ಜನಪ್ರಿಯ ಮೆಸೆಜಿಂಗ್ ಆಪ್ ವಾಟ್ಸಪ್ ಸದಾ ಒಂದಲ್ಲೊಂದು ವಿಷಯಕ್ಕೆ ಸುದ್ದಿಯಲ್ಲಿರುತ್ತಲೇ ಇರುತ್ತದೆ. ಇತ್ತೀಚಿಗೆ ಬಳಕೆದಾರರ ಖಾತೆಗಳು ಹ್ಯಾಕ್ ಆಗಿ ಭಾರಿ ದೊಡ್ಡ ಸುದ್ದಿ ಆಗಿತ್ತು. ಹಾಗೆಯೇ ತನ್ನ ಅಪ್ಡೇಟ್ ವರ್ಷನ್ಗಳಲ್ಲಿ ನೂತನ ಫೀಚರ್ಗಳನ್ನು ಅಳವಡಿಸುತ್ತಲೇ ಸಾಗಿ ಬಂದಿದ್ದ ಕಂಪನಿ, ಇದೀಗ ಸದ್ಯ ಬಳಕೆಯಲ್ಲಿರುವ ವಾಟ್ಸಪ್ನ ಫೀಚರ್ ಒಂದಕ್ಕೆ ಬ್ರೇಕ್ ಹಾಕಿದ್ದು, ಇದು ಐಓಎಸ್ ಬಳಕೆದಾರರಿಗೆ ಅಚ್ಚರಿ ತಂದಿದೆ.
ಹೌದು, ವಾಟ್ಸಪ್ ಕಂಪನಿಯು IOS ಬೆಂಬಲಿತ ಐಫೋನ್ಗಳಲ್ಲಿ ಪ್ರೊಫೈಲ್ ಫೋಟೊಗಳನ್ನು ಸೇವ್ ಮಾಡಿಕೊಳ್ಳುವ ಆಯ್ಕೆಯನ್ನು ತೆಗೆದು ಹಾಕಿದ್ದು, ಇನ್ಮುಂದೇ IOS ಡಿವೈಸ್ಗಳಲ್ಲಿ ವಾಟ್ಸಪ್ ಬಳಸುವವರಿಗೆ ಇತರರ ಪ್ರೊಫೈಲ್ ಪೋಟೊಗಳನ್ನು ಸೇವ್ ಮಾಡುವ ಅವಕಾಶ ಲಭ್ಯವಾಗುವುದಿಲ್ಲ. ಅಂದಹಾಗೇ ಅಂಡ್ರಾಯ್ಡ್ ಮಾದರಿಯ ಓಎಸ್ ಬಳಕೆದಾರರಿಗೆ ಈ ಆಯ್ಕೆ ಅನ್ವಯವಾಗುವುದಿಲ್ಲ.ವಾಟ್ಸಪ್ ಅಪ್ಡೇಟ್ ವರ್ಷನ್ನಲ್ಲಿ ಪ್ರೊಫೈಲ್ ಫೋಟೊ ಡೌನ್ಲೋಡ್ ಮಾಡಿಕೊಳ್ಳುವ ಅವಕಾಶಕ್ಕೆ ಬ್ರೇಕ್ ಬೀಳಲಿರುವ ಮಾಹಿತಿಯು WABetaInfo ತಾಣದಲ್ಲಿ ತಿಳಿಸಲಾಗಿದೆ. ಹಾಗಾದರೇ ವಾಟ್ಸಪ್ ಐಓಎಸ್ ಬಳಕೆದಾರರಿಗೆ ಮಾತ್ರ ಯಾಕೆ ಪ್ರೊಫೈಲ್ ಸೇವ್ ಮಾಡುವ ಆಯ್ಕೆ ತೆಗೆದು ಹಾಕಿದೆ ಮತ್ತು ಅಂಡ್ರಾಯ್ಡ್ ಓಎಸ್ ಬಳಕೆದಾರರಿಗೆ ಏನಾದ್ರು ಬದಲಾವಣೆಗಳಿವೆಯಾ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.
ಅಪ್ಡೇಟ್ ವರ್ಷನ್ನಲ್ಲಿ ಸೇರ್ಪಡೆ ವಾಟ್ಸಪ್ ಐಓಎಸ್ ವರ್ಷನ್ನಲ್ಲಿ ಅಪ್ಡೇಟ್ ಮಾಡಲಿದ್ದು, ವಾಟ್ಸಪ್ನ ಹೊಸ ಐಓಎಸ್ ವರ್ಷನ್(2.19.60.26) ಬೇಟಾದಲ್ಲಿ ಇತರರ ಪ್ರೊಫೈಲ್ ಪೋಟೊಗಳನ್ನು ಸೇವ್ ಮಾಡುವ ಅವಕಾಶ ಇನ್ಮುಂದೆ ಸ್ಟಾಪ್ ಆಗಲಿದೆ. ವೈಯಕ್ತಿಕ ಖಾತೆಗಳ ಪ್ರೊಫೈಲ್ ಫೋಟೊ ಸೇವ್ ಆಗಲ್ಲ ಆದರೆ ಗ್ರೂಪ್ ಪ್ರೊಫೈಲ್ ಫೋಟೊ ಸೇವ್ ಮಾಡಬಹುದು.ಪ್ರೊಫೈಲ್ ಪೋಟೊ ಸೇವ್ ಇನ್ನಿಲ್ಲ ಈ ಹಿಂದೆ ವಾಟ್ಸಪ್ ಲಿಸ್ಟ್ ನಲ್ಲಿರುವ ಇತರರ ಪ್ರೊಫೈಲ್ ಫೋಟೊವನ್ನು ಸೇವ್ ಮಾಡಬಹುದಾಗಿತ್ತು. ಆದರೆ ಫೇಸ್ಬುಕ್ ಒಡೆತನದ ವಾಟ್ಸಪ್ ಸಂಸ್ಥೆಯು ತನ್ನ ಹೊಸ ಅಪ್ಡೇಟ್ ವರ್ಷನ್ನಲ್ಲಿ ಪ್ರೊಫೈಲ್ ಫೋಟೊ ಸೇವ್ ಮಾಡುವ ಆಯ್ಕೆಯನ್ನು ತೆಗೆದು ಹಾಕಿದ್ದು, ಇದು ಕೇವಲ ಐಓಎಸ್ ಬಳಕೆದಾರರಿಗೆ ಮಾತ್ರ ಅನ್ವಯಿಸಲಿದೆ.
ಗ್ರೂಪ್ ಪ್ರೊಫೈಲ್ ಫೋಟೊ ಸೇವ್ ವಾಟ್ಸಪ್ ಲಿಸ್ಟ್ನಲ್ಲಿರುವ ಇತರರ ವೈಯಕ್ತಿಕ ಪ್ರೊಫೈಲ್ ಫೋಟೊವನ್ನು ಸೇವ್ ಮಾಡುವ ಆಯ್ಕೆ ರದ್ದು ಮಾಡಿದ್ದು, ಆದರೆ ವಾಟ್ಸಪ್ ಲಿಸ್ಟ್ನಲ್ಲಿರುವ ಗ್ರೂಪ್ ಪ್ರೊಫೈಲ್ ಫೋಟೊಗಳನ್ನು ಸೇವ್ ಮಾಡಬಹುದು ಇದಕ್ಕೆ ಯಾವುದೇ ಕಡಿವಾಣ ಹಾಕಿಲ್ಲ. ಹೀಗಾಗಿ ಐಓಎಸ್ ಬಳಕೆದಾರರು ಗ್ರೂಪ್ ಪ್ರೊಫೈಲ್ ಫೋಟೊಗಳನ್ನು ಸೇವ್ ಮಾಡಬಹುದುಅಂಡ್ರಾಯ್ಡ್ಗೆ ಅನ್ವಯ ಇಲ್ಲ ವಾಟ್ಸಪ್ ಪ್ರೊಫೈಲ್ ಪೋಟೊ ಸೇವ್ ಮಾಡುವ ಆಯ್ಕೆಯನ್ನು ಕೇವಲ ಐಓಎಸ್ ಬಳಕೆದಾರರಿಗೆ ಮಾತ್ರ ರದ್ದು ಮಾಡಿದ್ದು, ಅಂಡ್ರಾಯ್ಡ್ ಮಾದರಿಯ ಬಳಕೆದಾರರಿಗೆ ಅನ್ವಯವಾಗುವುದಿಲ್ಲ. ಆಂಡ್ರಾಯ್ಡ್ ಓಎಸ್ನಲ್ಲಿ ಬದಲಾವಣೆ ಇರುವುದಿಲ್ಲ ಮತ್ತು ವೈಯಕ್ತಿಕ ಮತ್ತು ಗ್ರೂಪ್ ಪ್ರೊಫೈಲ್ ಫೋಟೊಗಳನ್ನು ಗ್ಯಾಲರಿಗೆ ಸೇವ್ ಮಾಡಬಹುದು.
ಕಾರಣ ಏನು? ಐಓಎಸ್ ಬಳಕೆದಾರರಿಗೆ ಮಾತ್ರ ವಾಟ್ಸಪ್ನಲ್ಲಿ ಇತರರ ವೈಯಕ್ತಿಕ ಖಾತೆಗಳ ಪ್ರೊಫೈಲ್ ಫೋಟೊ ಸೇವ್ ಮಾಡುವ ಆಯ್ಕೆಗೆ ಕೊಕ್ಕ ನೀಡುವುದಕ್ಕೆ ನಿಖರ ಕಾರಣವೇನು ಎಂಬುದನ್ನು ಅಧಿಕೃತವಾಗಿ ವ್ಯಕ್ತಪಡಿಸಿಲ್ಲ. ಆದರೆ ಐಓಎಸ್ನಲ್ಲಿ ಗ್ರೂಪ್ಗಳ ಪ್ರೊಫೈಲ್ ಫೋಟೊಗಳನ್ನು ಸೇವ್ ಮಾಡಬಹುದಾಗಿದೆ.
ಹಣ್ಣುಗಳನ್ನು ನಾವು ತಿಂದಷ್ಟು ನಮಗೆ ಆರೋಗ್ಯ ನಿರಂತರವಾಗಿರುತ್ತದೆ. ಅದರಲ್ಲಿಯೂ ಕೆಲವೊಂದು ನಿರ್ದಿಷ್ಟ ಹಣ್ಣುಗಳು ಆರೋಗ್ಯಕ್ಕೆ ಹಿತಕಾರಿಯಾಗಿದೆ. ಸಿಹಿಯಾದ ರುಚಿಯಿಂದ ಕೂಡಿದ ಹಲಸು ಆರೋಗ್ಯಕ್ಕೆ ನೀಡುವ ಕೊಡುಗೆ ಅಪಾರವಾದುದು.ಹಲಸಿನ ಹಣ್ಣು ತಿನ್ನುವುದರಿಂದ ಆಗುವ ಆರೋಗ್ಯಕರ ಲಾಭಗಳು ರಕ್ತದ ಒತ್ತಡವನ್ನು ಸಮತೋಲನವಾಗಿಸುತ್ತದೆಹಲಸಿನ ಹಣ್ಣಿನ ತೊಳೆಗಳಲ್ಲಿ ಪೊಟ್ಯಾಶಿಯಂ ಅಂಶ ಹೆಚ್ಚಾಗಿದ್ದು, ಅಧಿಕ ರಕ್ತದ ಒತ್ತಡ ಸಮಸ್ಯೆಯಿಂದ ಬಳಲುತ್ತಿರುವ ಮಂದಿಗೆ ಇದು ಬಹಳ ಸಹಕಾರಿ ಎಂದು ಹೇಳುತ್ತಾರೆ. ಏಕೆಂದರೆ ಪೊಟ್ಯಾಶಿಯಂ ಅಂಶ ಹೊಂದಿರುವ ಯಾವುದೇ ಆಹಾರ ಸೇವನೆ ಮಾಡುವುದರಿಂದ ದೇಹದಲ್ಲಿ ಸೋಡಿಯಂ ಅಂಶ…
ಪ್ರಧಾನ ಮಂತ್ರಿ ನರೇಂದ್ರ ಮೋದಿ ಬುಧವಾರ ಬಾಲಿವುಡ್ ನಟ ಅಕ್ಷಯ್ ಕುಮಾರ್ ಜೊತೆ ಮೊದಲ ಬಾರಿಗೆ ತಮ್ಮ ವೈಯುಕ್ತಿಕ ಜೀವನ ಅನುಭವಗಳೊಂದಿಗೆ, ತಮ್ಮ ಜೀವನಕ್ಕೆ ಸಂಬಂಧಿಸಿದ ಹಲವಾರು ಕುತೂಹಲಕಾರಿ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಈವರೆಗೆ ಯಾರಿಗೂ ತಿಳಿದಿರದ ಕೆಲ ಮಾಹಿತಿಗಳನ್ನೂ ಮೋದಿ ನಟ ಅಕ್ಷಯ್ ಜೊತೆಗೆ ಹಂಚಿಕೊಂಡಿದ್ದಾರೆ. 1 ಗಂಟೆ 10 ನಿಮಿಷದ ಈ ಸಂದರ್ಶನದಲ್ಲಿ ಮೋದಿ ಹೇಳಿದ ಕೆಲ ಆಸಕ್ತಿಕರ ವಿಚಾರಗಳು ಇವೆ.ನಿಮಗೆ ಮಾವಿನ ಹಣ್ಣು ಇಷ್ಟವೇ ಎಂದು ಅಕ್ಷಯ್ ಕುಮಾರ್ ಕೇಳಿದ್ದಕ್ಕೆ ನಾನು ಮಾವಿನ ಹಣ್ಣು…
ನಮ್ಮ ಹಿಂದೂ ಧರ್ಮದಲ್ಲಿ ಎಲ್ಲಾ ಶಾಸ್ತ್ರ ಸಂಪ್ರದಾಯಗಳ ಹಿಂದಿಯು ಒಂದು ವೈಜ್ಞಾನಿಕ ಕಾರಣ ಅಥವಾ ಒಂದು ಮಹತ್ತರವಾದ ಉದ್ದೇಶ ಇರುತ್ತದೆ. ಹಾಗೆಯೇ ನಾವು ಊಟ ಮಾಡುವುದಕ್ಕೂ ಒಂದಷ್ಟು ವಿಧಿ-ವಿಧಾನ ಪದ್ಧತಿಗಳಿವೆ. ನಮ್ಮ ಸಂಪ್ರದಾಯದಲ್ಲಿ ನೆಲದ ಮೇಲೆ ಕುಳಿತು ಊಟ ಮಾಡುವುದು ರೂಢಿ. ಊಟಕ್ಕಾಗಿ ಬಾಳೆ ಎಲೆ ಇಲ್ಲವೇ ಬೆಳ್ಳಿಯ ಅಥವಾ ಚಿನ್ನದ ತಟ್ಟೆಯನ್ನು ಬಳಸುತ್ತಾರೆ. ಇದರ ಹಿಂದೆಲ್ಲ ಒಂದು ಮಹತ್ವವಿದೆ. ಹಾಗೆಯೇ, ನಾವು ಊಟ ಮಾಡಿದ ಬಳಿಕ ಕೆಲವೊಂದು ತಪ್ಪುಗಳನ್ನು ಮಾಡ ಬಾರದು. ಹೀಗೆ ಮಾಡಿದಲ್ಲಿ ನಮಗೆ ಕೆಡುಕು…
ತನಗೆ ಮೆದುಳಿನ ಕ್ಯಾನ್ಸರ್ ಗಡ್ದೆ ಇದೆ ಎಂಬುದನ್ನು ಅರಿಯದ ಮಹಿಳೆಯೊಬ್ಬಳಿಗೆ ಸಾಕಿದ ಕುದುರೆಯೇ ನೆರವಾದ ಅಪರೂಪದ ಘಟನೆ ಬೆಳಕಿಗೆ ಬಂದಿದೆ. ತನ್ನ ಮಾಲಕಿಯ ಕ್ಯಾನ್ಸರ್ ವಾಸನೆಯನ್ನು ಮೂಗಿನಿಂದಲೇ ಕಂಡುಹಿಡಿದು ಅವಳನ್ನು ಚಿಕಿತ್ಸೆಗೆ ಪ್ರೇರೇಪಿಸಿದ ಮನಕಲಕುವ ಸ್ಟೋರಿ ಇದು. ಇಂಗ್ಲೆಂಡ್ ಲ್ಯಾಂಚ್ಶೈರ್ನ ಬ್ಲ್ಯಾಕ್ಬರ್ನ್ ಮೂಲದವರಾದ ಕೆಲ್ಲಿ ಅನ್ನಾ ಅಲೆಕ್ಸಾಂಡರ್(43) ತನ್ನ ಕುದುರೆ ಅಲಿಯಾನ ಜತೆ ಒಳ್ಳೆಯ ಬಾಂಧವ್ಯ ಹೊಂದಿದ್ದಾರೆ. ಇದ್ದಕ್ಕಿಂದಂತೆ ರೋಗದಿಂದ ಬಳಲು ಆರಂಭಿಸಿದ ಬಳಿಕ ತನ್ನ ಅಲಿಯಾನ ಕುದುರೆ ಆಕೆಯ ತಲೆಯ ಭಾಗದ ವಾಸನೆಯನ್ನು ಗ್ರಹಿಸುತ್ತಿತ್ತು ಎಂದು…
The most inspiring person for every citizen who never saw success till half of his age and later he is universally regarded as one of the greatest man ever to occupy the presidency in the US history. The former president of USA, Abraham Lincoln.
ಅನೇಕ ವರ್ಷಗಳ ಹಿಂದೆ, ವಿದ್ಯಾರ್ಥಿಯೋಬ್ಬನು ಕಾನೂನು ಶಿಕ್ಷಣವನ್ನು ಕಲಿಯಲು ಬಂದ. ಆದ್ರೆ ಅವನ ಹತ್ತಿರ ಶುಲ್ಕವನ್ನು ಪಾವತಿಸಲು ಸಾಧ್ಯವಿರಲಿಲ್ಲ. ಹೀಗಾಗಿ ಅವನು ಶಿಕ್ಷಕರ ಜೊತೆ ಒಪ್ಪಂದವೊಂದನ್ನು ಮಾದಿಲೊಂಡನು.ಅದೆಂದರೆ “ನಾನು ನ್ಯಾಯಾಲಯದಲ್ಲಿ ನನ್ನ ಮೊದಲ ಪ್ರಕರಣವನ್ನು ಗೆಲ್ಲುವ ದಿನ ನಿಮ್ಮ ಶುಲ್ಕವನ್ನು ನಾನು ಪಾವತಿಸುತ್ತೇನೆ” ಎಂದು ವಿಧ್ಯಾರ್ಥಿ ಮತ್ತು ಶಿಕ್ಷಕರು ಒಪ್ಪಂದ ಮಾಡಿಕೊಂಡರು.