಟ ಚೆನ್ನಾಗಿತ್ತು. ಶಂಕರ್ ಪ್ರಸಾದ್ ಅವರ ಸಾಕು ನಾಯಿ `ಡಾಗಿ’ ಈ ಸರ್ಪವನ್ನು ಕಂಡಿತ್ತು. ಇದನ್ನು ನೋಡಿದ…
ದುಬೈ: 8 ವರ್ಷದ ಭಾರತೀಯ ಬಾಲಕಿಯೊಬ್ಬಳು ಬರೋಬ್ಬರಿ 15 ಸಾವಿರ ಕಿಲೋಗ್ರಾಂ ಕಾಗದದ ತ್ಯಾಜ್ಯವನ್ನು ಸಂಗ್ರಹಿಸುವ ಮೂಲಕ ಪ್ರಶಂಸೆಗೆ ಪಾತ್ರರಾಗಿದ್ದಾಳೆ.ಭಾರತೀಯ ಮೂಲದ ನಿಯಾ ಟೋನಿ 15 ಸಾವಿರ ಕೆಜಿ ತೂಕದ ಪೇಪರ್ ತ್ಯಾಜ್ಯ ಸಂಗ್ರಹಿಸಿದ್ದಾಳೆ. ಈಕೆ ಪೋಷಕರ ಜೊತೆ ದುಬೈನಲ್ಲಿ ನೆಲೆಸಿದ್ದಾಳೆ. ಟೋನಿ ಎಮಿರೇಟ್ಸ್ ಎನ್ವಿರಾನ್ಮೆಂಟಲ್ ಗ್ರೂಪ್ನ ರಾಷ್ಟ್ರವ್ಯಾಪಿ ಮರುಬಳಕೆ ಅಭಿಯಾನದ ಭಾಗವಾಗಿ ವೇಸ್ಟ್ ಪೇಪರ್ಗಳನ್ನು ಸಂಗ್ರಹಿಸಿದ್ದಾಳೆ. ಇತ್ತೀಚೆಗಷ್ಟೆ ದುಬೈಯ ಎಮಿರೇಟ್ಸ್ ರಿಸೈಕ್ಲಿಂಗ್ ಅವಾರ್ಡ್ಸ್ ನ 22ನೇ ಆವೃತ್ತಿಯಲ್ಲಿ ಬಾಲಕಿಯ ಅಸಾಮಾನ್ಯ ಸಾಧನೆಗೆ ಆಕೆಯನ್ನು ಗೌರವಿಸಲಾಗಿದೆ. ಇಂಗಾಲದ…
ಮಂಗಳೂರು ಹಾಗೂ ಮುಂಬೈಗೆ ಭಾರೀ ಅಪಾಯವೊಂದು ಕಾದಿದೆ. ಸಮುದ್ರ ತೀರಕ್ಕೆ ಎರಡೂ ನಗರಗಳು ಹತ್ತಿರದಲ್ಲಿರುವುದರಿಂದ ಅಪಾಯದ ಅಂಚಿನಲ್ಲಿದೆ. ಅಂಟಾರ್ಕಿಟಿಕಾದಲ್ಲಿ ಹಿಮ ಕರುಗುತ್ತಿರುವುದರಿಂದ ಸಮುದ್ರ ಮಟ್ಟ ದಿನೇ ದಿನೇ ಹೆಚ್ಚಾಗುತ್ತಿದ್ದು ಸಮುದ್ರದ ಅಕ್ಕಪಕ್ಕ ಇರುವ ನಗರಗಳಿಗೆ ಅಪಾಯ ಕಾದಿದೆ ಎಂದು ನಾಸಾ ಹೊರ ತಂದಿರುವ ಡೇಟಾ ಪ್ರಕಾರ ನ್ಯೂಯಾರ್ಕ್ ಪತ್ರಿಕೆ ವರದಿ ಮಾಡಿದೆ.
ಕೋಲಾರ:- ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ, ಹನುಮಂತರಾಯನ ದಿನ್ನೆ ಗ್ರಾಮದ ವಾಸಿ ಹೆಚ್.ಎನ್.ವೆಂಕಟೇಶ್ ಬಿನ್ ನಾರಾಯಣಸ್ವಾಮಿ ಎಂಬಾತ ಅಪ್ರಾಪ್ತ ಬಾಲಕಿಯನ್ನು ಅಪಹರಣ ಮಾಡಿಕೊಂಡು ಹೋಗಿ, ಅತ್ಯಾಚಾರ ಎಸಗಿರುವುದು ರುಜುವಾತಾದ ಹಿನ್ನಲೆ ಪೋಕ್ಸೊ ನ್ಯಾಯಾಲದಯದ ನ್ಯಾಯಾಧೀಶರಾದ ಬಿ.ಪಿ.ದೇವಮಾನೆ ರವರು ಆರೋಪಿಗೆ 20 ವರ್ಷ ಸಜೆ ತೀರ್ಪು ನೀಡಿದ್ದಾರೆ. ಸದರಿ ಆರೋಪಿಯ ವಿರುದ್ದ ಕೋಲಾರ ಮಹಿಳಾ ಪೊಲೀಸ್ ಠಾಣೆ ವೃತ್ತ ನಿರೀಕ್ಷಕರಾದ ಎನ್.ಬೈರ ರವರು ಹಾಗೂ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯವರು ಕಲಂ 6 ಪೋಕ್ಸೋ ಕಾಯ್ದೆ ಅಡಿಯಲ್ಲಿ ಪ್ರಕರಣ…