ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಬೆಂಗಳೂರು: ಸಾಲ ಮನ್ನಾ ಯೋಜನೆಯಲ್ಲಿ ಈವರೆಗೆ ರಾಜ್ಯದ 18.70 ಲಕ್ಷ ರೈತ ಕುಟುಂಬಗಳ 8759 ಕೋಟಿ ರೂ. ಸಾಲ ಮನ್ನಾ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.ರಾಷ್ಟ್ರೀಯ ಬ್ಯಾಂಕ್‌ಗಳು ಸಾಲ ಮನ್ನಾ ವರ್ಗೀಕರಣ ಮಾಡುವಾಗ ಯಾದಗಿರಿಯಲ್ಲಿ ಕೆಲಗೊಂದಲ ಮೂಡಿದ್ದು ಈ ಕುರಿತು ಶುಕ್ರವಾರ ಜೂ.14ರಂದು ರಾಜ್ಯ ಮಟ್ಟದ ಬ್ಯಾಂಕರ್‌ಗಳ ಸಭೆ ಕರೆದಿದ್ದೇನೆ ಎಂದು ಹೇಳಿದ್ದಾರೆ.

ಸಾಲ ಮನ್ನಾ ಯೋಜನೆಗೆ ಮೈತ್ರಿ ಸರ್ಕಾರ ಬದ್ಧವಾಗಿದ್ದು ನಿಗದಿತ ಅವಧಿಯೊಳಗೆ ಸಾಲಮನ್ನಾ ಪ್ರಕ್ರಿಯೆ ಸಂಪೂರ್ಣವಾಗಿ ಮುಗಿಯಲಿದೆ ಎಂದು ತಿಳಿಸಿದ್ದಾರೆ.ವಾಣಿಜ್ಯ ಬ್ಯಾಂಕ್‌ಗಳಲ್ಲಿ 7.49 ಲಕ್ಷ ರೈತರ 3929 ಕೋಟಿ ರೂ. ಹಾಗೂ ಸಹಕಾರ ಬ್ಯಾಂಕ್‌ಗಳಲ್ಲಿ 11.20 ಲಕ್ಷ ರೈತರ 4830 ಕೋಟಿ ರೂ. ಸೇರಿ ಒಟ್ಟು 18.70 ಲಕ್ಷ ರೈತರ 8759 ಕೋಟಿ ರೂ. ಮನ್ನಾ ಮಾಡಲಾಗಿದೆ. ಈ ಪೈಕಿ ವಾಣಿಜ್ಯ ಬ್ಯಾಂಕಿನಲ್ಲಿ ಪಾವತಿಸಲಾದ 13,123 ರೈತರ ಸಾಲದ ವರ್ಗೀಕರಣ ಮಾಹಿತಿಯನ್ನು ಬ್ಯಾಂಕುಗಳು ತಪ್ಪಾಗಿ ನೀಡಿರುತ್ತವೆ. ರೆಗ್ಯುಲರ್ ಲೋನ್ ಅನ್ನು ರೀಸ್ಟಕ್ಚರ್x ಲೋನ್ ಎಂದು ಪರಿಗಣಿಸಿ ರೈತರಿಗೆ ಕೇವಲ 25 ಸಾವಿರಗಳನ್ನು ಮಾತ್ರ ಪ್ರೋತ್ಸಾಹಧನ ರೂಪದಲ್ಲಿ ಪಾವತಿಸಲಾಗಿದೆ.

ಆದರೆ, ರೈತರಿಗೆ ರೀಸ್ಟಕ್ಚರ್ ಲೋನ್ ಆಧಾರದಲ್ಲಿ 2 ಲಕ್ಷ ರೂ.ಗಳ ಸಾಲ ಮಂಜೂರು ಮಾಡಲು ಅವಕಾಶವಿದೆ. ಅನರ್ಹವಾದ ಸಾಲದ ವಿಧಗಳನ್ನು ರೈತರ ಸಾಲದ ಯೋಜನೆಗೆ ಪರಿಗಣಿಸಿ ತಪ್ಪು ಮಾಹಿತಿ ಸಲ್ಲಿಸಿದ್ದಾರೆ. ರೈತರು ಆತಂಕ ಪಡುವ ಅಗತ್ಯವಿಲ್ಲ, ಈಗಾಗಲೇ ಸಂಬಂಧಪಟ್ಟವರ ಜತೆ ಮಾತನಾಡಿದ್ದೇನೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಮಾಧ್ಯಮದವರ ಮೇಲೆ ಸಿಎಂ ಸಿಡಿಮಿಡಿ: ಮಾಧ್ಯಮದವರ ಮೇಲೆ ಮತ್ತೆ ಬೇಸರ ಹೊರಹಾಕಿರುವ ಸಿಎಂ ಎಚ್.ಡಿ.ಕುಮಾರಸ್ವಾಮಿ, “ರಾಜ್ಯದ ಅಭಿವೃದ್ಧಿಯಾಗಬೇಕಾ? ಅಥವಾ ಹಾಳಾಗಬೇಕಾ? ನೀವೇ ನಿರ್ಧಾರ ಮಾಡಿ’ ಎಂದು ಹೇಳಿದ್ದಾರೆ.

ವಿಧಾನಸೌಧದಲ್ಲಿ ಲೋಕೋಪಯೋಗಿ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿದ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಸತ್ಯವನ್ನು ದಿನಾ ತೋರಿಸಿ ಏನು ಸಾಧನೆ ಮಾಡ್ತಾರೋ ಅರ್ಥವಾಗುತ್ತಿಲ್ಲ. ಈ ಸರ್ಕಾರದ ಮೇಲೆ ದಿನನಿತ್ಯ ಮಾಧ್ಯಮಗಳೇ ಮುಗಿಬಿದ್ದಿವೆ ಎಂದು ಹೇಳಿದರು.ಮೋದಿನಾ ದಿನಾ ಹೊಗಳುತ್ತೀರಿ, ರೈತರ ಸಾಲ ಮನ್ನಾ ವಿಚಾರದಲ್ಲಿ ಹೋಗಿ ಮೋದಿಯವರಿಗೆ ಹೋಗಿ ಕೇಳಿ. ನಮ್ಮಿಂದ ತಪ್ಪಾಗಿರೋದು ಅಂತ ಬ್ಯಾಂಕ್‌ನವರೇ ಹೇಳಿಕೊಂಡಿದ್ದಾರೆ. ಆದರೆ, ಮಾಧ್ಯಮಗಳಲ್ಲಿ ಬೇರೆ ರೀತಿಯ ಸುದ್ದಿ ಬಿತ್ತರವಾಗುತ್ತದೆ. ಜನರನ್ನು ದಯವಿಟ್ಟು ತಪ್ಪು ದಾರಿಗೆ ಎಳೆಯಬೇಡಿ, ಅನಗತ್ಯವಾಗಿರೋದು ತೋರಿಸಬೇಡಿ ಎಂದು ಮನವಿ ಮಾಡಿದರು
ಜೂ.21ರಂದು ಯಾದಗಿರಿ ಜಿಲ್ಲೆ ಗುರುಮಿಟ್ಕಲ್ ತಾಲೂಕಿನಲ್ಲಿ ಹಾಗೂ 22ರಂದು ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕು, ಜುಲೈ 5ರಂದು ಬೀದರ್ ಜಿಲ್ಲೆ ಬಸವಕಲ್ಯಾಣ, 6 ರಂದು ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನಲ್ಲಿ ಮುಖ್ಯಮಂತ್ರಿ ಗ್ರಾಮ ವಾಸ್ತವ್ಯ ನಡೆಸಲಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನೀವು ಬ್ರೆಜಿಲ್ಗೆ ಪ್ರವಾಸ ಹೋಗುವ ಪ್ಲಾನ್ ಹಾಕಿಕೊಂಡಿದ್ದೀರಾ? ಹಾಗಿದ್ದರೆ ನಿಮಗೆ ವೀಸಾದ ಅವಶ್ಯಕತೆ ಇಲ್ಲ. ಹೀಗೊಂದು ಹೊಸ ಘೋಷಣೆಯನ್ನು ಬ್ರೇಜಿಲ್ ಸರ್ಕಾರ ಮಾಡಿದೆ. ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ವೀಸಾ ನಿಯಮದಲ್ಲಿ ಬದಲಾವಣೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಬ್ರೆಜಿಲ್ಗೆ ಪ್ರವಾಸ ಹಾಗೂ ಉದ್ಯಮ ದೃಷ್ಟಿಯಿಂದ ಭೇಟಿ ನೀಡುವ ಭಾರತ ಹಾಗೂ ಚೀನಾ ನಾಗರಿಕರಿಗೆ ವೀಸಾದ ಅವಶ್ಯಕತೆ ಇಲ್ಲ ಎಂದು ಜೈರ್ ಹೇಳಿದ್ದಾರೆ. ಇದರಿಂದ ಭಾರತ-ಬ್ರೆಜಿಲ್ ಸಂಬಂಧ ಮತ್ತಷ್ಟು ವೃದ್ಧಿಯಾಗುವ ಸಾಧ್ಯತೆ ಇದೆ. ಜೈರ್ ಚೀನಾ ಪ್ರವಾಸದ…
60 ವಸಂತಗಳನ್ನು ಕಂಡ ಕರ್ನಾಟಕಕ್ಕೆ ನಮ್ಮ ರಾಜ್ಯದ ಹೆಮ್ಮೆಯ ಮೀಸಲು ಪೋಲೀಸ್ ತನ್ನದೇ ಆದ ಶೈಲಿಯಲ್ಲಿ ನಮನವನ್ನು ಸಲ್ಲಿಸುತ್ತಿದೆ..
ಭಗವಾನ್ ಮಹಾವಿಷ್ಣುವಿನ ಎ೦ಟನೆಯ ಅವತಾರವಾಗಿ ಶ್ರೀ ಕೃಷ್ಣನು ಅ೦ದು ರೋಹಿಣಿ ನಕ್ಷತ್ರದಲ್ಲಿ ಚ೦ದ್ರೋದಯ ಸಮಯದಲ್ಲಿ ಮಥುರಾದ ವಸುದೇವ ಮತ್ತು ದೇವಕಿಯರ ಮಗನಾಗಿ ಜನಿಸಿದ. ಅ೦ತೆಯೇ ಮಧ್ಯರಾತ್ರಿಯಲ್ಲಿ ಶ್ರೀ ಕೃಷ್ಣ ದೇವಾಲಯಗಳಲ್ಲಿ ಶ್ರೀ ಕೃಷ್ಣನ ಜನನದ ಅ೦ಗವಾಗಿ ವಿಶೇಷ ಪೂಜೆ, ಪುನಸ್ಕಾರ, ಅಭಿಷೇಕ ಹಾಗೂ ಧಾರ್ಮಿಕ ಪ್ರವಚನಗಳು ಜರುಗುತ್ತವೆ
ಸಾಮಾಜಿಕ ಜಾಲತಾಣಗಳಲ್ಲಿ ಒಂದಾಗಿರುವ ವಾಟ್ಸಪ್ ಭಾರತದಲ್ಲಿ ತನ್ನ ಬಿಸಿನೆಸ್ ಆ್ಯಪ್ ಅನ್ನು ಬಿಡುಗಡೆಗೊಳಿಸಿದ ಮೊದಲ ವರ್ಷದಲ್ಲಿ 6.84 ಕೋಟಿ ರೂ. ಆದಾಯ ಗಳಿಸುವಲ್ಲಿ ಯಶಸ್ವಿಯಾಗಿದೆ. ಅತ್ಯಧಿಕ ಸಂಖ್ಯೆಯ ಬಳಕೆದಾರರನ್ನು ಹೊಂದಿರುವ ವಾಟ್ಸಪ್ ದೇಶದಲ್ಲಿ ಈಗ ಆದಾಯ ಗಳಿಕೆಯ ಹಾದಿಯತ್ತ ಹೊರಳಿದೆ. ಬಿಸಿನೆಸ್ ಆವೃತ್ತಿ ಮೂಲಕ ವಾಟ್ಸಪ್ ಮೊದಲ ವರ್ಷದ ಗಳಿಕೆಯನ್ನು ಬಹಿರಂಗಪಡಿಸಿದೆ. ರಿಜಿಸ್ಟ್ರಾರ್ ಆಫ್ ಕಂಪನೀಸ್ಗೆ ವಾಟ್ಸಪ್ ಸಲ್ಲಿಸಿರುವ ದಾಖಲಾತಿಗಳ ಪ್ರಕಾರ, 2019 ರಲ್ಲಿಕಂಪನಿ 6.84 ಕೋಟಿ ರೂ. ಆದಾಯ ಮತ್ತು 57 ಲಕ್ಷ ರೂ. ಲಾಭ ಗಳಿಸಿದೆ. ತನ್ನ…
ಹೆಚ್ಚಿನ ಸಂಖ್ಯೆಯ ಮಹಿಳೆಯರಿಗೆ ಬೆಲೆ ಬಾಳುವ ಆಭರಣಗಳು ತಮ್ಮದಾಗಬೇಕು ಎಂಬ ಆಸೆ ಇರುತ್ತದೆ. ಆರ್ಥಿಕವಾಗಿ ಚಿನ್ನದ ಆಭರಣ ಖರೀದಿಸಲು ಸಾಧ್ಯವಾಗದಿದ್ದಾಗ ಮಾರುಕಟ್ಟೆಯಲ್ಲಿ ದೊರೆಯುವ ನಕಲಿ ಆಭರಣಗಳನ್ನು ಖರೀದಿಸುತ್ತಾರೆ. ಅಂತೆಯೇ ಇಂಗ್ಲೆಂಡ್ ನಿವಾಸಿಯ ಮಹಿಳೆ 33 ವರ್ಷಗಳ ಹಿಂದೆ ಮಾರುಕಟ್ಟೆಯಲ್ಲಿ 850 ರೂ.ಗೆ ಖರೀದಿಸಿದ್ದ ವಜ್ರದ ಉಂಗುರ ಇಂದು ಬರೋಬ್ಬರಿ 6.5 ಕೋಟಿ ರೂ.ಗೆ ಮಾರಾಟವಾಗಿದೆ. ವಜ್ರದ ಉಂಗುರ ಧರಿಸಬೇಕೆಂದು ಆಸೆ ಪಟ್ಟಿದ್ದ ಲಂಡನ್ ನಿವಾಸಿ 33 ವರ್ಷಗಳ ಹಿಂದೆ ಡೆಬ್ರಾ ಗಾಂಡರ್ಡ್(55), ರಸ್ತೆ ಬದಿಯ ಅಂಗಡಿಯಲ್ಲಿ 850…
ಬಾಲಿವುಡ್ ಬೆಡಗಿ ಸನ್ನಿ ಲಿಯೋನ್ ಅವರು ತಮ್ಮ ಪತಿ ಡೇನಿಯಲ್ ವೆಬರ್ ಜೊತೆ ಸೇರಿ ಚಿಕ್ಕ ಮಕ್ಕಳಿಗಾಗಿ ಶಾಲೆಯನ್ನು ಆರಂಭಿಸಿದ್ದಾರೆ. ಮಕ್ಕಳಿಗೆ ದೈಹಿಕ ಹಾಗೂ ಬೌದ್ಧಿಕ ವಿಕಾಸಕ್ಕೆ ಕಲ್ಪಿಸುವುದು ನಮ್ಮ ಉದ್ದೇಶ. ಮಕ್ಕಳು ಕೇವಲ ಪಠ್ಯಪುಸ್ತಕಕ್ಕೆ ಮಾತ್ರ ಸೀಮಿತವಾಗಿರಬಾರದು. ಅವರು ಪ್ರಪಂಚದಲ್ಲಿ ನಡೆಯುತ್ತಿರುವ ಪ್ರತಿಯೊಂದು ವಿಷಯದ ಬಗ್ಗೆ ತಿಳಿದುಕೊಂಡಿರಬೇಕು. ಮಕ್ಕಳು ಮಜಾ ಮಾಡಬೇಕು ಎಂಬುದು ನನ್ನ ಉದ್ದೇಶ ಎಂದು ಸನ್ನಿ ಲಿಯೋನ್ ಹೇಳಿದ್ದಾರೆ. ಸನ್ನಿ ಲಿಯೋನ್ ಅವರಿಗೆ ಮಕ್ಕಳೆಂದರೆ ತುಂಬಾನೇ ಇಷ್ಟ. ಅವರು ಮೂರು ಮಕ್ಕಳ ತಾಯಿ…