ಆರೋಗ್ಯ

ಸಕ್ಕರೆ(ಶುಗರ್) ಕಾಯಿಲೆಗೆ ಉತ್ತಮ ಔಷದಿಯಾಗಿರುವ ಮೆಂತೆ …! ಬಗ್ಗೆ ತಿಳಿಯಲು ಈ ಲೇಖನ ಓದಿ..

1581

ಮನೆಗಳಲ್ಲಿ ಇಲ್ಲದಿರಲು ಸಾಧ್ಯವೇ ಇಲ್ಲ. ಬಹುತೇಕ ಅಡಿಗೆಗಳಲ್ಲಿ ಮೆಂತೆಕಾಳು ತೀರಾ ಅಗತ್ಯ.  ರುಚಿಯಲ್ಲಿ ಕಹಿ ಒಗರಿನ ಅನುಭವ ನೀಡುವುದು. ಅದರಲ್ಲಿ ಅನೇಕಾನೇಕ ಆರೋಗ್ಯಕರ ಗುಣಗಳಿವೆ. ಮಧುಮೇಹಿಗಳು (ಸಕ್ಕರೆ ಕಾಹಿಲೆ) ಉಳ್ಳವರು ಪ್ರತಿನಿತ್ಯ ಯಾವುದಾದರೂ ರೂಪದಲ್ಲಿ ಕನಿಷ್ಠ ಒಂದು ಚಮಚ ಮೆಂತ್ಯೆ ಸೇವನೆ ಮಾಡಿದಲ್ಲಿ ಇನ್ಸುಲಿನ್ನನ್ನು ತಯಾರು ಮಾಡುವ ಆಮೈನೋ ಆಸಿಡ್ ಇನ್ಸುಲಿನ್ಉತ್ಪಾದಿಸಿ ಸಕ್ಕರೆ ಕಾಹಿಲೆಯನ್ನು ನಿಯಂತ್ರಣದಲ್ಲಿಡುತ್ತದೆ.

ಅದರಲ್ಲಿ ಅನೇಕಾನೇಕ ಆರೋಗ್ಯಕರ ಗುಣಗಳಿವೆ. ಮೆಂತೆಯನ್ನು ಪ್ರತಿನಿತ್ಯ ಅಡುಗೆ ಅಥವಾ ಹುರಿದು ಪುಡಿ ಮಾಡಿ ಬೆಳಿಗ್ಗೆ ಖಾಲಿ ಹೊಟ್ಟೆಗೆ ಒಂದು ಚಮಚದಷ್ಟುಪುಡಿಯನ್ನು ನೀರಿನಲ್ಲಿ ಕದಡಿ ಇಲ್ಲವೇ ನೇರವಾಗಿ ಪಂಚಕಜ್ಜಾಯದಂತೆ ತಿಂದು ನೀರು ಕುಡಿದಲ್ಲಿ ವಾತದೋಷವನ್ನು ನಿವಾರಿಸಬಹುದು. ಆದ್ದರಿಂದ ಆದಷ್ಟು ಇದನ್ನು ಚಳಿ ಮಳೆಗಾಲದಲ್ಲಿ ಬಳಸುವುದು ಸೂಕ್ತ.

ಜೀರ್ಣಕಾರಿಯಾಗಿಯೂ ಬಳಸಬಹುದು: ಅಜಿರ್ಣದಿಂದ ಬಳಲುವವರಿಗೆ ಮೆಂತೆ ಪುಡಿ ತೀರಾ ಸಹಕಾರಿ. ಮೆಂತ್ಯೆಕಾಳುಗಳಲ್ಲಿ ಕ್ಯಾಲ್ಸಿಯಂ ಅತ್ಯಧಿಕವಾಗಿರುತ್ತದೆ.ಹೆರಿಗೆಯಾದ ಹೆಂಗಸರಿಗೆ ಮೆಂತ್ಯೆಕಾಳು ಗಳನ್ನು ನೆನೆಸಿ ಎಳೆತೆಂಗಿನಕಾಯಿಯೊಂದಿಗೆ ನುಣ್ಣಗೆ ಅರೆದು ತೆಳು ಗಂಜಿಯಂತೆ ಮಾಡಿ ಕುಡಿಸಿದಲ್ಲಿ ಹಾಲು ಹೆಚ್ಚಾಗುವುದು.

ಮಹಿಳೆಗೆ ಮುಟ್ಟಿನ ಸಮಯದಲ್ಲಿ ಮೆಂತೆ ಮತ್ತು ಜೀರಿಗೆಯನ್ನು ಒಂದೊಂದು ಚಮಚದಷ್ಟು ಹುರಿದು ಕಷಾಯ ಮಾಡಿ ಕುಡಿದಲ್ಲಿ ಹೊಟ್ಟೆ ನೋವಿನ ಪ್ರಮಾಣ ಹಾಗೂ ಅತ್ಯಧಿಕ ರಕ್ತಸ್ರಾವದ ಪ್ರಮಾಣ ಕಡಿಮೆಯಾಗುವುದು. ಹೆರಿಗೆ ನಂತರ ಮಹಿಳೆಯರಲ್ಲಿ ಸಾಮಾನ್ಯವಾಗಿ ಗರ್ಭಾಶಯದ ಪ್ರಮಾಣ ದೊಡ್ಡದಾಗುತ್ತದೆ.ಆಗ ಪ್ರತಿನಿತ್ಯ ಮೆಂತೆ ಸೇವನೆ ಗರ್ಭಾಶಯವನ್ನು ಮೊದಲಿನ ಸಹಜ ಸ್ಥಿತಿಗೆ ತರುವುದರಲ್ಲಿ ಸಹಕಾರಿ.

ಮೆಂತೆ ಕಾಳುಗಳಲ್ಲಿ ಹೆಚ್ಚಿನ ನಾರಿನಂಶ ಮತ್ತು  ಆಂಟಿ ಆಕ್ಸಿಡೆಂಟುಗಳು ಇರುವುದರಿಂದ ದೇಹದಲ್ಲಿನ ವಿಷಕಾರಿ ಪದಾರ್ಥಗಳನ್ನು ಇದು ಹೊರಚೆಲ್ಲಬಹುದಾಗಿದೆ. ಆಹಾರದಲ್ಲಿ ಮೆಂತೆ ಉಪಯೋಗಿಸುವುದರಿಂದ ಹೊಟ್ಟೆಯಲ್ಲಿ ಸೇರಿದ ಆಮ್ಲವು ಅನ್ನನಾಳದಲ್ಲಿ ಹೋಗಿ ಸೇರದಂತೆ ಜಾಗ್ರತೆ ವಹಿಸುತ್ತದೆ. ಆಮಶಂಕೆಯೆಂಬ ಭೇದಿಯಿಂದ ಬಳಲುವವರುಈ ಪುಡಿಯನ್ನು ತಯಾರಿಸಿಟ್ಟುಕೊಂಡು ಒಂದು ಕಪ್ ಮೊಸರಿನಲ್ಲಿ ಒಂದು ಚಮಚದಷ್ಟು ಮೆಂತೆ ಪುಡಿಯನ್ನು ಮಿಶ್ರಣ ಮಾಡಿ ಕುಡಿದಲ್ಲಿ ರಾಮಬಾಣದಂತೆ ಕೆಲಸ ಮಾಡುತ್ತದೆ. ಹಾಗೂ ಆಮಶಂಕೆಯಿಂದಾಗುವ ಹೊಟ್ಟೆ ಉರಿ ಕಡಿಮೆ ಮಾಡುತ್ತದೆ.

ಮೆಂತೆಯಿಂದ ಕಾಫಿಯನ್ನು ಸಹ ಮಾಡಬಹುದು. ಅಗತ್ಯ ಸಾಮಗ್ರಿಗಳು: ಮೆಂತೆ ಕಾಳು, ಒಣಶುಂಠಿ ಇವೆರಡನ್ನೂ ಮಿಶ್ರಣ ಮಾಡಿ ಕಬ್ಬಿಣದ ಬಾಣಲೆಯಲ್ಲಿ ಹುರಿದು ಪುಡಿ ಮಾಡಿ ಒಂದು ಖಾಲೀ ಬಾಟಲಿಯಲ್ಲಿ ಮಿಶ್ರಣವನ್ನು ತುಂಬಿಡಿ. ಒಂದು ಕಪ್ ಹಾಲಿಗೆ ಅರ್ಧ ಚಮಚದಷ್ಟು  ಪುಡಿಯನ್ನು ಹಾಕಿ ಕುದಿಸಿರಿ. ಸಿಹಿ ಬೇಕೆನಿಸಿದರೆ ರುಚಿಗೆ ತಕಷ್ಟು ಬೆಲ್ಲ ಅಥವಾ ಕಲ್ಲುಸಕ್ಕರೆ ಉತ್ತಮ. ತಾಜಾತನದ ಘಮ ಬೇಕೆನಿಸಿದರೆ ಒಂದು ಚೂರು ತುರಿದ ಹಸಿಶುಂಠಿಯನ್ನು ಹಾಲು ಕುದಿಯುವಾಗ ಬಳಸಬಹುದು. ಹೀಗೆಮೆಂತೆಯ ಲಾಭಗಳು ಅಪಾರ.  ನೀವೂ ಮಾಡಿ ನೋಡಿ: ಮೆಂತ್ಯೆ ಯಿಂದ  ಇನ್ನು ಹಲವಾರು ಖ್ಯಾದ್ಯಗಳನ್ನು ತಯಾರಿಸಿ ಸೇವಿಸಬಹುದು.

 

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಉಪಯುಕ್ತ ಮಾಹಿತಿ

    ಭಾರತೀಯರಿಗೋಸ್ಕರವೇ ಮಾಡಿರುವ ಈ ಡಿಜಿಟಲ್ ಪಂಚಾಂಗದಲ್ಲಿ ಏನೆಲ್ಲಾ ಮಾಹಿತಿ ಇದೆ ಗೊತ್ತಾ..!

    ಡಿಜಿಟಲ್ ಭಾಷಾತಂತ್ರಜ್ಞಾನ ಪರಿಹಾರಗಳ ಮುಂಚೂಣಿಯ ರೆವೆರೀ ಲಾಂಗ್ವೇಜ್‌ ಟೆಕ್ನಾಲಜೀಸ್‌ ಇಂಡಿಕ್‌ ಕ್ಯಾಲೆಂಡರ್ ಎಂಬ ಸುಲಭ ಬಳಕೆಯ ಕ್ಯಾಲೆಂಡರ್‌ಆಪ್ ಬಿಡುಗಡೆ ಮಾಡಿದೆ. ರೆವೆರೀಯ ಇಂಡಿಕ್‌ ಕ್ಯಾಲೆಂಡರ್‌ಆಪ್ ಪ್ರಸ್ತುತ ಗೂಗಲ್ ಪ್ಲೇಸ್ಟೋರ್‌ನಲ್ಲಿ ಲಭ್ಯವಿದ್ದು ಅವರ ಭಾಷೆ, ಸಂಸ್ಕೃತಿ, ಧಾರ್ಮಿಕತೆಗಳನ್ನು ಮೀರಿ ಭಾರತೀಯರಿಗೆಂದೇ ರೂಪಿಸಲಾಗಿದೆ.

  • ಭವಿಷ್ಯ, ವಿಧ್ಯಾಭ್ಯಾಸ

    ಪಿಯುಸಿ ನಂತರ ಹೆಚ್ಚಾಗಿ ಆರ್ಟ್ಸ್‌ ಆಯ್ಕೆ ಮಾಡುಕೊಳ್ಳುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಗೂಡ್ ನ್ಯೂಸ್..!ತಿಳಿಯಲು ಈ ಲೇಖನ ಓದಿ…

    ಬಹಳಷ್ಟು ವಿದ್ಯಾರ್ಥಿಗಳು ಪಿಯುಸಿ ನಂತರ ಹೆಚ್ಚಾಗಿ ಆರ್ಟ್ಸ್‌ ಆಯ್ಕೆ ಮಾಡುಕೊಳ್ಳುತ್ತಾರೆ. ಆದರೆ ಹೆಚ್ಚಿನವರ ನಂಬಿಕೆ ಏನೆಂದರೆ ಸಯನ್ಸ್‌ ಮತ್ತು ಕಾಮರ್ಸ್‌ನಲ್ಲಿ ಇರೋವಷ್ಟು ಕರಿಯರ್‌ ಆಪ್ಷನ್‌ ಆರ್ಟ್ಸ್‌ನಲ್ಲಿ ಇಲ್ಲ ಎಂದು ಹೇಳಲಾಗುತ್ತದೆ. ಆದರೆ ಅದು ಸುಳ್ಳು ಆರ್ಟ್ಸ್‌‌ನಲ್ಲಿ ಬಹಳಷ್ಟು ಕರಿಯರ್‌ ಅವಕಾಶಗಳು ಇವೆ. ಅದಕ್ಕಾಗಿ ನೀವು ಮುಂದೆ ಏನು ಮಾಡಬೇಕು ಎಂಬುದರ ಬಗ್ಗೆ ಸ್ವಲ್ಪ ಮಾಹಿತಿ ಇಲ್ಲಿ ತಿಳಿದುಕೊಳ್ಳಬೇಕು.

  • ಸುದ್ದಿ

    132 ಕೋಟಿಮೌಲ್ಯ ಬೆಲೆ ಬಾಳುವ ಈ ನಂಬರ್ ಪ್ಲೇಟನ್ನು ಮಾರಟಕ್ಕೆ ಇಟ್ಟಿದ್ದಾರೆ, ಇಷ್ಟಕ್ಕೂ ಇದರ ವಿಶೇಷತೆಯಾದರು ಏನು?

    ನಮ್ಮ ದೈನಂದಿನ ದಿನ ಪತ್ರಿಕೆಗಳಲ್ಲಿ ಲಕ್ಷಗಟ್ಟಲೆ ಖರ್ಚು ಮಾಡಿ ಫ್ಯಾನ್ಸಿ ನಂಬರ್‌ಗಳನ್ನು ಖರೀದಿಸುವ ಸುದ್ದಿಗಳನ್ನು ಓದಿರುತ್ತೇವೆ. ಆದರೇ, ಇಲ್ಲೊಬ್ಬ ಉದ್ಯಮಿ ತನ್ನ ದುಬಾರಿ ಸೂಪರ್ ಕಾರಿನ ಫ್ಯಾನ್ಸಿ ನಂಬರ್ ಪ್ಲೇಟ್ ಅನ್ನು ಮಾರಾಟ ಮಾಡಲು ನಿರ್ಧರಿಸಿದ್ದು, ಇದರ ಬೆಲೆಯು ಕೇವಲ 132 ಕೋಟಿ ಎಂದು ಹೇಳಿಕೊಂಡಿದ್ದಾನೆ.ಹೌದು, ಬ್ರಿಟನ್‌ನಲ್ಲಿ ಭಾರೀ ಜನಪ್ರಿಯತೆ ಗಳಿಸಿರುವ ‘ಎಫ್1’ ನಂಬರ್ ಪ್ಲೇಟ್‌ಗೆ ಇದೀಗ ಭಾರೀ ಬೇಡಿಕೆ ಸೃಷ್ಠಿಯಾಗಿದೆ. ಈ ಹಿಂದೆ 2008ರಲ್ಲಿ ಕೇವಲ 4.5 ಕೋಟಿ ಬೆಲೆ ಹೊಂದಿದ್ದ ಎಫ್1 ನಂಬರ್ ಪ್ಲೇಟ್‌ಗಳು…

  • inspirational, ಸುದ್ದಿ

    ಕೇವಲ ಒಂದು ಸೇಬಿಗಾಗಿ ಬಿಗ್ ಮನೆಯಲ್ಲಿ ಸ್ಪರ್ಧಿಗಳ ರಂಪಾಟ..!

    ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ಒಂದು ಸೇಬಿಗಾಗಿ ಇಡೀ ದಿನ ಜಗಳವಾಡಿದ್ದು, ಮನೆಯಲ್ಲಿ ದೊಡ್ಡ ರಂಪಾಟವೇ ನಡೆದು ಹೋಗಿದೆ. ಮೊನ್ನೆ ರಾತ್ರಿ ಚೈತ್ರ ಕೋಟೂರು ಒಂದು ಆಪಲ್ ತಿಂದಿದ್ದಾರೆ. ಆಪಲ್ ತಿನ್ನುವ ಮುನ್ನ ಅಡುಗೆ ಮನೆಯ ಡಿಪಾರ್ಟ್ಮೆಂಟ್ ಗೆ ಸೇರಿದ್ದ ಚಂದನ್ ಆಚಾರ್ ಪರ್ಮಿಶನ್ ಕೇಳಿದ್ದಾರೆ. ಚೈತ್ರ ಕೋಟೂರುಗೆ ಚಂದನ್ ಆಚಾರ್ ಅನುಮತಿ ನೀಡಿ ಸುಜಾತ ಅವರಿಗೆ ಈ ವಿಷಯವನ್ನು ತಿಳಿಸಲು ಹೇಳುತ್ತಾರೆ. ಆಪಲ್ ತಿನ್ನುವಾಗ ಅದೇ ಚಂದನ್ ಆಚಾರ್, ಪ್ರತಾಪ್, ರಾಜು ತಾಳಿಕೋಟೆ ಜೊತೆಗೂ ಹಂಚಿಕೊಂಡು ತಿಂದಿದ್ದಾರೆ….

  • ಆರೋಗ್ಯ

    ಮೊಳಕೆ ಬಂದ ಹೆಸರು ಕಾಳಿನ ಲಾಭಗಳೇನು? ಈ ಅರೋಗ್ಯ ಮಾಹಿತಿ ನೋಡಿ.

    ಬ್ಯುಸಿ ಜೀವನ ಶೈಲಿಯಲ್ಲಿ ನಮ್ಮ ಆರೋಗ್ಯದ ಬಗ್ಗೆ ಕಾಳಜಿ ತೋರಿಸೋಕೆ ಸಮಯ ಸಿಗ್ತಿಲ್ಲ. ಅದರಲ್ಲೂ ಇತ್ತೀಚಿನ ಕಾಲಘಟ್ಟದಲ್ಲಿ ಆರೋಗ್ಯಕರ ಆಹಾರಕ್ಕಿಂತ ಫಾಸ್ಟ್ ಫುಡ್‍ಗಳ ಹಾವಳಿಯೇ ಹೆಚ್ಚಾಗಿದೆ. ಆದ್ದರಿಂದ ಆರೋಗ್ಯಕರ ಆಹಾರಗಳು ಯಾವುದು? ಅದರ ಲಾಭಗಳೇನು..? ಎನ್ನುವ ವಿಷಯವೇ ಅನೇಕರಿಗೆ ತಿಳಿದಿಲ್ಲ. ಫಾಸ್ಟ್ ಫುಡ್ಸ್ ಗಳ ರುಚಿಗೆ ಮನಸೋತ ಮಂದಿಗೆ ಅದರಿಂದ ಅಷ್ಟೇ ಫಾಸ್ಟಾಗಿ ಆಗುವ ದುಷ್ಪರಿಣಾಮಗಳ ಬಗ್ಗೆ ತಿಳಿದಿರಲ್ಲ. ಹೌದು, ಇಂತಹ ಆರೋಗ್ಯಕ್ಕೆ ಮಾರಕವಾದ ಜೀವನ ಶೈಲಿಯ ಮಧ್ಯೆ ಆರೋಗ್ಯಕರ ಆಹಾರಗಳನ್ನು ಜನ ಮರೆತಿದ್ದಾರೆ. ಸೊಪ್ಪು ತರಕಾರಿ,…