ಬೆಂಗಳೂರು: ಸಿಎಂ ಕುಮಾರಸ್ವಾಮಿ ಕಲಾಪದಲ್ಲಿ ಮಾಡಿದ ಭಾಷಣದಲ್ಲಿ ತಮ್ಮ ಪತ್ನಿ ಅನಿತಾ ಕುಮಾರಸ್ವಾಮಿ ಅವರನ್ನು ಹೊಗಳಿದ್ದಾರೆ. ಆಕೆ ಪ್ರತಿ ಹಂತದಲ್ಲೂ ನನ್ನ ಜತೆಯಲ್ಲಿದ್ದಾಳೆ ಎಂದು ಹೇಳಿದರು. ಪತ್ನಿ ಹಾಗೂ ಶಾಸಕಿ ಅನಿತಾ ಕುಮಾರಸ್ವಾಮಿ ಅವರನ್ನು ಉಸ್ತುವಾರಿ ಸಿಎಂ ಸದನದಲ್ಲಿ ಕೊಂಡಾಡಿದ್ದಾರೆ. ಇನ್ನೊಂದೆಡೆ ಸಾಮಾಜಿಕ ಜಾಲತಾಣಗಳ ವಿರುದ್ಧ ಕುಮಾರಸ್ವಾಮಿ ಕೆಂಡಾಮಂಡಲವಾಗಿದ್ದಾರೆ.
ವಿಶ್ವಾಸಮತ ಯಾಚನೆ ನಿರ್ಣಯದ ಚರ್ಚೆಗೆ ಉತ್ತರಿಸುವ ವೇಳೆ, ನಾನು ಉದ್ದೇಶ ಪೂರ್ವಕವಾಗಿ ರಾಜಕೀಯಕ್ಕೆ ಬಂದವನಲ್ಲ. ರಾಜಕೀಯದಲ್ಲಿ ಇರುವವರನ್ನು ನಾನು ಮದುವೆಯಾಗುವುದಿಲ್ಲ ಎಂದಿದ್ದಳು ನನ್ನ ಪತ್ನಿ. ಆದರೆ ಈಗ ಅವರೂ ನನ್ನ ಜತೆಯಲ್ಲಿದ್ದಾರೆ. ನನ್ನ ಎಲ್ಲ ತಪ್ಪುಗಳನ್ನು ಅವಳು ಕ್ಷಮಿಸಿದ್ದಾಳೆ ಎಂದು ಪತ್ನಿಯನ್ನು ಹೊಗಳಿದರು.
ಇಂದಿನ ಕಲಾಪ ಇತಿಹಾಸದಲ್ಲಿ ದಾಖಲಾಗುವಂತಹದ್ದಾಗಿದೆ. ನಾನು ಸಂತೋಷವಾಗಿ ಮುಖ್ಯಮಂತ್ರಿ ಹುದ್ದೆ ತೊರೆಯುಯಲು ನಾನು ಸಿದ್ಧವಾಗಿದ್ದೇನೆ ಎಂದರು.
ಸಾಮಾಜಿಕ ತಾಣಗಳ ಮೇಲೆ ಕೆಂಡಾಮಂಡಲ ಸಮಾಜಿಕ ತಾಣಗಳೇ ಇಂದು ಎಲ್ಲವನ್ನೂ ಹಾಳು ಮಾಡುತ್ತಿದೆ. ಯುವಕರು ಕುಲಗೆಡುತ್ತಿದ್ದಾರೆ. ದೇಶದ ಸಂಸ್ಕೃತಿಯನ್ನು ಹಾಳಳು ಮಾಡಲು ಸೋಷಿಯಲ್ ಮೀಡಿಯಾಗಳು ಹೊರಟಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮಂಗಳವಾರ ಕಲಾಪ ಆರಂಭವಾದರೂ ನಾನು ಹೋಟೆಲ್ ನಲ್ಲಿ ಕುಳಿತು ಆರಾಮವಾಗಿ ಕುಳಿತಿದ್ದೇನೆ ಎಂದು ಹೇಳಲಾಗುತ್ತಿತ್ತು. ಅಲ್ಲಿ ನಾನು ಸುಮ್ಮನೆ ಕುಳಿತಿಲ್ಲ. ನಾನು ಸಿದ್ಧತೆ ನಡೆಸುತ್ತಿದ್ದೆ. ಜನರ ತೆರಿಗೆ ಹಣವನ್ನು ಹೋಟೆಲ್‌ನಲ್ಲಿ ಕುಳಿತು ಪೋಲು ಮಾಡಲಾಗುತ್ತಿದೆ ಎಂದೆಲ್ಲ ಹೇಳಲಾಗಿದೆ. ಈ ಎಲ್ಲ ವಿಚಾರಗಳು ಸಾಕಷ್ಟು ಬೇಸರ ಉಂಟು ಮಾಡಿದೆ.
ನಮ್ಮ ಸರಕಾರ ಅಧಿಕಾರಕ್ಕೆ ಬಂದಾಗಿಂದಲೂ ಅಪಪ್ರಾಚಾರ ಮಾಡಲಾಗುತ್ತುದೆ. ಸೋಷಿಯಲ್ ಮೀಡಿಯಾದಲ್ಲಿ ಮನಬಂದಂತೆ ಪೋಸ್ಟ್ ಹಾಕಲಾಗಿದೆ. ರೈತರ ವಿಚಾರದಲ್ಲಿ ಸುಳ್ಳು ಹೇಳಲು ನಾನು ಹೋಗುವುದಿಲ್ಲ. ಈ ಹಿಂದಿನ ಬಿಜೆಪಿ ಜತೆಗಿನ ಮೈತ್ರಿ ಸರಕಾರದ ಪತನದ ಬಳಿಕ ನನ್ನನ್ನು ವಚನ ಭ್ರಷ್ಟ ಎನ್ನಲಾಗುತ್ತಿದೆ. ವಿಶ್ವಾಸಮತ ಯಾಚಿಸದೇ ಯಡಿಯೂರಪ್ಪ ಅವರು ರಾಜೀನಾಮೆ ನೀಡಿದರು. ನಾನು ಅಧಿಕಾರ ಅವರಿಗೆ ಹಸ್ತಾಂತರಿಸಿದ್ದೆ. ನನ್ನಿಂದ ಯಾವುದೇ ತಪ್ಪಾಗಿಲ್ಲ. ಪದೇ ಪದೇ ನನ್ನನ್ನು ವಚನ ಭ್ರಷ್ಟ ಅನ್ನಬೇಡಿ. ಈ ಬಗ್ಗೆ ನಿಮ್ಮ ಕಾರ್ಯಕರ್ತರಿಗೆ ತಿಳಿಸಿ ಹೇಳುವಂತೆ ಹೇಳಿದರು.
ಕೋಲಾರ ನಗರದ ಪ್ರಧಾನ ಅಂಚೆ ಕಚೇರಿಯಲಿ ಶನಿವಾರ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಕೋಲಾರ ಜಿಲ್ಲೆಯ ಟೊಮೇಟೋ ಕುರಿತು ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. ಇತ್ತೀಚಿನ ದಿನಗಳಲ್ಲಿ ಟೊಮೇಟೋ ಕೋಲಾರ ಜಿಲ್ಲೆಯ ಪ್ರಧಾನ ತೋಟಗಾರಿಕೆ ಬೆಳೆಯಾಗಿ ಹೊರ ಹೊಮ್ಮಿದೆ. ರೈತರು ವರ್ಷದ ೩೬೫ ದಿನವೂ ಟೊಮೇಟೋವನ್ನು ಬೆಳೆಯುತ್ತಿದ್ದಾರೆ. ಕೋಲಾರದ ಎಪಿಎಂಸಿ ಮಾರುಕಟ್ಟೆಯೂ ಏಷ್ಯಾದ ಎರಡನೇ ಅತಿ ದೊಡ್ಡ ಟೊಮೇಟೋ ಮಾರುಕಟ್ಟೆಯಾಗಿ ಪ್ರಸಿದ್ಧಿ ಪಡೆದಿದೆ. ಈ ಹಿನ್ನೆಲೆಯಲ್ಲಿ ಟೊಮೇಟೋ ಬೆಳೆಯನ್ನು ಕೋಲಾರದ ಒಂದು ಜಿಲ್ಲೆ ಒಂದು…
ಭಾರತದ ಅನೇಕ ಭಾಷೆಗಳಲ್ಲಿ ಮೂಡಿ ಬರುತ್ತಿರುವ ‘ಬಿಗ್ ಬಾಸ್’ ಜನಪ್ರಿಯ ರಿಯಾಲಿಟಿ ಶೋ ಆಗಿದೆ. ಹಿಂದಿಯಲ್ಲಿ ಸಲ್ಮಾನ್ ಖಾನ್, ಕನ್ನಡದಲ್ಲಿ ಕಿಚ್ಚ ಸುದೀಪ್ ಯಶಸ್ವಿಯಾಗಿ ಬಿಗ್ ಬಾಸ್ ನಿರೂಪಣೆ ಮಾಡಿದ್ದಾರೆ. ತಮಿಳುನಲ್ಲಿ ಖ್ಯಾತ ನಟ ಕಮಲ್ ಹಾಸನ್ ಬಿಗ್ ಬಾಸ್ ನಿರೂಪಣೆ ಯಶಸ್ವಿಯಾಗಿ ಮಾಡಿದ್ದಾರೆ. ತೆಲುಗಿನಲ್ಲಿಯೂ ‘ಬಿಗ್ ಬಾಸ್’ ಮೊದಲ ಸೀಸನ್ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಖ್ಯಾತ ನಟ ಜೂನಿಯರ್ ಎನ್.ಟಿ.ಆರ್. ನಿರೂಪಣೆ ಮಾಡಿದ್ದರು. ತೆಲುಗಿನಲ್ಲಿ ಬದಲಾಗಲಿದ್ದಾರೆ ಬಿಗ್’ಬಾಸ್ ನಿರೂಪಕ… ಈಗಾಗಲೇ ತೆಲುಗಿನ ಬಿಗ್ಬಾಸ್ ರಿಯಾಲಿಟಿ ಶೋಅನ್ನು…
ಹೌದು, ನೀವು ಕೇಳಿದ್ದು ನಿಜ…ಈ ಜಗತ್ತಿನಲ್ಲಿ ಏನೆಲ್ಲಾ ವಿಸ್ಮಯ ಅಚ್ಚರಿಗಳು ನಡೆಯುತ್ತವೆ ಎಂಬುದಕ್ಕೆ ಇದು ಒಂದು ಉದಾಹರಣೆಯಾಗಿದೆ.ನಾವೆಲ್ಲಾ ಕೋಳಿ,ಪಕ್ಷಿಗಳು,ಹಾವುಗಳು ಹಾಗೂ ಕೆಲವೊಂದು ಜೀವಿಗಳು ಮೊಟ್ಟೆ ಇಡುವುದನ್ನು ಕೇಳಿದ್ದೇವೆ.ಆದರೆ ಮನುಷ್ಯ ಮೊಟ್ಟೆ ಇದುತ್ತಾನೆಂದ್ರೆ ಇದು ಎಂತಹವರಿಗೂ ನಂಬೋದಕ್ಕೆ ಅಸಾಧ್ಯ ಆಲ್ವಾ…
ರೈಲಿನಂತೆ ಸಾಲುಗಟ್ಟಿ ಹೋಗುವ ಇರುವೆಗಳನ್ನು ನೋಡುವುದೇ ಮಕ್ಕಳಿಗೆ ಸಂಭ್ರಮ. ಭೂಮಿಯಲ್ಲಿ ಬರಿಗಣ್ಣಿಗೆ ಕಾಣುವ ಅತ್ಯಂತ ಚಿಕ್ಕ ಜೀವಿಯೆಂದರೆ ಇರುವೆ. ಹಾಗೆಂದ ಮಾತ್ರಕ್ಕೆ ಇದನ್ನು ಅಲ್ಪಜೀವಿಯೆಂದು ಭಾವಿಸುವಂತಿಲ್ಲ. ಭೂ- ನೆಲದಲ್ಲಿ ಸರ್ವಾಂತರ್ಯಾಮಿ ಆಗಿರುವ ಇರುವೆಗಳ ಪ್ರಪಂಚಕ್ಕೆ ಇಣುಕಿದರೆ ಅಚ್ಚರಿಗಳು ಎದುರಾಗುತ್ತವೆ. ಇವುಗಳ ಶಿಸ್ತುಬದ್ಧ ಸಹಜೀವನ ಮನುಕುಲವನ್ನೇ ನಾಚಿಸುವಂತಿದೆ. ಗೊದ್ದ, ಚೊಂಜಿಗ, ಕಟ್ರ ಎಂದೆಲ್ಲ ಕರೆಯಲ್ಪಟ್ಟಿರುವ ಇರುವೆಗಳು ವಿವಿಧ ಗಾತ್ರ, ಬಣ್ಣಗಳಲ್ಲಿವೆ.
ಕರ್ನಾಟಕ ರಾಜ್ಯದ ಹಾಸನದ ಅರಕಲಗೂಡಿನ ರೈತರಿಗೆ ಲಾಭದಾಯಕ ಪಶು ತಳಿಗಳ ಪರಿಚಯ ಹಾಗೂ ಹೈನುಗಾರಿಕೆ ಕ್ಷೇತ್ರದ ಬಗ್ಗೆ ಸಂಶೋಧನೆಗಳನ್ನು ಪರಿಚಯಿಸುವ ಸಲುವಾಗಿ ರಾಜ್ಯದಲ್ಲೇ ಮೊದಲ ಬಾರಿಗೆ ಹಾಸನದ ಅರಕಲಗೂಡಿನಲ್ಲಿ ಮೂರು ದಿನಗಳ ‘ರಾಜ್ಯಮಟ್ಟದ ಪಶುಮೇಳ- 2018’ ಹಮ್ಮಿಕೊಳ್ಳಲಾಗಿದೆ.
ಡಿಜಿಟಲ್ ಭಾಷಾತಂತ್ರಜ್ಞಾನ ಪರಿಹಾರಗಳ ಮುಂಚೂಣಿಯ ರೆವೆರೀ ಲಾಂಗ್ವೇಜ್ ಟೆಕ್ನಾಲಜೀಸ್ ಇಂಡಿಕ್ ಕ್ಯಾಲೆಂಡರ್ ಎಂಬ ಸುಲಭ ಬಳಕೆಯ ಕ್ಯಾಲೆಂಡರ್ಆಪ್ ಬಿಡುಗಡೆ ಮಾಡಿದೆ. ರೆವೆರೀಯ ಇಂಡಿಕ್ ಕ್ಯಾಲೆಂಡರ್ಆಪ್ ಪ್ರಸ್ತುತ ಗೂಗಲ್ ಪ್ಲೇಸ್ಟೋರ್ನಲ್ಲಿ ಲಭ್ಯವಿದ್ದು ಅವರ ಭಾಷೆ, ಸಂಸ್ಕೃತಿ, ಧಾರ್ಮಿಕತೆಗಳನ್ನು ಮೀರಿ ಭಾರತೀಯರಿಗೆಂದೇ ರೂಪಿಸಲಾಗಿದೆ.
ಈಗ ಕರ್ನಾಟಕ ಸೇರಿದಂತೆ ಭಾರತದ ಮೂಲೆ ಮೂಲೆಯಲ್ಲೂ ಕೆಜಿಎಫ್ ಸಿನಿಮಾದ್ದೇ ಸೌಂಡ್. ಇದೀಗ ಮುಂಬೈನಲ್ಲೂ ರಾಕಿ ಭಾಯ್ ಹವಾ ಶುರುವಾಗಿದೆ. ಕೆಜಿಎಫ್ ಹಿಂದಿ ಅವತರಣಿಕೆ ಸಿನಿಮಾ ಮಹಾರಾಷ್ಟ್ರ ಸೇರಿದಂತೆ ಉತ್ತರ ಭಾರತದ ಹಲವಾರು ಚಿತ್ರಮಂದಿರಗಳಲ್ಲಿ ಇದೇ ತಿಂಗಳು 21 ರಂದು ರಿಲೀಸ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಸದ್ಯ ಹಿಂದಿ ಪ್ರಮೋಷನ್ ಕೂಡ ಭರದಿಂದ ಸಾಗುತ್ತಿದ್ದು, ಮುಂಬೈನ ಪ್ರಮುಖ ಸ್ಥಳಗಳಲ್ಲಿ ಯಶ್, ಪೋಸ್ಟರ್ಸ್ ಗಳು ರಾರಾಜಿಸುತ್ತಿವೆ. ಕನ್ನಡದಲ್ಲಿ ಜೋಕೆ ನಾನು ಬಳ್ಳಿಯ ಮಿಂಚು ಹಾಡನ್ನು ಕೆಜಿಎಫ್ ಚಿತ್ರಕ್ಕಾಗಿ ರಿಕ್ರಿಯೇಟ್…