ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ತನಗೆ ಮೆದುಳಿನ ಕ್ಯಾನ್ಸರ್ ಗಡ್ದೆ ಇದೆ ಎಂಬುದನ್ನು ಅರಿಯದ ಮಹಿಳೆಯೊಬ್ಬಳಿಗೆ ಸಾಕಿದ ಕುದುರೆಯೇ ನೆರವಾದ ಅಪರೂಪದ ಘಟನೆ ಬೆಳಕಿಗೆ ಬಂದಿದೆ. ತನ್ನ ಮಾಲಕಿಯ ಕ್ಯಾನ್ಸರ್ ವಾಸನೆಯನ್ನು ಮೂಗಿನಿಂದಲೇ ಕಂಡುಹಿಡಿದು ಅವಳನ್ನು ಚಿಕಿತ್ಸೆಗೆ ಪ್ರೇರೇಪಿಸಿದ ಮನಕಲಕುವ ಸ್ಟೋರಿ ಇದು.
ಇಂಗ್ಲೆಂಡ್ ಲ್ಯಾಂಚ್ಶೈರ್ನ ಬ್ಲ್ಯಾಕ್ಬರ್ನ್ ಮೂಲದವರಾದ ಕೆಲ್ಲಿ ಅನ್ನಾ ಅಲೆಕ್ಸಾಂಡರ್(43) ತನ್ನ ಕುದುರೆ ಅಲಿಯಾನ ಜತೆ ಒಳ್ಳೆಯ ಬಾಂಧವ್ಯ ಹೊಂದಿದ್ದಾರೆ. ಇದ್ದಕ್ಕಿಂದಂತೆ ರೋಗದಿಂದ ಬಳಲು ಆರಂಭಿಸಿದ ಬಳಿಕ ತನ್ನ ಅಲಿಯಾನ ಕುದುರೆ ಆಕೆಯ ತಲೆಯ ಭಾಗದ ವಾಸನೆಯನ್ನು ಗ್ರಹಿಸುತ್ತಿತ್ತು ಎಂದು ಅಲೆಕ್ಸಾಂಡರ್ ಹೇಳಿಕೊಂಡಿದ್ದಾರೆ. ಇದರಿಂದ ಎಚ್ಚೆತ್ತ ಅಲೆಕ್ಸಾಂಡರ್ ಪರೀಕ್ಷೆಗೆಂದು ಆಸ್ಪತ್ರೆಗೆ ಹೋದಾಗ ತನಗೆ ಕೆಳ ಮಟ್ಟದ ಮೆದುಳು ಕ್ಯಾನ್ಸರ್ ಗೆಡ್ಡೆ ಇರುವುದು ಪತ್ತೆಯಾಗಿದೆ.
ಅಂದಹಾಗೆ ತಮ್ಮ ಪತಿ ಕೆವಿನ್ ಅವರಿಂದ ವಿವಾಹದ ಕೊಡುಗೆಯಾಗಿರುವ ಅಲಿಯಾನ ಜತೆ ಅಲೆಕ್ಸಾಂಡರ್ ಡ್ರೆಸ್ಸೇಜ್ ಸ್ಪರ್ಧೆಯಲ್ಲಿ ಭಾಗವಹಿಸಿದ ಖುಷಿ ಹಂಚಿಕೊಂಡಿದ್ದಾರೆ. ಹಾಗೆಯೇ 2015 ರಲ್ಲಿ ಮೊದಲ ಬಾರಿಗೆ ಅನಾರೋಗ್ಯಕ್ಕೆ ತುತ್ತಾದರಂತೆ. ನನ್ನ ಮೊದಲ ಡ್ರೆಸ್ಸೇಜ್ ಸ್ಪರ್ಧೆ ಮುಗಿದ ಕೆಲವೇ ದಿನಗಳಲ್ಲಿ ರೋಗಗ್ರಸ್ತವಾದೆ. ದಿನವೊಂದಕ್ಕೆ 14 ರಿಂದ 15 ಬಾರಿ ರೊಗಗ್ರಸ್ತವಾಗುತ್ತಿದೆ. ಸಾಕಷ್ಟು ಬಾರಿ ಔಷಧವನ್ನು ತೆಗೆದುಕೊಂಡಿದ್ದೇನೆ. ಆದರೂ ಗುಣಮುಖವಾಗಿರಲಿಲ್ಲ. ಅಲ್ಲದೆ, ಭಯಾನಕ ವಾಸನೆ ಬರುತ್ತಿತ್ತು ಎಂದಿದ್ದಾರೆ.
ಬಳಿಕ ನಾನು ಕೆಲವು ದಿನಗಳವರೆಗೆ ತವರು ಮನೆಗೆ ಹೋದೆ. ಸುಮಾರು 5-6 ವಾರಗಳವರೆಗೆ ಅಲಿಯಾನಳನ್ನು ನೋಡಲೇ ಇಲ್ಲ. ಮರಳಿ ಬಂದ ಬಳಿಕ ಅವಳ ಪ್ರತಿಕ್ರಿಯೆ ತುಂಬಾ ವಿಚಿತ್ರವಾಗಿತ್ತು. ನನ್ನ ತಲೆಯ ಒಂದು ಭಾಗದ ವಾಸನೆಯನ್ನು ಗ್ರಹಿಸುತ್ತಿತ್ತು. ಬಳಿಕ ಮೆದುಳು ಗಡ್ಡೆ ಇದೆ ಎಂಬುದು ಗೊತ್ತಾಗಿ, ಲಿವಿಂಗ್ಸ್ಟನ್ನಲ್ಲಿರುವ ಸೆಂಟ್ ಜಾನ್ ಆಸ್ಪತ್ರೆಗೆ ದಾಖಲಾದೆವು. ಬಳಿಕ ಆಲಿಗೋಡೆಂಡ್ರೊಗ್ಲಿಯೊಮಾ ಮೆದುಳು ಗಡ್ಡೆಗೆ ಚಿಕಿತ್ಸೆ ನೀಡಿದರು ಎಂದು ತಿಳಿಸಿದ್ದಾರೆ.
ಚಿಕಿತ್ಸೆಯ ಬಳಿಕವು ಸಾಕಷ್ಟು ಕಷ್ಟಗಳನ್ನು ಅನುಭವಿಸಿದ್ದಾಗಿ ಅಲೆಕ್ಸಾಂಡರ್ ಹೇಳಿಕೊಂಡಿದ್ದಾರೆ. ಕ್ರಮೇಣ ಚೇತರಿಸಿಕೊಂಡ ಅಲೆಕ್ಸಾಂಡರ್ಗೆ ಆಕೆಯ ಕುದುರೆ ಅಲಿಯಾನ ಸಾಥ್ ನೀಡಿದ್ದನ್ನು ಸ್ಮರಿಸಿದ್ದಾರೆ. ಇದೀಗ ಅಲೆಕ್ಸಾಂಡರ್ ಮೆದುಳು ಗಡ್ಡೆ ಕುರಿತಾದ ಸಂಶೋಧನೆ ಮಾಡುತ್ತಿದ್ದು, ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ದಿವಂಗತ ಅಂಬರೀಶ್ ಅವರ ಜಯಂತಿಯಾದ ಇಂದು ಪತ್ನಿ ಹಾಗೂ ಮಂಡ್ಯ ಸಂಸದೆ ಸುಮಲತಾ ಅವರು ಇಂದು ಕಂಠೀರವ ಸ್ಟುಡಿಯೋದಲ್ಲಿ ಅಂಬರೀಶ್ ಅವರ ಸ್ಮಾರಕಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಮಂಡ್ಯ ಸಂಸದರಾಗಿ ಆಯ್ಕೆ ಆಗಿರುವ ಸುಮಲತಾ ಅವರು ಇಂದು ಬೆಳಿಗ್ಗೆಯೇ ಕಂಠೀರವ ಸ್ಟುಡಿಯೋಕ್ಕೆ ತೆರಳಿ ಅಂಬರೀಶ್ ಸ್ಮಾರಕಕ್ಕೆ ಮಗ ಅಭಿಶೇಕ್ ಅವರೊಂದಿಗೆ ಸೇರಿ ಪೂಜೆ ಸಲ್ಲಿಸಿದರು. ನೆರೆದಿದ್ದ ಅಭಿಮಾನಿಗಳೊಂದಿಗೂ ಸುಮಲತಾ ಅವರು ಕೆಲ ಕಾಲ ಮಾತನಾಡಿದರು. ಅಭಿಶೇಕ್, ರಾಕ್ಲೈನ್ ವೆಂಕಟೇಶ್ ಇನ್ನೂ ಹಲವು ಅಭಿಮಾನಿಗಳು, ಚಿತ್ರರಂಗದ ಪ್ರಮುಖರು…
ಅಹ್ಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾ ಬೆನ್(100) ಕೊನೆಯುಸಿರೆಳೆದಿದ್ದಾರೆ. ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು, ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ. ತಮ್ಮ ತಾಯಿ 100 ನೇ ವಯಸ್ಸಿನಲ್ಲಿ ನಿಧನರಾಗಿದ್ದಾಗಿ ಪ್ರಧಾನಿ ಮೋದಿ ಟ್ಟಿಟ್ ಮೂಲಕ ತಿಳಿಸಿದ್ದಾರೆ. ಹೀರಾ ಬೆನ್ ಕಳೆದೆರಡು ದಿನದಿಂದ ಅಹ್ಮದಾಬಾದ್ ನ ಯುನ್ ಮೆಹ್ತಾ ಆಸ್ಪತ್ರೆಗೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆರೋಗ್ಯದಲ್ಲಿ ಏರುಪೇರಾದ ಕಾರಣ ಎರಡು ದಿನಗಳ ಹಿಂದೆ ಅವರನ್ನು ಗುಜರಾತ್ ನ ಅಹಮದಾಬಾದ್ ನಲ್ಲಿರುವ ಯುಎನ್ ಮೆಹ್ತಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆರೋಗ್ಯದಲ್ಲಿ…
ಮಗಳಿಗೋ ಮಗನಿಗೋ ಮದುವೆ ಮಾಡಬೇಕಾದರೆ ಹಲವಾರು ಕಡೆ ವಿಚಾರಿಸಿ ಎರಡೂ ಕುಟುಂಬಗಳ ಕಡೆ ವಿಚಾರಿಸಿ ಮದುವೆ ಮಾಡುತ್ತಾರೆ. ಹೆಣ್ಣು ಗಂಡು ಚೆನ್ನಾಗಿ ಬಾಳಬೇಕೆಂಬ ಬಯಕೆಯಿಂದ ಹೀಗೆ ಮಾಡುತ್ತಾರೆ. ಆದರೆ ಇಲ್ಲಿ ಮದುವೆಯೊಂದು ಮುರಿದು ಬಿದ್ದಿದೆ. ಮೊದಲ ರಾತ್ರಿ ಕಣ್ಣೀರಿನಲ್ಲಿ ಕೈತೊಳೆದ ವಧು ಬೆಳಿಗ್ಗೆ ಗಂಡನ ಮನೆ ತೊರೆದಿದ್ದಾಳೆ. ಎರಡು ದಿನ ರೂಮಿನಲ್ಲಿ ಬಂಧಿಯಾಗಿದ್ದ ವರ ಹಾಗೂ ಆತನ ತಂದೆ-ತಾಯಿ ಈಗ ಆಸ್ಪತ್ರೆ ಸೇರಿದ್ದಾರೆ. ಜನವರಿ 22ರಂದು ಧೀರಜ್ ಮದುವೆ ತನು ಜೊತೆ ನಡೆದಿತ್ತು. ಜನವರಿ 23ರಂದು ತನು ಗಂಡನ…
ಉಪೇಂದ್ರ ಅಭಿಮಾನಿಗಳಿಗೆ ಸಿಹಿ ಸುದ್ದಿ. ಅವರ ಚಿತ್ರಕ್ಕಾಗಿ ಅಭಿಮಾನಿಗಳು ಕಾತುರರಾಗಿದ್ದರು. ಈಗ ಆ ಕಾಲ ಮುಗಿದಿದೆ.
ಮಹಿಳೆಯರ ಆರ್ಥಿಕ, ಸಾಮಾಜಿಕ, ರಾಜಕೀಯ ಸಬಲೀಕರಣಕ್ಕಾಗಿ ಹಾಗೂ ಅವರಿಗೆ ರಕ್ಷಣೆ ನೀಡಿ ಸಮಾಜದ ಮುಖ್ಯವಾಹಿನಿಯಲ್ಲಿ ತರಲು ಇಲಾಖಾವತಿಯಿಂದ ಹಲವಾರು ಮಹಿಳಾ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅದರಲ್ಲಿ ಸ್ತ್ರಿ ಶಕ್ತಿ ಸಂಘವು ಒಂದು.ಸ್ತ್ರೀ ಶಕ್ತಿ ಸಂಘದ ಮಹಿಳೆಯರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಒಂದು ಸಂಘದಲ್ಲಿ ಒಂದೆ ಕುಟುಂಬದ ಒಬ್ಬರು ಸದಸ್ಯರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಒಂದೇ ಕುಟುಂಬದ ಹೆಚ್ಚು ಸದಸ್ಯರು ಒಂದೇ ಸಂಘದಲ್ಲಿ ಇದ್ದರೆ ಅದು ಅವ್ಯವಹಾರ, ಸರ್ಕಾರದ ಯೋಜನೆಗಳ ದುರ್ಬಳಕೆ ಆಗಬಹುದು ಎಂಬ ಕಾರಣದಿಂದ ಒಂದು ಸಂಘದಲ್ಲಿ…
ಹಯಗ್ರೀವ ಹೆಚ್ಚಾಗಿ ಕರ್ನಾಟಕದ ಉಡುಪಿ ಪ್ರದೇಶದಲ್ಲಿ ಮಾಡುವ ಸಿಹಿತಿಂಡಿ. ಸಾಕಷ್ಟು ಜನರಿಗೆ ಪ್ರೀಯವಾದ ತಿನಿಸು ಎಂದರೆ ಹಯಗ್ರೀವ. ರುಚಿಯಾದ ಹಯಗ್ರೀವವನ್ನು ಮಾಡುವುದು ಬಹಳ ಸುಲಭ! ಹಬ್ಬ ಹರಿದಿನಗಳಲ್ಲಿ ಈ ಸಿಹಿಯನ್ನು ಹೆಚ್ಚಾಗಿ ತಯಾರಿಸಲಾಗುತ್ತದೆ. ಇದನ್ನು ಹೆಚ್ಚಾಗಿ ದೇವರ ನೈವೇದ್ಯಕ್ಕೆ ಇಡಲು ಮಾಡುತ್ತಾರೆ. ಹಯಗ್ರೀವ ಮಾಡಲು ಬೇಕಾಗುವ ಸಾಮಗ್ರಿ ಮತ್ತು ವಿಧಾನವನ್ನು ಇಲ್ಲಿದೆ ನೋಡಿ. ಬೇಕಾಗುವ ಸಾಮಗ್ರಿಗಳು : ಕಡ್ಲೆ ಬೇಳೆ – 2 ಕಪ್, ತೆಂಗಿನ ತುರಿ – 1ಕಪ್, ಬೆಲ್ಲ – 1 ಕಪ್, ತುಪ್ಪ – 1 ಕಪ್ಏಲಕ್ಕಿ ಪುಡಿ –…