ಸುದ್ದಿ

ಬಹುಅಂತಸ್ತಿನ ಕಟ್ಟಡದಲ್ಲಿ ಆಕಸ್ಮಿಕ ಅಗ್ನಿ ಅವಘಡ,7 ಮಂದಿ ಸಾವು..!

34

ರಾಜಧಾನಿ ದೆಹಲಿಯ ಜನನಿಬಿಡ ಝಾಕಿರ್ ನಗರದ ಬಹು ಅಂತಸ್ತುಗಳ ಕಟ್ಟಡವೊಂದರಲ್ಲಿ ಇಂದು ನಸುಕಿನಲ್ಲಿ ಸಂಭವಿಸಿದ ಅಗ್ನಿ ಆಕಸ್ಮಿಕದಲ್ಲಿ ಇಬ್ಬರು ಮಕ್ಕಳೂ ಸೇರಿದಂತೆ ಏಳು ಮಂದಿ ಮೃತಪಟ್ಟು, ಇತರ 16 ಮಂದಿ ತೀವ್ರ ಗಾಯಗೊಂಡಿದ್ದಾರೆ.ಗಾಯಾಳುಗಳಲ್ಲಿ ಏಳು ಮಂದಿಯ ಸ್ಥಿತಿ ಶೋಚನೀಯವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ.

ಈ ದುರ್ಘಟನೆಯಲ್ಲಿ ಇಬ್ಬರು ಸುಟ್ಟು ಕರಕಲಾಗಿದ್ದರೆ, ಐವರು ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದು ದೆಹಲಿ ಅಗ್ನಿಶಾಮಕ ಸೇನೆಗಳು ಮುಖ್ಯ ಅಧಿಕಾರಿ ಅತುಲ್ ಗರ್ಗ್ ಹೇಳಿದ್ದಾರೆ.ಬೆಂಕಿವ್ಯಾಪಿಸಿದಸಂದರ್ಭದಲ್ಲಿಕಟ್ಟಡದಲ್ಲಿದ್ದಕೆಲವರುಅಪಾಯದಿಂದಪಾರಾಗಲುಮಹಡಿಗಳಿಂದಕೆಳಕ್ಕೆಜಿಗಿದರು.

ಇವರಲ್ಲಿಕೆಲವರಿಗೆಗಾಯಗಳಾಗಿವೆ. ಅಗ್ನಿಶಾಮಕ ದಳದ ಇಬ್ಬರು ಸಿಬ್ಬಂದಿಗೂ ಗಾಯಗಳಾಗಿವೆ.16 ಮಂದಿ ಗಾಯಾಳುಗಳಲ್ಲಿ ವಿಷಮ ಸ್ಥಿತಿಯಲ್ಲಿರುವ ಏಳು ಮಂದಿ ಹೋಲಿ ಫ್ಯಾಮಿಲಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಕಟ್ಟಡದಲ್ಲಿ ಒಟ್ಟು ಐದು ಅಂತಸ್ತುಗಳಿದ್ದು, ಬೆಂಕಿ ದುರಂತ ಸಂಭವಿಸಿದಾಗ ಸುಮಾರು 30ಕ್ಕೂ ಹೆಚ್ಚು ಮಂದಿ ಅದರಲ್ಲಿದ್ದರು. ಕಟ್ಟಡದಲ್ಲಿದ್ದ ವಿದ್ಯುತ್ ಮೀಟರ್ ಬೋರ್ಡ್‍ನಲ್ಲಿ ಕಾಣಿಸಿಕೊಂಡ ಬೆಂಕಿ ನಂತರ ಕಟ್ಟಡವನ್ನು ವ್ಯಾಪಿಸಿ ಈ ದುರ್ಘಟನೆ ಸಂಭವಿಸಿದೆ.ಮುಂಜಾನೆ 2.21ರಲ್ಲಿ ಅಗ್ನಿಶಾಮಕ ದಳಕ್ಕೆ ಬೆಂಕಿ ಆಕಸ್ಮಿಕದ ಬಗ್ಗೆ ದೂರವಾಣಿ ಕರೆ ಬಂದಿತ್ತು. ತಕ್ಷಣ ಕಾರ್ಯ ಪ್ರವೃತ್ತರಾದ ಸಿಬ್ಬಂದಿ ಗಾಯಾಳುಗಳು ಸೇರಿದಂತೆ 20 ಮಂದಿಯನ್ನು ರಕ್ಷಿಸಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಉಪಯುಕ್ತ ಮಾಹಿತಿ

    ಬಯಲುಸೀಮೆ ಕೋಲಾರದ ಈಗಿನ ಬರಗಾಲದ ಪರಿಸ್ಥಿತಿಗೆ ಇದು ಮುಖ್ಯ ಕಾರಣ ಇರಬಹುದಾ? ನೀವೇನಂತೀರಾ?

    ಇದು ಬಯಲುಸೀಮೆಯ ಗಡಿನಾಡು ಕೋಲಾರ ಜಿಲ್ಲೆಯ ಸ್ಥಿತಿ. ಒಂದು ಕಾಲದಲ್ಲಿ ಅತಿ ಹೆಚ್ಚು ಕೆರೆಗಳ ನಾಡು ಎಂದು ಪ್ರಸಿದ್ಧಿ ಪಡೆದು ಸದಾ ಹಸಿರಿನಿಂದ ಕೂಡಿದ್ದ ಜಿಲ್ಲೆಯಾಗಿತ್ತು ಕೋಲಾರ. ಕಾಲಾಂತರ ಮಳೆರಾಯನ ಮುನಿಸು ಜಿಲ್ಲೆಯ ಮೇಲೆ ಬಂದಿದ್ರಿಂದ ಇಲ್ಲಿನ ರೈತರು ಪರ್ಯಾಯ ಹಾಗೂ ಆಧುನಿಕ ಕೃಷಿಯತ್ತ ಮುಂದಾದ್ರು. ಇದ್ರಿಂದ ಹೆಚ್ಚು ಲಾಭ ಹಾಗೂ ಕಡಿಮೆ ಶ್ರಮವುಳ್ಳ ನೀಲಗಿರಿ ಸಸಿಗಳನ್ನು ನೆಡಲು ರೈತ್ರು ಮುಂದಾದ್ರು. ಇದ್ರಿಂದ ಭೂಮಿಯಲ್ಲಿ ಇರುವ ನೀರಿನ ಪ್ರಮಾಣವನ್ನು ಈ ಮರಗಳು ತೆಗೆದುಕೊಂಡು ನೆಲವನ್ನು ಬರಡುಗೊಳಿಸಿತು. ಇದರಿಂದ ಅಂತರ್ಜಲಮಟ್ಟ ತೀವ್ರ ಕುಸಿದಿದೆ.

  • ಉಪಯುಕ್ತ ಮಾಹಿತಿ

    ನಿಮ್ಮ ಮೂಗಿನ ಮೇಲಿನ ಬ್ಲಾಕ್ ಹೆಡ್ಸ್ ಅನ್ನು ಸುಲಭವಾಗಿ ಹೋಗಲಾಡಿಸಬಹುದು ಹೇಗೆ ಗೊತ್ತಾ..?ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…

    ನಿಮ್ಮ ಮುಖ ಸುಂದರವಾಗಿದ್ದರೂ ಈ ಬ್ಲಾಕ್ ಹೆಡ್ಸ್ ನಿಂದಾಗಿ ಕಿರಿಕಿರಿಯಾಗುತ್ತದೆ.. ಇದರಿಂದ ಕೆಲವು ಬಾರಿ ಮುಜುಗರಕ್ಕೂ ಒಳಗಾಗುತ್ತೇವೆ.. ಪ್ರತಿ ಬಾರಿ ಬ್ಯೂಟಿ ಪಾರ್ಲರ್ ಗೆ ಹೋಗಿ ತೆಗಿಸಲು ಸಾಧ್ಯವಿಲ್ಲ.. ಅದರಲ್ಲೂ ಹುಡುಗರು ಪಾರ್ಲರ್ ಗಳಲ್ಲಿ ತೆಗೆಸಲು ಮುಜುಗರವೂ ಆಗುತ್ತದೆ.. ಇದಕ್ಕಾಗಿಯೇ ಮನೆ ಮದ್ದುಗಳ ಮೊರೆ ಹೋಗುವುದೇ ಒಳ್ಳೆಯದು.. ನಿಮಗಾಗಿಯೇ ಇಲ್ಲಿ ಕೆಲವು ಮನೆಮದ್ದುಗಳ ಮಾಹಿತಿ ನೀಡಿದ್ದೇವೆ ನೋಡಿ..

  • ಸುದ್ದಿ

    ಪಡಿತರ ಚೀಟಿ ಹೊಂದಿರುವವರಿಗೆ ಇಲ್ಲಿದೆ ನೋಡಿ ಬಹುಮುಖ್ಯವಾದ ಮಾಹಿತಿ….!

    ನೀವು ಪಡಿತರಚೀಟಿ ಹೊಂದಿದ್ದರೆ ಈ ಸುದ್ದಿಯನ್ನು ತಪ್ಪದೆ ಓದಿ. ಅನಗತ್ಯವಾಗಿ ಪೂರೈಕೆ ಆಗುತ್ತಿರುವ ಪಡಿತರಕ್ಕೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿದ್ದು ಜೂನ್ 1ರಿಂದ ಎರಡು ತಿಂಗಳುಗಳ ಕಾಲ ಇ-ಕೆವೈಸಿ ವಿಧಾನದ ಮೂಲಕ ಆಧಾರ್ ದೃಢೀಕರಣ ವ್ಯವಸ್ಥೆ ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ. ಇದರನ್ವಯ ಪಡಿತರ ಚೀಟಿಯಲ್ಲಿ ಹೆಸರು ಹೊಂದಿರುವ ಎಲ್ಲ ಕುಟುಂಬ ಸದಸ್ಯರು ಬಯೋಮೆಟ್ರಿಕ್ ಕೊಡುವುದು ಕಡ್ಡಾಯವಾಗಿದೆ. ಯಾರು ಬಯೋಮೆಟ್ರಿಕ್ ನೀಡಿರುತ್ತಾರೋ ಅಂತಹವರ ಹೆಸರಿನಲ್ಲಿ ಮಾತ್ರ ಪಡಿತರ ವಿತರಿಸಲಾಗುತ್ತದೆ. ವೃದ್ಧರು, ಕುಷ್ಠರೋಗಿಗಳು, ವಿಶೇಷ ಚೇತನರು, ಎಂಡೋಸಲ್ಫಾನ್ ಸಂತ್ರಸ್ತರಿಗೆ ಇ –…

  • ಜ್ಯೋತಿಷ್ಯ

    ದಿನ ಭವಿಷ್ಯ , ಈ ದಿನದ ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ….

    ನಿತ್ಯ ಭವಿಷ್ಯ………… ಮೇಷ ರಾಶಿ ನಿಮ್ಮ ಬುದ್ಧಿ ಚಾತುರ್ಯಕ್ಕೆ ಎಂತಹವರೂ ತಲೆ ಬಾಗುವರು. ಜೀವನದಲ್ಲಿನ ಕಷ್ಟಗಳ ಮೇಲೆ ಜಯ ಸಾಧಿಸುವಿರಿ. ಉತ್ತಮ ಸ್ನೇಹಿತರ ಬೆಂಬಲ ನಿಮಗೆ ದೊರೆಯುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು. ನಂಬಿದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿದ್ದರೆ ಕ್ರಮೇಣ ತೊಂದರೆಗೆ ದಾರಿ ಆಗುವುದು. ವೃಷಭ ರಾಶಿ ನಿಮ್ಮ ಎಲ್ಲಾ ಕೆಲಸ ಕಾರ್ಯಗಳು ಪ್ರಗತಿಯತ್ತ ಸಾಗುವವು. ಕೆಲವರಿಗೆ ಬಡ್ತಿ ಸಿಗುವುದು.  ದೂರದೂರಿನ ಬಂಧುಗಳಿಂದ ಕಿರಿಕಿರಿ ಮಾತುಗಳು ಎದುರಾಗುವ ಸಂಭವವಿದೆ. ನೀವು ಮಾಡದೇ ಇರುವ ತಪ್ಪಿಗೆ ಮುನಿಸಿಕೊಳ್ಳುವ ಸಂದರ್ಭವಿದೆ. ಇದಕ್ಕೆ ಹೆಚ್ಚಿನ…

  • ಸುದ್ದಿ

    62 ಅಡಿ ಆಂಜನೇಯನ ವಿಗ್ರಹವನ್ನು, ದೇವಸ್ಥಾನದ ಆವರಣದೊಳಗೆ ಪ್ರವೇಶಿಸದಂತೆ ತಡೆ.!ಏಕೆ ಗೊತ್ತಾ.?ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…

    ಬೆಂಗಳೂರಿನ ಹೆಚ್’ಬಿಆರ್ ಬಡಾವಣೆಯ ಕಾಚರಕನಹಳ್ಳಿಯ ಶ್ರೀ ಕೋದಂಡರಾಮಸ್ವಾಮಿ ದೇವಾಲಯದ ಆವರಣದಲ್ಲಿ ಪ್ರತಿಷ್ಠಾಪನೆಗಾಗಿ ಸಿದ್ದವಾಗಿದ್ದ 62 ಅಡಿ ಎತ್ತರದ, 750 ಟನ್ ತೂಕದ ವೀರಾಂಜನೇಯ ಸ್ವಾಮಿಯ ವಿಗ್ರಹವನ್ನು, 300 ಚಕ್ರಗಳ ಬೃಹತ್ ವಾಹನದಲ್ಲಿ ಸ್ಥಳಕ್ಕೆ ಈಗಾಗಲೇ ಸಾಗಿಸಲಾಗಿದೆ. ಆದರೆ ವಿಪರ್ಯಾಸ ಎಂದರೆ, ಅಂದು ಪರ್ವತವನ್ನೇ ಹೊತ್ತು ತಂದು  ಲಕ್ಷ್ಮಣನನ ಜೀವ ಉಳಿಸಿದ, ರಾಮ ಭಕ್ತ ಹನುಮಂತನ ಪ್ರತಿಷ್ಟಾಪನೆಗೆ ವಿಘ್ನದ ಮೇಲೆ ವಿಘ್ನ ಶುರುವಾಗಿದೆ. ಕೋಲಾರದಿಂದ ಬೆಂಗಳೂರಿನ ಹೆಚ್’ಬಿಆರ್ ಬಡಾವಣೆಯ ಕಾಚರಕನಹಳ್ಳಿಗೆ ಹೊರಟಿದ್ದ ಬೃಹತ್ ಆಂಜನೇಯನ ವಿಗ್ರಹಕ್ಕೆ ಮಾರ್ಗ ಮಧ್ಯದಲ್ಲೇ ತೊಂದರೆ ಎದುರಾಗಿತ್ತು….

  • ಗ್ಯಾಜೆಟ್

    ಇನ್ನು ಮುಂದೆ ಸಮುದ್ರದಾಳದಲ್ಲಿ ಕೂಡ ಫೋನ್ ಮಾಡಬಹುದು!!!

    ಸರ್ಕಾರಿ ಒಡೆತನದ ಬಿಎಸ್ಎನ್‌ಎಲ್ ದೇಶದಲ್ಲಿ ಇದೇ ಮೊದಲ ಬಾರಿಗೆ ಸ್ಯಾಟಿಲೈಟ್ ಫೋನ್ ಸೇವೆಯನ್ನು ಆರಂಭಿಸಲಿದೆ. ಬುಧವಾರ ಮೇ.25 ರಿಂದ ಈ ಸೇವೆಗೆ ಚಾಲನೆ ದೊರೆಯಲಿದ್ದು, ನೇರವಾಗಿ ಉಪಗ್ರಹಗಳ ಸಹಾಯದಿಂದ ಈ ಸೇವೆಯನ್ನು ಬಿಎಸ್ಎನ್ಎಲ್ ಓದಗಿಸಲಿದೆ ಎನ್ನಲಾಗಿದೆ.