ಸುದ್ದಿ

ಬೆಂಗಳೂರಲ್ಲಿ ಬಿದ್ದ ಮಳೆಗೆ, ಬಿದ್ದಿದ್ದು ಬರೋಬ್ಬರಿ 83 ಮರಗಳು…!

56

ಬೆಂಗಳೂರು, ಜೂನ್ 7: ಬೆಂಗಳೂರಿನಲ್ಲಿ ಗುರುವಾರ ರಾತ್ರಿ ಸುರಿದ ಅರ್ಧಗಂಟೆ ಮಳೆಗೆ ವಿವಿಧೆಡೆ ಒಟ್ಟು 83 ಮರಗಳು ಧರೆಗುರುಳಿವೆ. ರಾಜರಾಜೇಶ್ವರಿನಗರ ಹಾಗೂ ಬಸವನಗುಡಿಯಲ್ಲಿ ಅತಿ ಹೆಚ್ಚು ಮರಗಳು ಬಿದ್ದಿದೆ ಅತಿ ಹೆಚ್ಚು ಹಾನಿಯೂ ಉಂಟಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಎಲ್ಲಿ ನೋಡಿದರೂ ಮರ ಉರುಳಿರುವುದು, ಟ್ರಾನ್ಸ್‌ಫಾರ್ಮರ್ ವಾಹನಗಳ ಮೇಲೆ ಬಿದ್ದಿರುವುದು, ವಿದ್ಯುತ್ ಕಂಬಗಳು ಧರೆಗುರಳಿರುವುದು, ಟ್ರಾಫಿಕ್ ಜಾಮ್ ನೋಡಿ ಅರ್ಧ ಗಂಟೆ ಮಳೆ ಎಷ್ಟೊಂದು ಅವಾಂತರವನ್ನು ಸೃಷ್ಟಿಸಿದೆ. ಬಸವನಗಗುಡಿ, ಕೆಂಗೇರಿ, ರಾಜರಾಜೇಶ್ವರಿನಗರ, ಗಿರಿನಗರ ಪ್ರದೇಶದಲ್ಲಿ ಅತಿ ಹೆಚ್ಚು ಅನಾಹುತವಾಗಿದೆ. ರಾತ್ರಿ 1 ಗಂಟೆಗೆ ದೂರು ನೀಡಿದರೂ ಸ್ಪಂದಿಸಿದ ಬೆಸ್ಕಾಂ ಹೊಸಕೆರೆಹಳ್ಳಿಯಲ್ಲಿ ಕಳೆದ ಎರಡು ಗಂಟೆಯಿಂದ ವಿದ್ಯುತ್ ಇಲ್ಲ ಎಂದು ರಾತ್ರಿ 1 ಗಂಟೆಗೆ ಟ್ವಿಟ್ಟರ್ ಮೂಲಕ ದೂರು ನೀಡಿದರೂ ಕೂಡ ಆಗಲೇ ಸ್ಪಂದಿಸಿದ್ದಾರೆ. ದಿನದ 24 ಗಂಟೆಯೂ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ರಾತ್ರಿಇಡೀ ಕಾರ್ಯ ನಿರ್ವಹಿಸಿದ ಬೆಸ್ಕಾಂ ಸಿಬ್ಬಂದಿಗಳು ಬಸವನಗುಡಿ, ರಾಜರಾಜೇಶ್ವರಿನಗರ ಸೇರಿದಂತೆ ಹಲವು ಕಡೆಗಳಲ್ಲಿ ಸೇರಿ ಒಟ್ಟು 83 ಮರಗಳು ಧರೆಗುರುಳಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಮಳೆ ಸ್ವಲ್ಪ ಕಡಿಮೆಯಾದ ಬಳಿಕ ಗ್ರಾಹಕರ ದೂರು ಆಲಿಸಿ ಬಂದ ಬೆಸ್ಕಾಂ ಸಿಬ್ಬಂದಿಗಳು ಬೆಳಗ್ಗೆಯವರೆಗೂ ಕಾರ್ಯ ನಿರ್ವಹಿಸಿದ್ದಾರೆ. ರಾತ್ರಿ 1 , 2 ಗಂಟೆ ಸಮಯದಲ್ಲೂ ಕೂಡ ಮರಗಳನ್ನು ಕಡಿದು, ವಿದ್ಯುತ್ ತಂತಿಗಳನ್ನು ಸರಿಪಡಿಸುವ ಕಾರ್ಯದಲ್ಲಿ ತೊಡಗಿದ್ದರು. ಬೆಂಗಳೂರು ಜನತೆ ಇವರಿಗೆ ಧನ್ಯವಾದ ಹೇಳಲೇ ಬೇಕು.

ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಿಬ್ಬಂದಿಗಳಿಗೆ ಪೀಕಲಾಟ ಮುಂಗಾರು ಆರಂಭವಾಗುವ ಮೊದಲೇ ಇಡೀ ಬೆಂಗಳೂರು ಸಮೀಕ್ಷೆ ನಡೆಸಿ, ವಿದ್ಯುತ್ ತಂತಿಗಳ ಸಮೀಪ ಇರುವ ಬೀಳುವ ಹಂತದಲ್ಲಿರುವ ಮರದ ರೆಂಬೆಗಳನ್ನು ಕತ್ತರಿಸುವುದು, ಅಥವಾ ಹಳೆಯ ಮರಗಳನ್ನು ಕತ್ತರಿಸುವ ಕೆಲಸವನ್ನು ಬಿಬಿಎಂಪಿ ಹಾಗೂ ಬೆಸ್ಕಾಂ ಸೇರಿ ಮಾಡಬೇಕಿತ್ತು. ಇದೀಗ ಮಳೆ ಬಂದ ನಂತರ ಅನಾಹುತ ಸಂಭವಿಸಿದ ಮೇಲೆ ಬೆಸ್ಕಾಂ ಸಿಬ್ಬಂದಿಗಳಿಗೆ ಇದು ತಲೆನೋವು, ಅಧಿಕಾರಿಗಳು ನಿರ್ಲಕ್ಷ್ಯಕ್ಕೆ ಲೈನ್‌ಮೆನ್‌ಗಳು ದಂಡ ತೆರವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ರಾಜರಾಜೇಶ್ವರಿನಗರದ ಸ್ಥಿತಿ ನೋಡಿ ಹೇಗಿದೆ? ರಾಜರಾಜೇಶ್ವರಿನಗರದಲ್ಲಿ ಅತಿ ಹೆಚ್ಚು ಅವಾಂತರವಾಗಿದೆ, ಇಡೀ ರಸ್ತೆಯ ತುಂಬೆಲ್ಲಾ ವಿದ್ಯುತ್ ಕಂಬಗಳು, ಮರಗಳು, ವಿದ್ಯುತ್ ತಂತಿಗಳೇ ಕಾಣಿಸುತ್ತಿವೆ, ಇವುಗಳನ್ನು ಸರಿಪಡಿಸಲು ಬೆಸ್ಕಾಂ ಸಿಬ್ಬಂದಿ ಹರಸಾಹಸಪಡುತ್ತಿದ್ದಾರೆ.

About the author / 

admin

Categories

Date wise

  • ರಾಜ್ಯದಲ್ಲಿ ಟಫ್ ರೂಲ್ಸ್ ಮತ್ತೆ ಜಾರಿ

    ರಾಜ್ಯ ಸರ್ಕಾರವು ಇಂದಿನಿಂದ ನೈಟ್ ಕರ್ಫ್ಯೂ & ವಾರಾಂತ್ಯದ ಕರ್ಫ್ಯೂ ಜಾರಿ ಮಾಡಲು ನಿರ್ಧರಿಸಲಾಗಿದೆ.ಈಗಾಗಲೇ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ ಮುಂದಿನ 2ವಾರಗಳ ಕಾಲ ಮುಂದುವರಿಸಲು ನಿರ್ಧರಿಸಲಾಗಿದೆ ರಾತ್ರಿ 10ರಿಂದ ಬೆಳಿಗ್ಗೆ 5 ರವರೆಗೆ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ.ವಾರಾಂತ್ಯದ ಕರ್ಫ್ಯೂವನ್ನು ದಿನಾಂಕ 7ರಿಂದ ಶುಕ್ರವಾರ ರಾತ್ರಿ 10 ಗಂಟೆಯಿಂದ 10 ರ ಸೋಮವಾರ ಬೆಳಿಗ್ಗೆ 5 ರವರೆಗೆ ಜಾರಿ ಮಾಡಲಾಗಿದೆ   ಸರ್ಕಾರಿ ಕಚೇರಿಗಳು ಮಾಲ್​ಗಳಿಗೆ ಭಾರತ ಸರ್ಕಾರದ ಮಾರ್ಗಸೂಚಿ ಅನುಸರಿಸಲಾಗುವುದು. * ಚಿತ್ರಮಂದಿರ, ಮಾಲ್,…

     219,442 total views,  690 views today

ಏನ್ ಸಮಾಚಾರ