ಸುದ್ದಿ

ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ ನಗರ ಸಭೆ ಸಂಸ್ಥೆಗಳಿಗೆ 40 ಕೋಟಿ ರೂ. ಬಿಡುಗಡೆ…!

95

ರಾಜ್ಯದ ಬರಪೀಡಿತ ತಾಲೂಕುಗಳ ವ್ಯಾಪ್ತಿಯಲ್ಲಿ ಬರುವ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ 40 ಕೋಟಿ ರೂ. ಅನುದಾನ ಬಿಡುಗಡೆ ಮಾಡಲು ನಗರಾಭಿವೃದ್ಧಿ ಇಲಾಖೆ ಆದೇಶಿಸಿದೆ.

ನಗರ ಸ್ಥಳೀಯ ಸಂಸ್ಥೆಗಳು, ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ಟಾಸ್ಕ್ ಪೋರ್ಸ್ ರಚಿಸಲಾಗಿದ್ದು, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಅವಶ್ಯವಿರುವ ಕಾಮಗಾರಿಗಳ ಕ್ರಿಯಾ ಯೋಜನೆಯನ್ನು ತಯಾರಿಸಿ, ಜಿಲ್ಲಾಧಿಕಾರಿಗಳಿಂದ ಅನುಮೋದನೆ ಪಡೆದು ತುರ್ತಾಗಿ ಅನುಷ್ಠಾನಗೊಳಿಸಬೇಕು. ಬಿಡುಗಡೆ ಮಾಡಿರುವ ಅನುದಾನದಡಿ ಕೊಳವೆ ಬಾವಿಗಳನ್ನು ಆಳಗೊಳಿಸುವ, ಸ್ವಚ್ಛಗೊಳಿಸುವುದು ಹಾಗೂ ಹೈಡ್ರೋಫ್ರಾಕ್ಚರಿಂಗ್ ಕೈಗೊಳ್ಳುವುದು. ನೀರು ಸರಬರಾಜು ಪೈಪುಗಳ ದುರಸ್ಥಿ-ಬದಲಾವಣೆ ಕಾಮಗಾರಿಗಳು ಮತ್ತು ಅತ್ಯವಶ್ಯಕತೆಯಿದ್ದಲ್ಲಿ ಹೊಸ ಕೊಳವೆ ಬಾವಿಗಳನ್ನು ಕೊರೆಯಲು ಹಾಗೂ ಪಂಪು ಮೋಟಾರ್ ಅಳವಡಿಸುವ ಕಾಮಗಾರಿಗಳನ್ನು ಮಾತ್ರ ಈ ಅನುದಾನದಡಿ ಕೈಗೆತ್ತಿಕೊಳ್ಳಲು ಹಾಗೂ ಅನುಮೋದನೆ ನೀಡಿರುವ ಅನುದಾನವನ್ನು ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವ ಉದ್ದೇಶಗಳಿಗೆ ಬಳಸಬಹುದಾಗಿದೆ.

ಇತರೆ ನಗರ ಸ್ಥಳೀಯ ಸಂಸ್ಥೆಗಳು ಕುಡಿಯುವ ನೀರು ಕಾಮಗಾರಿಗಳಿಗೆ ಅವಶ್ಯಕವಿರುವ ಪಂಪು, ಮೋಟಾರ್, ಪೈಪ್ಲೈನ್ ಮತ್ತು ಇತರೆ ಸಲಕರಣೆಗಳ ಸಂಗ್ರಹಣೆಯನ್ನು ನಿಯಮಾನುಸಾರ ಕೆಟಿಪಿಪಿ ಕಾಯಿದೆ 1999 ಮತ್ತು ನಿಯಮಗಳು 2000 ‍ರನ್ವಯ ಇ-ಪ್ರಕ್ಯೂರ್ ಮೆಂಟ್ ಪೋರ್ಟಲ್ ಮೂಲಕ ಕೈಗೆತ್ತಿಕೊಳ್ಳುವಂತೆ ಸರ್ಕಾರ ಆದೇಶಿಸಿದೆ.

40 ಕೋಟಿ ರೂ. ಬಿಡುಗಡೆ ಮಾಡಲಾದ ಅನುದಾನವನ್ನು ಜಿಲ್ಲಾಧಿಕಾರಿಗಳು ತಮ್ಮ ಖಾತೆಯಲ್ಲಿ ಅನವಶ್ಯಕವಾಗಿ ಜಮಾಗೊಳಿಸಬಾರದು. ಖಜಾನೆಯಿಂದ ಹಣ ಪಡೆದು ಸಂಬಂಧಪಟ್ಟ ನಗರ ಸ್ಥಳೀಯ ಸಂಸ್ಥೆಗಳಿಗೆ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ ಆದ್ಯತೆ ಮೇರೆಗೆ ಬಳಸಬೇಕು. ಹಾಗೂ ಅನುದಾನ ಬಳಕೆ ಸಂಬಂಧ ಪೌರಾಡಳಿತ ನಿರ್ದೇಶನಾಲಯ ನಿರ್ದೇಶಕರು ಬಳಕೆ ಪ್ರಮಾಣ ಪತ್ರವನ್ನು ಸರ್ಕಾರಕ್ಕೆ ಸಲ್ಲಿಸಿ, ಅನುದಾನ ಬಳಕೆ ಬಗ್ಗೆ ಖಚಿತಪಡಿಸಬೇಕು ಎಂದು ಆದೇಶಪತ್ರದಲ್ಲಿ ಸ್ಪಷ್ಟಪಡಿಸಲಾಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಈ ಜಾಗದಲ್ಲಿ 5 ತುಳಸಿ ಎಲೆಯನ್ನು ಇಟ್ಟರೆ ಸಾಕು ನಿಮ್ಮ ಎಲ್ಲಾ ಕಷ್ಟಗಳು ನಿವಾರಣೆ ಆಗುತ್ತದೆ,.!

    ಈ ಲೋಕದಲ್ಲಿ  ಕಷ್ಟವಿಲ್ಲದೇ ಬದುಕುವ  ಮನುಷ್ಯನನ್ನ  ಎಲ್ಲಿಯೂ ಸಹ  ಕಾಣಲು  ಸಾಧ್ಯವಾಗುವುದಿಲ್ಲ ಯಾಕೆಂದರೆ ಪ್ರತಿಯೊಬ್ಬರಿಗೂ ಕೂಡ ಜೀವನದಲ್ಲಿ ತಮ್ಮದೇ ಆದ ನೂರಾರು ಕಷ್ಟ ಇದ್ದೆ ಇರುತ್ತದೆ.  ಹಾಗೆಯೇ  ಸ್ನೇಹಿತರೆ ನಮಗೆ ಕಷ್ಟಗಳು ಬಂದಾಗ ಯಾವುದೇ ಕಾರಣಕ್ಕೂ ತಲೆ ಮೇಲೆ ಕೈಹಾಕಿ ಕುಳಿತುಕೊಳ್ಳಬಾರದು  ಅದಕ್ಕೊಂದು  ಪರಿಹಾರ ಇದ್ದೇ ಇರುತ್ತದೆ ನಾವು ಪರಿಹಾರವನ್ನು ಉಡುಕಬೇಕು ಆಗ ನಮ್ಮ ಕಷ್ಟಕ್ಕೆ ಪರಿಹಾರ ಸಿಗುತ್ತದೆ. ಹಾಗೆಯೇ ನಾನೊಂದು ಸಲಹೆ ಕೊಡಲು ಇಷ್ಟ  ಪಡುತ್ತೇನೆ  ಕಷ್ಟದ ದಿನಗಳು ಬಂದಾಗ ನಮ್ಮ ಮನಸ್ಸು ದೃಢವಾಗಿರಬೇಕು ಮತ್ತು…

  • ಸುದ್ದಿ

    ಇವತ್ತಿಗೆ ನನಸಾಯ್ತು ನನ್ನ 30 ವರ್ಷಗಳ ಅರಣ್ಯದ ಕನಸು – ಸದಾಶಿವ ಮರಿಕೆ,.!

    ಒಂದಿಂಚು ಜಾಗ ಇದ್ದರೆ ಅದರಲ್ಲಿ ಲಾಭ ಪಡೆಯಬೇಕೆನ್ನುವವರೇ ಹೆಚ್ಚು. ಅದರಲ್ಲೂ ಪಿತ್ರಾರ್ಜಿತ ಆಸ್ತಿ ಸಿಕ್ಕಿದರೆ ಅದನ್ನು ತಿಂದು ಮುಗಿಸೋದು ಹೇಗೆ ಅನ್ನೋದನ್ನೇ ಕಾಯುತ್ತಿರುವ ಜನ ಇರೋ ಕಾಲ ಇದು. ಆದರೆ ಇಲ್ಲೊಬ್ಬರು ತಮ್ಮ ಎಕರೆಗಟ್ಟಲೆ ಜಾಗವನ್ನು ಪರಿಸರಕ್ಕಾಗಿಯೇ ಅರ್ಪಣೆಗೈದಿದ್ದಾರೆ. ಅರಣ್ಯ ಇಲಾಖೆ, ಸರ್ಕಾರವನ್ನು ನಾಚಿಸುವಂತೆ ಎಕರೆಗಟ್ಟಲೆ ತಮ್ಮ ಸ್ವಂತ ಜಾಗದಲ್ಲಿ ದಟ್ಟ ಅರಣ್ಯವನ್ನು ಬೆಳೆಸಿದ್ದಾರೆ. ಇಂತಹ ಅಪರೂಪದ ಪರಿಸರ ಪ್ರೇಮಿ ಪುತ್ತೂರು ತಾಲೂಕಿನ ಸಂಟ್ಯಾರು ನಿವಾಸಿ ಪ್ರಗತಿಪರ ಕೃಷಿಕ ಸದಾಶಿವ ಮರಿಕೆ ನಮ್ಮ ಪಬ್ಲಿಕ್ ಹೀರೋ. ಪರಿಸರದ…

  • ಸುದ್ದಿ

    ಮಳೆರಾಯನ ಅಬ್ಬರಕ್ಕೆ ತುಂಬಿದ ನದಿಗಳು,ವಾಹನ ಸವಾರರು ಭೋರ್ಗರೆದು ಹರಿಯುತ್ತಿರುವ ನೀರಿನ ಮಧ್ಯೆಯೇ ದುಸ್ಸಾಹಸ ಮಾಡುತ್ತಿದ್ದಾರೆ…!

    ಬೆಳಗಾವಿ, ಚಿಕ್ಕೋಡಿ, ರಾಯಚೂರಿನಲ್ಲಿ ಮಳೆರಾಯ ಅಬ್ಬರಿಸುತ್ತಿದ್ದು ಕೃಷ್ಣಾ ನದಿ ವ್ಯಾಪ್ತಿಯಲ್ಲಿರುವ ಬರುವ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ರಸ್ತೆಗಳು ಜಲಾವೃತವಾಗಿದ್ದು, ಕಾರು ಬೈಕ್‍ಗಳು ಆಟಿಕೆಯಂತಾಗಿವೆ, ಆದರೂ ಕೂಡ ವಾಹನ ಸವಾರರು ಮಾತ್ರ ಭೋರ್ಗರೆದು ಹರಿಯುತ್ತಿರುವ ನೀರಿನ ಮಧ್ಯೆಯೇ ದುಸ್ಸಾಹಸ ಮಾಡುತ್ತಿದ್ದಾರೆ. ಬೆಳಗಾವಿಯ ದೆಸೂರು-ಖಾನಾಪೂರ ಮಧ್ಯೆ ಇರುವ ಕೊಳ್ಳ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ನೀರು ತುಂಬಿ ಹರಿಯುತ್ತಿದ್ದರೂ ಕೂಡ ವಾಹನ ಸವಾರರು ದುಸ್ಸಾಹಸಕ್ಕೆ ಕೈ ಹಾಕಿದ್ದಾರೆ. ವೇಗದಿಂದ ಹರಿಯುತ್ತಿರುವ ನೀರನ್ನೇ ಲೆಕ್ಕಿಸದೇ ವಾಹನ ಸವಾರರು ಕೊಳ್ಳ ದಾಟುತ್ತಿದ್ದಾರೆ. ಸ್ಥಳದಲ್ಲಿ…

  • ಸುದ್ದಿ

    ಕನ್ನಡಿಗರಿಗೆ ಹೆಚ್ಚು ಉದ್ಯೋಗ ಆದ್ಯತೆ ಸಿಎಂ ಯಡಿಯೂರಪ್ಪ ಭರವಸೆ…!

    ಇಂಗ್ಲಿಷ್ ಸಂಬಳಕ್ಕಾದರೆ, ಕನ್ನಡ ಉಂಬಳಕ್ಕೆ ಎಂಬ ಮಾತು ನಾಡಿನಲ್ಲಿ ಪ್ರಚಲಿತದಲ್ಲಿದೆ. ಆದರೆ, ಕನ್ನಡ ನಮ್ಮ ಸಂಬಳ ಹಾಗೂ ಉಂಬಳ ಎರಡಕ್ಕೂ ಆಗಬೇಕು. ಈ ದಿಸೆಯಲ್ಲಿ ಸರ್ಕಾರ ಕಾರ್ಯೋನ್ಮುಖವಾಗಿದ್ದು, ಕನ್ನಡಿಗರಿಗೆ ಹೆಚ್ಚಿನ ಉದ್ಯೋಗ ದೊರಕಿಸಿಕೊಡುವ ದಿಸೆಯಲ್ಲಿ ಪ್ರಯತ್ನ ನಡೆಸಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಶುಕ್ರವಾರ ಆಯೋಜಿಸಿದ್ದ ಸಮಾರಂಭದಲ್ಲಿ ಎರಡು ಸಂಸ್ಥೆಗಳು ಸೇರಿ ವಿವಿಧ ಕ್ಷೇತ್ರಗಳ ಸಾಧಕರಿಗೆ ೨೦೧೯ನೇ ಸಾಲಿನ ‘ರಾಜ್ಯೋತ್ಸವ ಪ್ರಶಸ್ತಿ’ ಪ್ರದಾನ ಮಾಡಿ. ಮಾತನಾಡಿದ…

  • ಜ್ಯೋತಿಷ್ಯ

    ದಿನ ಭವಿಷ್ಯ ಮಂಗಳವಾರ, ಈ ದಿನದ ಭವಿಷ್ಯದ ಜೊತೆಗೆ ನಿಮ್ಮ ಅದೃಷ್ಟದ ಸಂಖ್ಯೆ ತಿಳಿಯಿರಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಿಕ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಹಾಗೂ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 9663218892 ಮೇಷ 29 ಜನವರಿ, 2019 ಮನೆಯಲ್ಲಿನ ಕೆಲವು ಬದಲಾವಣೆಗಳು ನಿಮ್ಮನ್ನು ಭಾವುಕರನ್ನಾಗಿಸಬಹುದು- ಆದರೆ ನಿಮಗೆ ಮುಖ್ಯವಾದವರಿಗೆ ನೀವು ನಿಮ್ಮ ಭಾವನೆಗಳನ್ನು ಪರಿಣಾಮಕಾರಿಯಾಗಿ…