ಬೆಂಗಳೂರು: ವಿದ್ಯುತ್ ಸರಬರಾಜು ಕಂಪೆನಿಗಳ ಪ್ರಸ್ತಾವನೆ ಮೇರೆಗೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ವಿದ್ಯುತ್ ದರ ಹೆಚ್ಚಳ ಮಾಡಿದ್ದು, ಪ್ರತಿ ಯೂನಿಟ್‍ಗೆ 33 ಪೈಸೆಯಂತೆ ಶೇ.4.80 ರಷ್ಟು ವಿದ್ಯುತ್ ದರ ಹೆಚ್ಚಿಸಿದ್ದು, ಏಪ್ರಿಲ್ 1 ರಿಂದಲೇ ಪರಿಷ್ಕೃತ ದರ ಪೂರ್ವಾನ್ವಯವಾಗಿ ಜಾರಿಗೆ ಬರಲಿದೆ. ರಾಜ್ಯದಲ್ಲಿರುವ ಬೆಸ್ಕಾಂ, ಮೆಸ್ಕಾಂ, ಚೆಸ್ಕಾಂ, ಹೆಸ್ಕಾಂ, ಜಸ್ಕಾಂ ವಿದ್ಯುತ್ ಸರಬರಾಜು ಕಂಪೆನಿಗಳು ಪ್ರತ್ಯೇಕವಾಗಿ ಎಲ್ಲಾ ವರ್ಗಗಳ ಗ್ರಾಹಕರಿಗೆ ಪ್ರತಿ ಯೂನಿಟ್‍ಗೆ 100 ರಿಂದ 167 ಪೈಸೆಗಳಷ್ಟು ವಿಭಿನ್ನ ಏರಿಕೆಗೆ ಪ್ರಸ್ತಾವನೆ ಸಲ್ಲಿಸಿದ್ದವು. ಬೆಸ್ಕಾಂ ಶೇ. 14.14, ಮೆಸ್ಕಾಂ 20.49, ಚೆಸ್ಕಾಂ 15.02, ಹೆಸ್ಕಾಂ 24.67 ಹಾಗೂ ಜಸ್ಕಾಂ 18.89 ರಷ್ಟು ಏರಿಕೆ ಹೆಚ್ಚಿಸುವಂತೆ ಒಟ್ಟಾರೆ ಶೇ.17.37 ರಷ್ಟು ದರ ಹೆಚ್ಚಳಕ್ಕೆ ಕರ್ನಾಟಕ ವಿದ್ಯುತ್ ನಿಯಂತ್ರಣ ಮಂಡಳಿಗೆ ಮನವಿ ಮಾಡಿದ್ದವು.
ಗೃಹಬಳಕೆ ಗ್ರಾಹಕರಿಗೆ ಅನ್ವಯವಾಗುವ ದರ: ಬೆಸ್ಕಾಂ ವ್ಯಾಪ್ತಿಯ ಹಾಗೂ ಇತರೆ ಪುರಸಭೆ ಪ್ರದೇಶಗಳ ಗೃಹಬಳಕೆ ಗ್ರಾಹಕರಿಗೆ ಹಾಗೂ ಸರ್ಕಾರಿ ವಿದ್ಯಾ ಸಂಸ್ಥೆಗಳು ಮತ್ತು ಆಸ್ಪತ್ರೆಗಳ ಸ್ಥಾವರಗಳಿಗೆ ಪ್ರತಿ ಯೂನಿಟ್‍ಗೆ 25 ಪೈಸೆ ಒಟ್ಟಾರೆ ಹೆಚ್ಚಳವಾಗಿದೆ. 30 ಯೂನಿಟ್‍ಗಳವರೆಗೆ ಮಾಸಿಕ ವಿದ್ಯುತ್ ಬಳಕೆಗೆ ಪ್ರತಿ ಯೂನಿಟ್‍ಗೆ ಪ್ರಸಕ್ತ ದರ 3.50 ರೂ.ನಿಂದ ರೂ. 3.75 ಕ್ಕೆ ಏರಿಸಲಾಗಿದೆ. 31-100 ಯೂನಿಟ್‍ವರೆಗಿನ ಬಳಕೆಗೆ ಪ್ರತಿ ಯೂನಿಟ್‍ಗೆ ರೂ.4.95 ರಿಂದ ರೂ.5.20 ಕ್ಕೆ ಏರಿಕೆಯಾಗಿದೆ. ಬೆಸ್ಕಾಂ ವ್ಯಾಪ್ತಿಯ ಗ್ರಾಮ ಪಂಚಾಯತಿ ಅಡಿಯ ಗ್ರಾಮೀಣ ಪ್ರದೇಶದ ಗೃಹ ಬಳಕೆದಾರರಿಗೆ 1-30 ಯೂನಿಟ್‍ವರೆಗೆ ಮಾಸಿಕ ಬಳಕೆಗೆ ಪ್ರಸಕ್ತ ರೂ.3.40 ಇದ್ದು, ಇದು ರೂ.3.65 ಕ್ಕೆ ಹಾಗೂ 31-100 ಯೂನಿಟ್‍ಗೆ ರೂ.4.65 ರಿಂದ ರೂ.4.90 ಕ್ಕೆ ಹೆಚ್ಚಿಸಲಾಗಿದೆ. 101-200 ಯೂನಿಟ್‍ಗೆ ರೂ.6.20 ರಿಂದ ರೂ.6.45 ಕ್ಕೆ ಏರಿಕೆಯಾಗಿದೆ.
ಎಸ್ಕಾಂಗಳ ನಗರ ಪಾಲಿಕೆ ಹಾಗೂ ಪುರಸಭೆ ಪ್ರದೇಶಗಳ ಗೃಹಬಳಕೆ ಗ್ರಾಹಕರಿಗೆ 1-300 ಯೂನಿಟ್‍ಗಳವರೆಗೆ ಪ್ರತಿ ತಿಂಗಳಿಗೆ ರೂ.3.70, 200 ಯೂನಿಟ್ ಮೇಲ್ಪಟ್ಟ ಬಳಕೆಗೆ ಪ್ರತಿ ಯೂನಿಟ್‍ಗೆ ರೂ.7.55- ರೂ.7.80 ಕ್ಕೆ ಏರಿಕೆಯಾಗಿದೆ. ಗ್ರಾಮಪಂಚಾಯಿತಿ ವ್ಯಾಪ್ತಿ ಗೃಹಬಳಕೆ ಗ್ರಾಹಕರಿಗೆ 1-30 ಯೂನಿಟ್‍ವರಗೆ ರೂ.36, 200 ಯೂನಿಟ್ ಮೇಲ್ಪಟ್ಟ ಬಳಕೆಗೆ ರೂ.7.05-7.30 ರಷ್ಟು ಹೆಚ್ಚಿಸಲಾಗಿದೆ. ಕೈಗಾರಿಕಾ ಬಳಕೆದಾರರಿಗೆ ಪ್ರಸಕ್ತ ಪ್ರತಿ ಯೂನಿಟ್‍ಗೆ 15 ಪೈಸೆಯಿಂದ 20 ಪೈಸೆಯಿರುತ್ತದೆ. ಬೆಸ್ಕಾಂ ವ್ಯಾಪ್ತಿ, ಪುರಸಭೆ ಎಲ್.ಟಿ.ಕೈಗಾರಿಕಾ ಬಳಕೆದಾರರಿಗೆ, ಮೊದಲ 500 ಯೂನಿಟ್‍ಗಳ ಮಾಸಿಕ ವಿದ್ಯುತ್ ಬಳಕೆಗೆ ಪ್ರತಿ ಯೂನಿಟ್‍ಗೆ ರೂ.5.65 ಹಾಗೂ 500 ಮೇಲ್ಪಟ್ಟ ಬಳಕೆಗೆ ಪ್ರತಿ ಯೂನಿಟ್‍ಗೆ ರೂ.6.95 ದರ ಹೆಚ್ಚಿಸಿದೆ. ಇತರ ಪ್ರದೇಶಗಳ ಬಳಕೆದಾರರಿಗೆ ಮೊದಲ 500 ಯೂನಿಟ್‍ಗಳಿಗೆ ರೂ.3.35, ಅದಕ್ಕೂ ಮೇಲ್ಪಟ್ಟ ಬಳಕೆಗೆ ರೂ.6.30 ಆಗಿದೆ. ವಾಣಿಜ್ಯ ಬಳಕೆದಾರರಿಗೆ ಪ್ರತಿ ಯೂನಿಟ್‍ಗೆ ರೂ.8 50, ಅದರ ಮೇಲ್ಪಟ್ಟ ಬಳಕೆಗೆ ಪ್ರತಿ ಯೂನಿಟ್‍ಗೆ ರೂ.9 ಗ್ರಾಮಾಂತರ ಪ್ರದೇಶದಲ್ಲಿ ಇದು ಆರಂಭಿಕ ಯೂನಿಟ್ ಗೆ ರೂ.7.50 ಹಾಗೂ 50 ಯೂನಿಟ್ ಮೀರಿದ ವಿದ್ಯುತ್ ಬಳಕೆಗೆ ಪ್ರತಿ ಯೂನಿಟ್‍ಗೆ ರೂ.8.50 ದರ ಹೆಚ್ಚಳ ಆಗುತ್ತದೆ. ಬೆಸ್ಕಾಂ, ಬಿಬಿಎಂಪಿ, ಮಹಾನಗರ ಪಾಲಿಕೆ ವ್ಯಾಪ್ತಿಯ ಪ್ರದೇಶ ಹಾಗೂ ಇತರೆ ಪ್ರದೇಶಗಳ ಹೆಚ್.ಟಿ. ವಾಣಿಜ್ಯ ಬಳಕೆದಾರರಿಗೆ ಪ್ರತಿ ಯೂನಿಟ್‍ಗೆ 20 ಪೈಸೆ ಏರಿಕೆಯಾಗಿದೆ. ಇತರೆ ವಿದ್ಯುತ್ ಸರಬರಾಜು ಕಂಪನಿಗಳ ವ್ಯಾಪ್ತಿಯ ಎಲ್ಲಾ ಪ್ರದೇಶಗಳಲ್ಲಿನ ಹೆಚ್.ಟಿ.ವಾಣಿಜ್ಯ ಬಳಕೆದಾರರಿಗೆ ಅನ್ವಯವಾಗುವ ವಿದ್ಯುತ್‍ಚ್ಛಕ್ತಿ ದರಗಳಲ್ಲಿ ಪ್ರತಿ ಯೂನಿಟ್‍ಗೆ 20 ಪೈಸೆಗಳ ಏರಿಕೆಯಾಗಿರುತ್ತದೆ. ಇತರೆ ವಿದ್ಯುತ್ ಸರಬರಾಜು ಕಂಪೆನಿಗಳ ವ್ಯಾಪ್ತಿಯ ಪುರಸಭೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಪ್ರದೇಶಗಳಲ್ಲಿನ ಎಲ್.ಟಿ.ಪ್ರವರ್ಗಕ್ಕೆ ಮೊದಲ 200 ಯೂನಿಟ್‍ಗಳ ಮಾಸಿಕ ವಿದ್ಯುತ್ ಬಳಕೆಗೆ ಪ್ರತಿ ಯೂನಿಟ್‍ಗೆ ಪರಿಷ್ಕೃತ ದರ ರೂ.6.90 ಹೆಚ್ಚಳವಾಗಿದೆ.
ಹೆಚ್.ಟಿ.ಪ್ರವರ್ಗದಲ್ಲಿ ವಿದ್ಯುತ್ ಪಡೆಯುವ ಬೆಸ್ಕಾಂ ವ್ಯಾಪ್ತಿಯಲ್ಲಿನ ಸರ್ಕಾರಿ ಆಸ್ಪತ್ರೆಗಳು ಮತ್ತು ಧರ್ಮಾರ್ಥ ಸಂಸ್ಥೆಗಳು ನಡೆಸುವ ಆಸ್ಪತ್ರೆಗಳು ಹಾಗೂ ಸರ್ಕಾರಿ ವಿದ್ಯಾ ಸಂಸ್ಥೆಗಳು ಮತ್ತು ಅನುದಾನಿತ ವಿದ್ಯಾ ಸಂಸ್ಥೆಗಳ ಮೊದಲ 1 ಲಕ್ಷ ಯೂನಿಟ್ ವಿದ್ಯುತ್ ಮಾಸಿಕ ಬಳಕೆಗೆ ಪರಿಷ್ಕೃತ ದರ ಪ್ರತಿ ಯೂನಿಟ್ ಗೆ ರೂ.6.85 ಆಗಿದೆ. ಬೆಸ್ಕಾಂ ವ್ಯಾಪ್ತಿಯಲ್ಲಿನ ಖಾಸಗಿ ವಿದ್ಯಾ ಸಂಸ್ಥೆಗಳು ಹಾಗೂ ಖಾಸಗಿ ಆಸ್ಪತ್ರೆಗಳ ಮೊದಲ ಒಂದು ಲಕ್ಷ ಯೂನಿಟ್ ಮಾಸಿಕ ವಿದ್ಯುತ್ ಬಳಕೆಗೆ ಪರಿಷ್ಕೃತ ದರ ಪ್ರತಿ ಯೂನಿಟ್‍ಗೆ ರೂ.7.85 ಆಗಲಿದೆ. ಇತರ ವಿದ್ಯುತ್ ಸರಬರಾಜು ಕಂಪನಿಗಳ ವ್ಯಾಪ್ತಿ ಪ್ರದೇಶಗಳಲ್ಲಿ ಮೊದಲ ಒಂದು ಲಕ್ಷ ಯೂನಿಟ್ ಮಾಸಿಕ ವಿದ್ಯುತ್ ಬಳಕೆಗೆ ಪರಿಷ್ಕೃತ ದರ ಯೂನಿಟ್‍ಗೆ ರೂ.7.80 ಹಾಗೂ ಒಂದು ಲಕ್ಷ ಯೂನಿಟ್‍ಗಳ ನಂತರದ ವಿದ್ಯುತ್ ಬಳಕೆಗೆ ಪ್ರತಿ ಯೂನಿಟ್‍ಗೆ ರೂ.8.20 ಆಗುತ್ತದೆ. ಹಸಿರು ದರ: ನವೀಕರಿಸಬಹುದಾದ ಇಂಧನ ಮೂಲಗಳಿಂದ ಉತ್ಪಾದಿಸುವ ವಿದ್ಯುತ್ ಖರೀದಿ ಮತ್ತು ಉಪಯೋಗವನ್ನು ಉತ್ತೇಜಿಸಲು ಹೆಚ್.ಟಿ.ಕೈಗಾರಿಕೆ ಮತ್ತು ಹೆಚ್.ಟಿ.ವಾಣಿಜ್ಯ ಗ್ರಾಹಕರು ಇಚ್ಛಿಸಿದಲ್ಲಿ ಅವರಿಗೆ ಅನ್ವಯವಾಗುವ ದರಕ್ಕಿಂತ ಪ್ರತಿ ಯೂನಿಟ್‍ಗೆ 50 ಪೈಸೆಯಷ್ಟು ಹೆಚ್ಚಿನ ಹಸಿರು ದರವನ್ನು ಮುಂದುವರೆಸಿರುವದಾಗಿ ಆಯೋಗ ತಿಳಿಸಿದೆ.
ಹಣ್ಣುಗಳನ್ನು ನಾವು ತಿಂದಷ್ಟು ನಮಗೆ ಆರೋಗ್ಯ ನಿರಂತರವಾಗಿರುತ್ತದೆ. ಅದರಲ್ಲಿಯೂ ಕೆಲವೊಂದು ನಿರ್ದಿಷ್ಟ ಹಣ್ಣುಗಳು ಆರೋಗ್ಯಕ್ಕೆ ಹಿತಕಾರಿಯಾಗಿದೆ. ಸಿಹಿಯಾದ ರುಚಿಯಿಂದ ಕೂಡಿದ ಹಲಸು ಆರೋಗ್ಯಕ್ಕೆ ನೀಡುವ ಕೊಡುಗೆ ಅಪಾರವಾದುದು.ಹಲಸಿನ ಹಣ್ಣು ತಿನ್ನುವುದರಿಂದ ಆಗುವ ಆರೋಗ್ಯಕರ ಲಾಭಗಳು ರಕ್ತದ ಒತ್ತಡವನ್ನು ಸಮತೋಲನವಾಗಿಸುತ್ತದೆಹಲಸಿನ ಹಣ್ಣಿನ ತೊಳೆಗಳಲ್ಲಿ ಪೊಟ್ಯಾಶಿಯಂ ಅಂಶ ಹೆಚ್ಚಾಗಿದ್ದು, ಅಧಿಕ ರಕ್ತದ ಒತ್ತಡ ಸಮಸ್ಯೆಯಿಂದ ಬಳಲುತ್ತಿರುವ ಮಂದಿಗೆ ಇದು ಬಹಳ ಸಹಕಾರಿ ಎಂದು ಹೇಳುತ್ತಾರೆ. ಏಕೆಂದರೆ ಪೊಟ್ಯಾಶಿಯಂ ಅಂಶ ಹೊಂದಿರುವ ಯಾವುದೇ ಆಹಾರ ಸೇವನೆ ಮಾಡುವುದರಿಂದ ದೇಹದಲ್ಲಿ ಸೋಡಿಯಂ ಅಂಶ…
ಹಲವಾರು ವಾರಗಳ ಹಿಂದೆ ತೈಲ ಬೆಳೆಗಳ ದರ ಏಳ ಎಗ್ಗಿಲ್ಲದೆ ಏರುತ್ತಲೇ ಇತ್ತು. ಈಗ ಹಲವಾರು ದಿನಗಳಿಂದ ದಿನದಿಂದ ದಿನಕ್ಕೆ ಪೆಟ್ರೋಲ್ ದರ ಇಳಿಕೆಯಗುತ್ತಿದೆ.ಭಾನುವಾರವಷ್ಟೇ 20 ಪೈಸೆ ಯಷ್ಟು ಕಡಿಮೆಯಾಗಿದೆ.ಒಟ್ಟಾರೆಯಾಗಿ ಇಲ್ಲಿಯವರೆಗೆ 7 ರುಪಾಯಿ 29 ಪೈಸೆ ಕಡಿಮೆಯಾಗಿದೆ.ಇದು ಆಗಸ್ಟ್ ೧೬ಕ್ಕೆ ಇದ್ದ ದರಕ್ಕೆ ಈಗ ತಲುಪಿದೆ. ಇದರ ಜೊತೆಗೆ ಡೀಸೆಲ್ ಬೆಲೆ ಕೂಡ ಲೀಟರ್ಗೆ 18 ಪೈಸೆ ಕಡಿಮೆಯಾಗಿದ್ದು 29 ದಿನಗಳಲ್ಲಿ ೩ರುಪಾಯಿ ೮೯ ಪೈಸೆ ಕಡಿಮೆಯಾಗಿದೆ. ಆಗಸ್ಟ್ ೧೫ಕ್ಕೆ ಹೋಲಿಸಿದ್ದಲ್ಲಿ ಆಗ ರಾಷ್ಟ್ರ ರಾಜಧಾನಿ…
ಬಿಸಿಲು,ಬಿಸಿಲು, ಎಲ್ಲಿ ನೋಡಿದರೂ ಬಿಸಿಲ ಬೇಗೆ, ಧಗೆ. ಇಷ್ಟು ದಿನ ಕಣ್ಣಿಗೆ, ಮನಸಿಗೆ ತಂಪಾಗಿದ್ದ ಬೆಂಗಳೂರು, ಈಗ ಬಿರು ಬಸಿಲಿನ ನಾಡಾಗಿದೆ. ಜನರಿಗೆ ಕುಳಿತಲ್ಲಿ ಕೂರಲಾಗದೆ, ನಿಂತಲ್ಲಿ ನಿಲ್ಲಲಾಗದ ಹಾಗೆ ಮಾಡಿದೆ ಈ ಬಿಸಿಲು. ಬೇಸಿಗೆಯು ಶುಭಾರಂಭವಾಗಿ 4 ದಿನ ಆಗಿಲ್ಲ ಆಗಲೇ ಜನರ ಮೈನೀರಿಳಿಸುತ್ತಿದೆ ಈ ಬೇಸಿಗೆ. ತಂಪು ತಂಪಾದ ತಂಪು ಪಾನೀಯಗಳ ಬಳಕೆ ಹೆಚ್ಚಾಗಿದೆ. ಹಾಗೆ ಕಲ್ಲಂಗಡಿ, ಕಿತ್ತಳೆ ಮತ್ತು ಎಳೆನೀರಿನ ಉಪಯೋಗ ಆಗಲೇ ಶುರುವಾಗಿದೆ. ನೀರಿನ ಕಷ್ಟ ಎದುರಾಗಿದೆ. ಪ್ರಾಣಿಗಳು ಪಕ್ಷಿಗಳಿಗೂ ಈ…
ರಾಮನಗರ ಹೊರವಲಯದ ಮಧುರಾ ಗಾರ್ಮೆಂಟ್ಸ್ ಗೆ ಸೇರಿದ ಬಸ್ ಪಲ್ಟಿ ಹೊಡೆದು 15ಕ್ಕೂ ಹೆಚ್ಚು ಮಹಿಳೆಯರಿಗೆ ಗಾಯ, ಬಸ್ ಮಾಗಡಿ ರಸ್ತೆಯ ಅಕ್ಕೂರಿನಿಂದ ಬರುತ್ತಿತ್ತು. ಈ ವೇಳೆ ಚಾಲಕ ವೇಗವಾಗಿ ಬಸ್ ಚಲಾಯಿಸಿ ಏಕಾಏಕಿ ಬ್ರೇಕ್ ಹಾಕಿದ್ದಾನೆ ಇದಕ್ಕೆ ಪರಿಣಾಮ ಬಸ್ ಪಲ್ಟಿ ಹೊಡೆದಿದೆ. ಚಾಲಕನ ಅಜಾಗರೂಕತೆಯಿಂದ ಗಾರ್ಮೆಂಟ್ಸ್ ಗೆ ಸೇರಿದ ಬಸ್ ಪಲ್ಟಿಯಾಗಿ 15ಕ್ಕೂ ಹೆಚ್ಚು ಮಹಿಳೆಯರಿಗೆ ಗಾಯವಾಗಿರುವ ಘಟನೆ ರಾಮನಗರ ತಾಲೂಕಿನ ಜಯಪುರ ಗ್ರಾಮದ ಬಳಿ ನಡೆದಿದೆ. ಈ ಘಟನೆಯಲ್ಲಿ ನಡೆದ ಗಾಯಾಳುಗಳಿಗೆ ಸರ್ಕಾರಿ ಆಸ್ಪತ್ರೆಯಲ್ಲಿ…
ಬಿಗ್ ಬಾಸ್ ಕನ್ನಡ ಏಳನೇ ಆವೃತ್ತಿಯ ಎರಡನೇ ವಾರ ಚೈತ್ರಾ ವಾಸುದೇವನ್ ಎಲಿಮಿನೇಟ್ ಆದರು. ದೊಡ್ಮನೆಯಿಂದ ಚೈತ್ರಾ ಅವರನ್ನ ಹೊರಗೆ ಕರೆದ ಸುದೀಪ್ ವೇದಿಕೆ ಮೇಲೆ ಮಾತುಕತೆ ಮುಂದುವರಿಸಿದರು. ಈ ವೇಳೆ ಚೈತ್ರಾ ವಾಸುದೇವನ್ ಅವರಿಗೆ ತಮ್ಮ ಎರಡು ವಾರದ ಜರ್ನಿ ಕುರಿತು VT (ವಿಡಿಯೋ ದೃಶ್ಯ) ತೋರಿಸಲಾಯಿತು. ಈ ವಿಡಿಯೋ ನೋಡಿದ ಚೈತ್ರಾ ವಾಸುದೇವನ್’ ಮೇಕಪ್ ಇಲ್ಲದ ದೃಶ್ಯ ಹೆಚ್ಚು ತೋರಿಸಿದ್ದಾರೆ’ ಒಂದು ವಿಚಾರಕ್ಕೆ ಕಾಮೆಂಟ್ ಮಾಡಿದರು. ಈ ಮಾತಿನಿಂದ ಬೇಸರಗೊಂಡ ಸುದೀಪ್ ಅವರು, ವೇದಿಕೆಯಲ್ಲೇ…