ಸುದ್ದಿ

ಜೋಡೆತ್ತುಗಳ ಸದ್ದು, ಗೋಶಾಲೆಗೆ ಬೆಳಕಾದ ದರ್ಶನ್, ಯಶ್.

81

ಜಿಲ್ಲೆಯಲ್ಲಿ ಮತ್ತೆ ಜೋಡೆತ್ತು ಸದ್ದು ಮಾಡಿದ್ದು, ರಾಜಕೀಯವಾಗಿ ಅಲ್ಲದೆ ಜೋಡೆತ್ತುಗಳು ಮಾನವೀಯತೆ ಮೆರೆದಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಾಕಿಂಗ್ ಸ್ಟಾರ್ ಗೋಮಾತೆ ಸೇವೆಗೆ ಸಿದ್ಧರಾಗಿದ್ದಾರೆ.

ನಟ ದರ್ಶನ್ ಕಳೆದ ದಿನ ಚೈತ್ರ ಗೋಶಾಲೆಗೆ ಸುಮಾರು 15 ಟ್ರ್ಯಾಕ್ಟರ್ ಭತ್ತದ ಹುಲ್ಲನ್ನು ಅನುದಾನ ಮಾಡಿದ್ದರು. ಇದೀಗ ನಟ ಯಶ್ ಕೂಡ ಚೈತ್ರ ಗೋಶಾಲೆಗೆ ಸಹಾಯ ಮಾಡುತ್ತಿದ್ದಾರೆ. ಈ ಮೂಲಕ ಮಂಡ್ಯದ ಚೈತ್ರ ಗೋಶಾಲೆಗೆ ದರ್ಶನ್ ಮತ್ತು ಯಶ್ ಬೆಳಕಾಗಿದ್ದಾರೆ.

ಯಶ್ ಪಾಂಡವಪುರದ ತಾಲೂಕಿನ ದೊಡ್ಡಬ್ಯಾಡರಹಳ್ಳಿಯಲ್ಲಿರುವ ಚೈತ್ರ ಗೋಶಾಲೆಯ ಕಟ್ಟಡ ನಿರ್ಮಾಣ ಕೆಲಸದ ಜವಾಬ್ದಾರಿ ಹೊಂದಿಕೊಂಡಿದ್ದರು. ಕೊಟ್ಟ ಮಾತಿನಂತೆ ಕಟ್ಟಡ ಮೇಲ್ಛಾವಣಿ ನಿರ್ಮಾಣದ ಕೆಲಸವನ್ನು ಯಶ್ ತಂಡ ಆರಂಭಿಸಿದೆ. ಯಶ್ ನಂತರ ಗೋಶಾಲೆಯ ಸಹಾಯಕ್ಕೆ ದರ್ಶನ್ ಮುಂದಾಗಿದ್ದು, ಗೋಶಾಲೆಗೆ ಭೇಟಿಕೊಟ್ಟು ಹಸುಗಳಿಗೆ ಹುಲ್ಲು ತರಿಸಿಕೊಟ್ಟಿದ್ದರು.

ಚೈತ್ರ ಗೋ ಶಾಲೆಗೆ 15 ಟ್ರಾಕ್ಟರ್ ಭತ್ತದ ಹುಲ್ಲನ್ನು ದರ್ಶನ್ ನೀಡಿದ್ದರು. ಈ ವಿಡಿಯೋವನ್ನು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದು, ಇದೀಗ ವಿಡಿಯೋ ಹರಿದಾಡುತ್ತಿದೆ.

ಬೇಸಿಗೆ ಕಾಲ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ ಮೇವಿನ ಅಭಾವ ಉಂಟಾಗುವುದು ಸಹಜವಾಗಿದೆ. ಹೀಗಾಗಿ ಗೋ ಶಾಲೆಯಲ್ಲಿರುವ ಸುಮಾರು 50 ದನಗಳಿಗೆ ಯಾವುದೇ ರೀತಿಯ ಮೇವಿನ ಅಭಾವ ಉಂಟಾಗಬಾರದು ಎಂದು ದರ್ಶನ್ 15 ಟ್ರ್ಯಾಕ್ಟರ್ ಹುಲ್ಲನ್ನು ಖರೀದಿ ಮಾಡಿ, ಈ ಗೋ ಶಾಲೆಗೆ ನೀಡಿದ್ದಾರೆ. ಈ ಹಿಂದೆಯೂ ಸಹ ದರ್ಶನ್ ಸಾಕಷ್ಟು ಗೋಶಾಲೆಗಳಿಗೆ ಇದೇ ರೀತಿ ಮೇವು ಹಾಗೂ ಧನ ಸಹಾಯ ಎರಡನ್ನು ಮಾಡಿದ್ದರು.

ಸದ್ಯ ಮೂಕ ಪ್ರಾಣಿಗಳ ಸಹಾಯಕ್ಕೆ ನಿಂತಿರುವ ಮೂಲಕ ಜೋಡೆತ್ತುಗಳು ಸದ್ದು ಮಾಡಿದ್ದಾರೆ. ಈ ಹಿಂದೆ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುಮಲತಾ ಅಂಬರೀಶ್ ಪರ ಪ್ರಚಾರ ನಡೆಸಿ ಸಾಕಷ್ಟು ಸುದ್ದಿಯಾಗಿದ್ದರು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ದೇವರು-ಧರ್ಮ

    ರಾಮಕೋಟಿ ಯಾಕೆ ಬರೆಯಬೇಕು? ಯಾವ ಪೆನ್‌ನಲ್ಲಿ ಬರೆದರೆ ಒಳ್ಳೆಯದಾಗುತ್ತದೆ.!ತಿಳಿಯಲು ಓದಿ ಮರೆಯದೇ ಶೇರ್ ಮಾಡಿ…

    ರಾಮನ ಹೆಸರನ್ನು ಅಕ್ಷರ ರೂಪದಲ್ಲಿ ಜಪಿಸುವುದೇ ರಾಮಕೋಟಿ.! ಮನಸಾ ವಾಚಾ ಕರ್ಮೇಣ ರಾಮನ ಸ್ತುತಿ ಮಾಡುತ್ತಾ ಆ ಮಧುರನಾಮವನ್ನು ಕೋಟಿ ಸಲ ಬರೆಯುವುದೇ ರಾಮಕೋಟಿ. ಶ್ರೀಮನ್ನಾರಾಯಣನ ಎಲ್ಲ ರೂಪಗಳಲ್ಲಿ ರಾಮಾವತಾರಕ್ಕೆ ಬಹಳ ಪ್ರಾಮುಖ್ಯತೆ ಪಡೆದಿದ್ದು, ರಾಮನನ್ನು ಪ್ರತಿಯೊಬ್ಬರೂ ನಮ್ಮ ದೇವರು ಅಂದುಕೊಳ್ಳುವಷ್ಟು ಹತ್ತಿರವಾದ. ಅತೀತ ಶಕ್ತಿಗಳಿಗಿಂತ ರಾಮನು ತೋರಿದ ಆದರ್ಶವಂತ ಜೀವನವೇ ಬಹಳ ಮಂದಿಗೆ ರಾಮ ಎಂದರೆ ಒಂದು ವಿಶೇಷವಾದ ಇಷ್ಟ, ಭಕ್ತಿಯನ್ನು ಉಂಟುಮಾಡಿತು! ರಾಮ ಕೋಟೆಯನ್ನು ಬರೆಯುವಾಗ ಕೆಲವು ಮುಖ್ಯ ನಿಯಮಗಳನ್ನು ಪಾಲಿಸಬೇಕು… ರಾಮ ಕೋಟಿಯನ್ನು…

  • ಉಪಯುಕ್ತ ಮಾಹಿತಿ

    ಲೈಫಲ್ಲಿ ಹೇಗೆ ಗೆಲ್ಲಬೇಕು ಅನ್ನೋರು..! ಮಿಸ್ ಮಾಡದೇ ಈ ಲೇಖನ ಓದಿ…

    ಸೋತಾಗ ಸತ್ತೆ ಅನ್ಕೊಂಡ್ರೆ ನೀವು ಶಾಶ್ವತವಾಗಿ ಸೋತಹಾಗೆ..! ಸೋತಾಗ, ಇದ್ಯಾವ ಸೋಲು, ನಾನು ಗೆದ್ದೇ ಗೆಲ್ತೀನಿ ಅನ್ಕೊಂಡ್ರೆ ಮಾತ್ರ ಲೈಫ್ ಜಿಂಗಾಲಾಲ..!

  • ಆರೋಗ್ಯ

    ತರಕಾರಿಗಳಂತೆ ಕಾಳುಗಳಲ್ಲಿಯೂ ಸಹ ವಿಶೇಷವಾದ ಪೋಷಕಾಂಶಗಳಿವೇ ನಿಮ್ಗೆ ಗೊತ್ತಾ..?ತಿಳಿಯಲು ಈ ಲೇಖನ ಓದಿ..

    ತರಕಾರಿಗಳಂತೆ ಕಾಳುಗಳಲ್ಲಿಯೂ ಸಹ ವಿಶೇಷವಾಗ ಪೋಷಕಾಂಶಗಳು ಇವೆ ಎಂಬುದು ನಮ್ಮೆಲ್ಲರಿಗೂ ತಿಳಿದಿರುವ ವಿಷಯ. ಕಾಳುಗಳನ್ನ ಮೊಳಕೆ ಕಟ್ಟಿ ತಿಂದರೆ ಇನ್ನು ಉತ್ತಮ. ಬನ್ನಿ ಹಾಗಾದರೆ ಮೊಳಕೆ ಕಾಳುಗಳಿಂದ ಏನೆಲ್ಲಾ ಪ್ರಯೋಜನಗಳು ನಮಗೆ ಲಭ್ಯ ಎಂಬುದನ್ನ ತಿಳಿದು ಕೊಳ್ಳೋಣ.

  • ಕವಿ

    ಮಾಸ್ತಿ ವೆಂಕಟೇಶ ಅಯ್ಯಂಗಾರರು ಕನ್ನಡಿಗರಿಗೆ ಒಂದು ಆದರ್ಶ..!ತಿಳಿಯಲು ಈ ಲೇಖನ ಓದಿ..

    ಕನ್ನಡದ ಒಬ್ಬ ಅಪ್ರತಿಮ ಲೇಖಕರು. ಕನ್ನಡ ಸಾಹಿತ್ಯ ಲೋಕದಲ್ಲಿ ಮಾಸ್ತಿ ಎಂದೇ ಖ್ಯಾತರಾಗಿರುವ ಈ ಸಾಹಿತಿ ಶ್ರೀನಿವಾಸ ಎಂಬ ಕಾವ್ಯನಾಮದಡಿಯಲ್ಲಿ ಬರೆಯುತ್ತಿದರು.

  • ಸುದ್ದಿ

    ಅಂಬೇಡ್ಕರ್ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಶಿಕ್ಷಣ ಇಲಾಖೆ ನಿರ್ದೇಶಕ ಅಮಾನತು..!

    ಹಿರಿಯ ಅಧಿಕಾರಿಗಳ ಅನುಮೋದನೆ ಪಡೆಯದೆ ‘ಸಂವಿಧಾನ ದಿನಾಚರಣೆ’ಗೆ ಸಂಬಂಧಿಸಿದ ಸುತ್ತೋಲೆ ಹೊರಡಿಸಿ, ಇಲಾಖೆಯ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಿದ್ದ ಹಿನ್ನೆಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕ (ಪ್ರೌಢ ಶಿಕ್ಷಣ) ಕೆ.ಎಸ್‌.ಮಣಿ ಸೇರಿ ನಾಲ್ವರನ್ನು ಸರಕಾರ ಅಮಾನತು ಮಾಡಿದೆ. ಇಲಾಖೆಯು ನ.26ರಂದು ರಾಜ್ಯದ ಎಲ್ಲಾ ಸರಕಾರಿ ಶಾಲೆಗಳಲ್ಲಿ ಹಮ್ಮಿ ಕೊಂಡಿರುವ ‘ಸಂವಿಧಾನ ದಿನಾಚರಣೆ’ಯ ಜಾಗೃತಿ ಅಭಿಯಾನದ ಮಾರ್ಗ ದರ್ಶಿಗಳನ್ನು ಖಾಸಗಿ ಸಂಸ್ಥೆಯೊಂದು ಸಿದ್ಧಪಡಿಸಿಕೊಟ್ಟಿತ್ತು. ಈ ಮಾರ್ಗದರ್ಶಿಯಲ್ಲಿ, ‘ಡಾ.ಬಿ.ಆರ್‌.ಅಂಬೇಡ್ಕರ್‌ ಒಬ್ಬರೇ ಸಂವಿಧಾನ ರಚಿಸಿಲ್ಲ’ ಎಂಬ ವಿವಾದಾತ್ಮಕ ವಾಕ್ಯವನ್ನು ಸೇರಿಸಲಾಗಿತ್ತು. ಈ ಮಾರ್ಗಸೂಚಿಗಳನ್ನು…

  • ಉದ್ಯೋಗ

    ರೈಲ್ವೆ ಐಸಿಎಫ್ ನೇಮಕಾತಿ 2020:

     ರೈಲ್ವೆ ಸಚಿವಾಲಯದ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್) ತನ್ನ ವೆಬ್‌ಸೈಟ್ https://icf.indianrailways.gov.in/ ನಲ್ಲಿ ಅಪ್ರೆಂಟಿಸ್ ಹುದ್ದೆಗೆ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಕಾರ್ಪೆಂಟರ್, ಎಲೆಕ್ಟ್ರಿಷಿಯನ್, ಫಿಟ್ಟರ್, ಮೆಷಿನಿಸ್ಟ್, ಪೇಂಟರ್, ವೆಲ್ಡರ್, ಎಂಎಲ್ಟಿ ರೇಡಿಯಾಲಜಿ, ಎಂಎಲ್ಟಿ ಪ್ಯಾಥಾಲಜಿ ಮತ್ತು ಪಾಸಾ ಮುಂತಾದ ವಿವಿಧ ವಹಿವಾಟುಗಳ ವಿರುದ್ಧ ಒಟ್ಟು 1000 ಖಾಲಿ ಹುದ್ದೆಗಳು ಲಭ್ಯವಿದೆ. ಅರ್ಹ ಅಭ್ಯರ್ಥಿಗಳು icf.indianrailways.gov.in ನಲ್ಲಿ ಐಸಿಎಫ್‌ನ ಅಧಿಕೃತ ಸೈಟ್ ಮೂಲಕ ಹುದ್ದೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅಪ್ರೆಂಟಿಸ್ ಆಕ್ಟ್- 1961 ರ ಅಡಿಯಲ್ಲಿ ತರಬೇತಿ…