ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ 87ನೇ ಹುಟ್ಟುಹಬ್ಬವನ್ನು ದೇವರ ಸನ್ನಿಧಿಯಲ್ಲಿ ವಿಶೇಷ ಪೂಜೆಯೊಂದಿಗೆ ಆಚರಿಸಿಕೊಳ್ಳಲು ಸಿಎಂ ಎಚ್.ಡಿ.ಕುಮಾರಸ್ವಾಮಿ ದಂಪತಿ ಸೇರಿ ಇಡೀ ಕುಟುಂಬ ಶುಕ್ರವಾರ ಸಂಜೆಯೇ 2 ವಿಶೇಷ ವಿಮಾನಗಳಲ್ಲಿ ತಿರುಪತಿಗೆ ತೆರಳಿದೆ.
ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರಿಗೆ 87ನೇ ಹುಟ್ಟುಹಬ್ಬಕ್ಕೆ ಪ್ರಧಾನಿ ನರೇಂದ್ರ ಮೋದಿ ಶುಭ ಹಾರೈಸಿದ್ದಾರೆ. ಮತ್ತು ಉತ್ತಮ ಆರೋಗ್ಯವನ್ನು ದೇವರು ಕರುಣಿಸಲಿ ಎಂದು ನರೇಂದ್ರ ಮೋದಿ ಟ್ವೀಟ್ ಮೂಲಕ ಶುಭ ಹಾರೈಸಿದ್ದಾರೆ. ರಾಜಕೀಯ ಕಚ್ಚಾಟಗಳ ನಡುವೆ ರಾಷ್ಟ್ರೀಯ ನಾಯಕರ ನಡುವೆ ಇಂತಹ ಬಾಂಧವ್ಯವನ್ನು ಹಲವು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ 87ನೇ ಹುಟ್ಟುಹಬ್ಬವನ್ನು ದೇವರ ಸನ್ನಿಧಿಯಲ್ಲಿ ವಿಶೇಷ ಪೂಜೆಯೊಂದಿಗೆ ಆಚರಿಸಿಕೊಳ್ಳಲು ಸಿಎಂ ಎಚ್.ಡಿ.ಕುಮಾರಸ್ವಾಮಿ ದಂಪತಿ ಸೇರಿ ಇಡೀ ಕುಟುಂಬ ಶುಕ್ರವಾರ ಸಂಜೆಯೇ 2 ವಿಶೇಷ ವಿಮಾನಗಳಲ್ಲಿ ತಿರುಪತಿಗೆ ತೆರಳಿದೆ.
ದೇವೇಗೌಡ, ಪತ್ನಿ ಚನ್ನಮ್ಮ, ಸಿಎಂ ಎಚ್.ಡಿ.ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ, ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ, ಭವಾನಿ ರೇವಣ್ಣ, ದೇವೇಗೌಡರ ಪುತ್ರಿಯರು, ಅಳಿಯಂದಿರು, ಮೊಮ್ಮಕ್ಕಳು ಸೇರಿ ಒಟ್ಟು 23 ಮಂದಿ ತೆರಳಿದರು. ಚನ್ನರಾಯಪಟ್ಟಣ ಶಾಸಕ ಬಾಲಕೃಷ್ಣ ಅವರೂ ದೇವೇಗೌಡರ ಕುಟುಂಬದ ಜತೆಗಿದ್ದಾರೆ.
86 ವಸಂತಗಳನ್ನು ಪೂರೈಸಿರುವ ದೇವೇಗೌಡರು ಶನಿವಾರ (ಮೇ 18) 87ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಹುಟ್ಟುಹಬ್ಬದಂದು ಪ್ರತಿಬಾರಿ ತಿರುಪತಿಗೆ ತೆರಳಿ ಸುಪ್ರಭಾತ ಸೇವೆ ಮತ್ತು ಮೊದಲ ಪೂಜೆಯಲ್ಲಿ ದೇವೇಗೌಡರು ಪಾಲ್ಗೊಳ್ಳುತ್ತಿದ್ದರು. ಈ ಬಾರಿ ದೇವೇಗೌಡರು ಇಡೀ ಕುಟುಂಬವನ್ನು ತಿರುಪತಿಗೆ ಕರೆದೊಯ್ದಿದ್ದಾರೆ. ಶನಿವಾರ ಮಧ್ಯಾಹ್ನ ತಿರುಪತಿಯಿಂದ ಬೆಂಗಳೂರಿಗೆ ಹಿಂತಿರುಗಲಿದ್ದಾರೆ.
ಹಣ್ಣುಗಳನ್ನು ನಾವು ತಿಂದಷ್ಟು ನಮಗೆ ಆರೋಗ್ಯ ನಿರಂತರವಾಗಿರುತ್ತದೆ. ಅದರಲ್ಲಿಯೂ ಕೆಲವೊಂದು ನಿರ್ದಿಷ್ಟ ಹಣ್ಣುಗಳು ಆರೋಗ್ಯಕ್ಕೆ ಹಿತಕಾರಿಯಾಗಿದೆ. ಸಿಹಿಯಾದ ರುಚಿಯಿಂದ ಕೂಡಿದ ಹಲಸು ಆರೋಗ್ಯಕ್ಕೆ ನೀಡುವ ಕೊಡುಗೆ ಅಪಾರವಾದುದು.ಹಲಸಿನ ಹಣ್ಣು ತಿನ್ನುವುದರಿಂದ ಆಗುವ ಆರೋಗ್ಯಕರ ಲಾಭಗಳು ರಕ್ತದ ಒತ್ತಡವನ್ನು ಸಮತೋಲನವಾಗಿಸುತ್ತದೆಹಲಸಿನ ಹಣ್ಣಿನ ತೊಳೆಗಳಲ್ಲಿ ಪೊಟ್ಯಾಶಿಯಂ ಅಂಶ ಹೆಚ್ಚಾಗಿದ್ದು, ಅಧಿಕ ರಕ್ತದ ಒತ್ತಡ ಸಮಸ್ಯೆಯಿಂದ ಬಳಲುತ್ತಿರುವ ಮಂದಿಗೆ ಇದು ಬಹಳ ಸಹಕಾರಿ ಎಂದು ಹೇಳುತ್ತಾರೆ. ಏಕೆಂದರೆ ಪೊಟ್ಯಾಶಿಯಂ ಅಂಶ ಹೊಂದಿರುವ ಯಾವುದೇ ಆಹಾರ ಸೇವನೆ ಮಾಡುವುದರಿಂದ ದೇಹದಲ್ಲಿ ಸೋಡಿಯಂ ಅಂಶ…
ಸಾಲಮನ್ನಾ ಸೇರಿದಂತೆ ರೈತರಿಗೆ ಹಲವು ಅನುಕೂಲ ಕಲ್ಪಿಸಿರುವ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮತ್ತೊಂದು ಕೊಡುಗೆ ನೀಡಿದ್ದಾರೆ. ರೈತರಿಗೆ ಸಮರ್ಪಕವಾಗಿ ವಿದ್ಯುತ್ ಸರಬರಾಜು ಮಾಡುವುದಾಗಿ ಬಜೆಟ್ ನಲ್ಲಿ ಭರವಸೆ ನೀಡಲಾಗಿದೆ. ರಾಜ್ಯದಲ್ಲಿ ಸೌರಶಕ್ತಿ ಉತ್ಪಾದನೆ ಹೆಚ್ಚಳವಾದ ಹಿನ್ನೆಲೆಯಲ್ಲಿ ಮತ್ತು ರೈತರು ಎದುರಿಸುತ್ತಿರುವ ತೊಂದರೆಯನ್ನು ನಿವಾರಿಸುವ ಉದ್ದೇಶದಿಂದ ನೀರಾವರಿ ಪಂಪ್ ಸೆಟ್ ಗಳಿಗೆ ಹಗಲಿನ ವೇಳೆಯಲ್ಲಿ ಸಮರ್ಪಕವಾಗಿ ವಿದ್ಯುತ್ ಸರಬರಾಜು ಮಾಡಲಾಗುವುದು ಎಂದು ತಿಳಿಸಲಾಗಿದೆ. ಉಚಿತವಾಗಿ ನೀಡಲಾಗುತ್ತಿರುವ ನೀರಾವರಿ ಪಂಪ್ ಸೆಟ್, ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಗ್ರಾಹಕರಿಗೆ 9,250 ಕೋಟಿ…
ನೀವು ಟೀ ಕುಡಿಯುತ್ತೀರಾ…? ಹಾಗಿದ್ದರೆ ನಿಮ್ಮ ಬುದ್ಧಿಮತ್ತೆ ಭಾರಿ ಚುರುಕಾಗಿರುತ್ತೆ. ನಾವು ಇದನ್ನು ಹೇಳುತ್ತಿಲ್ಲ. ಅಧ್ಯಯನ ಒಂದು ಹೇಳುತ್ತಿದೆ. ಚಹಾ ಕುಡಿಯುವವರು ಮತ್ತು ಕುಡಿಯದವರನ್ನು ಅಧ್ಯಯನಕ್ಕೆ ಒಳಪಡಿಸಿದಾಗ, ಚಹಾ ಕುಡಿಯುವವರ ಮೆದುಳಿನ ಬೆಳವಣಿಗೆ ಚೆನ್ನಾಗಿರುವುದಲ್ಲದೆ, ಅವರ ಬುದ್ಧಿ ಮತ್ತೆ ಸಹ ಚುರುಕಾಗಿರುತ್ತದೆ ಎನ್ನುವ ಅಂಶ ತಿಳಿದು ಬಂದಿದೆ. ‘ನಮ್ಮ ಸಂಶೋಧನೆಯಲ್ಲಿ ತಿಳಿದು ಬಂದ ಮೊದಲ ಸಕಾರಾತ್ಮಕ ಅಂಶವೆಂದರೆ ನಿತ್ಯವೂ ಚಹಾ ಸೇವಿಸುವವರ ಮೆದುಳು ಚುರುಕಾಗಿರುವುದಲ್ಲದೆ, ವಯಸ್ಸಾದ ಬಳಿಕ ಕುಂಠಿತವಾಗುವ ಸಾಮರ್ಥ್ಯವನ್ನು ರಕ್ಷಣೆ ಮಾಡುವಲ್ಲಿ ಸಹಕರಿಸುತ್ತದೆ’ ಎಂದು ಸಿಂಗಾಪುರದ…
ಬಿಸಿ ಬಿಸಿ ಕಾಫಿ ಹೀರುವುದರಿಂದ ಮನಸ್ಸು ಉಲ್ಲಾಸಿತವಾಗಿ ರಿಲ್ಯಾಕ್ಸ್ ಅನಿಸುತ್ತದೆ. ಒತ್ತಡ ಕಡಿಮೆ ಮಾಡಿ ಫ್ರೆಶ್ನೆಸ್ ನೀಡುವ ಈ ಪೇಯದ ಹೊಸ ಆರೋಗ್ಯ ಪ್ರಯೋಜನವೊಂದು ಬೆಳಕಿಗೆ ಬಂದಿದೆ.ಹೊಸ ಅಧ್ಯಯನವೊಂದು ಕಾಫಿ ಸೇವನೆಯಿಂದ ದೇಹ ತೂಕವೂ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತದೆ ಎಂದು ಹೇಳಿದೆ. ನಮ್ಮ ದೇಹದಲ್ಲಿರುವ ಬ್ರೌನ್ ಫ್ಯಾಟ್ ಅನ್ನು ಪರೋಕ್ಷ ಅಥವಾ ನೇರವಾಗಿ ಸಕ್ರಿಯಗೊಳಿಸುವ ಅಂಶಗಳು ಕಾಫಿಯಲ್ಲಿದೆ ಎಂದು ಹೇಳಿರುವ ಈ ಅಧ್ಯಯನ, ಬಿಳಿ ಕೊಬ್ಬು ಕ್ಯಾಲೋರಿಗಳನ್ನು ಸಂಗ್ರಹಿಸುವ ಕೆಲಸ ಮಾಡಿದರೆ, ಕಂದು ಕೊಬ್ಬು ಕೊಬ್ಬನ್ನು ಕರಗಿಸಿ…
ಕಾರು ಅಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ, ಜೀವನದಲ್ಲಿ ನಾವು ಒಂದು ಒಳ್ಳೆಯ ಕಾರ್ ಖರೀದಿ ಮಾಡಬೇಕು ಅನ್ನುವ ಆಸೆ ಪ್ರತಿಯೊಬ್ಬರಿಗೂ ಇದ್ದೆ ಇರುತ್ತದೆ ಮತ್ತು ಕೆಲವರಿಂದ ಅದೂ ಸಾದ್ಯವಾದರೆ ಇನ್ನು ಕೆಲವರಿಗೆ ಅದೂ ಕನಸಾಗಿಯೇ ಉಳಿಯುತ್ತದೆ. ಇನ್ನು ಕಾರ್ ಗಳನ್ನ ಖರೀದಿ ಮಾಡದೆ ಇದ್ದರೆ ಏನು ಕಾರನ್ನ ಪ್ರತಿಯೊಬ್ಬರೂ ನೋಡಿರುತ್ತಾರೆ, ಇನ್ನು ಕಾರಿನ ಹಿಂಭಾಗದಲ್ಲಿ ಸ್ಪೋಲೈರ್ ಅನ್ನುವ ಒಂದು ಭಾಗ ಇರುತ್ತದೆ, ಹಾಗಾದರೆ ಸ್ಪೋಲೈರ್ ಎಲ್ಲಾ ಕಾರುಗಳಲ್ಲಿ ಯಾಕೆ ಇರುತ್ತದೆ ಮತ್ತು ಅದರಿಂದ ಆಗುವ…
ಇತ್ತೀಚಿನ ದಿನಗಳಲ್ಲಿ ಗೋವುಗಳನ್ನು ಸಾಕುವ ಜಮಾನ ಕಡಿಮೆಯಾಗುತ್ತಾ ಬರುತ್ತಿದೆ. ಹೀಗಾಗಿ ಕೃಷಿಗೆ ಬೇಕಾದ ಗೊಬ್ಬರಕ್ಕಾಗಿ ಜನ ಅಲೆದಾಡುತ್ತಾರೆ. ಸಗಣಿಯನ್ನು ರಸಗೊಬ್ಬರವಾಗಿ ಕೃಷಿಗಳಿಗೆ ಬಳಸುವುದರಿಂದ ಸದ್ಯ ಇದಕ್ಕೆ ಬೇಡಿಕೆ ಇದೆ. ಇದರಂತೆಯೇ ಇದೀಗ ನಾಯಿಗಳ ಮಲಕ್ಕೂ ಬೇಡಿಕೆಯಿದೆ. ಹೌದು. ಪಿಲಿಫೈನ್ಸ್ ಶಾಲೆಯೊಂದರ ವಿದ್ಯಾರ್ಥಿಗಳು ಹೊಸ ಆವಿಷ್ಕಾರವೊಂದನ್ನು ಮಾಡಿದ್ದು, ಅದರಲ್ಲಿ ನಾಯಿಗಳ ಮಲದಿಂದಲೂ ಉಪಯೋಗವಿದೆ ಎಂಬುದನ್ನು ಸಾಬೀತುಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇದೀಗ ನಾಯಿಗಳ ಮಲಕ್ಕೂ ಹೆಚ್ಚಿನ ಬೇಡಿಕೆ ಬರಬಹುದಾದ ಸಾಧ್ಯತೆಗಳಿವೆ. ಸಿಮೆಂಟ್ ನೊಂದಿಗೆ ನಾಯಿ ಮಲವನ್ನು ಮಿಕ್ಸ್ ಮಾಡಿ ಇಟ್ಟಿಗೆ…
ದರ್ಶನ್, ಪುನೀತ್ ರಾಜ್ಕುಮಾರ್, ಸುದೀಪ್ ಸೇರಿ ಎಲ್ಲರೂ ಟ್ವೀಟ್ ಮಾಡುವ ಮೂಲಕ ಅಂಬಿ ಜನ್ಮದಿನಕ್ಕೆ ಶುಭಾಶಯ ಕೋರಿದ್ದಾರೆ. ಆದರೆ, ಓರ್ವ ಸ್ಟಾರ್ ನಟನನ್ನು ಬಿಟ್ಟು! ಕನ್ನಡ ಚಿತ್ರರಂಗದ ದೊಡ್ಡಣ್ಣನಂತೆ ಕೆಲಸ ಮಾಡಿದ್ದ ರೆಬೆಲ್ ಸ್ಟಾರ್ ಅಂಬರೀಶ್ ಸಿನಿಮಾ ರಂಗದಲ್ಲಿ ಯಾವುದೇ ತೊಂದರೆ ಆದರೂ ಅದನ್ನು ಪರಿಹಾರ ಮಾಡುತ್ತಿದ್ದರು. ಅವರನ್ನು ಕಳೆದುಕೊಂಡ ಕನ್ನಡ ಚಿತ್ರರಂಗ ಬಡವಾಗಿದೆ. ಮೇ 29 ಅವರ ಜನ್ಮದಿನ. ಮೇ 30 ರವಿಚಂದ್ರನ್ ಜನ್ಮದಿನ. ಈ ವೇಳೆ ಕನ್ನಡ ಚಿತ್ರರಂಗದ ಎಲ್ಲ ಗಣ್ಯರೂ ಯಶ್ ಅವರನ್ನು…