ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಶಬ್ದದ ವೇಗಕ್ಕಿಂತ 2ಪಟ್ಟು ಸ್ಪೀಡಾಗಿ ಚಲಿಸುವ ಈ ವಿಮಾನ 1969 ರಿಂದ 2003 ರವರೆಗೆ ನಿರಂತರವಾಗಿ ಲಕ್ಷಾಂತರ ಜನ ಪ್ರಯಾಣಿಕರನ್ನ ಸುರಕ್ಷಿತವಾಗಿ ಅತಿ ಬೇಗನೆ ತಲುಪಿಸುವಂತಹ ಕೆಲಸವನ್ನು ಮಾಡಿದ ಈ ವಿಮಾನ ಈಗ ಮ್ಯೂಸಿಯಂಯೊಂದರಲ್ಲಿ ಕೇವಲ ಒಂದು ಬೊಂಬೆಯಾಗಿ ನೋಡುವುದಕ್ಕೆ ಕಾಣಲು ಸಿಗುತ್ತದೆ.
1969ರಲ್ಲಿ ರಾಯಲ್ ಏರ್ಕ್ರಾಫ್ಟ್ ಎಸ್ಟಾಬ್ಲಿಷ್ಮೆಂಟ್ ಅಂದರೆ RAE ಡೈರೆಕ್ಟರ್ ಆದ ಅರ್ನಾಲ್ಡ್ ಎಂಬ ವ್ಯಕ್ತಿ ಕಾನ್ ಕಾರ್ಡ್ ಸೂಪರ್ ಸೋನಿಕ್ ಅನ್ನುವ ಒಂದು ಕಾನ್ಸೆಪ್ಟ್ ನನ್ನು ತನ್ನ ತಂಡದ ಮುಂದೆ ಇಡುತ್ತಾರೆ. ಅವರ ಉದ್ದೇಶವೇನೆಂದರೆ ಈ ಪ್ರಪಂಚದಲ್ಲಿ ಎಲ್ಲಾ ವಿಮಾನಗಳಿಗಿಂತ ಅತ್ಯಂತ ವೇಗವಾಗಿ ಚಲಿಸುವ ವಿಮಾನವೊಂದನ್ನು ಪ್ರಯಾಣಿಕರಿಗೆ ಹೇಗಾದರೂ ಮಾಡಿ ನಾವು ಒದಗಿಸಬೇಕೆಂಬುದು ಅವರ ಆಸೆಯಾಗಿತ್ತು. ಇನ್ನು ಅವರ ಆಸೆಯಂತೆ ಒಂದು ವಿಮಾನ ಸಿದ್ಧವಾಗಿತ್ತು. ಗಾಳಿಯಲ್ಲಿ ಶಬ್ದದ ವೇಗ ಗಂಟೆಗೆ 1,235 ಕಿ.ಮೀ ಇರುತ್ತದೆ. ಆದರೆ ಇವರು ಸಿದ್ಧಪಡಿಸಿದ ಕಾನ್ ಕಾರ್ಡ್ ವಿಮಾನ ಗಂಟೆಗೆ 2,170 ಕಿ.ಮೀ. ಚಲಿಸುವಂತಹ ಸಾಮರ್ಥ್ಯವನ್ನ ಹೊಂದಿತ್ತು. ಅಂದರೆ ಶಬ್ದದ ವೇಗಕ್ಕಿಂತ 2 ಪಟ್ಟು ಜಾಸ್ತಿ. ಆದರೆ ಆ ಕಾಲಕ್ಕೆ ಆ ಒಂದು ವಿಮಾನ ಸಿದ್ಧ ಹೊಂದುವುದಕ್ಕೆ ಖರ್ಚಾದ ಹಣ ಭಾರಿ ಮೊತ್ತದು.
ಭಾರತೀಯ ರೂಪಾಯಿ ಲೆಕ್ಕದಲ್ಲಿ ಹೇಳುವುದಾದರೆ ಸುಮಾರು 1200 ಕೋಟಿ ರೂಪಾಯಿ ಖರ್ಚಾಗಿತ್ತು.ಇನ್ನೂ ಈ ಒಂದು ವಿಮಾನ ಹೆಚ್ಚಾಗಿ ಸಮುದ್ರ ಮಾರ್ಗದಲ್ಲೇ ತನ್ನ ಪ್ರಯಾಣವನ್ನು ಬೆಳೆಸುತ್ತಿತ್ತು. ಏಕೆಂದರೆ ಈ ಒಂದು ವಿಮಾನದಿಂದ ಬರುತ್ತಿದ್ದಂತಹ ಶಬ್ದ ಭಾರಿ ಶಬ್ದವಾಗಿತ್ತು. ಇನ್ನು ಈಗಿರುವ ವಿಮಾನಗಳು 30ರಿಂದ 38 ಸಾವಿರ ಅಡಿ ಎತ್ತರದಲ್ಲಿ ಹಾರಾಟ ಮಾಡುತ್ತವೆ. ಆದರೆ ಈ ಒಂದು ವಿಮಾನ ಅತ್ಯಂತ ವೇಗವಾಗಿ ಚಲಿಸುವುದಕ್ಕೆ ಸುಮಾರು 60 ಸಾವಿರ ಅಡಿ ಎತ್ತರದಲ್ಲಿ ಹಾರಾಟ ಮಾಡುತ್ತಿತ್ತು. ಇನ್ನೂ ಆಗಿನ ಕಾಲಕ್ಕೆ ಈ ಒಂದು ವಿಮಾನದಲ್ಲಿ ಪ್ರಯಾಣ ಮಾಡಬೇಕೆಂದರೆ ಈಗಿನ ಟೀಕೆಟ್ ಗಳ ದರ ಏನ್ನಿದೆ ಅದರ 30 ರಿಂದ 40 ಪಟ್ಟು ಹೆಚ್ಚು ಹಣವನ್ನ ಕೊಡಬೇಕಾಗಿತ್ತು.
ಏಕೆಂದರೆ ಆಗಿನ ಕಾಲದಲ್ಲೇ ಇದರಲ್ಲಿ ಲಂಡನ್ನಿಂದ ನ್ಯೂಯಾರ್ಕ್ ಗೆ ಪ್ರಯಾಣ ಬೆಳೆಸಬೇಕೆಂದರೆ ಸುಮಾರು 7 ಸಾವಿರಕ್ಕೂ ಹೆಚ್ಚು ಡಾಲರ್ ಹಣವನ್ನು ಕೊಡಬೇಕಾಗಿತ್ತು.ಅಂದರೆ ನಮ್ಮ ಭಾರತೀಯ ರೂಪಾಯಿ ಲೆಕ್ಕದಲ್ಲಿ ಹೇಳಬೇಕೆಂದರೆ ಸುಮಾರು 5ಲಕ್ಷ ರೂಪಾಯಿ ಆಗುತ್ತದೆ.ಮತ್ತೆ ಈ ಒಂದು ವಿಮಾನದ ಮೇಂಟೆನೆನ್ಸ್ ತುಂಬಾ ಕಷ್ಟವಾದ್ದರಿಂದ ಆರ್ಥಿಕವಾಗಿ ಈ ಒಂದು ವಿಮಾನ ಹೆಚ್ಚಿನ ಲಾಭವನ್ನು ಮಾಡಲಿಲ್ಲ. 1969 ರಿಂದ ಬೇರೆ ವಿಮಾನಗಳಿಗೆ ಹೋಲಿಸಿದರೆ ಈ ಒಂದು ವಿಮಾನದಲ್ಲಿ ಯಾವುದೇ ರೀತಿಯ ಪ್ರಾಣಹಾನಿಗಳಾಗಿರುವ ಘಟನೆ ನಡೆದ್ದಿಲ್ಲ. ಆದರೆ ಜುಲೈ 25,2000ನೇ ಇಸವಿಯಲ್ಲಿ ಜರುಗಿದ ಈ ಘಟನೆ ಕಾನ್ ಕಾರ್ಡ್ ವಿಮಾನವನ್ನ ಇತಿಹಾಸ ಸೇರಿಕೊಳ್ಳುವಂತೆ ಮಾಡಿತು. ಅವತ್ತಿನ ದಿನ ಟೇಕಾಫ್ ಆಗುವಂತ ಸಮಯದಲ್ಲಿ ಈ ಒಂದು ವಿಮಾನ ಕ್ರ್ಯಾಶ್ ಆಗಿ ಸುಮಾರು 113 ಜನ ಸಾವನ್ನಪ್ಪಿದ್ದರು. ಈ ಘಟನೆಯಾದ ನಂತರ ಆ ವಿಮಾನ ಮತ್ತೆ ಕಾಣಿಸಿಕೊಳ್ಳಲಿಲ್ಲ.
ಮತ್ತೆ ಕೆಲವೊಂದು ಸೇಫ್ಟಿಗಳೊಂದಿಗೆ 2001ರಲ್ಲಿ ಮತ್ತೆ ತನ್ನ ಸೇವೆಯನ್ನ ಆರಂಭಿಸಿದರು 2003ರ ಹೊತ್ತಿಗೆ ಬ್ರಿಟಿಷ್ ಏರ್ ವೇಸ್ ಇದರವೊಂದು ಸೇವೆಯನ್ನ ನಿಲ್ಲಿಸಿತು. ಕಾನ್ ಕಾರ್ಡ್ ವಿಮಾನ ತಂತ್ರಜ್ಞಾನದಲ್ಲಿ ಒಂದು ಅದ್ಭುತ ವಿಮಾನ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಇವೊಂದು ವಿಮಾನಕ್ಕೆ ಬೇಕಾದಂತಹ ಎನರ್ಜಿ ಮತ್ತೆ ಇವೊಂದು ವಿಮಾನವನ್ನ ಚಲಾಯಿಸಲು ಬೇಕಾದಂತಹ ಇಂಧನ ಇವೆಲ್ಲವನ್ನು ಮೇನ್ಟೇನ್ ಮಾಡುವುದು ತುಂಬಾ ಕಷ್ಟವಾಗಿತ್ತು. ಇಂಧನದ ಬೆಲೆ ಕೂಡ ಹೆಚ್ಚಾಗುತ್ತಿದ್ದುದರಿಂದ ಇದರ ಮೇಂಟೆನೆನ್ಸ್ ತುಂಬಾ ಕಷ್ಟ ಆಗಿತ್ತು. ಆದ್ದರಿಂದ ಬ್ರಿಟಿಷ್ ಏರ್ವೇಸ್ ಇದರ ಸೇವೆಯನ್ನು ನಿಲ್ಲಿಸಿತು. ಈ ಪ್ರಪಂಚದಲ್ಲಿ ಅತ್ಯಂತ ವೇಗವಾಗಿ ಚಲಿಸುವಂತಹ ವಿಮಾನ ಈಗ ಇತಿಹಾಸ ಸೇರಿಕೊಂಡಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ವಿದ್ಯುತ್ ಕಳ್ಳತನ ತಡೆಗೆ ಪ್ರೀಪೇಯ್ಡ್ ಅಥವಾ ಸ್ಮಾರ್ಟ್ ಮೀಟರ್ ಅಳವಡಿಸುವುದು ಕಡ್ಡಾಯಗೊಳಿಸುವುದರೊಂದಿಗೆ, ಈ ವರ್ಷದ ಅಂತ್ಯದೊಳಗೆ ತಡೆ ರಹಿತ ವಿದ್ಯುತ್ ನೀಡಲು ಸರಕಾರ ಚಿಂತಿಸಿದೆ.
ಇಂಜಿನಿಯರಿಂಗ್, ವೈದ್ಯ ಸೇರಿದಂತೆ ತಿಂಗಳಿಗೆ ಸಂಬಳ ಸಿಗುವಂತಹ ಹುದ್ದೆಗಳನ್ನು ಮಾತ್ರ ಎಲ್ಲರೂ ಗೌರವದಿಂದ ನೋಡ್ತಾರೆ. ಸಣ್ಣ ಪುಟ್ಟ ವ್ಯಾಪಾರ, ಟೀ ವ್ಯಾಪಾರದ ಹೆಸರು ಕೇಳಿದ್ರೆ ಬಹುತೇಕರು ಮೂಗು ಮುರಿಯುತ್ತಾರೆ. ಆದ್ರೆ ಟೀ ಸಣ್ಣ ವ್ಯಾಪಾರವಲ್ಲ. ಟೀ ಮಾರಾಟ ಮಾಡಿ ಲಕ್ಷಾಂತರ ರೂಪಾಯಿ ಗಳಿಸಬಹುದು ಎಂಬುದನ್ನು ಪುಣೆ ಯುವಕ ತೋರಿಸಿಕೊಟ್ಟಿದ್ದಾನೆ. ಪುಣೆಯಲ್ಲಿ ಯೇವ್ಲೆ ಟೀ ಹೌಸ್ ಪ್ರಸಿದ್ಧಿ ಪಡೆದಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುವ ಗುರಿಯನ್ನು ಈ ಟೀ ಹೌಸ್ ಹೊಂದಿದೆ. ಪುಣೆಯಲ್ಲಿಯೇ ಮೂರು ಸ್ಟಾಲ್ ಗಳನ್ನು ಇದು…
ಬೆಂಗಳೂರು: ನಗರದಲ್ಲಿ ಖೋಟಾನೋತು ಮುದ್ರಿಸಿ ಚಲಾವಣೆ ಮಾಡುತ್ತಿದ್ದ ಆಫ್ರಿಕಾ ಪ್ರಜೆಯೊಬ್ಬನನ್ನು ಸಿಸಿಬಿ ಪೋಲೀಸರು ಬಂಧಿಸಿದ್ದು ಆರೋಪಿಯಿಂದ 2 ಸಾವಿರ ಮುಖಬೆಲೆಯ 33.70 ಲಕ್ಷ ರೂ. ಖೋಟಾನೋತು ವಶಕ್ಕೆ ಪಡೆದಿದ್ದಾರೆ. ಬಂಧಿತನನ್ನು ಕ್ಯಾಮರೂನ್ ದೇಶದ ಡಿಯೊಡೊನೆ ಕ್ರಿಸ್ಪೊಲ್(35) ಎಂದು ಗುರುತಿಸಲಾಗಿದೆ.ಈತ ಬಾಣಸವಾಡಿ ಸುಬ್ಬಯ್ಯನ ಪಾಳ್ಯದಲ್ಲಿ ವಾಸವಾಗಿದ್ದ.ಈತನೊಡನೆ ಇನ್ನೂ ಹಲವರು ಈ ಕೃತ್ಯದಲ್ಲಿ ತೊಡಗಿಸಿಕೊಂಡಿದ್ದರೆನ್ನಲಾಗಿದೆ. ಈ ಸಂಬಂಧ ತನಿಖೆ ತೀವ್ರಗೊಳಿಸಿರುವ ಪೋಲೀಸರು ಇನ್ನಷ್ಟು ತೀವ್ರವಾಗಿ ತನಿಖೆ ಕೈಗೊಂಡಿದ್ದಾರೆ. ಬಂಧಿತ ಕ್ರಿಸ್ಪೊಲ್ನ ಮನೆ ಮೇಲೆ ದಾಳಿ ಮಾಡಿದ್ದ ಪೋಲೀಸರು ಖೋತಾನೋತಿನ ಜತೆಗೆ…
ಹಾಲು ಒಡೆದು ಹೋಗುವುದು ಸಾಮಾನ್ಯ ಸಂಗತಿ. ಚಳಿಗಾಲ, ಮಳೆಗಾಲ, ಬೇಸಿಗೆಕಾಲ ಹೀಗೆ ಒಂದಿಲ್ಲೊಂದು ಕಾರಣಕ್ಕೆ ಹಾಲು ಒಡೆಯುತ್ತಲೇ ಇರುತ್ತದೆ. ಒಡೆದ ಹಾಲನ್ನು ಬಿಸಾಡುವುದೇ ಹೆಚ್ಚು. ಆದರೆ ಈ ಒಡೆದ ಹಾಲಿನಲ್ಲಿ ಪೋಷಕಾಂಶಗಳು ಹೆಚ್ಚು. ಹಾಗೇ ಅದರಿಂದ ಏನೇನು ಪ್ರಯೋಜನವಿದೆ ಎಂದು ನೋಡೋಣ. * ಒಡೆದ ಹಾಲಿನ ನೀರಿನಲ್ಲಿ ಪ್ರೊಟೀನುಗಳ ಪ್ರಮಾಣ ಹೆಚ್ಚು. ಈ ನೀರಿನಿಂದ ಸ್ನಾಯುವಿನ ಶಕ್ತಿ ಹೆಚ್ಚಾಗುತ್ತದೆ. ಇದು ರೋಗ ನಿರೋಧಕ ಶಕ್ತಿಯನ್ನು ಬೆಳೆಸುತ್ತದೆ. * ಒಡೆದ ಹಾಲಿನ ನಿಯಮಿತ ಸೇವನೆಯಿಂದ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡಬಹುದು….
ಉತ್ತಮ ತ್ವಚೆ ಹೊಂದುವುದು ಪ್ರತಿಯೊಬ್ಬ ಯುವತಿಯರ ಮತ್ತು ಹೆಂಗಳೆಯರ ಆಸೆಯಾಗಿರುತ್ತದೆ. ಇದರಲ್ಲಿ ಯುವಕರು ಸಹ ಹಿಂದೆ ಬಿದ್ದಿಲ್ಲ. ಇದಕ್ಕಾಗಿ ಬಳಸುವ ಸೌಂದರ್ಯ ವರ್ಧಕಗಳು 100 ರೂಪಾಯಿಯಿಂದ ಸಾವಿರಾರು ರೂಪಾಯಿಗಳವರೆಗೂ ಇರುತ್ತದೆ
ತುಂಬಾ ಸರ್ತಿ ಜೀವನದಲ್ಲಿ ನಮ್ಮನ್ನ ನಾವೇ ಕಡೆಗಾಣಿಸ್ಕೊತೀವಿ. ನಮ್ಮ ಮನೆಯೋರು ಕೂಡ ನಮ್ಮನ್ನ ಎಷ್ಟೋ ಸರ್ತಿ ನೀನು ಸೋಮಾರಿ, ಒಂದು ಕೆಲಸ ಕೂಡ ಗಮನ ಇಟ್ಟು ಮಾಡಲ್ಲಾ ಅಂತೆಲ್ಲಾ ಬೈತಿರ್ತರೆ.