ಆರೋಗ್ಯ, ಉಪಯುಕ್ತ ಮಾಹಿತಿ

ಸುಟ್ಟ ಗಾಯಕ್ಕೆ ನಿಮ್ಮ ಮನೆಯಲ್ಲೇ ಇವೆ ಸುಲಭ ಸರಳ ಮನೆ ಮದ್ದುಗಳು..!

462

ಮಹಿಳೆಯರು ಅಡುಗೆ ಮಾಡುವಾಗ ಚಿಕ್ಕ ಪುಟ್ಟ ಸುಟ್ಟ ಗಾಯಗಳಾಗುವುದು ಸಾಮಾನ್ಯದ ಸಂಗತಿ. ಇಂತಹ ಚಿಕ್ಕ ಸುಟ್ಟ ಗಾಯಗಳನ್ನು ಕಡಿಮೆಗೊಳಿಸುವಂತ ಔಷಧಗಳು ನಮ್ಮ ಮನೆಯಲ್ಲೇ ಇರುತ್ತವೆ. ಅಂತಹ ಕೆಲವು ಮನೆಮದ್ದು ಇಲ್ಲಿವೆ..

ಸುಟ್ಟ ಗಾಯಕ್ಕೆ ತಕ್ಷಣವೇ ಟೂತ್ ಪೇಸ್ಟ್ ಹಚ್ಚಿಕೊಂಡಲ್ಲಿ ಸುಟ್ಟ ಗಾಯದಿಂದಾಗುವ ಉರಿ ಶಮನವಾಗುತ್ತದೆ.ಶರೀರದ ಭಾಗ ಸುಟ್ಟ ತಕ್ಷಣವೇ ಹಸಿ ಮಣ್ಣನ್ನು ಆ ಭಾಗಕ್ಕೆ ಹಚ್ಚುವುದರಿಂದ ಉರಿ ಕಡಿಮೆಯಾಗುತ್ತದೆ ಮತ್ತು ಗುಳ್ಳೆಗಳು ಏಳುವುದಿಲ್ಲ.

ಸುಟ್ಟ ಭಾಗಕ್ಕೆ ಸತತವಾಗಿ ನೀರು ಬಿಡುತ್ತಿದ್ದಲ್ಲಿ ಗಾಯದ ಉರಿ ಕಡಿಮೆಯಾಗುತ್ತದೆ.ಚರ್ಮ ಸುಟ್ಟಿದ್ದ ಭಾಗಕ್ಕೆ ಅರಿಸಿನವನ್ನು ಹಚ್ಚುವುದರಿಂದ ನೋವು ಕಡಿಮೆಯಾಗುತ್ತದೆ. ಜೇನುತುಪ್ಪಕ್ಕೆ ತ್ರಿಪಲಾಚೂರ್ಣವನ್ನು ಬೆರೆಸಿ ಸುಟ್ಟ ಗಾಯಕ್ಕೆ ಹಚ್ಚುವುದರಿಂದ ಗಾಯ ವಾಸಿಯಾಗುತ್ತದೆ.

ಬಿಳಿ ಎಳ್ಳನ್ನು ಚೆನ್ನಾಗಿ ತೇಯ್ದು ಸುಟ್ಟ ಗಾಯಕ್ಕೆ ಹಚ್ಚಿದಲ್ಲಿ ಉರಿ ಕಡಿಮೆಯಾಗುತ್ತದೆ. ಸುಟ್ಟ ಕಲೆಗಳು ಕೂಡ ಉಳಿಯುವುದಿಲ್ಲ.ತೆಂಗಿನೆಣ್ಣೆ ಕೂಡ ಸುಟ್ಟ ಗಾಯಕ್ಕೆ ಒಳ್ಳೆಯ ಔಷಧ. ಇದರಿಂದ ನೋವು ಶಮನವಾಗುತ್ತದೆ.

ತುಳಸಿ ಎಲೆಯ ರಸವನ್ನು ಸುಟ್ಟ ಗಾಯಕ್ಕೆ ಹಚ್ಚುವುದರಿಂದ ಸುಟ್ಟ ಗಾಯದ ಉರಿ ಕಡಿಮೆಯಾಗುತ್ತದೆ.ಎಳೆ ಬಿದಿರನ್ನು ತೇಯ್ದು ಸುಟ್ಟ ಭಾಗಕ್ಕೆ ಹಚ್ಚಿದರೆ ಗಾಯದ ಉರಿಯನ್ನು ನಿಯಂತ್ರಿಸಬಹುದು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ