ನವದೆಹಲಿ: ಪ್ರತಿ ದಿನ ಬೈಯುತ್ತಿದ್ದಾರೆ ಎಂದು ಕೋಪದಲ್ಲಿ ಮಗನೊಬ್ಬ ತನ್ನ ತಂದೆಯನ್ನು ಕೊಲೆಗೈದು ದೇಹವನ್ನು 25 ಪೀಸ್ ಮಾಡಿ ಬ್ಯಾಗಿನಲ್ಲಿ ತುಂಬಿಸಿದ ಘಟನೆ ನವದೆಹಲಿಯಲ್ಲಿ ನಡೆದಿದೆ.
ಅಮನ್(22) ತಂದೆಯನ್ನೇ ಕೊಲೆ ಮಾಡಿದ ಮಗ. ಕೆಫೆ ಮಾಲೀಕನಾಗಿರುವ ಅಮನ್ ತಂದೆ ಸಂದೇಶ್ ಅಗರ್ ವಾಲ್(48) ದಿನ ಬೈಯುತ್ತಿದ್ದರು ಎಂದು ಕೊಲೆ ಮಾಡಿದ್ದಾನೆ. ಅಮನ್ ತನ್ನ ತಂದೆ ಸಂದೇಶ್ರನ್ನು ಕೊಲೆ ಮಾಡಿದ ನಂತರ ಅವರ ದೇಹವನ್ನು 25 ಪೀಸ್ ಮಾಡಿ ನಾಲ್ಕು ಬ್ಯಾಗ್ನಲ್ಲಿ ತುಂಬಿಸಿದ್ದಾನೆ.
A police car on the street in Chennai, India
ಈ ವಿಷಯ ತಿಳಿದ ಪೊಲೀಸರು ಮಂಗಳವಾರ ರಾತ್ರಿ ಪೂರ್ವ ದೆಹಲಿಯ ಶಾದಾರಾದಲ್ಲಿ ಆರೋಪಿ ಅಮನ್ನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಅಮನ್ ತಾನು ಕೊಲೆ ಮಾಡಿದ್ದಾಗಿ ಪೊಲೀಸರ ಬಳಿ ಒಪ್ಪಿಕೊಂಡಿದ್ದಾನೆ. ನನ್ನ ತಂದೆ ನನಗೆ ಯಾವಾಗಲೂ ಬೈಯುತ್ತಿದ್ದರು. ಹಾಗಾಗಿ ಕೋಪದಲ್ಲಿ ನಾನು ಅವರನ್ನು ಕೊಲೆ ಮಾಡಿದೆ. ಕೊಲೆ ಮಾಡಿದ ಬಳಿಕ ಅವರ ದೇಹವನ್ನು 25 ಪೀಸ್ ಮಾಡಿ ಬ್ಯಾಗಿನಲ್ಲಿ ತುಂಬಿಸಿ ಎಸೆಯಲು ತೀರ್ಮಾನಿಸಿದ್ದೆ ಎಂದು ಆರೋಪಿ ಅಮನ್ ಹೇಳಿದ್ದಾನೆ.
ಈ ಕೊಲೆಯಲ್ಲಿ ಅಮನ್ ತಾಯಿ ಹಾಗೂ ಒಡಹುಟ್ಟಿದವರು ಭಾಗಿಯಾಗಿದ್ದಾರೆ. ಆಸ್ತಿ ವಿಚಾರವಾಗಿ ಅಮನ್ ತನ್ನ ತಂದೆಯನ್ನು ಕೊಲೆ ಮಾಡಿದ್ದಾನೆ ಎಂದು ಸಂದೇಶ್ ಕುಮಾರ್ ಅವರ ಸಹೋದರ ಪೊಲೀಸರ ಬಳಿ ಆರೋಪಿಸಿದ್ದಾರೆ.
ಕೋಲಾರ ನಗರದ ಪ್ರಧಾನ ಅಂಚೆ ಕಚೇರಿಯಲಿ ಶನಿವಾರ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಕೋಲಾರ ಜಿಲ್ಲೆಯ ಟೊಮೇಟೋ ಕುರಿತು ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. ಇತ್ತೀಚಿನ ದಿನಗಳಲ್ಲಿ ಟೊಮೇಟೋ ಕೋಲಾರ ಜಿಲ್ಲೆಯ ಪ್ರಧಾನ ತೋಟಗಾರಿಕೆ ಬೆಳೆಯಾಗಿ ಹೊರ ಹೊಮ್ಮಿದೆ. ರೈತರು ವರ್ಷದ ೩೬೫ ದಿನವೂ ಟೊಮೇಟೋವನ್ನು ಬೆಳೆಯುತ್ತಿದ್ದಾರೆ. ಕೋಲಾರದ ಎಪಿಎಂಸಿ ಮಾರುಕಟ್ಟೆಯೂ ಏಷ್ಯಾದ ಎರಡನೇ ಅತಿ ದೊಡ್ಡ ಟೊಮೇಟೋ ಮಾರುಕಟ್ಟೆಯಾಗಿ ಪ್ರಸಿದ್ಧಿ ಪಡೆದಿದೆ. ಈ ಹಿನ್ನೆಲೆಯಲ್ಲಿ ಟೊಮೇಟೋ ಬೆಳೆಯನ್ನು ಕೋಲಾರದ ಒಂದು ಜಿಲ್ಲೆ ಒಂದು…
ಶನಿವಾರ ಆರಂಭವಾದ ರಾಜೀನಾಮೆ ಪರ್ವ ತಾತ್ಕಾಲಿಕ ಬ್ರೇಕ್ ಪಡೆದುಕೊಂಡಿದ್ದರೂ ಸೋಮವಾರ ಮತ್ತೆ ಮುಂದುವರಿಯುವ ಸಾಧ್ಯತೆ ಹೆಚ್ಚಾಗಿದೆ. ಅಮೆರಿಕ ಪ್ರವಾಸದಲ್ಲಿದ್ದ ಸಿಎಂ ಕುಮಾರಸ್ವಾಮಿ ಆಗಮಿಸಿದ್ದು ಡ್ಯಾಮೇಜ್ ಕಂಟ್ರೋಲ್ ಗೆ ಇರುವ ತಂತ್ರಗಳನ್ನು ಮೊದಲು ಹುಡುಕುತ್ತಿದ್ದಾರೆ. ಕುಮಾರಸ್ವಾಮಿ ವಿಮಾನ ನಿಲ್ದಾಣದಿಂದ ಬಂದವರೆ ತಕ್ಷಣ ಸಭೆ ಮೇಲೆ ಸಭೆ ಆರಂಭಿಸಿದರು. ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್, ಮಾಜಿ ಸಿಎಂ ಸಿದ್ದರಾಮಯ್ಯ, ಸಿಎಂ ಕುಮಾರಸ್ವಾಮಿ, ಪರಮೇಶ್ವರ ಸೇರಿದಂತೆ ಎಲ್ಲ ಪ್ರಮುಖರು ಅತೃಪ್ತರ ಸವಾಲು ಮೆಟ್ಟಿ ನಿಲ್ಲಲು ಏನು ಮಾಡಬೇಕು ಎಂದು ಚರ್ಚೆ ನಡೆಸಿದರು. ಆದರೆ…
ಸಿಲಿಕಾನ್ ಸಿಟಿಯ ಕೆಂಗೇರಿ ರೈಲ್ವೆ ನಿಲ್ದಾಣದಲ್ಲಿ ಹೂವು ಮಾರುತ್ತಿದ್ದ ಬಾಲಕಿಯನ್ನು ವಸತಿ ಶಾಲೆಗೆ ಸೇರಿಸಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕಾರ್ಮಿಕ ಇಲಾಖೆ ಅಧಿಕಾರಿಗಳು ಸಂಗೀತಾಳ ತಂದೆ, ತಾಯಿಯ ಮನವೊಲಿಸಿ ಕೊನೆಗೂ ಬಾಲಕಿಗೆ ಶಿಕ್ಷಣ ಕಲ್ಪಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಬಾಲಕಿ ರಾಮನಗರದ ಕೈಲಾಂಚದಲ್ಲಿರುವ ವಸತಿ ಶಾಲೆಯಲ್ಲಿ 7ನೇ ತರಗತಿಗೆ ದಾಖಲಾತಿ ಪಡೆದಿದ್ದಾಳೆ. ಮನೆಯಲ್ಲಿ ಕಡು ಬಡತನವಿರುವ ಕಾರಣಕ್ಕೆ ತಂದೆ ತಾಯಿ ಇದ್ದರೂ ಕೆಂಗೇರಿ ರೈಲ್ವೆ ನಿಲ್ದಾಣದಲ್ಲಿ ಸಂಗೀತಾ ಹೂವು ಮಾರುತ್ತಿದ್ದಳು. ಸಂಗೀತ ತಂದೆ…
ಮುಂದಿನ ತಿಂಗಳಿಂದ 500 ಕಿ.ಮೀ.ಗಿಂತ ಹೆಚ್ಚು ದೂರ ಸಂಚರಿಸುವ ರೈಲುಗಳ ಪ್ರಯಾಣದ ಅವಧಿಯನ್ನು ಸ್ವಲ್ಪ ಕಡಿಮೆ ಮಾಡಲು ಭಾರತೀಯ ರೈಲ್ವೆ ನಿರ್ಧರಿಸಿದೆ ಎಂದು ಹಿರಿಯ ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತುಮಕೂರು: ಸುಳ್ವಾಡಿ ವಿಷ ಪ್ರಸಾದ ದುರಂತ ಮರೆಮಾಚುವ ಮುನ್ನವೇ ತುಮಕೂರು ಜಿಲ್ಲೆ ಅಂತಹದ್ದೇ ಘಟನೆ ಮರುಕಳಿಸಿದ್ದು, ಓರ್ವ ಬಾಲಕ ಸಾವನ್ನಪ್ಪಿದ್ದಾನೆ. ಶಿರಾ ತಾಲೂಕಿನ ವೀರಭದ್ರ (16) ಮೃತ ಬಾಲಕ. ಗಂಗಾಧರ್, ತಿಪ್ಪೇಸ್ವಾಮಿ, ರುದ್ರೇಶ್, ನಾಗರತ್ನ, ಪವನ್, ಅರ್ಪಿತಾ, ವಿರೂಪಾಕ್ಷ ಸೇರಿದಂತೆ 20ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದಾರೆ. ಶಿರಾ ವ್ಯಾಪ್ತಿಯ ಜನರಿಗೆ ಶಿರಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಬೆಂಗಳೂರಿನಿಂದ ಬಂದಿದ್ದ ಭಕ್ತರಿಗೆ ಬೆಂಗಳೂರಿನಲ್ಲಿಯೇ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ.ಆಗಿದ್ದೇನು?: ಪಾವಗಡ ತಾಲೂಕಿನ ನಿಡಗಲ್ಲು ಗ್ರಾಮದ ವೀರಭಧ್ರಸ್ವಾಮಿ ದೇವಾಲಯದಲ್ಲಿ ಸೋಮವಾರ ವಿಶೇಷ…