ಸುದ್ದಿ

ಮೋದಿ ಸರಕಾರದಿಂದ ಕೊನೆಯ ಬಜೆಟ್..ಮಧ್ಯಮ ವರ್ಗಕ್ಕೆ ಬಂಪರ್ ಆಫರ್!ಈ ಬಜೆಟ್ ನಿಂದ ನಿಮಗೆಷ್ಟು ಲಾಭ..ಇಲ್ಲಿದೆ ಸಂಪೂರ್ಣ ಮಾಹಿತಿ…

230

ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಕೇಂದ್ರ ಸರ್ಕಾರದ ಕೊನೆ ಬಡ್ಜೆಟ್ ಮಂಡಿಸಿರುವ ಕೇಂದ್ರ ಹಣಕಾಸು ಸಚಿವರ ಪಿಯೂಶ್ ಗೋಯಲ್ ಮಧ್ಯಮ ವರ್ಗಕ್ಕೆ ಭರಪೂರ ಕೊಡುಗೆಗಳನ್ನು ನೀಡಿದ್ದಾರೆ.

 • ಹೊಸ ಪಿಂಚಣಿ ಯೋಜನೆಯ ಅನುದಾನವನ್ನು ಸರ್ಕಾರ ಶೇ. 4ರಿಂದ 14ಕ್ಕೆ ಹೆಚ್ಚಳ ಮಾಡಿದೆ.
 • ಹಾಲಿ ಇರುವ ಆದಾಯ ತೆರಿಗೆ ಮಿತಿಯನ್ನು 2.50 ಲಕ್ಷ ರೂ. ನಿಂದ 5 ಲಕ್ಷ ರೂ.ಗಳಿಗೆ ಏರಿಕೆ ಮಾಡಿದೆ. ಒಟ್ಟು 5 ಲಕ್ಷ ರೂ. ವರೆಗಿನ ಮಿತಿಯನ್ನು ಏರಿಸಿದೆ. ಇದರ ಜೊತೆಯಲ್ಲಿ ಹೂಡಿಕೆ ಮಾಡಿದರೆ 6.5 ಲಕ್ಷ ರೂ. ವಿನಾಯಿತಿ, ಗೃಹ ಸಾಲ 2.5 ಲಕ್ಷ ರೂ. ಟ್ಯಾಕ್ಸ್ ಕಟ್ಟಬೇಕಿಲ್ಲ, ಶೈಕ್ಷಣಿಕ ಸಾಲ ಪಡೆದುಕೊಂಡಿದ್ದರೆ ತೆರಿಗೆ ವಿನಾಯಿತಿಯನ್ನು ಪ್ರಕಟಿಸಿದೆ.
 • ಹೈನುಗಾರಿಕೆ ಉತ್ತೇಜನಕ್ಕೆ ಕಾಮದೇನು ಯೋಜನೆ ಜಾರಿ. ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ರೈತರಿಗೆ ಸಾಲ ನೀಡಲಾಗುವುದು.
 • 21 ಸಾವಿರ ರೂ.ಗೆ ಸಂಬಳ ಪಡೆಯುವ ಕಾರ್ಮಿಕ ವರ್ಗದವರಿಗೆ 7 ಸಾವಿರ ಬೋನಸ್ ಸಿಗಲಿದೆ. ಗ್ರಾಚ್ಯೂಟಿ ಮೊತ್ತವನ್ನು 10 ಲಕ್ಷದಿಂದ 30 ಲಕ್ಷಕ್ಕೆ ಹೆಚ್ಚಿಸಲಾಗಿದೆ.ಕೆಲಸದ ವೇಳೆ ಕಾರ್ಮಿಕ ಮೃತ ಪಟ್ಟರೆ 6 ಲಕ್ಷ ಪರಿಹಾರ.
 • ಮನೆ ಖರೀದಿಸುವ ಮಧ್ಯಮ ವರ್ಗದವರಿಗೆ ಜಿಎಸ್‌ಟಿಯಲ್ಲಿ ವಿನಾಯಿತಿ.ಮನೆ ಮಾಲೀಕ ಬಾಡಿಗೆಯಾಗಿ ಪಡೆಯುವ ಹಣ ಅಂದ್ರೆ ಎರಡನೇ ಮನೆಯ ಮೇಲಿನ ಆದಾಯಕ್ಕೆ ಎರಡು ವರ್ಷ ತೆರಿಗೆ ವಿನಾಯಿತಿ.
 • ಪ್ರಧಾನ ಮಂತ್ರಿ ಶ್ರಮಯೋಗಿ ಮನಧನ್ ಮೆಗಾ ಪೆನ್ಷನ್ ಯೋಜನೆ ಅಡಿ ಕಾರ್ಮಿಕರಿಗೆ 60 ವರ್ಷದ ಬಳಿಕ 3 ಸಾವಿರ ರೂ. ಪ್ರತಿ ತಿಂಗಳು ಮಾಸಿಕ ಪಿಂಚಣಿ ಸಿಗಲಿದ್ದು, ಇದರಿಂದ 10 ಕೋಟಿ ಕಾರ್ಮಿಕರಿಗೆ ಲಾಭ ಸಿಗಲಿದೆ.
 • ಗೃಹ ಸಾಲ 2 ಲಕ್ಷದರೆಗೂ ತೆರಿಗೆ ವಿನಾಯಿತಿ ನೀಡಲಾಗಿದ್ದು,2.5 ಲಕ್ಷದವರೆಗೂ ಮನೆ ಬಾಡಿಗೆಗೆ ತೆರಿಗೆ ಕಟ್ಟುವಂತಿಲ್ಲ.ಈ ಮೊದಲು 1.80 ಲಕ್ಷದವರೆಗೆ ಮಾತ್ರ ಇತ್ತು.
 • ಕೇಂದ್ರ ಸರ್ಕಾರದ ಈ ಬಜೆಟ್ ನಲ್ಲಿ ಬ್ಯಾಂಕ್ ಮತ್ತು ಅಂಚೆ ಕಚೇರಿ ಠೇವಣಿಯ ಟಿಡಿಎಸ್ ಮಿತಿ ೧೦ ಸಾವಿರದಿಂದ ೪೦ ಸಾವಿರಕ್ಕೆ ಏರಿಕೆ.

About the author / 

admin

Categories

Date wise

 • ಹಲಸಿನ ಹಣ್ಣು ತಿನ್ನುವುದರಿಂದ ಆಗುವ ಆರೋಗ್ಯಕರ ಲಾಭಗಳು!!

  ಹಣ್ಣುಗಳನ್ನು ನಾವು ತಿಂದಷ್ಟು ನಮಗೆ ಆರೋಗ್ಯ ನಿರಂತರವಾಗಿರುತ್ತದೆ. ಅದರಲ್ಲಿಯೂ ಕೆಲವೊಂದು ನಿರ್ದಿಷ್ಟ ಹಣ್ಣುಗಳು ಆರೋಗ್ಯಕ್ಕೆ ಹಿತಕಾರಿಯಾಗಿದೆ. ಸಿಹಿಯಾದ ರುಚಿಯಿಂದ ಕೂಡಿದ ಹಲಸು ಆರೋಗ್ಯಕ್ಕೆ ನೀಡುವ ಕೊಡುಗೆ ಅಪಾರವಾದುದು.ಹಲಸಿನ ಹಣ್ಣು ತಿನ್ನುವುದರಿಂದ ಆಗುವ ಆರೋಗ್ಯಕರ ಲಾಭಗಳು ರಕ್ತದ ಒತ್ತಡವನ್ನು ಸಮತೋಲನವಾಗಿಸುತ್ತದೆಹಲಸಿನ ಹಣ್ಣಿನ ತೊಳೆಗಳಲ್ಲಿ ಪೊಟ್ಯಾಶಿಯಂ ಅಂಶ ಹೆಚ್ಚಾಗಿದ್ದು, ಅಧಿಕ ರಕ್ತದ ಒತ್ತಡ ಸಮಸ್ಯೆಯಿಂದ ಬಳಲುತ್ತಿರುವ ಮಂದಿಗೆ ಇದು ಬಹಳ ಸಹಕಾರಿ ಎಂದು ಹೇಳುತ್ತಾರೆ. ಏಕೆಂದರೆ ಪೊಟ್ಯಾಶಿಯಂ ಅಂಶ ಹೊಂದಿರುವ ಯಾವುದೇ ಆಹಾರ ಸೇವನೆ ಮಾಡುವುದರಿಂದ ದೇಹದಲ್ಲಿ ಸೋಡಿಯಂ ಅಂಶ…

ಏನ್ ಸಮಾಚಾರ