ಸುದ್ದಿ

ಬೆಂಗಳೂರಿನಲ್ಲಿ ವಿದ್ಯುತ್‍ಗೆ ಮತ್ತೊಬ್ಬ ಯುವಕ ಬಲಿ

36

ಈಗಾಗಲೇ ನಗರದಲ್ಲಿ ವಿದ್ಯುತ್ ತಗಲಿ ಮಕ್ಕಳು ಸೇರಿದಂತೆ ವಯಸ್ಕರು ಮೃತಪಟ್ಟಿದ್ದಾರೆ. ಇಂದು ಕೂಡ ವಿದ್ಯುತ್ ತಗಲಿ ಮತ್ತೊಬ್ಬ ಬಾಲಕ ಮೃತಪಟ್ಟಿದ್ದಾನೆ.

ಬೆಂಗಳೂರಿನ ಜೆ.ಪಿ ನಗರದ ಜಂಬೂಸವಾರಿ ದಿಣ್ಣೆ ಬಳಿ ಶನಿವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮುನಿರಾಜು ಎಂಬವರ ಪುತ್ರ ಅಕ್ಷಯ್ (8) ಮೃತ ದುರ್ದೈವಿ. ಬಾಲಕ ಸೆಂಟ್ ಫ್ರಾನ್ಸಿಸ್ ಶಾಲೆಯಲ್ಲಿ ಸ್ನೇಹಿತರ ಜೊತೆ ಆಟವಾಡುತ್ತಿದ್ದನು.

ಈ ವೇಳೆ ಸ್ಟೇರ್ ಕೇಸ್ ಹತ್ತುವಾಗ ವಿದ್ಯುತ್ ಶಾಕ್ ಹೊಡೆದಿದೆ. ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅಕ್ಷಯ್ ಇಂದು ಮೃತಪಟ್ಟಿದ್ದಾನೆ. ಶಾಲಾ ಮಂಡಳಿ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಕುರಿತು ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಹಿಂದೆ ಬೆಸ್ಕಾಂ ನಿರ್ಲಕ್ಷ್ಯಕ್ಕೆ ಎಲ್‍ಆರ್ ಬಂಡೆಯಲ್ಲಿ ಆಟವಾಡುತ್ತಿದ್ದ ಬಾಲಕ ವಿಕ್ರಂ, ವಿದ್ಯುತ್ ತಂತಿ ತಗುಲಿ ಮೃತಪಟ್ಟಿದ್ದನು. ನಂತರ ಮತ್ತಿಕೆರೆಯ ನೇತಾಜಿ ಸರ್ಕಲ್ ಬಳಿ ವಿದ್ಯುತ್ ತಗುಲಿ ಲಿಖಿಲ್(14) ಮೃತಪಟ್ಟಿದ್ದನು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜ್ಯೋತಿಷ್ಯ

    ಇಂದು ಭಾನುವಾರ, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…

    ಇಂದು ಭಾನುವಾರ , 18/03/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ… ಮೇಷ:– ದುಡುಕು ತನದಿಂದಾಗಿ ಕಾರ್ಯ ವೈಫಲ್ಯ ತಪ್ಪಿಸಲು ತಾಳ್ಮೆ ಅವಶ್ಯ. ಸಂಶೋಧನೆಯಲ್ಲಿ ಅಪಾರ ಶ್ರಮ ವಹಿಸಲಿದ್ದೀರಿ. ಹೊಸ ಉತ್ಸಾಹದಿಂದ ಆರಂಭಿಸಿದ ಕಾರ್ಯಗಳಲ್ಲಿ ಹೆಚ್ಚಿನ ಸಿದ್ಧಿಯಾಗಲಿದೆ. ಆಗಾಗ ಸಂಚಾರದಿಂದ ಕಾರ್ಯಸಿದ್ಧಿಯಾದರೂ ದೇಹಾಯಾಸ ತಂದೀತು. ಹೊಸ ಆದಾಯದ ಮೂಲಗಳು ಗೋಚರಕ್ಕೆ ಬಂದಾವು. ಸೂಕ್ತ ಸಲಹೆಗಾಗಿ ಹಿತೈಷಿಗಳು ನಿಮ್ಮ ಮಾರ್ಗದರ್ಶನಕ್ಕೆ ಬಂದಾರು. ವೃಷಭ:- ವಿದ್ಯಾರ್ಥಿಗಳು ಅಭ್ಯಾಸದಲ್ಲಿ ಉದಾಸೀನತೆ ತೋರಿಸಿಯಾರು. ವೃತ್ತಿರಂಗದಲ್ಲಿ ಮುನ್ನಡೆ ಸಮಾಧಾನ ತರುತ್ತದೆ. ಯಾವುದೇ ಸಮಸ್ಯೆಗಳನ್ನು…

  • ಸುದ್ದಿ

    ಸೀರೆಯನ್ನುಟ್ಟು ಬೆತ್ತಲೆಯ ಬೆನ್ನನ್ನು ತೋರಿಸಿದ ಬೆಡಗಿ ..,ಯಾರು ಗೊತ್ತಾ…?

    ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಒಂದಲ್ಲ ಒಂದು ಕಾರಣಕ್ಕೆ ಚರ್ಚೆಯಾಗ್ತಿರುತ್ತಾರೆ. ಪಿಗ್ಗಿ ಡ್ರೆಸ್ ಸಾಮಾನ್ಯವಾಗಿ ಸುದ್ದಿಗೆ ಬರ್ತಿರುತ್ತದೆ. ಕೆಲ ದಿನಗಳ ಹಿಂದೆ ಪತಿ ನಿಕ್ ಜೊತೆ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದ ಪ್ರಿಯಾಂಕಾ ಬಟ್ಟೆ ವಿಚಾರಕ್ಕೆ ಟ್ರೋಲ್ ಆಗಿದ್ದರು. ಈಗ ಪ್ರಿಯಾಂಕಾ ಇನ್ನೊಂದು ಹಾಟ್ ಫೋಟೋ ವೈರಲ್ ಆಗಿದೆ. ಪ್ರಿಯಾಂಕಾ ಇನ್ಸ್ಟೈಲ್ ಮ್ಯಾಗಜಿನ್ ಗಾಗಿ ಫೋಟೋ ಶೂಟ್ ಮಾಡಿಸಿದ್ದಾರೆ. ಪ್ರಿಯಾಂಕಾ ಸೀರೆಯುಟ್ಟಿದ್ದಾರೆ. ಆದ್ರೆ ಬ್ಲೌಸ್ ತೊಟ್ಟಿಲ್ಲ. ಬೆತ್ತಲೆ ಬೆನ್ನು ತೋರಿಸಿ ಫೋಟೋಕ್ಕೆ ಫೋಸ್ ನೀಡಿದ್ದಾರೆ. ಪ್ರಿಯಾಂಕಾರ ಕೆಲ ಫೋಟೋ ಹಾಗೂ…

  • ಉದ್ಯೋಗ

    ಕರ್ನಾಟಕ ಪೌರಾಡಳಿತ ನಿದೇಶನಾಲಯದಲ್ಲಿ 50000ರೂ ವೇತನದ ಹುದ್ದೆಗಳು…ಅರ್ಜಿ ಸಲ್ಲಿಸಲು ಈ ಲೇಖನ ಓದಿ…

    ಕರ್ನಾಟಕ ಪೌರಾಡಳಿತ ನಿದೇಶನಾಲಯ CMAK/DMA(SBM)/KMDS ಸಂಸ್ಥೆಯಲ್ಲಿ /ಯೋಜನೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಕಾಂಟ್ರಾಕ್ಟ್ ಬೇಸಿಸ್ ಮೇಲೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಹುದ್ದೆಗಳ ಸಂಕ್ಷೀಪ್ತ ವಿವರ ಕೆಳಗೆ ಕೊಡಲಾಗಿದೆ.

  • ಸುದ್ದಿ

    23 ವರ್ಷದ ಅಲೆಕ್ಸಾ ಟೆರಾಜಾ ಎಂಬುವರು ತಲೆ ಕೆಳಗಾಗಿ ಯೋಗ ಮಾಡಿ ಆರನೇ ಅಂತಸ್ತಿನಿಂದ 80 ಅಡಿ ಕೆಳಗೆ ಬಿದ್ದ ಯುವತಿ…!

    ಮೆಕ್ಸಿಕೋದ ಕಾಲೇಜು ಯುವತಿ ಬಾಲ್ಕನಿ ಮೇಲೆ ತಲೆಕೆಳಗಾಗಿ ಯೋಗ ಮಾಡಲು ಹೋಗಿ, ಆಯಾತಪ್ಪಿ 80 ಅಡಿ ಕೆಳಗೆ ಬಿದ್ದಿದ್ದಾರೆ. ಅದೃಷ್ಟವಶಾತ್​ ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಂಡಿ ಮತ್ತು ಪಾದದ ಕೀಲುಗಳನ್ನು ಮರುಜೋಡಣೆ ಮಾಡಿರುವುದರಿಂದ ಆಕೆ ಮೂರು ವರ್ಷ ನಡೆದಾಡಲಾಗುವುದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ಆಕೆ ದೇಹದಲ್ಲಿ 110 ಮೂಳೆಗೆ ಮುರಿದಿವೆ. ತಲೆ, ಸೊಂಟದ ಭಾಗಕ್ಕೂ ಪೆಟ್ಟು ಬಿದ್ದಿದೆ. ಯುವತಿ ಅಪಾರ್ಟ್​ಮೆಂಟ್​ನ ಆರನೇ ಅಂತಸ್ತಿನಲ್ಲಿರುವ ತಮ್ಮ ಮನೆಯ ಬಾಲ್ಕನೆಯ ಕಂಬಿಯ ಮೇಲೆ…

  • ಸುದ್ದಿ

    ರಾತ್ರಿಸಮಯ ಅತಿ ಹೆಚ್ಚು ಸ್ಮಾರ್ಟ್‌ಫೋನ್ ಬಳಸುತ್ತೀರಾ?..ಈ ಶಾಕಿಂಗ್ ಸ್ಟೋರಿ ನೋಡಿ!!

    ಡ್ರಗ್ಸ್, ಆಲ್ಕೋಹಾಲ್‌ನಂತಹ ಕೆಟ್ಟ ಚಟಗಳಿಗೆ ಅಡಿಕ್ಟ್ ಆಗಿರುವಂತೆ ಸ್ಮಾರ್ಟ್‌ಫೋನ್‌ಗಳಿಗೆ ಇಂದಿನ ಜನ ಅಡಿಕ್ಟ್ ಆಗುತ್ತಿದ್ದಾರೆ ಎಂದು ಈಗಾಗಲೇ ಹಲವು ವರದಿಗಳು ಹೇಳಿವೆ. ಆದರೆ, ಇದೀಗ ಬಿಡುಗಡೆಯಾಗಿರುವ ನೂತನ ವರದಿಯೊಂದು ಸ್ಮಾರ್ಟ್‌ಫೋನ್ ಬಳಕೆಗೂ ಒಂದು ಮಿತಿ ಎನ್ನುವುದನ್ನು ಸಾರಿಸಾರಿ ಹೇಳುತ್ತಿದೆ. ಹೌದು, ಜನರಿಗೆ ಸ್ಮಾರ್ಟ್‌ಪೋನ್ ಸಿಕ್ಕನಂತರವಂತೂ ಪ್ರಪಂಚವೇ ಮರೆತುಹೋಗಿದ್ದಾರೆ. ರಾತ್ರಿಹಗಲೂ ಎನ್ನದೇ ಸ್ಮಾರ್ಟ್‌ಫೋನ್ ಬಳಕೆ ಮಾಡುತ್ತಾ ಮಾನಸಿಕ ಖಿನ್ನತೆಗೆ ತುತ್ತಾಗಿ ಆತ್ಮಹತ್ಯೆಯ ದಾರಿ ಹಿಡಿಯುವ ಪ್ರಮಾಣ ಹೆಚ್ಚಾಗಿದೆ ಎಂದು ಅಮೆರಿಕಾದ ‘ಸ್ಯಾನ್ ಡೈಗೊ ಸ್ಟೇಟ್’ ಯೂನಿವರ್ಸಿಟಿಯ ಅಧ್ಯಯನವೊಂದು ಎಚ್ಚರಿಕೆ…

  • ಸುದ್ದಿ

    ಬಿಲ್ಡಿಂಗ್ ಕುಸಿದು 6 ಮಂದಿ ಸೇನಾ ಸಿಬ್ಬಂದಿ ಸೇರಿ ಓರ್ವ ನಾಗರೀಕ ಸಾವು ; ಅವಶೇಷಗಳಡಿ 37 ಮಂದಿ ಸಿಲುಕಿದ್ದಾರೆ…..!

    ಬಹುಮಹಡಿ ಕಟ್ಟಡವೊಂದು ಕುಸಿದು ಬಿದ್ದ ಪರಿಣಾಮ ಸೇನಾ ಸಿಬ್ಬಂದಿ ಸೇರಿದಂತೆ ಏಳು ಮಂದಿ ಸಾವನ್ನಪ್ಪಿರುವ ಘಟನೆ ಹಿಮಾಚಲ ಪ್ರದೇಶದ ಸೋಲನ್‍ನಲ್ಲಿ ನಡೆದಿದೆ.ಭಾನುವಾರ ಸೋಲನ್ ಜಿಲ್ಲೆಯಲ್ಲಿ ಬಹುಮಹಡಿ ಕಟ್ಟಡ ಕುಸಿದು ಬಿದ್ದಿದೆ. ಕಟ್ಟಡದ ಅವಶೇಷಗಳಡಿ 37 ಮಂದಿ ಸಿಲುಕಿದ್ದಾರೆ ಎಂದು ಶಂಕಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಭಾನುವಾರ ಮಧ್ಯಾಹ್ನ 4 ಗಂಟೆ ಸುಮಾರಿಗೆ ಈ ದುರಂತ ಸಂಭವಿಸಿದೆ. ರಾಜ್ಯ ರಾಜಧಾನಿ ಶಿಮ್ಲಾದಿಂದ 45 ಕಿ.ಮೀ ದೂರದಲ್ಲಿರುವ ಸೋಲನ್‍ನ ಕುಮಾರ್ಹಟ್ಟಿ-ನಹಾನ್ ಹೆದ್ದಾರಿಯಲ್ಲಿ ಈ ಕಟ್ಟಡ ಇದ್ದು, ಭಾರೀ ಮಳೆಯಿಂದಾಗಿ ಕುಸಿದಿದೆ…