ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮಹಿಳೆಯೊಬ್ಬಳು ಪತಿಯ ರುಂಡ ಕತ್ತರಿಸಿ, ಅದನ್ನು ಪ್ಲಾಸ್ಟಿಕ್ ಬ್ಯಾಗ್ನಲ್ಲಿ ಹಾಕಿಕೊಂಡು ಪೊಲೀಸ್ ಠಾಣೆಗೆ ಬಂದ ಘಟನೆ ಅಸ್ಸಾಂನಲ್ಲಿ ನಡೆದಿದೆ.ಸೋನಿಟ್ಪುರ್ ಜಿಲ್ಲೆಯ ಮಜ್ಗಾಂವ್ನ ನಿವಾಸಿ ಗುಣೇಶ್ವರಿ ಬರ್ಕಟಕಿ (48) ಕೊಲೆ ಮಾಡಿದ ಮಹಿಳೆ. ಮುಧಿರಾಮ್ ಕೊಲೆಯಾದ ಪತಿ. ಘಟನೆಯು ಮೇ 28ರಂದು ನಡೆದಿದ್ದು, ಮಹಿಳೆಗೆ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದೆ.

ಮುಧಿರಾಯ್ ಮದ್ಯ ವ್ಯಸನಿಯಾಗಿದ್ದು, ಮನೆಯಲ್ಲಿ ನಿತ್ಯವೂ ಪತ್ನಿ ಗುಣೇಶ್ವರಿಗೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದ. ಅಷ್ಟೇ ಅಲ್ಲದೆ ಕೊಡಲಿಯಿಂದ ಹಲ್ಲೆ ಕೂಡ ಮಾಡಿದ್ದ. ಹೀಗಾಗಿ ಪತಿಯಿಂದ ದೂರ ಇರಲು ಗುಣೇಶ್ವರಿ ನಿರ್ಧರಿಸಿದ್ದಳು. ಆದರೆ ಇಬ್ಬರು ಗಂಡು ಮಕ್ಕಳು ಹಾಗೂ ಮೂವರು ಹೆಣ್ಣ ಮಕ್ಕಳ ಭವಿಷ್ಯದ ಉದ್ದೇಶದಿಂದ ಪತಿಯ ಜೊತೆಗೆ ವಾಸವಾಗಿದ್ದಳು.

ಎಂದಿನಂತೆ ಮೇ 20ರಂದು ಮದ್ಯ ಸೇವಿಸಿ ಮನೆಗೆ ಬಂದಿದ್ದ ಮುಧಿರಾಯ್ ಪತ್ನಿಯ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದ. ಪತಿಯ ವರ್ತನೆ, ಕ್ರೂರತೆಯಿಂದ ಕೋಪಗೊಂಡ ಗುಣೇಶ್ವರಿ ಹಲ್ಲೆ ಮಾಡಿದ್ದಾಳೆ. ಬಳಿಕ ಪತಿಯ ರುಂಡವನ್ನು ಕತ್ತರಿಸಿ, ಪ್ಲಾಸ್ಟಿಕ್ ಬ್ಯಾಗ್ನಲ್ಲಿ ಹಾಕಿಕೊಂಡು ಬಂದಿದ್ದಳು ಎಂದು ಲಖಿಮ್ಪುರ್ ಠಾಣೆಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ವಿಚಾರಣೆ ನಡೆಸಿದ ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.ಮಂಡ್ಯದಲ್ಲಿ ಇಂತಹದ್ದೇ ಘಟನೆ ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ನಡೆದಿತ್ತು. ತಾಯಿಯನ್ನು ಬೈದಿದ್ದಕ್ಕೆ ಮಳವಳ್ಳಿ ತಾಲೂಕಿನ ಚಿಕ್ಕಬಾಗಿಲು ಗ್ರಾಮದ ಪಶುಪತಿ ತನ್ನ ಸ್ನೇಹಿತನ ರುಂಡ ಕತ್ತರಿಸಿದ್ದ. ಬಳಿಕ ಅದನ್ನು ಹಿಡಿದುಕೊಂಡು ಠಾಣೆಗೆ ಬಂದು ಪೊಲೀಸರಿಗೆ ಶರಣಾಗಿದ್ದ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಹಲವು ದೇಶಗಳಲ್ಲಿ ಹಲವು ರೀತಿಯ ಚಿತ್ರ ವಿಚಿತ್ರ ಪದ್ಧತಿ, ಸಂಪ್ರದಾಯಗಳು ಈಗಲೂ ರೂಢಿಯಲ್ಲಿವೆ. ಕೆಲವು ಸ್ಥಳಗಳಲ್ಲಿ ಅನಾದಿಕಾಲದಿಂದ ಬಂದ ಪದ್ಧತಿಗಳನ್ನು ಈಗಲೂ ಸಹ ಆಚರಿಸಿಕೊಂಡು ಬರಲಾಗ್ತಿದೆ. ನಮಗೆಲ್ಲಾ ಗೊತ್ತಿರುವಂತೆ ಹೆಣ್ಣು ಮಕ್ಕಳ ತಂದೆಯಾದವನಿಗೆ ಅವರಿಗೆ ಯೋಗ್ಯನಾದ ಗಂಡನ್ನು ಹುಡುಕಿ ಮದುವೆ ಮಾಡುವುದೇ ಅತೀ ದೊಡ್ಡ ಜವಾಬ್ದಾರಿಯಾಗಿರುತ್ತೆ.ಇದಕ್ಕಾಗಿ ತಂದೆಯಾದವನು ತುಂಬಾ ಕಷ್ಟಪಟ್ಟು ಮಗಳ ಮಾಡುವೆ ಮಾಡುತ್ತಾನೆ.ಆದ್ರೆ ಈ ಗ್ರಾಮದಲ್ಲಿ ಮಗಳಿಗೆ ವರನನ್ನು ಹುಡುಕಬೇಕಾಗಿಲ್ಲ. ಶಾಕಿಂಗ್ ವಿಷಯ ಅದರಲ್ಲೂ ವಿಚಿತ್ರ ಏನೆಂದರೆ ತಾನು ಸಾಕಿ ಸಲುಹಿದ ಮಗಳನ್ನು ತಂದೆಯೇ ಮದುವೆಯಾಗ್ತಾನೆ….
ರಾಜಸ್ತಾನ ಪೊಲೀಸರು ಸ್ವಯಂಘೋಷಿತ ದೇವಮಾನವ ಕುಲದೀಪ್ ಸಿಂಗ್ ಝಾಲಾ ಎಂಬಾತನನ್ನು ಬಂಧಿಸಿದ್ದಾರೆ. 20 ವರ್ಷದ ಯುವಕ ಯುವರಾಜ್ ಸಿಂಗ್ ಆತ್ಮಹತ್ಯೆ ಪ್ರಕರಣದಲ್ಲಿ ಈತನ ಬಂಧನವಾಗಿದೆ. ದೇವತೆಯರಾದ ಶಕ್ತಿ ಹಾಗೂ ಜಗದಂಬೆ ತನ್ನಲ್ಲಿ ಪುನರ್ಜನ್ಮ ಪಡೆದಿದ್ದಾರೆ ಅಂತಾ ಕುಲದೀಪ್ ಹೇಳಿಕೊಳ್ತಾನೆ. ನವರಾತ್ರಿ ಸಮಯದಲ್ಲಿ ಈತ ಮಹಿಳೆಯರಂತೆ ವೇಷ ಧರಿಸಿ ಲಿಪ್ ಸ್ಟಿಕ್ ಹಚ್ಚಿಕೊಳ್ತಾನೆ. ಈತನನ್ನು ಜನ ಲಿಪ್ ಸ್ಟಿಕ್ ಬಾಬಾ ಎಂದೇ ಕರೆಯುತ್ತಾರೆ. ಮಗನ ಸಾವಿಗೆ ಬಾಬಾ ಕಾರಣ ಅಂತಾ ಯುವರಾಜ್ ತಂದೆ ಸೋಹನ್ ಸಿಂಗ್ ಪೊಲೀಸರಿಗೆ ದೂರು…
ಗ್ಯಾಸ್ ಬುಕ್ ಮಾಡಿ 20 ದಿನವಾದರೂ ಗ್ಯಾಸ್ ಸಿಲಿಂಡರ್ಗಳು ಜನರಿಗೆ ಸಿಗುತ್ತಿಲ್ಲ. ಪರಿಸ್ಥಿತಿ ಹೀಗೆ ಮುಂದುವರೆದರೆ ಅಡುಗೆ ಮಾಡಲು ಪರದಾಡುವ ಪರಿಸ್ಥಿತಿ ಎದುರಾಗಲಿದೆ. ಬೆಂಗಳೂರು: ಮಂಗಳೂರಿನ ಭಾರತ್ ಗ್ಯಾಸ್ ಪ್ಲಾಂಟ್ನಲ್ಲಿ ತಾಂತ್ರಿಕ ದೋಷ ಉಂಟಾಗಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಬಿಪಿ ಗ್ಯಾಸ್ ಸಿಲಿಂಡರ್ ಸರಬರಾಜು ಸ್ಥಗಿತಗೊಂಡಿದೆ. ಇದರಿಂದಾಗಿ ಜನ ಸಾಮಾನ್ಯರು ಅಡುಗೆ ಮಾಡಲು ಪರದಾಡುವ ಪರಿಸ್ಥಿತಿ ಉದ್ಬವವಾಗಿದೆ. ಮಂಗಳೂರು ಭಾರತ್ ಗ್ಯಾಸ್ ಪ್ಲಾಂಟ್ನಿಂದ ನೆಲಮಂಗಲ ಸಮೀಪದ ಸೋಲೂರು ಪ್ಲಾಂಟ್ಗೆ ಲಿಕ್ವಿಡ್ ಗ್ಯಾಸ್ ಸರಬರಾಜಾಗುತ್ತದೆ. ಆದರೆ, ಪ್ಲಾಂಟ್ನಲ್ಲಿ ತಾಂತ್ರಿಕ ಸಮಸ್ಯೆ…
ಮೇಷ ರಾಶಿ ಭವಿಷ್ಯ (Saturday, December 4, 2021) ನಿಮ್ಮ ದೈಹಿಕ ಆರೋಗ್ಯವನ್ನು ಸುಧಾರಿಸಲು ಸಮತೋಲಿತ ಆಹಾರ ತೆಗೆದುಕೊಳ್ಳಿ ಇಂದು ನೀವು ನಿಮ್ಮ ಮನೆಯ ಸದಸ್ಯರನ್ನು ಎಲ್ಲಿಗಾದರೂ ಸುತ್ತಾಡಲು ಕರೆದುಕೊಂಡು ಹೋಗಬಹುದು ಮತ್ತು ನಿಮ್ಮ ಸಾಕಷ್ಟು ಹಣವು ಖರ್ಚಾಗಬಹುದು ನಿಮ್ಮ ಜೊತೆಗಿರುವ ಯಾರಾದರೂ ನಿಮ್ಮ ಇತ್ತೀಚಿನ ಕ್ರಮಗಳಿಂದ ಕಿರಿಕಿರಿಗಳ್ಳಬಹುದು. ನ್ಯಾಯಯುತವಾದ ಮತ್ತು ಉದಾರ ಪ್ರೀತಿಯಿಂದ ಪುರಸ್ಕೃತಗೊಳ್ಳುವ ಸಾಧ್ಯತೆಯಿದೆ. ಇಂದು ಸಂವಹನ ನಿಮ್ಮ ಬಲವಾಗಿರುತ್ತದೆ. ನಿಮ್ಮ ಸಂಗಾತಿಯಿಂದ ನೀವು ಇಂದು ವಿಶೇಷ ಗಮನ ಪಡೆಯುತ್ತೀರಿ. ಬಹಳ ಸಮಯದ ನಂತರ…
ಮಾನವನ ಜೀವನಕ್ಕೆ ಸಂಚಕಾರ ತರುವ ಕಾಯಿಲೆ ಇದು. ದೇಹದ ಭಾಗಗಳನ್ನು ನಿತ್ರಾಣಗೊಳಿಸಿ, ನಿರ್ದಿಷ್ಟ ಭಾಗಕ್ಕೆ ಜೀವವೇ ಇಲ್ಲದಂತೆ ಮಾಡಿಬಿಡುವ ಕಾಯಿಲೆ ಪಾರ್ಶ್ವವಾಯು.
ಮೆದುಳಿಗೆ ಆಗುವ ಆಘಾತವೇ ಪಾಶ್ವವಾಯು ಆಕ್ರಮಿಸಲು ಕಾರಣ. ರಕ್ತಪರಿಚಲನೆಯ ಕೊರತೆಯಿಂದ ಅಥವಾ ಮೆದುಳಿನಲ್ಲಿ ಆಗುವ ರಕ್ತಸ್ರಾವದಿಂದ ಪಾಶ್ವವಾತ ಕಾಣಿಸಿಕೊಳ್ಳುತ್ತದೆ.
ನಮ್ಮ ಭಾರತೀಯ ಸನಾತನ ಹಿಂದೂ ಸಂಸ್ಕೃತಿಯಲ್ಲಿ ಸ್ತೋತ್ರ ಮತ್ತು ಮಂತ್ರಗಳಿಗೆ ವಿಶೇಷ ಸ್ಥಾನವಿದೆ. ಹಾಗೆಯೇ ಪ್ರತಿಯೊಂದು ಗುರಿ ಉದ್ದೇಶಗಳು ಸಾಕಾರಗೊಳ್ಳುವುದಕ್ಕೆ ಪ್ರತ್ಯೇಕ ಮಂತ್ರಗಳನ್ನು ಆಧ್ಯಾತ್ಮಿಕ ಚಿಂತಕರು ನೀಡಿದ್ದಾರೆ.