News

ನಿಮ್ಮ ಜ್ಞಾನಕ್ಕೆ ಮತ್ತಷ್ಟು ಬಲ KAS ಅಥವಾ ಕೋಟ್ಯಾದಿ ಪತಿಗೆ ಇದು ತುಂಬ ಸಹಾಯ ಮಾಡಲಿದೆ ಲೇಖನ ಓದಿ
ಬೇಕರಿ ಸ್ಟೈಲ್ ಸಿಹಿ ಬೂಂದಿ & ಖಾರಾ ಬೂಂದಿ ಮಾಡುವ ವಿಧಾನ.
ಅಪರೂಪದ ದೃಶ್ಯ ಪ್ರತಿನಿತ್ಯ ಬೆಕ್ಕಿನ ಮರಿಗೆ ಹಾಲುಣಿಸುತ್ತಿರುವ ನಾಯಿ.
ಕೇರಳದಲ್ಲಿ ಸಿಲುಕಿಕೊಂಡಿದ್ದ 177 ಯುವತಿಯರನ್ನು ತವರು ರಾಜ್ಯಕ್ಕೆ ಕಳುಹಿಸಿ ಮತ್ತೆ ಮಾನವೀಯತೆ ಮೆರೆದ ಸೋನು ಸೂದ್.
ನಿಮ್ಮ ನೆನಪೇ ನಿತ್ಯ ಜ್ಯೋತಿ ನಿಮ್ಮ ಸ್ಮರಣೆಯೇ ಅಮರ ಪ್ರೀತಿ. ಅಂಬಿಗೆ ಸುಮಲತಾ ಶುಭಾಶಯ
ಕ್ವಾರಂಟೈನ್ ವ್ಯಕ್ತಿಯೊಬ್ಬ ತಿಂಡಿಗೆ 40 ಚಪಾತಿ, ಊಟಕ್ಕೆ 10 ಪ್ಲೇಟ್ ಅನ್ನ ತಿನ್ನುವುದನ್ನು ನೋಡಿ ಸುಸ್ತಾದ ಅಧಿಕಾರಿಗಳು.
ಈ ಸುಡುವ ಬೇಸಿಗೆಯಲ್ಲಿ ಉಷ್ಣತೆ ಕಡಿಮೆಮಾಡಲು, ಈ ಪಾನೀಯಗಳನ್ನು ಸೇವಿಸಿ.
ಒಮ್ಮೆ ಈ ರೀತಿ ಮಾಡಿ ನೋಡಿ ರುಚಿಯಾದ ಮೆಂತೆ ಸೊಪ್ಪಿನ ದೋಸೆ.
ಎಲೆಕೋಸು ಮಂಚೂರಿ ಮನೆಯಲ್ಲೇ ಮಾಡುವುದು ಹೇಗೆ ಗೊತ್ತಾ?
19 ನೇ ಶತಮಾನದಲ್ಲಿ ಕರ್ನಾಟಕ ಸಾಂಕ್ರಾಮಿಕ ರೋಗವನ್ನು ಹೇಗೆ ಎದುರಿಸಿತು
ಆಯುರ್ವೇದ ಮೂಲಕ ಕರೊನಾ ಸೋಂಕು ಗೆದ್ದ ಬ್ರಿಟನ್​ ರಾಜ, ಬೆಂಗಳೂರಿನ ಸೌಖ್ಯದಿಂದ ಚಿಕಿತ್ಸೆ
ಸುದ್ದಿ

ರಸ್ತೆ ಬದಿಯಲ್ಲಿ ಇದ್ದ ಪ್ರಾಣಿಯನ್ನು ಬೆಕ್ಕಿನ ಮರಿಯೆಂದು ತಿಳಿದು ಮನೆಗೆ ತಂದ ಮಹಿಳೆ. ಬಳಿಕ ವೈದ್ಯರ ಮಾತು ಕೇಳಿ ಶಾಕ್.

40

ಬೆಕ್ಕುಗಳೆಂದ್ರೆ ಯಾರಿಗಿಷ್ಟ ಇಲ್ಲ ಹೇಳಿ. ಮುದ್ದು ಮುದ್ದಾಗಿ ಮಿಯಾಂವ್​ ಮಿಯಾಂವ್​ ಅನ್ಕೊಂಡು ಮನೆಯಲ್ಲಿ ಅತ್ತಿಂದಿತ್ತ ಓಡಾಡ್ತಾ, ಮನೆಗೆ ಬಂದ್ರೆ ತನ್ನ ಮೈ ಉಜ್ಕೊಂಡು, ಚೇಷ್ಟೆ ಮಾಡ್ಕೊಂಡಿರುತ್ತೆ. ಅದರ ಈ ಚೇಷ್ಟೆಗಳನ್ನ ನೋಡೋದೇ ಒಂಥರಾ ಖುಷಿ. ಆದ್ರೆ ಇಲ್ಲೊಬ್ರು ಅದೇ ರೀತಿ  ಅರ್ಜೆಂಟಿನಾ ಲೋಬೊ ಎಂಬ ಮಹಿಳೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಎರಡು ಪುಟ್ಟ ಪ್ರಾಣಿಗಳು ಮಲಗಿದ್ದನ್ನು ನೋಡಿದರು. ಅವು ತುಂಬ ದುರ್ಬಲವಾಗಿದ್ದವು. ಹತ್ತಿರ ಹೋಗಿ ನೋಡಿದ ಲೋಬೋ ಅವರಿಗೆ ಪುಟ್ಟಪುಟ್ಟ ಬೆಕ್ಕಿನಮರಿಗಳಂತೆ ಕಂಡುಬಂದವು.

ಲೋಬೊ ಅವರಿಗೆ ಮೊದಲಿನಿಂದಲೂ ಪ್ರಾಣಿಗಳೆಂದರೆ ಪ್ರೀತಿ. ಅದೆರಡೂ ಮರಿಗಳನ್ನು ರಕ್ಷಿಸುವುದಕ್ಕೋಸ್ಕರ ಹಿಡಿದುಕೊಂಡು ಮನೆಗೆ ತಂದರು. ಅದರಲ್ಲಿ ಒಂದು ಮರಿ ಬದುಕುಳಿಯಲಿಲ್ಲ. ಮತ್ತೊಂದು ಮರಿ ಉಳಿಯಿತು. ಆ ಬದುಕುಳಿದ ಮರಿಯನ್ನು ತಾವೇ ದತ್ತು ತೆಗೆದುಕೊಂಡು ಆರೈಕೆ ಮಾಡಲು ಲೋಬೋ ನಿರ್ಧರಿಸಿದರು. ಅದಕ್ಕೆ ಟಿಟೋ ಎಂದು ಹೆಸರನ್ನೂ ಇಟ್ಟರು. ಎಲ್ಲವೂ ಚೆನ್ನಾಗೇ ಇತ್ತು. ಅದನ್ನ ಆಸ್ಪತ್ರೆಗೆ ಕೊಂಡೊಯ್ಯುವವರೆಗೂ. ಮುದ್ದಾದ ಬೆಕ್ಕಿನ ಮರಿ ಪೂಮಾ ಆಗೋಯ್ತು. ಆ ಮರಿಕೂಡ ಚೆನ್ನಾಗಿಯೇ ಬೆಳೆಯುತ್ತಿತ್ತು. ಆದರೆ ಒಂದು ದಿನ ಅದನ್ನು ಪಶುವೈದ್ಯಕೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಾಯಿತು. ಆದರೆ ಅಲ್ಲಿ ಹೋದಬಳಿಕ, ಆ ಬೆಕ್ಕಿನ ಮರಿಯನ್ನು ಪರಿಶೀಲನೆ ನಡೆಸಿದ ವೈದ್ಯರು ಬೇರೆಯದೇ ಸತ್ಯ ಹೇಳಿದರು. ಅದನ್ನು ಕೇಳಿ ಲೋಬೋ ಅಕ್ಷರಶಃ ಹೌಹಾರಿದರು. ಅದು ಸಾಮಾನ್ಯ ಜಾತಿಯ ಬೆಕ್ಕಲ್ಲ, ಬದಲಾಗಿ ಪೂಮಾ ಅಂತ ಹೇಳಿದ್ರು.

ಜಾಗ್ವಾರುಂಡಿ ಬೆಕ್ಕುಗಳು ಕಾಡಿನಲ್ಲಿ ವಾಸಿಸುತ್ತವೆ. ಅವು ಸಾಕುಬೆಕ್ಕುಗಳಿಗಿಂತಲೂ ದೊಡ್ಡದಾಗಿ ಇರುತ್ತವೆ ಮತ್ತು ಚಿರತೆಗಳಿಗಿಂತ ಸ್ವಲ್ಪ ಚಿಕ್ಕದಾಗಿರುತ್ತವೆ. ಇವು ಪರಭಕ್ಷಕಗಳು. ಆದರೆ ನೋಡಲು ಸ್ವಲ್ಪಮಟ್ಟಿಗೆ ಸಾಮಾನ್ಯ ಬೆಕ್ಕುಗಳನ್ನು ಹೋಲುವುದರಿಂದ ಲೋಬೋ ಬೇಸ್ತುಬಿದ್ದಿದ್ದರು. 
ಅಷ್ಟಕ್ಕೂ ಸಾಮಾನ್ಯವಾಗಿ ಸಾಕುವ ಬೆಕ್ಕಿನ ಮರಿಗಳಿಗಿಂತ ಈ ಮರಿ ಚುರುಕಾಗಿರುವುದನ್ನು ಲೋಬೋ ಗಮನಿಸಿದ್ದರು. ಹೀಗೆ ಟಿಟೋ ಒಮ್ಮೆ ಏನೋ ಮಾಡಲು ಕಾಲಿಗೆ ಪೆಟ್ಟು ಮಾಡಿಕೊಂಡಿತು. ಅದಕ್ಕೆ ಚಿಕಿತ್ಸೆ ಕೊಡಿಸಲೆಂದು ಆಸ್ಪತ್ರೆಗೆ ಕರೆದುಕೊಂಡು ಹೋದಾಗಲೇ ವೈದ್ಯರು ಈ ಬೆಕ್ಕಿನ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಲೋಬೋ ಅವರಿಗೆ ನೀಡಿದರು.

ಇವು ಬೆಕ್ಕುಗಳ ಪ್ರಬೇಧಕ್ಕೆ ಸೇರಿದ್ದರೂ ಸಾಕುಬೆಕ್ಕುಗಳಷ್ಟು ಸೌಮ್ಯವಲ್ಲ. ಮಾರಕವಾಗಿ ದಾಳಿ ಮಾಡಬಲ್ಲವು. ಇವು ಹೆಚ್ಚಾಗಿ ಉತ್ತರ ಅಮೆರಿಕಾ ಹಾಗೂ ದಕ್ಷಿಣ ಅಮೆರಿಕಾ ಕಾಡುಗಳಲ್ಲಿ ಕಂಡುಬರುತ್ತವೆ ಎಂದು ಪ್ರಾಣಿತಜ್ಞರು ಹೇಳಿದರು. ಇದನ್ನೆಲ್ಲ ಕೇಳಿ ಶಾಕ್​ಗೊಳಗಾದ ಲೋಬೋ ಆ ಬೆಕ್ಕನ್ನು ಅರ್ಜೆಂಟಿನಾ ಪ್ರಾಣಿ ಸಂರಕ್ಷಣಾ ಸಂಸ್ಥೆಗೆ ಒಪ್ಪಿಸಿದ್ದಾರೆ. ಅವರು ಕೂಡ ಜಾಗ್ವಾರುಂಡಿ ಪುಮಾಕ್ಕೆ ಅಗತ್ಯ ಚಿಕಿತ್ಸೆ ಕೊಡಿಸಿ ಕಾಡಿಗೆ ಬಿಡಲು ನಿರ್ಧರಿಸಿದ್ದಾರೆ. ಸದ್ಯ ಈ ಸ್ಟೋರಿಯನ್ನ ಪ್ರಾಣಿ ರಕ್ಷಣಾ ಕೇಂದ್ರ ಫೇಸ್​ಬುಕ್​ನಲ್ಲಿ ಹಂಚಿಕೊಂಡಿದೆ. ಮಾತ್ರವಲ್ಲದೇ ಟಿಟೊದ ಕೆಲವು ಪೋಟೋಗಳನ್ನು ಅಪ್​ಲೋಡ್​ ಮಾಡಿದ್ದು ವೈರಲ್​ ಆಗಿದೆ. ಯಾವ್ದಕ್ಕೂ ನೀವು ಸಾಕಿರೋ ಬೆಕ್ಕನ್ನು ಒಂದ್ಸಲ ಚೆಕ್​ ಮಾಡ್ಕೊಂಡ್​ ಬಿಡಿ.

About the author / 

Basavaraj Gowda

Categories

ಏನ್ ಸಮಾಚಾರ