ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮಕ್ಕಳ ಶೈಕ್ಷಣಿಕ ಅಡಿಪಾಯ ಚೆನ್ನಾಗಿರಲಿ ಎಂಬ ಉದ್ದೇಶದಿಂದ ನಾವು ದೊಡ್ಡ ದೊಡ್ಡ ಶಾಲೆಗಳಿಗೆ ಸೇರಿಸುವುದು ಸಾಮಾನ್ಯ, ಆದರೆ ತಮಿಳುನಾಡಿನ ತಿರುವನೆಲ್ಲಿ ಜಿಲ್ಲಾಧಿಕಾರಿ ಕರ್ನಾಟಕ ಮೂಲದ ಶಿಲ್ಪಾ ಪ್ರಭಾಕರ್ ಸತೀಶ್ ವಿಭಿನ್ನವಾಗಿ ನಿಂತಿದ್ದಾರೆ, ತಮ್ಮ ಮಗಳನ್ನು ಪಲಾಯಕಮೊಟ್ಟಿಯಲ್ಲಿರುವ ಅಂಗನವಾಡಿಗೆ ಸೇರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಅಂಗನವಾಡಿಗೆ ಸೇರಿಸಿದ ಮೇಲೆ ತಮ್ಮ ಮಗಳ ತಮಿಳು ಸುಧಾರಿಸಿದೆ, ಸಮಾಜದ ಎಲ್ಲಾ ರೀತಿಯ ಜನಗಳ ಜೊತೆ ನನ್ನ ಮಗಳು ಸೇರಬೇಕು, ಅವರ ಜೊತೆ ಸೇರಿ ಕಲಿಯಬೇಕು, ಹೀಗಾಗಿ ನರ್ಸರಿ ಶಾಲೆ ಬದಲು ಅಂಗನವಾಡಿಗೆ ಸೇರಿಸಿದ್ದೇನೆ ಎಂದು ಹೇಳುವ ಮೂಲಕ ಶಿಲ್ಪಾ ಎಲ್ಲರ ಮನ ಗೆದ್ದಿದ್ದಾರೆ.
ಅಂಗನವಾಡಿ ಕೇಂದ್ರವೂ ತಮ್ಮ ಜಿಲ್ಲಾಧಿಕಾರಿ ಕಚೇರಿ ಬಳಿಯೇ ಇದ್ದು ಎಲ್ಲಾ ರೀತಿಯ ಸೌಕರ್ಯಗಳನ್ನು ಹೊಂದಿದೆ, ಅಲ್ಲಿನ ಶಿಕ್ಷಕಿಯರು ತುಂಬಾ ಸಕ್ರಿಯರಾಗಿದ್ದಾರೆ., ಅಂಗನಾಡಿಯಲ್ಲಿರುವ ಎಲ್ಲಾ ಸಿಬ್ಬಂದಿ ತರಬೇತಿ ಪಡೆದು ಮೂಲಭೂತ ಸೌಕರ್ಯಗಳು ಉತ್ತಮ ಗುಣಮಟ್ಟದಿಂದ ಕೂಡಿವೆ.
ತಿರುವನೇಲಿಯಲ್ಲಿರುವ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲೂ ಸ್ಮಾರ್ಟ್ ಫೋನ್ ಹೊಂದಿವೆ, ಮಕ್ಕಳ ಎತ್ತರ ಮತ್ತು ತೂಕವನ್ನು ಅವರು ತಿಂದ ಆಹಾರದ ಪ್ರಮಾಣ ಕೂಡ ಅಳತೆ ಮಾಡಲಾಗುತ್ತದೆ, ಈ ಅಂಗನವಾಡಿಗಳನ್ನು ಮತ್ತಷ್ಟು ಅಭಿವೃದ್ಧಿಗೊಳಿಸಲು ನಾವು ನಿರ್ಧರಿಸಿದ್ದೇವೆ, ಏಕೆಂದರೇ ಬಾಲ್ಯದಲ್ಲಿ ಮಕ್ಕಳ ಬೆಳವಣಿಗೆಗೆಯಲ್ಲಿ ಅಂಗನವಾಡಿಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಶಿಲ್ಪಾ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಹೊಟ್ಟೆ ಹಾಳಾಗಿದ್ದರೂ ತೊಂದರೆಯಿಲ್ಲ, ಮುಖ ಚೆನ್ನಾಗಿ ಕಾಣಬೇಕು ಎಂಬುದು ಬಹುತೇಕ ಈಗಿನ ಜನರ ಮನಃಸ್ಥಿತಿಯಾಗಿದೆ. ಅದರಲ್ಲೂ ಹೆಚ್ಚಿನ ಮಹಿಳೆಯರಿಗೆ ಮುಖ ಬಿಳಿಹಾಳೆಯಂತೆ ಪೂರ್ತಿ ಸಮನಾಗಿರಬೆಕು ಎಂಬ ಆಸೆ. ಆದರೆ ಮುಖದ ಮೇಲಿನ ಕಪ್ಪು ಕಲೆ ಈ ಬಯಕೆಗೆ ತಣ್ಣೀರೆರಚಿ ಮಾನಸಿಕ ಹಿಂಸೆ ನೀಡುತ್ತದೆ. ಆ ಕಪ್ಪು ಕಲೆಗಳನ್ನು ಹೋಗಲಾಡಿಸಿ, ಮುಖ ಅರಳುವಂತೆ ಮಾಡಲು ಯಾವ ಕ್ರಮಗಳನ್ನು ಅನುಸರಿಸಬೇಕೆಂದು ತಿಳಿಯೋಣ. ಉಷ್ಣವಾಗಿ ಮುಖದ ಮೆಲೆ ಕಪ್ಪುಕಲೆಗಳಾಗುತ್ತಿದ್ದರೆ ಸೊಗದೆ ಬೇರನ್ನು ನಿಯತವಾಗಿ ಬಳಸಬೇಕು. ಕುದಿಯುತ್ತಿರುವ ನೀರಿಗೆ ಒಂದು ಚಮಚ ಸೊಗದೆಬೇರಿನ…
ಸಿರಿಯಾ’ ಇದು ನೈರುತ್ಯ ಏಷ್ಯಾದಲ್ಲಿರುವ ಒಂದು ಅರಬ್ ದೇಶ.ಪಶ್ಚಿಮ ಏಷ್ಯಾದ ಸಿರಿಯಾ ಕಳೆದ ಏಳು ವರ್ಷಗಳಿಂದ ಆಂತರಿಕ ಕ್ಷೋಭೆಯಿಂದ ತತ್ತರಿಸುತ್ತಿದೆ. ಕಳೆದ 22 ತಿಂಗಳಿನಿಂದ ನಿರಂತರವಾಗಿ ಸಿರಿಯಾದಲ್ಲಿ ನಡೆಯುತ್ತಿರುವ ಜನಾಂಗೀಯ ಕಲಹದಿಂದಾಗಿ 60 ಸಾವಿರಕ್ಕೂ ಹೆಚ್ಚು ಅಮಾಯಕ ಪ್ರಜೆಗಳು ಬಲಿಯಾಗಿದ್ದಾರೆ. ಏಕೆ ಈ ಯುದ್ದ..? ಕಳೆದ 18 ವರ್ಷಗಳಿಂದ ಬಷರ್ ಅಲ್ ಅಸ್ಸಾದ್ ಅವರು ಸಿರಿಯಾ ಅಧ್ಯಕ್ಷರಾಗಿದ್ದಾರೆ. ಇವರು ಅಲ್ಪ ಸಂಖ್ಯಾತರಾಗಿರುವ ಶಿಯಾ ಉಪಪಂಗಡ ಅಲಾವಿ ಸಮುದಾಯಕ್ಕೆ ಸೇರಿದವರು. ಶಿಯಾ ಪ್ರತಿನಿಧಿಯೊಬ್ಬರು ತಮ್ಮ ದೇಶ ಆಳುವುದನ್ನು…
ಕಡಲೆ ಬೀಜ ಯಾರಿಗೆ ತಾನೇ ಇಷ್ಟವಾಗುವುದಿಲ್ಲ ಹೇಳಿ..? ಕಡಲೆಬೀಜವನ್ನು ಬಡವರ ಬಾದಾಮಿ ಎನ್ನುತ್ತಾರೆ. ಈ ಕಡಲೆಬೀಜ ಬಾದಾಮಿಯಲ್ಲಿರುವಷ್ಟೇ ಪೌಷ್ಠಿಕತೆಯನ್ನ ಒಳಗೊಂಡಿದೆ. ಇದರಲ್ಲಿ ಪ್ರೊಟೀನ್, ಕೊಬ್ಬು, ಫೈಬರ್, ಕ್ಯಾಲ್ಸಿಯಂ ಅಪಾರ ಪ್ರಮಾಣದಲ್ಲಿರುತ್ತದೆ. ಇದು ಮೂಳೆಗಳನ್ನು ಬಲಪಡಿಸಿ ಫಿಟ್ ಆಗಿರಲು ನೆರವಾಗುತ್ತದೆ. ಇದು ಕೇವಲ ಉತ್ತಮ ಆರೋಗ್ಯಕ್ಕೆ ಮಾತ್ರವಲ್ಲ ಉತ್ತಮ ಸೌಂದರ್ಯಕ್ಕೂ ಸಹಾಯಕ. ಕಡಲೆಬೀಜದಲ್ಲಿನ ಇನ್ನಷ್ಟು ಆರೋಗ್ಯಕರ ಅಂಶಗಳು ಇಲ್ಲಿವೆ ನೋಡಿ.. ಕಡಲೆಬೀಜ ಕರುಳಿನ ಕಾಯಿಲೆಗಳನ್ನು ನಿವಾರಿಸುತ್ತದೆ. ಪ್ರತಿದಿನ ಕಡಲೆ ಬೀಜ ಸೇವಿಸುವುದರಿಂದ ಗ್ಯಾಸ್ ಹಾಗೂ ಅಸಿಡಿಟಿಯಂತಹ ಸಮಸ್ಯೆಗಳು ದೂರವಾಗುತ್ತವೆ….
ಪ್ರಮಂಚದಲ್ಲಿ ಮಹಿಳೆಯರು ಸುಂದರವಾಗಿ ಕಾಣಲು ಅಲಂಕಾರ ಮಾಡಿಕೊಳ್ಳುತ್ತಾರೆ. ಅಲಂಕಾರ ಮಾಡಿಕೊಳ್ಳದೆ ಮಹಿಳೆಯರ ದಿನ ಪೂರ್ಣವಾಗುವುದಿಲ್ಲ. ಅಲಂಕಾರ ಹಾಗೂ ಒಡವೆಗಳಿಗಾಗಿ ಸಾಕಷ್ಟು ಹಣವನ್ನು ಖರ್ಚುಮಾಡಲು ಹಿಂಜರಿಯುವುದಿಲ್ಲ. ಆದರೇ ನಮ್ಮ ಭಾರತೀಯ ಮಹಿಳೆಯರು ಅಲಂಕಾರಕ್ಕಾಗಿ ಧರಿಸುವ ಆಭರಣಗಳ ಹಿಂದಿರುವ ವೈಜ್ಞಾನಿಕ ಕಾರಣಗಳು ಏನೆಂದು ತಿಳಿಯೋಣ.
ತೆಲಂಗಾಣ: ಅದೃಷ್ಟ ಯಾವತ್ತೂ ಬೇಕಾದರೂ ಖುಲಾಯಿಸಬಹುದು ಎಂಬ ಮಾತಿದೆ. ಉದ್ಯೋಗ ಹುಡುಕಿಕೊಂಡು ಹೈದರಾಬಾದ್ನ ವ್ಯಕ್ತಿಯೊಬ್ಬ ದುಬೈ ವಿಮಾನ ಹತ್ತಿದ್ದರು. ಆದರೆ ಉದ್ಯೋಗ “ಅದೃಷ್ಟವಶಾತ್’ ಕೈ ಕೊಟ್ಟಿತ್ತು. ಹಾಗಂತ ಅವನು ಬರೀ ಕೈಯಲ್ಲಿ ಬಂದಿಲ್ಲ. ಬರುವಾಗ ಅದೂ ಹೆಂಡತಿ ಕೈಯಿಂದ ಸಾಲ ಪಡೆದು, ಅದೃಷ್ಟ ಚೀಟಿ “ರಾಫೆಲ್’ ಅನ್ನು ಖರೀದಿಸಿದ್ದರು. ಆದರೆ ಅವರ ಅದೃಷ್ಟ ‘ರಾಫೆಲ್ ಚೀಟಿಯಲ್ಲೇ ಭದ್ರವಾಗಿತ್ತು. ಹೌದು ತೆಲಂಗಾಣದ ನಿಜಾಮಬಾದ್ನ ಜಾಕ್ರನ್ಪಳ್ಳಿಗ್ರಾಮಕ್ಕೆ ಸೇರಿದ ವಿಲಾಸ್ ರಿಕ್ಕಳ ಎಂಬವರು ಈ ಅದೃಷ್ಟದ ನಾಯಕ. ಮೂಲತಃ ಕೃಷಿ ಕುಟುಂಬ. ಕೆಲವು…
ಕರ್ನಾಟಕ ರಾಜ್ಯದ ಹಾಸನದ ಅರಕಲಗೂಡಿನ ರೈತರಿಗೆ ಲಾಭದಾಯಕ ಪಶು ತಳಿಗಳ ಪರಿಚಯ ಹಾಗೂ ಹೈನುಗಾರಿಕೆ ಕ್ಷೇತ್ರದ ಬಗ್ಗೆ ಸಂಶೋಧನೆಗಳನ್ನು ಪರಿಚಯಿಸುವ ಸಲುವಾಗಿ ರಾಜ್ಯದಲ್ಲೇ ಮೊದಲ ಬಾರಿಗೆ ಹಾಸನದ ಅರಕಲಗೂಡಿನಲ್ಲಿ ಮೂರು ದಿನಗಳ ‘ರಾಜ್ಯಮಟ್ಟದ ಪಶುಮೇಳ- 2018’ ಹಮ್ಮಿಕೊಳ್ಳಲಾಗಿದೆ.