ಸಿನಿಮಾ

ಚಿತ್ರೀಕರಣದ ಸೆಟ್ ನಲ್ಲೇ ಕುರಿ ಬಲಿ ನೀಡಿದ್ರಾ ರಾಧಿಕಾ ಕುಮಾರಸ್ವಾಮಿ!ಕಾರಣ ಏನು ಗೊತ್ತಾ?

303

ನಟಿ ರಾಧಿಕಾ ಕುಮಾರಸ್ವಾಮಿ ಭೈರಾದೇವಿ ಚಿತ್ರೀಕರಣದ ವೇಳೆ ಸ್ಮಶಾನದಲ್ಲಿ ಬಿದ್ದು ಏಟು ಮಾಡಿಕೊಂಡಿದ್ದು  ಇದೀಗ ಶೂಟಿಂಗ್ ಸೆಟ್ ನಲ್ಲೇ ಕುರಿಬಲಿ ನೀಡಿದ್ದಾರೆ ಎಂಬ ಸುದ್ದಿ ಚರ್ಚೆಗೆ ಗ್ರಾಸವಾಗಿದೆ.

ಚಿತ್ರದಲ್ಲಿ ಕಾಳಿಮಾತೆಯ ಅವತಾರ ತಾಳಿದ್ದ ರಾಧಿಕಾ ಶಾಂತಿನಗರದ ಸ್ಮಶಾನದಲ್ಲಿ ಚಿತ್ರೀಕರಣ ನಡೆಯುವ ವೇಳೆ ಗೋರಿ ಮೇಲಿಂದ ಬಿದ್ದು ಸ್ಪೈನಲ್ ಕಾರ್ಡ್ ಗೆ ಏಟು ಮಾಡಿಕೊಂಡಿದ್ದರು. ಅಂದು ಅಮಾವಾಸ್ಯೆಯಾಗಿದ್ದು ರಾಧಿಕಾ ಕುಮಾರಸ್ವಾಮಿ ಬಿದ್ದು ಪೆಟ್ಟು ಮಾಡಿಕೊಂಡ ಬಳಿಕ ಚಿತ್ರತಂಡಕ್ಕೆ ಅಡ್ಡಿಯಾಗಿದೆ.

ಹೀಗಾಗಿ ಚಿತ್ರೀಕರಣದ ಸೆಟ್ ನಲ್ಲೇ ಕುರಿಬಲಿ ನೀಡಲಾಗಿದೆ ಎಂಬ ಸುದ್ದಿ ಲಭ್ಯವಾಗಿದೆ.ಆದರೆ ಈ ಸುದ್ದಿ ಬಗ್ಗೆ ಚಿತ್ರತಂಡ ಯಾವುದೇ ಮಾಹಿತಿ ನೀಡಿಲ್ಲ. ಬದಲಿಗೆ ನಾವೇನೂ ಕುರಿಬಲಿ ಕೊಟ್ಟಿಲ್ಲ, ಚಿತ್ರತಂಡಕ್ಕೆ ಅಡಚಣೆಯಾಗುತ್ತಿರುವುದು ನಿಜ.

ಅದಕ್ಕಾಗಿ ಮುಂದಿನ ದಿನಗಳಲ್ಲಿ ಕುರಿಬಲಿ ನೀಡಲು ಉದ್ದೇಶಿಸಿದ್ದೇವೆ ಎಂದೂ ಹೇಳಿದೆ.ಇತ್ತ ಸ್ಮಶಾನದಲ್ಲಿ ಬಿದ್ದು ಪೆಟ್ಟಾಗಿರುವ ರಾಧಿಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಯಲ್ಲಿ ವಿಶ್ರಾಂತಿಯಲ್ಲಿದ್ದಾರೆ. ಕನ್ನಡ, ತೆಲುಗು, ತಮಿಳಿನಲ್ಲಿ “ಭೈರಾದೇವಿ” ಚಿತ್ರ ತಯಾರಾಗುತ್ತಿದ್ದು ಶ್ರೀಜೈ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಈ ʼಮೊಬೈಲ್‍‌ʼ ನಲ್ಲಿ ಇನ್ಮುಂದೆ ಸಿಗಲ್ಲ ಗೂಗಲ್ ಪ್ಲೇ ಸ್ಟೋರ್…..?

    ಹುವಾವೇ ಮೊಬೈಲ್‍ ಬಳಕೆ ಮಾಡ್ತಿರೋ ಗ್ರಾಹಕರೇ ಗಮನಿಸಿ. ಇನ್ಮುಂದೆ ಹುವಾವೇ ಮೊಬೈಲ್‍ ಗಳಿಗೆ ಗೂಗಲ್ ಪ್ಲೇ, ಗೂಗಲ್‍ ಪ್ಲೇ ಸ್ಟೋರ್, ಜಿ ಮೇಲ್‍, ಗೂಗಲ್‍ ಮ್ಯಾಪ್‍ ಹಾಗೂ ಯೂಟೂಬ್‍ ಆಪ್‍ ಗಳು ಲಭ್ಯವಾಗಲ್ಲ. ಕಾರಣ ಚೀನಾದ ಹುವಾವೇ ಸಂಸ್ಥೆಯೊಂದಿಗೆ ಗೂಗಲ್‍ ಸಂಸ್ಥೆ ಸಂಬಂಧ ಕಡಿದುಕೊಂಡಿದೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್‍ ಸರ್ಕಾರ ಹುವಾವೇ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಿತ್ತು. ಇದೀಗ ಗೂಗಲ್‍ ಕೂಡಾ ಈ ನಿರ್ಧಾರ ತೆಗೆದುಕೊಂಡಿದ್ದು, ಹುವಾವೇ ಕಂಪನಿಯೊಂದಿಗೆ ವ್ಯವಹಾರಗಳನ್ನು ಕಡಿತಗೊಳಿಸಿದೆ. ಸದ್ಯ ಗ್ರಾಹಕರು ಈಗ…

  • ಸಿನಿಮಾ

    ಆಸ್ಪತ್ರೆಗೆ ದಾಖಲಾದ ಖ್ಯಾತ ನಟಿ!ಚಿಕಿತ್ಸೆಗೆ ನೆರವು ನೀಡುವಂತೆ ಮನವಿ ಮಾಡಿಕೊಂಡ ನಟಿಯ ಸಹೋದರಿ..

    ಸ್ಯಾಂಡಲ್ ವುಡ್ ನಟಿ ವಿಜಯಲಕ್ಷ್ಮಿ ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಿಕಿತ್ಸೆಗೆ ಹಣಕಾಸು ನೆರವು ನೀಡುವಂತೆ ಅವರ ಸಹೋದರಿ ಉಷಾದೇವಿ ಮನವಿ ಮಾಡಿದ್ದಾರೆ. ಸ್ಯಾಂಡಲ್ ವುಡ್ ಟಾಪ್ ನಟಿಯಾಗಿದ್ದ ವಿಜಯಲಕ್ಷ್ಮಿ ಅವರಿಗೆ ತೀವ್ರವಾದ ಸುಸ್ತು ಮತ್ತು ಹೈ ಬಿಪಿಯಿಂದಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ ವಾರ ಅವರ ತಾಯಿಯ ಆರೋಗ್ಯ ಸರಿಯಿಲ್ಲದ ಕಾರಣ ಆಸ್ಪತ್ರೆಗೆ ಸೇರಿಸಿದ್ದು, ಇದ್ದ ಹಣವನ್ನೆಲ್ಲ ಖರ್ಚು ಮಾಡಲಾಗಿದೆ. ಈಗ ವಿಜಯಲಕ್ಷ್ಮಿ ಅವರನ್ನು ಆಸ್ಪತ್ರೆಗೆ ಸೇರಿಸಿದ್ದು ಚಿಕಿತ್ಸೆಗೆ ನೆರವು ನೀಡುವಂತೆ ಸಹೋದರಿ ಉಷಾದೇವಿ…

  • ಸುದ್ದಿ

    ತೆಲುಗು ನಟ ರಾಮ್‍ಗೆ ಪೊಲೀಸರಿಂದ 200 ರೂ. ದಂಡ…!

    ಹೈದರಾಬಾದ್: ಧೂಮಪಾನ ನಿಷೇಧ ಪ್ರದೇಶದಲ್ಲಿ ಸಿಗರೇಟ್ ಸೇದಿದ್ದಕ್ಕಾಗಿ ಟಾಲಿವುಡ್ ನಟ ರಾಮ್ ಪೋಥಿನೇನಿ ಅವರಿಗೆ ಸೋಮವಾರ ಹೈದರಾಬಾದ್ ಪೊಲೀಸರು 200 ರೂಪಾಯಿ ದಂಡ ವಿಧಿಸಿದ್ದಾರೆ. ಈ ಘಟನೆ ನಗರದ ಐತಿಹಾಸಿಕ ಚಾರ್ಮಿನಾರ್ ಬಳಿ ನಡೆದಿದೆ. ನಟ ರಾಮ್ ತಮ್ಮ ಮುಂಬರುವ ‘ಐಸ್ಮಾರ್ಟ್ ಶಂಕರ್’ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಸಿನಿಮಾದಲ್ಲಿ ಅವರ ಪಾತ್ರದ ಭಾಗವಾಗಿ ನಟ ಸಿಗರೇಟ್ ಸೇದಿದ್ದರು. ನಟ ರಾಮ್ ಸಿಗರೇಟ್ ನಿಷೇಧಿಸಿದ್ದ ಪ್ರದೇಶದಲ್ಲಿ ಧೂಮಪಾನ ಮಾಡಿದ್ದರು. ಅದರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಸಾಮಾಜಿಕ…

  • ಸುದ್ದಿ

    ಬಾಕ್ಸ್ ಆಫೀಸ್ ಸುಲ್ತಾನ್,ಚಾಲೆಂಜಿಂಗ್ ಸ್ಟಾರ್ ದರ್ಶನ್ ​​ಫ್ಯಾನ್ಸ್​ ಗೆ ಸಿಹಿ ಸುದ್ದಿ​..!

    ಸ್ವಿಟ್ಜರ್ಲೆಂಡ್​ನಲ್ಲಿ ನಟ ದರ್ಶನ್​. ಒಡೆಯ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಚಾಲೆಂಜಿಂಗ್​ ಸ್ಟಾರ್​. ಎಂ.ಡಿ ಶ್ರೀಧರ್​ ನಿರ್ದೇಶಿಸುತ್ತಿರುವ ಒಡೆಯ ಸಿನಿಮಾದ ಕೊನೆಯ ಎರಡು ಹಾಡುಗಳ ಚಿತ್ರೀಕರಣಕ್ಕೆಂದು ಚಿತ್ರತಂಡ ಅಕ್ಟೋಬರ್ 15ರಂದು ಸ್ವಿಟ್ಜರ್ಲೆಂಡ್​ಗೆ ಹಾರಿದ್ದರು. ಹತ್ತು ದಿನಗಳ ಕಾಲ ನಡೆಯಲಿರುವ ಚಿತ್ರೀಕರಣದ ನಂತರ ಇದೇ ಅಕ್ಟೋಬರ್​ 26ರಂದು ಬೆಂಗಳೂರಿಗೆ ವಾಪಸ್​ ಆಗಲಿದ್ದಾರೆ ದಚ್ಚು ಆ್ಯಂಡ್​ ಟೀಮ್​. ಸಂದೇಶ್ ನಾಗರಾಜ್ ನಿರ್ಮಾಣದಲ್ಲಿ ಚಿತ್ರ ಮೂಡಿಬರುತ್ತಿದ್ದು ಈ ವರ್ಷದ ಕೊನೆಯಲ್ಲಿ ಒಡೆಯ ಚಿತ್ರ ಡಿ ಬಾಸ್ ಫ್ಯಾನ್ಸ್​ಗಳ ಮುಂದೆ ಬರಲಿದೆ. ಅಕ್ಟೋಬರ್ 15ರಂದು…

  • ಸುದ್ದಿ

    ಚಾಲಕರಿಗೆ ದುಬಾರಿ ದಂಡ ವಿಧಿಸುವ ಬದಲು ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಲು ಒತ್ತು ನೀಡಿ’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಸವಾಲೆಸೆದ ಸ್ಯಾಂಡಲ್​ವುಡ್​ ನಟಿ..!

    ದೇಶದಲ್ಲಿ ಜಾರಿಯಾದ ಹೊಸ ಟ್ರಾಫಿಕ್‌ ದಂಡದ ಕುರಿತಾಗಿ ಸಾಕಷ್ಟು ಚರ್ಚೆಗಳು, ಪರ-ವಿರೋಧದ ಮಾತುಗಳು ಕೇಳಿಬರುತ್ತಿದೆ. ಅದರಲ್ಲೂ ಹೊಂಡ-ಗುಂಡಿಗಳಿಂದ ತುಂಬಿರುವ ರಸ್ತೆಗಳನ್ನು ಸರಿಪಡಿಸುವ ಜವಾಬ್ದಾರಿ ಕೂಡಾ ಸರ್ಕಾರಕ್ಕೆ ಇದೆ.  ಸಂಚಾರ ನಿಯಮ ಉಲ್ಲಂಘಿಸಿದ ಬೈಕ್‌ ಸವಾರರು, ವಾಹನಗಳ ಚಾಲಕರಿಗೆ ದುಬಾರಿ ದಂಡ ವಿಧಿಸುವ ಬದಲು ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಲು ಒತ್ತು ನೀಡಿ’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ನಟಿ ಸೋನು ಗೌಡ ಸವಾಲು ಹಾಕಿದ್ದಾರೆ. ಜನಸಾಮಾನ್ಯರು ಕಷ್ಟಪಟ್ಟು ಹಣ ಸಂಪಾದಿಸುತ್ತಾರೆ. ಅಧಿಕ ದಂಡ ವಿಧಿಸಿ ಅವರ ಜೀವನವನ್ನು…