ಸುದ್ದಿ

ತೆಲುಗು ನಟ ರಾಮ್‍ಗೆ ಪೊಲೀಸರಿಂದ 200 ರೂ. ದಂಡ…!

57

ಹೈದರಾಬಾದ್: ಧೂಮಪಾನ ನಿಷೇಧ ಪ್ರದೇಶದಲ್ಲಿ ಸಿಗರೇಟ್ ಸೇದಿದ್ದಕ್ಕಾಗಿ ಟಾಲಿವುಡ್ ನಟ ರಾಮ್ ಪೋಥಿನೇನಿ ಅವರಿಗೆ ಸೋಮವಾರ ಹೈದರಾಬಾದ್ ಪೊಲೀಸರು 200 ರೂಪಾಯಿ ದಂಡ ವಿಧಿಸಿದ್ದಾರೆ.

ಈ ಘಟನೆ ನಗರದ ಐತಿಹಾಸಿಕ ಚಾರ್ಮಿನಾರ್ ಬಳಿ ನಡೆದಿದೆ. ನಟ ರಾಮ್ ತಮ್ಮ ಮುಂಬರುವ ‘ಐಸ್ಮಾರ್ಟ್ ಶಂಕರ್’ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಸಿನಿಮಾದಲ್ಲಿ ಅವರ ಪಾತ್ರದ ಭಾಗವಾಗಿ ನಟ ಸಿಗರೇಟ್ ಸೇದಿದ್ದರು. ನಟ ರಾಮ್ ಸಿಗರೇಟ್ ನಿಷೇಧಿಸಿದ್ದ ಪ್ರದೇಶದಲ್ಲಿ ಧೂಮಪಾನ ಮಾಡಿದ್ದರು. ಅದರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಸಾಮಾಜಿಕ ಜಾಲತಾಣಗಳಲ್ಲಿ ಇದಕ್ಕೆ ಹಲವರು ವಿರೋಧ ವ್ಯಕ್ತಪಡಿಸಿ ಕಮೆಂಟ್ ಮಾಡುತ್ತಿದ್ದರು. ಜೊತೆಗೆ ಹೈದರಾಬಾದ್ ಪೊಲೀಸರಿಗೂ ಟ್ಯಾಗ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಹೈದರಾಬಾದ್ ಪೊಲೀಸರು ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಕಾಯ್ದೆ (ಕೊಪ್ಟಾ) 2003 ರ ಅಡಿಯಲ್ಲಿ ದಂಡ ವಿಧಿಸಿದ್ದಾರೆ. ರಾಮ್ ಕೂಡ ದಂಡದ ಶುಲ್ಕವನ್ನು ಪಾವತಿಸಿದ್ದಾರೆ.

ಇಲ್ಲಿಯವರೆಗೆ ಚಾರ್ಮಿನಾರ್ ನಲ್ಲಿ ಧೂಮಪಾನ ಮಾಡಿದ್ದಕ್ಕಾಗಿ 20 ಜನರನ್ನು ಹಿಡಿದು ದಂಡ ವಿಧಿಸಲಾಗಿದೆ. ಇದೇ ರೀತಿ ಕಾರ್ಯಚರಣೆಯನ್ನು ಮುಂದುವರಿಸುತ್ತೇವೆ. ಇದರಿಂದ ಜನರಿಗೆ ತಂಬಾಕಿನಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ಸಹಾಯ ಮಾಡುತ್ತದೆ ಎಂದು ಸಬ್ ಇನ್ಸ್‍ಪೆಕ್ಟರ್ ಬಿ.ಪಾಂಡರಿ ಹೇಳಿದ್ದಾರೆ.
ಇಸ್ಮಾರ್ಟ್ ಶಂಕರ್’ ಸಿನಿಮಾವನ್ನು ಪ್ರಸ್ತುತ ನಿರ್ದೇಶಕ ಪುರಿ ಜಗನ್ನಾಥ್ ನಿರ್ದೇಶನದ ಮಾಡುತ್ತಿದ್ದು, ನಭಾ ನಟೇಶ್ ಮತ್ತು ನಿಧಿ ಅಗರ್ವಾಲ್ ಸಿನಿಮಾದಲ್ಲಿ ಪ್ರಮುಖವಾದ ಪಾತ್ರದಲ್ಲಿ ನಟಿಸುತ್ತಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜ್ಯೋತಿಷ್ಯ

    ಶಿರಡಿ ಶ್ರೀ ಸಾಯಿಬಾಬಾನನ್ನು ನೆನೆಯುತ್ತಾ ನಿಮ್ಮ ಇಂದಿನ ರಾಶಿ ಭವಿಷ್ಯದ ಬಗ್ಗೆ ತಿಳಿಯಿರಿ

    ಮೇಷ ರಾಶಿ ಭವಿಷ್ಯ (Sunday, November 28, 2021) ವಿಧಿಯನ್ನು ಆಧರಿಸದಿರಿ ಮತ್ತು ನಿಮ್ಮ ಆರೋಗ್ಯ ಸುಧಾರಿಸಲು ಪ್ರಯತ್ನಿಸಿ ಏಕೆಂದರೆ ಅದೃಷ್ಟವು ಒಂದು ಸೋಮಾರಿ ದೇವತೆಯಾಗಿದ್ದು ಇದು ಎಂದಿಗೂ ತಾನಾಗಿಯೇ ನಿಮ್ಮ ಬಳಿ ಬರುವುದಿಲ್ಲ. ನಿಮ್ಮ ತೂಕವನ್ನು ನಿಯಂತ್ರಿಸಲು ಮತ್ತು ನಿಮ್ಮ ಆರೋಗ್ಯವನ್ನು ಪುನಃ ಪಡೆಯಲು ವ್ಯಾಯಾಮ ಮಾಡಲು ಇದು ಒಳ್ಳೆಯ ಸಮಯ. ದೀರ್ಘಕಾಲದವರೆಗೆ ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿದ್ದವರು, ಅವರು ಇಂದು ಎಲ್ಲಿಂದಲಾದರೂ ಹಣವನ್ನು ಪಡೆಯಬಹುದು, ಇದು ಜೀವನದ ಅನೇಕ ಸಮಸ್ಯೆಗಳನ್ನು ತೆಗೆದುಹಾಕುತ್ತದೆ. ನೀವು ಇಡೀ ಕುಟುಂಬಕ್ಕೆ…

  • ಸುದ್ದಿ

    ನಿಮ್ಮ ಇಪಿಎಫ್‌ ಬಡ್ಡಿ, ಬ್ಯಾಲೆನ್ಸ್ ಚೆಕ್ ಮಾಡುವ ಸುಲಭ ಉಪಾಯಗಳು,.!!

    ಕೇಂದ್ರ ಸರ್ಕಾರದ ಕಾರ್ಮಿಕ ಹಾಗೂ ಉದ್ಯೋಗ ಸಚಿವಾಲಯದಡಿ ಕೆಲಸ ಮಾಡುತ್ತಿರುವ  ಕಾರ್ಮಿಕ ಭವಿಷ್ಯ ನಿಧಿ ಇಲಾಖೆ  ಇಪಿಎಫ್‌ ಯೋಜನೆಯ ಉಸ್ತುವಾರಿ ನೋಡಿಕೊಳ್ಳುತ್ತದೆ. ಇಪಿಎಫ್‌ ಖಾತೆ ಹೊಂದಿರುವ ಪ್ರತಿ ಕಾರ್ಮಿಕರ  ಸಂಬಳದಲ್ಲಿ ಪ್ರತಿ ತಿಂಗಳು ಇಪಿಎಫ್‌ ನಿಧಿಗಾಗಿ ಸ್ವಲ್ಪ  ಹಣ ಕಡಿತ ಮಾಡಿಕೊಳ್ಳಲಾಗುತ್ತದೆ. ಆದರೆ, ಪ್ರತಿ ತಿಂಗಳೂ ತನ್ನ ಸಂಬಳದಲ್ಲಿ ಕಡಿತಗೊಂಡ ಹಣ ಇಪಿಎಫ್‌ ಖಾತೆಗೆ ಸಂದಾಯವಾಗುತ್ತಿದೆಯೇ? ಇಪಿಎಫ್‌ ನಿಧಿಗೆ ನಿರ್ದಿಷ್ಟ ಬಡ್ಡಿಸಂದಾಯವಾಗುತ್ತಿದೆಯೇ ಎಂಬುದನ್ನು ತಿಳಿಯಲು ಮತ್ತು  ಇಪಿಎಫ್ ಖಾತೆಯ ಬ್ಯಾಲನ್ಸ್ ಹಣ ಚೆಕ್ ಮಾಡಲು  ಹಲವಾರು ವಿಧಾನಗಳಿವೆ….

  • ಸುದ್ದಿ

    ಅನ್ನದಾತನಿಗೆ ಬಂಪರ್ ಆಫರ್!ಪ್ರತೀ ರೈತನ ಅಕೌಂಟ್’ಗೆ ಬೀಳಲಿದೆ 10,000.!ಏನಿದು ಯೋಜನೆ ಮುಂದೆ ಓದಿ…

    ಮುಖ್ಯಮಂತ್ರಿ ಸಿದ್ದರಾಮಯ್ಯನವರು 2018-19ನೇ ಸಾಲಿನ ಬಜೆಟ್ ಮಂಡಿಸಿದ್ದು,ಹಲವಾರು ಹೊಸ ಯೋಜನೆಗಳನ್ನು ಪ್ರಕಟಿಸಿದ್ದಾರೆ.ಇದರಲ್ಲಿ ರೈತರಿಗೂ ಹಲವಾರು ಯೋಜನೆಗಳನ್ನು ಪ್ರಕಟಿಸಿದ್ದು,ಕೃಷಿಗೆ ಹೆಚ್ಚು ಮಾನ್ಯತೆ ನೀಡಿದ್ದಾರೆ.

  • ವಿಚಿತ್ರ ಆದರೂ ಸತ್ಯ

    ವಿಜ್ಞಾನಿಗಳಿಂದ ಕಡೆಗೊ ಬಯಲಾಯ್ತು ಉತ್ತರ; ಕೋಳಿ ಮೊದಲೋ..? ಮೊಟ್ಟೆ ಮೊದಲೋ..? ತಿಳಿಯಲು ಈ ಲೇಖನ ಓದಿ …

    ಈ ಜಗತ್ತಿನಲ್ಲಿ ಉತ್ತರ ಸಿಗದಂತಹ ಪ್ರಶ್ನೆಗಳು ಹಲವಾರಿವೆ ಅವುಗಳಲ್ಲೊಂದು ಕೋಳಿ ಮೊಟ್ಟ ಮೊದಲು ಬಂದಿದ್ದು? ಅಥವಾ ಮೊಟ್ಟೆ ಮೊಟ್ಟ ಮೊದಲು ಬಂದಿದ್ದು ? ಕೊನೆಗೂ ಇದಕ್ಕೆ ವಿಜ್ಞಾನಿಗಳಿಂದ ಉತ್ತರ ಲಭ್ಯವಾಗಿದೆ.

  • ಜ್ಯೋತಿಷ್ಯ

    ಆಂಜನೇಯ ಸ್ವಾಮಿ ಕೃಪೆಯಿಂದ ಈ ರಾಶಿಗಳಿಗೆ ರಾಜಯೋಗ ಕಟ್ಟಿಟ್ಟಬುತ್ತಿ,. ನಿಮ್ಮ ರಾಶಿ ಇದೆಯಾ….!

    ಒಂದೆಕರೆ ಕ್ಷಣದಲ್ಲೇ ಪರಿಹಾರ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ ತುಳು ನಾಡಿನ ಹಿರಿಯ ಬ್ರಾಹ್ಮಣರಾದ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರು ಯರು  9739124121ಶ್ರೀ ಕ್ಷೇತ್ರ ಧರ್ಮಸ್ಥಳ ನುಡಿದಂತೆ ನಡೆಯುವುದು ಮೇಷ:- ಹಿಂದೆ ಮುಂದೆ ಯೋಚಿಸದೆ ಯಾವುದೇ ವಾಗ್ದಾನ ಕೊಡಬೇಡಿ. ಸದ್ಯದ ಗ್ರಹಸ್ಥಿತಿಗಳು ಉತ್ತಮವಾಗಿಲ್ಲ. ತಣ್ಣೀರನ್ನು ಆರಿಸಿ ಕುಡಿಯುವ ಕಾಲವಿದು. ಆದಷ್ಟು ನಿಮ್ಮ ಎಚ್ಚರಿಕೆಯಲ್ಲಿ ನೀವಿರಿ..ನಿಮ್ಮ ಸಮಸ್ಯೆ.ಏನೇ .ಇರಲಿ ಎಷ್ಟೇ ಕಠಿಣವಾಗಿರಲಿ…

  • ಸುದ್ದಿ

    ಕುಷ್ಠ ರೋಗಿಯ ಅನ್ನ, ಪಿಂಚಣಿ ಕಿತ್ತುಕೊಂಡ ಆಧಾರ್..! ಓದಿ ಈ ಮನಕಲುಕುವ ಸ್ಟೋರಿ…

    ಆಧಾರ್ ಕಾರ್ಡ್ ಎಂಬ ಸಾರ್ವತ್ರಿಕ ಗುರುತಿನ ಚೀಟಿ, ಒಂದೆಡೆ ಅಕ್ರಮ ನುಸುಳುಕೋರರನ್ನು ತಡೆಗಟ್ಟಲು, ಸರ್ಕಾರದ ಯೋಜನೆಗಳು ನೈಜ ಫಲಾನುಭವಿಗಳಿಗೆ ಸಿಗುವಂತೆ ಮಾಡಲು ಸಹಕಾರಿಯಾಗುತ್ತಿರುವ ಹೊತ್ತಲ್ಲೇ, ಇನ್ನೊಂದೆಡೆ ಹಲವು ಬಡವರ ಪಾಲಿಗೆ ಆಧಾರ್ ಕಾರ್ಡ್ ಒಂದು ಶಾಪವಾಗಿ ಪರಿಣಮಿಸಿದೆ!