ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಸ್ವಚ್ಛತೆ ಕಾಪಾಡದ ಅಡುಗೆ ಮನೆಯಂತಹ ಸ್ಥಳಗಳಲ್ಲಿ ಜಿರಲೆಗಳು ನೆಲೆ ಕಂಡುಕೊಂಡು ಕುಟುಂಬ ಬೆಳೆಸುವುದು ಸಾಮಾನ್ಯ. ಆದರೆ ದಕ್ಷಿಣ ಚೀನಾದಲ್ಲಿ ವ್ಯಕ್ತಿಯೊಬ್ಬನ ಕಿವಿಯೊಳಗೇ ಜಿರಲೆ ಸಂಸಾರ ನಡೆಸಿದೆ.ಅದನ್ನು ಕಂಡು ವೈದ್ಯರೂ ಬೆಚ್ಚಿಬಿದ್ದಿದ್ದಾರೆ.ಎಲ್ವಿ ಎಂಬ ಹೆಸರಿನ 24 ವರ್ಷದವ್ಯಕ್ತಿ ಬೆಳಿಗ್ಗೆ ಏಳುವಾಗ ಕಿವಿಯಲ್ಲಿ ವಿಪರೀತ ನೋವುಂಟಾಗುತ್ತಿತ್ತು. ಒಳಗೆ ತೀರಾ ಕಿರಿಕಿರಿ. ಏನೋ ಓಡಾಡುತ್ತಿರುವ, ಕೊರೆಯುತ್ತಿರುವ ಸದ್ದು. ಆ ನೋವನ್ನು ಸಹಿಸಿಕೊಳ್ಳಲಾಗದೆ ಆತ ಒದ್ದಾಡತೊಡಗಿದ. ಆತನ ಮನೆಯವರು ಕಿವಿಯೊಳಗೆ ಬೆಳಕು ಹಾಯಿಸಿ ನೋಡಿದಾಗ ಏನೋ ಕೀಟವೊಂದು ಒಳಗೆ ಹರಿದಾಡುತ್ತಿದೆ ಎಂದೆನಿಸಿತ್ತು.ಕೂಡಲೇ ವೈದ್ಯರ ಬಳಿ ತೆರಳಿದರು.
ಹುಯಿಯಾಂಗ್ನಲ್ಲಿನ ಸಾನ್ಹೆ ಆಸ್ಪತ್ರೆಯ ವೈದ್ಯರು ಆತನ ಕಿವಿ ತಪಾಸಣೆ ನಡೆಸಿದಾಗ ಕಂಡಿದ್ದು, ಒಳಗೆ ಸಂಸಾರ ನಡೆಸಿದ್ದ ಜಿರಲೆಯ ಕುಟುಂಬ. ಚಿಮಟ ಬಳಸಿ ಮರಿಗಳನ್ನು ಹೊರತೆಗೆದ ಬಳಿಕ ತಾಯಿ ಜಿರಲೆ ಕಣ್ಣಿಗೆ ಬಿತ್ತು. ಸಾಹಸ ಪಟ್ಟು ಅದನ್ನೂ ಹೊರತೆಗೆಯುವಲ್ಲಿ ಯಶಸ್ವಿಯಾದರು. ಆದರೆ ಆತನ ಕಿವಿಯ ನಾಳಕ್ಕೆ ಸ್ವಲ್ಪ ಹಾನಿಯಾಗಿತ್ತು.
‘ಎಲ್ವಿ ಕಿವಿಯೊಳಗೆ ಅಸಾಧ್ಯ ನೋವಾಗುತ್ತಿದೆ ಎಂದು ಹೇಳಿದ್ದರು. ಒಳಗಿನಿಂದ ಕೆರೆದಂತೆ, ಓಡಾಡಿದಂತೆ ಭಾಸವಾಗುತ್ತಿತ್ತು. ಇದರಿಂದ ಸುಮ್ಮನೆ ಕುಳಿತು ಕೊಳ್ಳಲು ಸಹ ಸಾಧ್ಯವಾಗುತ್ತಿರಲಿಲ್ಲ. ಪರಿಶೀಲಿಸಿದಾಗ ಒಳಗೆ ಹತ್ತಕ್ಕೂ ಹೆಚ್ಚುಜಿರಲೆ ಮರಿಗಳು ಇರುವುದು ಕಾಣಿಸಿತು. ಅವು ಆಗಲೇ ಅಲ್ಲಿ ಅಡ್ಡಾಡುತ್ತಿದ್ದವು’ಎಂದು ಕಿವಿ, ಮೂಗು ಮತ್ತು ಗಂಟಲು ತಜ್ಞರು ತಿಳಿಸಿದ್ದಾರೆ.
ಎಲ್ವಿ ಅರೆ ಬರೆ ಆಹಾರ ತಿಂದು ತನ್ನ ಹಾಸಿಗೆ ಪಕ್ಕದಲ್ಲಿಯೇ ಇಟ್ಟುಕೊಂಡು ಮಲಗುವ ಅಭ್ಯಾಸ ಇರಿಸಿಕೊಂಡಿದ್ದ. ಇದೇಆತನಿಗೆ ಎರವಾಗಿತ್ತು. ಆಹಾರ ತಿನ್ನಲು ಬಂದ ಜಿರಲೆ ಅಲ್ಲಿಯೇ ಮಲಗಿದ್ದ ಆತನ ಕಿವಿಯೊಳಗೆ ನುಗ್ಗಿ ಅದನ್ನೇ ತನ್ನಆವಾಸ ಸ್ಥಾನವನ್ನಾಗಿ ಮಾಡಿಕೊಂಡಿತ್ತು. ಅಲ್ಲಿಯೇ ಮೊಟ್ಟೆಯಿಟ್ಟು ಮರಿಯನ್ನೂ ಮಾಡಿತ್ತು. ಎಷ್ಟು ಸಮಯದಿಂದ ಅದು ಆತನ ಕಿವಿಯೊಳಗೆ ಇದ್ದಿರ ಬಹುದು ಎಂಬುದು ಗೊತ್ತಾಗಿಲ್ಲ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಉತ್ತರ ಕರ್ನಾಟಕದಲ್ಲಿನ ಭೀಕರ ಪ್ರವಾಹದಿಂದಾಗಿ ಆಸ್ತಿ ಪಾಸ್ತಿ, ಹಣದ ಜೊತೆಗೆ ಜನರ ಪ್ರಾಣ ಕೂಡ ಸಂಕಷ್ಟದ ಪರಿಸ್ಥಿತಿಯಲ್ಲಿದೆ. ಈ ಪ್ರವಾಹದಿಂದ ಮನೆ ಮಠ ಕಳೆದುಕೊಂಡು ನಿರಾಶ್ರಿತರಾದ ಸಾವಿರಾರು ಜನರಿಗೆ ಹಲವಾರು ಹಲವಾರು ರೀತಿಯಲ್ಲಿ ತಮ್ಮ ಕೈಲಾದಷ್ಟು ಮಾಡುತ್ತಿದ್ದಾರೆ.ಮುಂಬೈನ ಸುಮನ್ ರಾವ್ ಎನ್ನುವ ಮಹಿಳೆಯೊಬ್ಬಳು ತಮ್ಮ ಮಗಳ ಮದುವೆಗೋಸ್ಕರ ಕೂಡಿಟ್ಟಿದ್ದ ಹಣವನ್ನು ಸಂಕಷ್ಟದಲ್ಲಿರುವ ಉತ್ತರ ಕರ್ನಾಟಕದ ಜನರಿಗೋಸ್ಕರ ಕೊಡುವುದರ ಮುಖಾಂತರ ತಮ್ಮ ಮಾನವೀಯತೆಯನ್ನು ಮೆರೆದಿದ್ದಾರೆ. ಇದೆ ವರ್ಷ ಡಿಸೆಂಬರ್ ತಿಂಗಳಿನಲ್ಲಿ ತಮ್ಮ ಮಗಳ ಮದುವೆ ಮಾಡಬೇಕೆಂದು ೫೦ ಲಕ್ಷರೂ…
ಜನಪ್ರಿಯ ರಿಯಾಲಿಟಿ ಶೋ ಕನ್ನಡದ ಬಿಗ್ ಬಾಸ್ ರಿಯಾಲಿಟಿ ಶೋ ಮತ್ತೊಮ್ಮೆ ಕೆಟ್ಟ ಕಾರಣಕ್ಕೆ ಸುದ್ದಿಯಾಗಿದ್ದು, ಶೋಗೆ ಅತಿಥಿಯಾಗಿ ಬಿಗ್ ಬಾಸ್ ಮನೆಗೆ ಬಂದಿದ್ದ ಕಿರಿಕ್ ಹುಡುಗಿ ಸಂಯುಕ್ತ ಹೆಗ್ಡೆ ಬಿಗ್ ಬಾಸ್ ಮನೆಯಲ್ಲೂ ಕಿರಿಕ್ ಮಾಡಿಕೊಂಡು ಹೊರ ಬಂದಿದ್ದಾರೆ.
ಮಹಾರಾಷ್ಟ್ರದ ಗ್ರಾಮವೊಂದರಲ್ಲಿ ಹೋರಿಯೊಂದು ಮಹಿಳೆಯ ಮಂಗಳಸೂತ್ರವನ್ನು ನುಂಗಿರುವ ಘಟನೆ ನಡೆದಿದ್ದು, ಸಗಣಿಯ ಮೂಲಕ ಹೊರಬಾರದಿರುವುದರಿಂದ ಶಸ್ತ್ರಚಿಕಿತ್ಸೆ ಮಾಡಿ ತೆಗೆಯಲಾಗಿದೆ ಎಂದು ತಿಳಿದುಬಂದಿದೆ. ಈ ಘಟನೆ ಮಹಾರಾಷ್ಟ್ರದ ಅಹಮದ್ನಗರ ಜಿಲ್ಲೆಯ ವಾಘಪುರ್ನಲ್ಲಿ ನಡೆದಿದ್ದು, ಹೋರಿಗಳ ಹಬ್ಬದ ವೇಳೆ ಈ ರೀತಿ ಸರವನ್ನು ಹೋರಿ ನುಂಗಿತ್ತು ಎನ್ನಲಾಗಿದೆ. ಆ.30ರಂದು ನಡೆದ ಹಬ್ಬದ ವೇಳೆ ರಾಸುಗಳಿಗೆ ಅಲಂಕಾರ ಮಾಡಲಾಗುತ್ತದೆ. ಈ ವೇಳೆ ಮಹಿಳೆಯ ಮನೆಯಲ್ಲಿದ್ದ ರಾಸುಗಳಿಗೂ ಅಲಂಕಾರ ಮಾಡಲಾಗಿತ್ತು. ಪೂಜೆ ಮಾಡುವ ವೇಳೆ ಕೊರಳಲ್ಲಿದ್ದ 1.5ಲಕ್ಷ ಮೌಲ್ಯದ ಮಂಗಳಸೂತ್ರ ಹೋರಿಯ ಕೊಂಬಿಗೆ…
ನಾವು ಮನೆಗಳಲ್ಲಿ ಕೆಲಸ ಮಾಡದ, ಉದ್ಯೋಗ ಮಾಡದೆ ತಿಂದು ಕೆಲಸವಿಲ್ಲದೇ ತಿರುಗುವವರನ್ನು, ಸೋಮಾರಿ ಎಂದು ಮನೆಗಳಲ್ಲಿ ಹಾಸ್ಯ ಮಾಡುವುದುಂಟು. ಹೀಗೆ ಸೋಮಾರಿತನದಿಂದ ಇರುವವರು ಎಲ್ಲಾ ಕಡೆ ಸಿಗುತ್ತಾರೆ. ಅದಕ್ಕಾಗಿಯೇ ವಿಶ್ವವಿದ್ಯಾನಿಲಯವೊಂದು ವಿಶ್ವದ ಸೋಮಾರಿಗಳ ಬಗ್ಗೆ ಅಧ್ಯಯನ ನಡೆಸಿದ್ದು ಅದರ ವಿವರಣೆಯನ್ನು ಕೊಟ್ಟಿದೆ.
ರಸ್ತೆ ಸುರಕ್ಷತೆಯನ್ನು ಹೆಚ್ಚಿಸುವ ಸಲುವಾಗಿ ಕೇಂದ್ರ ಸರ್ಕಾರ ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಮಸೂದೆಯನ್ನು ಜಾರಿಗೆ ತಂದಾಗಿನಿಂದಲೂ ಸಂಚಾರ ನಿಯಮ ಉಲ್ಲಂಘನೆಗೆ ಮಾಡಿದವರಿಗೆ ದಂಡ ವಿಧಿಸುವ ಪ್ರಕರಣಗಳು ವರದಿಯಾಗುತ್ತಲೇ ಇವೆ. ಕೆಲ ದಂಡದ ಮೊತ್ತ 80 ಸಾವಿರ ರೂ. ತಲುಪಿದ್ದು ಇದೆ. ಮೋಟಾರು ವಾಹನ ಕಾಯಿದೆ (ತಿದ್ದುಪಡಿ) 2019, ಜಾರಿಗೆ ಬಂದ ದಿನದಿಂದಲೂ ದೇಶಾದ್ಯಂತ ಸಂಚಾರ ಶಿಸ್ತು ಪಾಲನೆ ಮಾಡದ ಸವಾರರಿಗೆ ಭಾರೀ ಮೊತ್ತದ ದಂಡ ಪೀಕಿಸುತ್ತಿರುವ ಸುದ್ದಿಗಳೇ ಎಲ್ಲೆಲ್ಲೂ. ಇವುಗಳ ನಡುವೆ ಒಡಿಶಾ ರಾಜಧಾನಿ ಭುವನೇಶ್ವರದ…
ಅಕ್ಯೂಟ್ ಎನ್ಸೆಫಾಲಿಟಿಸ್ ಸಿಂಡ್ರೋಮ್(ಎಇಎಸ್)ಗೆ ಬಿಹಾರದ ಮುಜಾಫರ್ನಗರ ತತ್ತರಿಸಿ ಹೋಗಿದ್ದು, ಈವರೆಗೆ ಮೆದುಳು ಜ್ವರಕ್ಕೆ ಬರೋಬ್ಬರಿ 108 ಮಕ್ಕಳು ಬಲಿಯಾಗಿದ್ದಾರೆ.ಈ ಹಿನ್ನೆಲೆಯಲ್ಲಿ ಇಂದು ಮುಖ್ಯಮಂತ್ರಿ ನಿತೀಶ್ ಕುಮಾರ್, ಶ್ರೀಕೃಷ್ಣ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ಭೇಟಿ ನೀಡಿ ಪರಿಸ್ಥಿತಿಯ ಅವಲೋಕನ ನಡೆಸಿದರು. ಜಿಲ್ಲಾಧಿಕಾರಿಗಳ ಪ್ರಕಾರ, ಮಿದುಳು ಜ್ವರದಿಂದ ಬಳಲುತ್ತಿದ್ದ 89 ಮಕ್ಕಳು ಶ್ರೀಕೃಷ್ಣ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಮೃತಪಟ್ಟರೆ, 19 ಮಕ್ಕಳು ಕೇಜ್ರಿವಾಲ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಸದ್ಯದ ಮಾಹಿತಿ ಪ್ರಕಾರ, ಶ್ರೀಕೃಷ್ಣ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಇನ್ನೂ 290 ಮಕ್ಕಳು…