ಟೀಂ ಇಂಡಿಯಾ ಮಹಿಳಾ ತಂಡದ ಸ್ಟಾರ್ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಸದ್ಯದಲ್ಲೇ ಹಸೆಮಣೆ ಏರುತ್ತಿದ್ದಾರೆ.ಈ ವಿಚಾರವನ್ನು ಸ್ವತಃ ವೇದಾ ಅವರೇ ರಿವೀಲ್ ಮಾಡಿದ್ದಾರೆ.
ಕನ್ನಡ ನಾಡಿನ ವೇದಾ ಮೂಲತಃ ಚಿಕ್ಕಮಗಳೂರು ಜಿಲ್ಲೆ ಕಡೂರಿನವರಾಗಿದ್ದು ತಾವು ವಿವಾಹವಾಗುತ್ತಿರುವ ಲಲಿತ್ ಚೌಧರಿ ಎಂಬ ಯುವಕನ ಫೋಟೋವನ್ನು ಪೋಸ್ಟ್ ಮಾಡಿದ್ದರು. ವೇದಾ ಅವ್ರ ಪೋಸ್ಟ್ ಅನುಸಾರ ಅವರು ಲಲಿತ್ ಚೌಧರಿ ಎಂಬ ಯುವಕನನ್ನು ವರಿಸಲಿದ್ದಾರೆ. ಆದರೆ ಆ ಯುವಕನ ಕುರಿತಂತೆಯಾಗಲಿ, ವಿವಾಹದ ದಿನಾಂಕ ಸ್ಥಳದ ಮಾಹಿತಿಯಾಗಲಿ ಇನ್ನೂ ಲಭ್ಯವಾಗಿಲ್ಲ.
ಶೀಘ್ರವೇ ಈ ಕುರಿತ ಅಧಿಕೃತ ಮಾಹಿತಿ ಲಭ್ಯವಾಗುವ ನಿರೀಕ್ಷೆ ಇದೆ ಎಂದು ಹೇಳಿದ್ದರು. ವೇದಾ ಅವರ ಪೋಸ್ಟ್ ಕಂಡ ಹಲವು ಅಭಿಮಾನಿಗಳು ಶುಭಕೋರಿ ಕಾಮೆಂಟ್ ಮಾಡಿದ್ದಾರೆ.
26 ವರ್ಷದ ವೇದಾ ಕೃಷ್ಣಮೂರ್ತಿ ಟೀಂ ಇಂಡಿಯಾ ಪರ 48 ಏಕದಿನ ಪಂದ್ಯಗಳನ್ನು ಆಡಿದ್ದು, 8 ಅರ್ಧ ಶತಕಗಳೊಂದಿಗೆ 829 ರನ್ ಗಳಿಸಿದ್ದಾರೆ. ಟಿ20 ಮಾದರಿಯಲ್ಲಿ 59 ಪಂದ್ಯಗಳನ್ನು ಆಡಿದ್ದು, ಅರ್ಧ ಶತಕದೊಂದಿಗೆ 686 ರನ್ ಗಳಿಸಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ಚೊಚ್ಚಲ ಮಹಿಳಾ ಐಪಿಎಲ್ ತಂಡದಲ್ಲಿ ಭಾಗವಹಿಸುತ್ತಿರುವ ವೇದಾ ,ಮೇ6ರಿಂದ 11ರವರೆಗೆ ಜೈಪುರದಲ್ಲಿ ನಡೆಯಲಿರುವ ಕ್ರಿಕೆಟ್ ಸರಣಿಯಲ್ಲಿ ಮಿಥಾಲಿ ರಾಜ್ ನಾಯಕತ್ವದ ವೆಲಾಸಿಟಿ ತಂಡದ ಪರ ಆಡಲಿದ್ದಾರೆ.
ಕೋಲಾರ ನಗರದ ಪ್ರಧಾನ ಅಂಚೆ ಕಚೇರಿಯಲಿ ಶನಿವಾರ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಕೋಲಾರ ಜಿಲ್ಲೆಯ ಟೊಮೇಟೋ ಕುರಿತು ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. ಇತ್ತೀಚಿನ ದಿನಗಳಲ್ಲಿ ಟೊಮೇಟೋ ಕೋಲಾರ ಜಿಲ್ಲೆಯ ಪ್ರಧಾನ ತೋಟಗಾರಿಕೆ ಬೆಳೆಯಾಗಿ ಹೊರ ಹೊಮ್ಮಿದೆ. ರೈತರು ವರ್ಷದ ೩೬೫ ದಿನವೂ ಟೊಮೇಟೋವನ್ನು ಬೆಳೆಯುತ್ತಿದ್ದಾರೆ. ಕೋಲಾರದ ಎಪಿಎಂಸಿ ಮಾರುಕಟ್ಟೆಯೂ ಏಷ್ಯಾದ ಎರಡನೇ ಅತಿ ದೊಡ್ಡ ಟೊಮೇಟೋ ಮಾರುಕಟ್ಟೆಯಾಗಿ ಪ್ರಸಿದ್ಧಿ ಪಡೆದಿದೆ. ಈ ಹಿನ್ನೆಲೆಯಲ್ಲಿ ಟೊಮೇಟೋ ಬೆಳೆಯನ್ನು ಕೋಲಾರದ ಒಂದು ಜಿಲ್ಲೆ ಒಂದು…
ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸುಮಲತಾ ಅಂಬರೀಶ್ ಅವರಿಗೆ ನಟರಾದ ದರ್ಶನ್ ಮತ್ತು ಯಶ್ ಸಾಥ್ ನೀಡಿದ್ದಾರೆ. ರಾಜ್ಯದ ಹೈ ವೋಲ್ಟೇಜ್ ಕ್ಷೇತ್ರವಾಗಿರುವ ಮಂಡ್ಯದಲ್ಲಿ ಸುಮಲತಾ ಅಂಬರೀಶ್ ನಾಮಪತ್ರ ಸಲ್ಲಿಕೆಯ ವೇಳೆ ಜನಸಾಗರವೇ ಹರಿದು ಬಂದಿದ್ದು, ಶಕ್ತಿ ಪ್ರದರ್ಶನದ ಮೂಲಕ ಸುಮಲತಾ ಚುನಾವಣಾ ರಣಕಹಳೆ ಮೊಳಗಿಸಿದ್ದಾರೆ. ನಾಮಪತ್ರ ಸಲ್ಲಿಕೆ ಬಳಿಕ ನಡೆದ ಸಮಾವೇಶದಲ್ಲಿ ಮಾತನಾಡಿದ ದರ್ಶನ್, ನಾನು ಇಲ್ಲಿ ನಿಂತಿದ್ದಕ್ಕೆ ಹಳೆ ಮ್ಯಾಟರ್ ಓಪನ್ ಆಗುತ್ತಿದೆ. ಅದಕ್ಕೆಲ್ಲ ತಲೆಕೆಡಿಸಿಕೊಳ್ಳಲ್ಲ, ಅದೂ ಆಗಲಿ, ಅದರಿಂದ ಖುಷಿ,…
ತಲೆಹೊಟ್ಟು ಎಲ್ಲ ರೀತಿಯ ವಯೋಮಾನದವರನ್ನು ಕಾಡುವ ಸಮಸ್ಯೆ. ಮಾರುಕಟ್ಟೆಯಲ್ಲಿ ಸಿಗುವ ಯಾವೆಲ್ಲ ಎಣ್ಣೆ ಹಾಗೂ ಶ್ಯಾಂಪೂ ಗಳನ್ನು ಪ್ರಯೋಗ ಮಾಡಿದ್ರೂ ತಲೆಹೊಟ್ಟು ಹೋಗ್ತಾಯಿಲ್ಲ ಎನ್ನುವವರಿದ್ದಾರೆ
ಇಂದು ಭಾರತ ಕಂಡ ಅದ್ಭುತ ವಿಜ್ಞಾನಿ, ಪೀಪಲ್ಸ್ ಪ್ರೆಸಿಡೆಂಟ್, ಮಿಸೈಲ್ ಮ್ಯಾನ್ ಎಪಿಜೆ ಅಬ್ದುಲ್ ಕಲಾಂ ಅವರ 88 ವರ್ಷದ ಹುಟ್ಟುಹಬ್ಬ. ಈ ದಿನವನ್ನು ವಿಶ್ವ ವಿದ್ಯಾರ್ಥಿಗಳ ದಿನವೆಂದು ಆಚರಿಸಲಾಗುತ್ತದೆ.ದೇಶ ಕಂಡ ಪ್ರೀತಿಯ ಮಾಜಿ ರಾಷ್ಟ್ರಪತಿಗಳಿಗೆ ಪ್ರಧಾನಿ ಮೋದಿ ನಮಿಸಿದ್ದಾರೆ. ಕಲಾಂರನ್ನು ನೆನೆದು ವಿಡಿಯೋ ಶೇರ್ ಮಾಡಿ, ನೀವು ಎಂದಿಗೂ ನಮಗೆ ಪ್ರೇರಣೆ ಎಂದು ಗೌರವ ಸಲ್ಲಿಸಿದ್ದಾರೆ. ಡಾ.ಎಪಿಜೆ ಅಬ್ದುಲ್ ಕಲಾಂ ಅವರ ಜನ್ಮದಿನದಂದು ಅವರಿಗೆ ವಿನಮ್ರ ಶೃದ್ಧಾಂಜಲಿ ಮಾಡಿದದ್ದರೆ. ಅವರು ಸಮರ್ಥ ಮತ್ತು ಸಮೃದ್ಧ ಭಾರತದ…
ಹೊಸ ವರ್ಷದ ಆಗಮನಕ್ಕೆ ಒಂದೇ ದಿನ ಬಾಕಿಯಿದೆ. ಹೊಸ ವರ್ಷ ಈ ವರ್ಷಕ್ಕಿಂತ ಹೆಚ್ಚು ಖುಷಿ, ಯಶಸ್ಸು ತರಲಿ ಎಂದು ಪ್ರತಿಯೊಬ್ಬರೂ ಬಯಸ್ತಾರೆ. ಹೊಸ ವರ್ಷ ಸುಖ, ಸಂತೋಷ, ಸಮೃದ್ಧಿಯಿಂದ ಕೂಡಿರಬೇಕೆಂದ್ರೆ ಕೆಲವೊಂದು ಉಪಾಯಗಳನ್ನು ಅನುಸರಿಸಬೇಕಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಹೊಸ ವರ್ಷ ಸುಖ, ಸಂತೋಷದಿಂದ ಕೂಡಿರಬೇಕು ಎಂದಾದ್ರೆ ಹೊಸ ವರ್ಷದ ಮೊದಲ ದಿನ ಅಂದ್ರೆ ಜನವರಿ ಒಂದರಂದು ತಾಮ್ರದ ಲೋಟದಲ್ಲಿ ನೀರನ್ನು ಹಾಕಿ, ಅದಕ್ಕೆ ಕೇಸರಿ ಹಾಕಿ ಶಿವಲಿಂಗಕ್ಕೆ ಅರ್ಪಿಸಿ. ಜಲ ಅರ್ಪಿಸುವ ವೇಳೆ ಓಂ…
ಬೆಳಿಗ್ಗೆ ಚೆನ್ನಾಗಿದ್ದರೆ ಇಡೀ ದಿನ ಚೆನ್ನಾಗಿರುತ್ತೆ ಎಂಬ ಮಾತಿದೆ. ಇದು ನೂರಕ್ಕೆ ನೂರು ಸತ್ಯ. ಬೆಳಿಗ್ಗೆ ನಮ್ಮ ಮೂಡ್ ಹಾಳಾದ್ರೆ ಇಡೀ ದಿನ ಮನಸ್ಸು ಅಶಾಂತವಾಗಿರುತ್ತೆ. ಹಾಗಾಗಿ ಬೆಳಿಗ್ಗೆ ಎದ್ದ ತಕ್ಷಣ ಏನು ಮಾಡಬೇಕು ಅನ್ನೋದನ್ನು ವಾಸ್ತು ಶಾಸ್ತ್ರದಲ್ಲಿ ವಿಸ್ತಾರವಾಗಿ ಹೇಳಲಾಗಿದೆ. ಬೆಳಿಗ್ಗೆ ಎದ್ದ ತಕ್ಷಣ ಏನು ಮಾಡಬೇಕು, ಬೆಳಿಗ್ಗೆ ತಕ್ಷಣ ಏನು ಮಾಡಬಾರದು ಎಂಬುದನ್ನು ಹೇಳಲಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ ಬೆಳಗ್ಗೆ ಎದ್ದ ತಕ್ಷಣ ಕನ್ನಡಿಯನ್ನು ಮಾತ್ರ ನೋಡಬೇಡಿ. ಬೆಳಿಗ್ಗೆ ಎದ್ದ ತಕ್ಷಣ ಕನ್ನಡಿ ನೋಡೋದು…
ನಾನು ಜೆಡಿಎಸ್ ಕಳ್ಳರ ಪಕ್ಷ ಅಂತಾ ಹೇಳಿದ್ದೇನೆ ಎಂದು ನನ್ನ ಮೇಲೆ ಒಬ್ಬರು ಆರೋಪ ಮಾಡಿದ್ದಾರೆ. ನಾನು ತುಂಬಾ ನಂಬೋದು ಧರ್ಮಸ್ಥಳದ ಮಂಜುನಾಥ ಸ್ವಾಮಿ. ಆ ಮಂಜುನಾಥ ಸ್ವಾಮಿ ಮೇಲೆ ಆಣೆ ಮಾಡುತ್ತೇನೆ. ಒಂದು ವೇಳೆ ನಾನು ಕಳ್ಳರ ಪಕ್ಷ ಅಂತಾ ಹೇಳಿದ್ದರೆ ಅವ್ರು ಹೇಳಿದ್ದನ್ನ ಕೇಳುತ್ತೇನೆ. ಒಂದು ವೇಳೆ ಹಾಗೆ ಹೇಳಿದ್ದು ಸತ್ಯವಾಗಿದ್ದರೆ ನಾನು ಮಂಡ್ಯ ಅಲ್ಲ, ಸಿನಿಮಾ ಇಂಡಸ್ಟ್ರಿ ಅಲ್ಲ, ಕರ್ನಾಟಕವನ್ನೇ ಬಿಟ್ಟು ಹೋಗುತ್ತೇನೆ. ರಾಜ್ಯ ಬಿಡ್ತೀನಿ ಅಂತಾ ಸುಮ್ಮನೇ ಹೇಳುತ್ತಿಲ್ಲ. ಹಾಗೆ ಹೇಳಿ…