ಮನರಂಜನೆ

ಬಿಗ್ ಬಾಸ್ ಮನೆಯಲ್ಲಿ ವಾಂಗಿಬಾತ್, ಚಿತ್ರಾನ್ನಕ್ಕಾಗಿ ದೀಪಿಕಾ ಚಂದನ್ ನಡುವೆ ಕಿತ್ತಾಟ.

54

ಕನ್ನಡ ಬಿಗ್‍ಬಾಸ್ ಇನ್ನೇನು ಮೂರೂ ವಾರಗಳ ಕಾಲ ನಡೆಯಲ್ಲಿದ್ದು ಮುಕ್ತಾಯಗೊಳ್ಳಲಿದೆ. ಈಗ ಬಿಗ್ ಬಾಸ್ ಮನೆಯಲ್ಲಿ ಮತ್ತೊಂದು ಗಲಭೆ ಸೃಷ್ಟಿಯಾಗಿದೆ. ಹೌದು ಅಡುಗೆ ಮನೆಯಲ್ಲಿ ವಾಂಗಿಬಾತ್ ಮತ್ತು ಚಿತ್ರಾನ್ನಕ್ಕಾಗಿ ಚಂದನ್ ಆಚಾರ್ ಮತ್ತು ದೀಪಿಕಾ ದಾಸ್ ನಡುವೆ ಮಾತಿನ ಚಕಮುಕಿ ನಡೆದಿದೆ.

ಅಡುಗೆ ಮನೆಯಲ್ಲಿ ಎಲ್ಲರೂ ಸೇರಿ ಅಡುಗೆ ಮಾಡುತ್ತಿದ್ದಾಗ, ದೀಪಿಕಾ ಮತ್ತು ಚಂದನ್ ನಡುವೆ ಅಡುಗೆ ಮಾಡುವ ವಿಚಾರಕ್ಕೆ ವಾಗ್ವಾದ ಸೃಷ್ಠಿಯಾಗಿದೆ. ದೀಪಿಕಾ ದಾಸ್ ಅವರು ಚಂದನ್ ಗೆ ನಾಳೆ ನೀವು ಅಡುಗೆ ಮಾಡಿ, ನಾಳಿದ್ದು ನಾನು ಅಡುಗೆ ಮಾಡುತ್ತೇನೆಂದು ಹೇಳಿದ್ದಾರೆ. ಇದಾದ ಬಳಿಕ ನಾಳೆ ನಾನು ವಾಂಗೀಬಾತ್ ಮಾಡುತ್ತೇನೆ ಎಂದಾಗ, ಚಂದನ್ ಅವರು ನಾಳಿದ್ದು ನಾನು ಚಿತ್ರಾನ್ನ ಮಾಡುತ್ತೇನೆಂದು ಹೇಳಿದ್ದಾರೆ.

ಆಗ ದೀಪಿಕಾ ದಾಸ್ ಅವರು ಇದ್ದಕಿದ್ದಂತೆ ಕೋಪಗೊಂಡು ಚಂದನ್ ಅವರಿಗೆ ನೀವು ನನಗೆ ತುಂಬಾ ಇರಿಟೇಟ್ ಮಾಡುತ್ತಿದ್ದೀರಿ ಎಂದು ಹೇಳಿದರು. ಬೇರೆಯವರ ಬಗ್ಗೆ ಮಾತನಾಡಿಬೇಡಿ, ಎಲ್ಲರೂ ಇಲ್ಲಿ ಬೇರೆ ಬೇರೆ ಮನಸ್ಥಿತಿಯಲ್ಲಿ ಇದ್ದಾರೆ. ನಿಮ್ಮ ತರ ಯಾರೂ ಇಲ್ಲ ಇಲ್ಲಿ, ನಿಮ್ಮ ಮನಸ್ಥಿತಿ ಬಗ್ಗೆ ಸ್ವಲ್ಪ ತಿಳಿದುಕೊಳ್ಳಿ ಎಂದು ಚಂದನ್ ಮೇಲೆ ಗರಂ ಆದರು. ಆಗ ಚಂದನ್ ಇದ್ದುಕೊಂಡು, ನಾವೇನು ಇಲ್ಲಿ ಸುಮ್ಮನೆ ತಿಂದುಕೊಂಡು ಹೋಗಬೇಕಾ. ನನ್ನದೇ ಆಗಬೇಕು, ನನ್ನದೇ ನಡಿಯಬೇಕು, ನಿಮ್ಮ ತರಹದ ಮನಸ್ಥಿತಿ ನನ್ನಗಿಲ್ಲ ಎಂದು ವಾದ ಮಾಡಿದರು. ಕೊನೆಗೆ ಇಬ್ಬರು ಚಿತ್ರಾನ್ನ ಮಾಡೋದಾ, ವಾಂಗಿಬಾತ್ ಮಾಡೋದಾ ಎಂದು ಇಬ್ಬರ ನಡುವೆ ಮಾತಿಗೆ ಮಾತು ಬೆಳೆಯಿತು.

ಬೇರೆಯವರ ಬಗ್ಗೆ ಬೆರಳು ತೋರಿಸಿ ಮಾತನಾಡಬೇಡಿ. ನಿಮ್ಮಲಿರುವ ಸಣ್ಣ ಮನಸ್ಥಿತಯನ್ನು ಮೊದಲು ಬಿಡಿ, ನನ್ನ ಹತ್ತಿರ ವಾದ ಮಾಡಕ್ಕೆ ಬರಬೇಡಿ ಎಂದು ದೀಪಿಕಾ ದಾಸ್ ಅವರಿಗೆ ಹೇಳಿದ್ದಾರೆ, ದೀಪಿಕಾ ಇನ್ನಷ್ಟು ಕೋಪಗೊಂಡು ಚಂದನ್, ನೀವು ಡಬಲ್ ಗೇಮ್ ಆಡಬೇಡಿ, ನನ್ನ ಮನಸ್ಥಿತಿ ನನಗೆ ಮಾತ್ರ ಗೊತ್ತು, ನಿಮ್ಮ ನಾಲಿಗೆ ಮೇಲೆ ಒಂದು ವಿಚಾರ ಇರಲಿ ಎಂದು ಒಬ್ಬರಿಗೊಬ್ಬರ ನಡುವೆ ಗಲಭೆ ಉಂಟಾಯಿತು. ಕೊನೆಗೆ ದೀಪಿಕಾ ಬೇಸರಗೊಂಡು ಅಡುಗೆ ಮನೆಯಿಂದ ಹೊರಹೋದರು.

ನನ್ನದೇ ನಡಿಯಬೇಕು ಅಂತಿದೆಯಲ್ಲಾ ಅದನ್ನು ಮನೆಯಲ್ಲಿ ಇಟ್ಟುಕೊಳ್ಳಲಿ ಎಂದು ದೀಪಿಕಾ ಬಗ್ಗೆ ಈ ವಾರದ ಬಿಗ್ ಬಾಸ್ ಕ್ಯಾಪ್ಟನ್ ಕಿಶನ್ ಜೊತೆಯೂ ಕೂಡ ವಾದವನ್ನು ಮಾಡಿದ್ದಾರೆ. ಏನಾದರೂ ಆದರೆ ಸಾಕು ಎಲ್ಲಾ ಚಂದನ್ ಎಂದು ಮನೆಯವರೆಲ್ಲಾ ಹೇಳುತ್ತಾರೆ. ಈ ಸಣ್ಣ ವಿಚಾರವನ್ನು ದೊಡ್ಡದಾಗಿ ಮಾಡುವ ಅವಶ್ಯಕತೆ ಇರಲಿಲ್ಲ. ಏನೂ ಮಾತಾಡಕ್ಕೂ ಬಿಡಲ್ಲ, ಅಡುಗೆ ಮಾಡಕ್ಕೂ ಸಹ ಬಿಡಲ್ಲ, ಮೇಲೊಂದು ಎಂದು ಚಂದನ್ ಅವರು ವಾದ ಮಾಡಿದರು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ