ಸುದ್ದಿ

ವಾಟ್ಸಪ್‌ನಲ್ಲಿ ‘ಪ್ರೊಫೈಲ್‌ ಫೋಟೊ ಸೇವ್’ ಆಯ್ಕೆ ಇನ್ನಿಲ್ಲ!

49

ಜನಪ್ರಿಯ ಮೆಸೆಜಿಂಗ್‌ ಆಪ್‌ ವಾಟ್ಸಪ್‌ ಸದಾ ಒಂದಲ್ಲೊಂದು ವಿಷಯಕ್ಕೆ ಸುದ್ದಿಯಲ್ಲಿರುತ್ತಲೇ ಇರುತ್ತದೆ. ಇತ್ತೀಚಿಗೆ ಬಳಕೆದಾರರ ಖಾತೆಗಳು ಹ್ಯಾಕ್‌ ಆಗಿ ಭಾರಿ ದೊಡ್ಡ ಸುದ್ದಿ ಆಗಿತ್ತು. ಹಾಗೆಯೇ ತನ್ನ ಅಪ್‌ಡೇಟ್‌ ವರ್ಷನ್‌ಗಳಲ್ಲಿ ನೂತನ ಫೀಚರ್‌ಗಳನ್ನು ಅಳವಡಿಸುತ್ತಲೇ ಸಾಗಿ ಬಂದಿದ್ದ ಕಂಪನಿ, ಇದೀಗ ಸದ್ಯ ಬಳಕೆಯಲ್ಲಿರುವ ವಾಟ್ಸಪ್‌ನ ಫೀಚರ್ ಒಂದಕ್ಕೆ ಬ್ರೇಕ್‌ ಹಾಕಿದ್ದು, ಇದು ಐಓಎಸ್‌ ಬಳಕೆದಾರರಿಗೆ ಅಚ್ಚರಿ ತಂದಿದೆ.

ಹೌದು, ವಾಟ್ಸಪ್‌ ಕಂಪನಿಯು IOS ಬೆಂಬಲಿತ ಐಫೋನ್‌ಗಳಲ್ಲಿ ಪ್ರೊಫೈಲ್‌ ಫೋಟೊಗಳನ್ನು ಸೇವ್‌ ಮಾಡಿಕೊಳ್ಳುವ ಆಯ್ಕೆಯನ್ನು ತೆಗೆದು ಹಾಕಿದ್ದು, ಇನ್ಮುಂದೇ IOS ಡಿವೈಸ್‌ಗಳಲ್ಲಿ ವಾಟ್ಸಪ್‌ ಬಳಸುವವರಿಗೆ ಇತರರ ಪ್ರೊಫೈಲ್‌ ಪೋಟೊಗಳನ್ನು ಸೇವ್‌ ಮಾಡುವ ಅವಕಾಶ ಲಭ್ಯವಾಗುವುದಿಲ್ಲ. ಅಂದಹಾಗೇ ಅಂಡ್ರಾಯ್ಡ್‌ ಮಾದರಿಯ ಓಎಸ್‌ ಬಳಕೆದಾರರಿಗೆ ಈ ಆಯ್ಕೆ ಅನ್ವಯವಾಗುವುದಿಲ್ಲ.ವಾಟ್ಸಪ್‌ ಅಪ್‌ಡೇಟ್‌ ವರ್ಷನ್‌ನಲ್ಲಿ ಪ್ರೊಫೈಲ್‌ ಫೋಟೊ ಡೌನ್‌ಲೋಡ್‌ ಮಾಡಿಕೊಳ್ಳುವ ಅವಕಾಶಕ್ಕೆ ಬ್ರೇಕ್‌ ಬೀಳಲಿರುವ ಮಾಹಿತಿಯು WABetaInfo ತಾಣದಲ್ಲಿ ತಿಳಿಸಲಾಗಿದೆ. ಹಾಗಾದರೇ ವಾಟ್ಸಪ್‌ ಐಓಎಸ್‌ ಬಳಕೆದಾರರಿಗೆ ಮಾತ್ರ ಯಾಕೆ ಪ್ರೊಫೈಲ್‌ ಸೇವ್‌ ಮಾಡುವ ಆಯ್ಕೆ ತೆಗೆದು ಹಾಕಿದೆ ಮತ್ತು ಅಂಡ್ರಾಯ್ಡ್‌ ಓಎಸ್‌ ಬಳಕೆದಾರರಿಗೆ ಏನಾದ್ರು ಬದಲಾವಣೆಗಳಿವೆಯಾ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಅಪ್‌ಡೇಟ್‌ ವರ್ಷನ್‌ನಲ್ಲಿ ಸೇರ್ಪಡೆ ವಾಟ್ಸಪ್‌ ಐಓಎಸ್‌ ವರ್ಷನ್‌ನಲ್ಲಿ ಅಪ್‌ಡೇಟ್‌ ಮಾಡಲಿದ್ದು, ವಾಟ್ಸಪ್‌ನ ಹೊಸ ಐಓಎಸ್‌ ವರ್ಷನ್‌(2.19.60.26) ಬೇಟಾದಲ್ಲಿ ಇತರರ ಪ್ರೊಫೈಲ್‌ ಪೋಟೊಗಳನ್ನು ಸೇವ್‌ ಮಾಡುವ ಅವಕಾಶ ಇನ್ಮುಂದೆ ಸ್ಟಾಪ್‌ ಆಗಲಿದೆ. ವೈಯಕ್ತಿಕ ಖಾತೆಗಳ ಪ್ರೊಫೈಲ್‌ ಫೋಟೊ ಸೇವ್‌ ಆಗಲ್ಲ ಆದರೆ ಗ್ರೂಪ್‌ ಪ್ರೊಫೈಲ್‌ ಫೋಟೊ ಸೇವ್‌ ಮಾಡಬಹುದು.ಪ್ರೊಫೈಲ್‌ ಪೋಟೊ ಸೇವ್‌ ಇನ್ನಿಲ್ಲ ಈ ಹಿಂದೆ ವಾಟ್ಸಪ್‌ ಲಿಸ್ಟ್‌ ನಲ್ಲಿರುವ ಇತರರ ಪ್ರೊಫೈಲ್‌ ಫೋಟೊವನ್ನು ಸೇವ್‌ ಮಾಡಬಹುದಾಗಿತ್ತು. ಆದರೆ ಫೇಸ್‌ಬುಕ್‌ ಒಡೆತನದ ವಾಟ್ಸಪ್‌ ಸಂಸ್ಥೆಯು ತನ್ನ ಹೊಸ ಅಪ್‌ಡೇಟ್‌ ವರ್ಷನ್‌ನಲ್ಲಿ ಪ್ರೊಫೈಲ್‌ ಫೋಟೊ ಸೇವ್‌ ಮಾಡುವ ಆಯ್ಕೆಯನ್ನು ತೆಗೆದು ಹಾಕಿದ್ದು, ಇದು ಕೇವಲ ಐಓಎಸ್‌ ಬಳಕೆದಾರರಿಗೆ ಮಾತ್ರ ಅನ್ವಯಿಸಲಿದೆ.

ಗ್ರೂಪ್‌ ಪ್ರೊಫೈಲ್‌ ಫೋಟೊ ಸೇವ್‌ ವಾಟ್ಸಪ್‌ ಲಿಸ್ಟ್‌ನಲ್ಲಿರುವ ಇತರರ ವೈಯಕ್ತಿಕ ಪ್ರೊಫೈಲ್‌ ಫೋಟೊವನ್ನು ಸೇವ್‌ ಮಾಡುವ ಆಯ್ಕೆ ರದ್ದು ಮಾಡಿದ್ದು, ಆದರೆ ವಾಟ್ಸಪ್‌ ಲಿಸ್ಟ್‌ನಲ್ಲಿರುವ ಗ್ರೂಪ್‌ ಪ್ರೊಫೈಲ್‌ ಫೋಟೊಗಳನ್ನು ಸೇವ್‌ ಮಾಡಬಹುದು ಇದಕ್ಕೆ ಯಾವುದೇ ಕಡಿವಾಣ ಹಾಕಿಲ್ಲ. ಹೀಗಾಗಿ ಐಓಎಸ್‌ ಬಳಕೆದಾರರು ಗ್ರೂಪ್‌ ಪ್ರೊಫೈಲ್‌ ಫೋಟೊಗಳನ್ನು ಸೇವ್‌ ಮಾಡಬಹುದುಅಂಡ್ರಾಯ್ಡ್‌ಗೆ ಅನ್ವಯ ಇಲ್ಲ ವಾಟ್ಸಪ್‌ ಪ್ರೊಫೈಲ್‌ ಪೋಟೊ ಸೇವ್‌ ಮಾಡುವ ಆಯ್ಕೆಯನ್ನು ಕೇವಲ ಐಓಎಸ್‌ ಬಳಕೆದಾರರಿಗೆ ಮಾತ್ರ ರದ್ದು ಮಾಡಿದ್ದು, ಅಂಡ್ರಾಯ್ಡ್‌ ಮಾದರಿಯ ಬಳಕೆದಾರರಿಗೆ ಅನ್ವಯವಾಗುವುದಿಲ್ಲ. ಆಂಡ್ರಾಯ್ಡ್‌ ಓಎಸ್‌ನಲ್ಲಿ ಬದಲಾವಣೆ ಇರುವುದಿಲ್ಲ ಮತ್ತು ವೈಯಕ್ತಿಕ ಮತ್ತು ಗ್ರೂಪ್‌ ಪ್ರೊಫೈಲ್‌ ಫೋಟೊಗಳನ್ನು ಗ್ಯಾಲರಿಗೆ ಸೇವ್‌ ಮಾಡಬಹುದು.
ಕಾರಣ ಏನು? ಐಓಎಸ್‌ ಬಳಕೆದಾರರಿಗೆ ಮಾತ್ರ ವಾಟ್ಸಪ್‌ನಲ್ಲಿ ಇತರರ ವೈಯಕ್ತಿಕ ಖಾತೆಗಳ ಪ್ರೊಫೈಲ್‌ ಫೋಟೊ ಸೇವ್‌ ಮಾಡುವ ಆಯ್ಕೆಗೆ ಕೊಕ್ಕ ನೀಡುವುದಕ್ಕೆ ನಿಖರ ಕಾರಣವೇನು ಎಂಬುದನ್ನು ಅಧಿಕೃತವಾಗಿ ವ್ಯಕ್ತಪಡಿಸಿಲ್ಲ. ಆದರೆ ಐಓಎಸ್‌ನಲ್ಲಿ ಗ್ರೂಪ್‌ಗಳ ಪ್ರೊಫೈಲ್‌ ಫೋಟೊಗಳನ್ನು ಸೇವ್‌ ಮಾಡಬಹುದಾಗಿದೆ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ