ಮನರಂಜನೆ, ಸುದ್ದಿ

ಸರಿಗಮಪ ಗ್ರಾಂಡ್ ಫಿನಲೆಯಲ್ಲಿ ರನ್ನರ್ ಅಪ್ ಆದ ಹನುಮಂತನಿಗೆ ಸಿಕ್ಕಿದ್ದು ಎಷ್ಟು ಲಕ್ಷ ಗೊತ್ತಾ?ಇದೇ ಮೊದಲ ಬಾರಿಗೆ ರನ್ನರ್ ಅಪ್ ಗೆ ಬಾರೀ ಮೊತ್ತದ ಬಹುಮಾನ!

489

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ಸರಿಗಮಪ’ ಗ್ರಾಂಡ್ ಫಿನಾಲೆಯಲ್ಲಿ ಮಂಗಳೂರಿನ ಕೀರ್ತನ್ ಹೊಳ್ಳ ವಿನ್ನರ್ ಆಗಿದ್ದಾರೆ. ಹಾವೇರಿಯ ಚೀಲೂರು ಬಡ್ನಿ ತಾಂಡಾದ ಹನುಮಂತ ಅವರು ರನ್ನರ್ ಆಗಿದ್ದಾರೆ.
ಕೀರ್ತನ್ ಹೊಳ್ಳ ಆರಂಭದಿಂದಲೂ ಅದ್ಭುತವಾಗಿ ಹಾಡುವ ಮೂಲಕ ಜಡ್ಜಸ್ ಗಳು ಹಾಗೂ ಮಹಾಗುರುಗಳ ಮೆಚ್ಚುಗೆ ಗಳಿಸಿದ್ದರು. ಅದೇ ರೀತಿ ಹನುಮಂತ ತಮ್ಮ ಮುಗ್ಧತೆಯಿಂದಲೇ ಜನಪ್ರಿಯರಾಗಿದ್ದರು.

ಶನಿವಾರ ನಡೆದ ಗ್ರಾಂಡ್ ಫಿನಾಲೆಯಲ್ಲಿ ನಿಹಾಲ್ ತಾವ್ರೊ, ಹನುಮಂತ, ಕೀರ್ತನ ಹೊಳ್ಳ, ವಿಜೇತ್, ಹೃತ್ವಿಕ್ ಹಾಗೂ ಸಾಧ್ವಿನಿ ಅವರು ಫಿನಾಲೆಗೆ ಎಂಟ್ರಿ ಕೊಟ್ಟಿದ್ದರು. ಅವರಲ್ಲಿ ಕೀರ್ತನ್ ಹೊಳ್ಳ, ಸಾದ್ವಿನಿ ಮತ್ತು ಹನುಮಂತ ಗ್ರಾಂಡ್ ಫಿನಾಲೆಗೆ ಪ್ರವೇಶಿಸಿದ್ದು, ಅಂತಿಮವಾಗಿ ಕೀರ್ತನ್ ಹೊಳ್ಳ ವಿನ್ನರ್ ಆಗಿದ್ದಾರೆ. ಹನುಮಂತ ರನ್ನರ್ ಅಪ್ ಆಗಿದ್ದಾರೆ.

ಇದೇ ಮೊದಲ ಬಾರಿಗೆ ‘ಸರಿಗಮಪ’ ಶೋನಲ್ಲಿ ರನ್ನರ್ ಅಪ್ ಆದವರಿಗೆ ಭಾರಿ ಮೊತ್ತದ ಬಹುಮಾನ ನೀಡಲಾಗಿದೆ. ಹನುಮಂತ ಅವರಿಗೆ 15 ಲಕ್ಷ ರೂ. ಮೊತ್ತದ ಸೈಟ್ ಬಹುಮಾನವಾಗಿ ಸಿಕ್ಕಿದೆ. ಇನ್ನು ಮುಗ್ಧತೆಯಿಂದಲೇ ತಮ್ಮ ಹಾಡಿನ ಮೂಲಕ ಎಲ್ಲರ ಮನಗೆದ್ದಿರುವ ಹನುಮಂತ ಅವರಿಗೆ ಬಂಪರ್ ಆಫರ್ ಸಿಕ್ಕಿದೆ.

ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರೇ ಈ ಮಾಹಿತಿಯನ್ನು ‘ಸರಿಗಮಪ’ ವೇದಿಕೆಯಲ್ಲಿ ತಿಳಿಸಿದ್ದಾರೆ. ಫಿನಾಲೆ ರೌಂಡ್ ನಲ್ಲಿ ಹನುಮಂತ ‘ಅಶ್ವಮೇಧ’ ಚಿತ್ರದ ‘ಹೃದಯ ಸಮುದ್ರ’ ಹಾಡನ್ನು ಹಾಡಿದ್ದು, ಜಡ್ಜಸ್ ಗಳು ಹನುಮಂತ ಹಾಡಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ವೇಳೆ ಮಾತನಾಡಿದ ಅರ್ಜುನ್ ಜನ್ಯ, ಹನುಮಂತ ಅವರಿಗೆ ದೊಡ್ಡ ಸಿನಿಮಾವೊಂದರಲ್ಲಿ ಅವಕಾಶ ಸಿಕ್ಕಿದೆ. ಅವರಿಗಾಗಿ ದೊಡ್ಡ ನಿರ್ದೇಶಕರು ಕಾಯುತ್ತಿದ್ದಾರೆ. ಆ ಸಿನಿಮಾದಲ್ಲಿ ಹನುಮಂತ ಹಾಡಲಿದ್ದಾರೆ. ಇನ್ನು 2-3 ದಿನದಲ್ಲಿ ಪ್ರಕ್ರಿಯೆ ನಡೆಯಲಿದೆ ಎಂದು ಹೇಳಿದ್ದಾರೆ. ಗಾಯಕರಾದ ವಿಜಯ ಪ್ರಕಾಶ್ ಹಾಗೂ ರಾಜೇಶ್ ಕೃಷ್ಣ ಕೂಡ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಹಂಸಲೇಖ ಅವರು, ಜನಪದ ನಾಯಕ ಹನುಮಂತ ಎಂದು ಹೇಳಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ವಿಸ್ಮಯ ಜಗತ್ತು

    30 ವರ್ಷಗಳಿಂದ ಬರೀ ಟೀ ಕುಡಿದುಕೊಂಡೇ ಬದುಕುತ್ತಿರುವ ಮಹಿಳೆ..!

    ಚಳಿಗಾಲದಲ್ಲಿ ಒಂದು ಕಪ್ ಬಿಸಿ ಬಿಸಿ ಟೀ ಕುಡಿಯುವುದಕ್ಕಿಂತ ಯಾವುದು ಹೆಚ್ಚು ಸುಖ ಕೊಡುವುದಿಲ್ಲ, ಆದರೆ ಕೇವಲ ಟೀ ಕುಡಿದೇ ಬದುಕಿರಲು ಸಾಧ್ಯವೇ?ಬೆಳಗ್ಗೆ, ಸಂಜೆ ಟೀ ಕುಡಿಯೋರನ್ನ ನೋಡಿರ್ತೀರಿ ಆದರೆ ಛತ್ತೀಸ್‍ಗಢದಲ್ಲಿ ಮಹಿಳೆಯೊಬ್ಬರು 30 ವರ್ಷದಿಂದ ಕೇವಲ ಟೀ ಕುಡಿದೇ ಬದುಕುತ್ತಿದ್ದಾರೆ. ಹೌದು, ಈ ವಿಷಯ ನೋಡಿದರೇ ಬರೀ ಟೀ ಕುಡಿದು ಬದುಕಿದ್ದಾರಾ ಅಂತ ಆಶ್ಚರ್ಯ ಆಗೋದು ಸಹಜ. ಹೌದು, ಛತ್ತೀಸ್ ಗಡದ ಕೊರಿಯಾ ಜಿಲ್ಲೆಯ ಮಹಿಳೆಯೊಬ್ಬರು ಕಳೆದ 30 ವರ್ಷಗಳಿಂದ ಬರೀ ಟೀ ಕುಡಿದುಕೊಂಡೇ ಬದುಕುತ್ತಿದ್ದಾರೆ,…

  • ಸುದ್ದಿ

    ಆನ್‍ಲೈನ್ ಫುಡ್ ಪ್ರಿಯರೆ ದಯವಿಟ್ಟು ಇದನ್ನೊಮ್ಮೆ ಓದಿ, ಇದನ್ನು ನೀವು ತಪ್ಪದೇ ತಿಳಿದುಕೊಳ್ಳಬೇಕು,.!

    ಆನ್‍ಲೈನ್‍ನಲ್ಲಿ ಫುಡ್ ಆರ್ಡರ್ ಮಾಡುವ ಮುನ್ನ ಗ್ರಾಹಕರೇ ಹುಷಾರಾಗಿರಿ. ಯಾಕೆಂದರೆ ಬೆಂಗಳೂರಿನ ಹಲವೆಡೆ ಆನ್‍ಲೈನ್ ಫುಡ್ ಮಾಫಿಯಾ ನಡೆಯುತ್ತಿದೆ. ಇಂದಿನ ಬ್ಯುಸಿ ಶೆಡ್ಯೂಲ್ ನಲ್ಲಿ ಜನರಿಗೆ ಅಡುಗೆ ಮಾಡಿಕೊಂಡು ಊಟ ಮಾಡಲು ಸಹ ಸಮಯ ಇಲ್ಲ. ಸಿಲಿಕಾನ್ ಸಿಟಿಯಂತಹ ಮಹಾನಗರಗಳಲ್ಲಿ ಬಹುತೇಕರು ಆನ್‍ಲೈನ್ ಫುಡ್ ತರಿಸೋ ಮೂಲಕ ಸಮಯ ಉಳಿಸುವ ಪ್ರಯತ್ನಕ್ಕೆ ಮುಂದಾಗುತ್ತಾರೆ. ಒಮ್ಮೆ ನೀವು ಆರ್ಡರ್ ಮಾಡುವ ಆಹಾರ ತಯಾರಾಗುವ ಸ್ಥಳ ನೋಡಿದ್ರೆ ಬೇಡಪ್ಪ ಬೇಡ ಅನ್‍ಲೈನ್ ಅನ್ನೋದು ಗ್ಯಾರೆಂಟಿ. ಬೆಂಗಳೂರಿನ ಎಚ್‍ಎಸ್‍ಆರ್ ಲೇಔಟ್‍ನ ಕರಾವಳಿ…

  • ಸುದ್ದಿ

    ಸಾವಿನಲ್ಲಿಯೂ ಸಹ ಸಾರ್ಥಕತೆ, ಮೆದುಳು ನಿಷ್ಕ್ರಿಯಗೊಂಡ ಉಡುಪಿ ಯುವಕನ ಅಂಗಾಂಗ ದಾನ…!

    ಇತ್ತೀಚಿಗೆ ನಡೆದ ಅಪಘಾತದಲ್ಲಿ ತಲೆಗೆ ಗಂಭೀರ ಗಾಯವಾಗಿ ಮೆದುಳು ನಿಷ್ಕ್ರಿಯವಾಗಿದ್ದ ವ್ಯಕ್ತಿಯೊಬ್ಬರು ತಮ್ಮ ಅಂಗಾಂಗಗಳನ್ನು ದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ. ಉಡುಪಿಯ ಬ್ರಹ್ಮಾವರದವಾರ ಸಂದೀಪ್ ಪೂಜಾರಿ ಮೇ 27ರಂದು ಸಂಭವಿಸಿದ್ದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದಾಗಿ ಮರುದಿನ ಮೇ 28ರಂದು ವೈದ್ಯರು ಸಂದೀಪ್ ಅವರ ಮೆದುಳು ನಿಷ್ಕ್ರಿಯವಾಗಿರುವುದಾಗಿ ಘೊಷಿಸಿದ್ದಾರೆ. ಆಗ ಅವರ ಸೋದರರಾದ ಪ್ರದೀಪ್ ಪೂಜಾರಿ ತನ್ನ ಸೋದರನ ಅಂಗಾಂಗ ದಾನಕ್ಕೆ ಸಮ್ಮತಿಸಿದ್ದಾರೆ. ಅಂಗಾಂಗ ದಾನಕ್ಕೆ ಒಪ್ಪಿಗೆ ಸಿಕ್ಕ…

  • inspirational

    ಐತಿಹಾಸಿಕ ಟೆಸ್ಟ್ ಸರಣಿ ಗೆದ್ದ ಬಾಂಗ್ಲಾದೇಶ

    ಮೌಂಟ್ ಮೌಂಗನುಯಿಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ, ಕಳೆದ ತಿಂಗಳು ಅತ್ಯಂತ ಕೆಳಮಟ್ಟದಲ್ಲಿರುವ ತಂಡವಾಗಿದ್ದು, ವಿಶ್ವ ಚಾಂಪಿಯನ್ ನ್ಯೂಜಿಲೆಂಡ್ ಅನ್ನು ಎಂಟು ವಿಕೆಟ್‌ಗಳಿಂದ ಸೋಲಿಸಿತು. ಕ್ರಿಕೆಟ್‌ನಲ್ಲಿನ ಪವಾಡಗಳ  ಪಟ್ಟಿಗೆ ಇದು ಒಂದು ಹೊಸ ಸೇರ್ಪಡೆ. ಬಾಂಗ್ಲಾದೇಶ ಟೆಸ್ಟ್‌ನಲ್ಲಿ ಮೊದಲ ಬಾರಿಗೆ ನ್ಯೂಜಿಲೆಂಡ್ ಅನ್ನು ಸೋಲಿಸಿ 17 ಪಂದ್ಯಗಳ ಅಜೇಯ ತವರಿನ ದಾಖಲೆಯನ್ನು ಮುರಿಯಿತು. ಇದು ಅವರ ಆರನೇ ವಿದೇಶಿ ಟೆಸ್ಟ್ ಗೆಲುವು. ಆದರೆ ಅಂಕಿಅಂಶಗಳು, ಟ್ರಿವಿಯಾ ಮತ್ತು ಮೈಲಿಗಲ್ಲುಗಳಿಗಿಂತಲೂ ಹೆಚ್ಚು ಎದ್ದುಕಾಣುವ ಅಂಶವೆಂದರೆ ಬಾಂಗ್ಲಾದೇಶವು ನ್ಯೂಜಿಲೆಂಡ್‌ನಲ್ಲಿ ಹೇಗೆ…

  • ಜ್ಯೋತಿಷ್ಯ

    ದಿನ ಭವಿಷ್ಯ ಶುಕ್ರವಾರ,ಈ ದಿನದ ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ….ಶೇರ್ ಮಾಡಿ…

    ಮೇಷ ಹಳೆಯ ಷೇರುಗಳ ಮಾರಾಟ ಅಥವಾ ಖರೀದಿಗೂ ಮುನ್ನ ಎಲ್ಲಾ ರೀತಿಯ ಸಾಧಕ ಬಾಧಕಗಳನ್ನು ಲೆಕ್ಕಾಚಾರ ಹಾಕಿ. ಪೂರ್ವ ಯೋಜನೆಯಿಲ್ಲದೆ ಹಣ ಹೂಡಿದಲ್ಲಿ ಅಧಿಕ ಹಾನಿಯನ್ನು ಅನುಭವಿಸುವಿರಿ. ವೃಷಭ ಕೆಲಸದ ಸ್ಥಳದಲ್ಲಿ ಉತ್ಸಾಹದಾಯಕ ಹಾಗೂ ಚೈತನ್ಯದಾಯಕ ಪ್ರಚೋದಕ ಬೆಳವಣಿಗೆಗಳು ಉಂಟಾಗುವವು. ನಿಮಗೆ ಸಹಾಯ ಸಹಕಾರ ನೀಡಿದ ಗುರುಹಿರಿಯರನ್ನುಗೌರವಿಸಿ ಮುಂದೆ ಉತ್ತಮ ದಿನಗಳಿವೆ. ಮಿಥುನ ಆರೋಗ್ಯದ ವಿಷಯದಲ್ಲಿ ಉದಾಸೀನ ಬೇಡ. ಸಣ್ಣಪುಟ್ಟ ಜ್ವರಾದಿಗಳು ಬಂದರೂ ನಿಮ್ಮ ಮನೆ ವೈದ್ಯರ ಸಲಹೆ ಪಡೆಯಿರಿ. ದೈವಬಲ ಇರುವುದರಿಂದ ಅತಿ ಚಿಂತೆ ಬೇಡ….