ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಯಾವುದೇ ತಪ್ಪು ಮಾಡದೇ ಇದ್ದರೂ ಕೂಡ ಗ್ರೇಟ್ ಮ್ಯಾಂಚೆಸ್ಟರ್ ಪೊಲೀಸರು 93 ವರ್ಷದ ವೃದ್ಧೆಯನ್ನು ಬಂಧಿಸಿದ್ದಾರೆ. ಇದಕ್ಕೆ ಕಾರಣವೇನು ಎಂದು ಗೊತ್ತಾದರೆ ನಿಜಕ್ಕೂ ವಿಚಿತ್ರ ಎನ್ನಿಸುತ್ತೆ.
ಹೌದು. ಯುಕೆ ನಿವಾಸಿ ಜೋಸಿ ಬಡ್ರ್ಸ್(93) ಯಾವುದೇ ಅಪರಾಧ ಮಾಡದೇ ಇದ್ದರೂ ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ.
ಇದಕ್ಕೆ ಕಾರಣ ಕೇಳಿ ಸ್ವತಃ ಅಲ್ಲಿ ಪೊಲೀಸ್ ಅಧಿಕಾರಿಗಳೇ ದಂಗಾಗಿದ್ದಾರೆ. ಈ ವೃದ್ಧೆ ಜೀವನದಲ್ಲಿ ಇದುವರೆಗೆ ಯಾವುದೇ ಕಹಿ ಅನುಭವವನ್ನು ಹೊಂದಿಲ್ಲವಂತೆ. ಹೀಗಾಗಿ ಆಕೆಯ ಜೀವನದಲ್ಲಿ ಒಂದಾದರೂ ಕಹಿ ಅನುಭವನ್ನು ಹೊಂದುವ ಆಸೆ ವೃದ್ಧೆಗೆ ಇತ್ತು. ಈ ಹಿನ್ನೆಲೆಯಲ್ಲಿ ಈಗ ಮೊಮ್ಮಗಳು ಅಜ್ಜಿಯ ಕೋರಿಕೆಯನ್ನು ಇಡೇರಿಸಲು ಯುಕೆ ನ ಗ್ರೇಟ್ ಮ್ಯಾಂಚೆಸ್ಟರ್ ಪೊಲೀಸರಿಗೆ ಮನವಿ ಮಾಡಿದ್ದು, ಪೊಲೀಸರು ವೃದ್ಧೆಯನ್ನು ಬಂಧಿಸಿದ್ದಾರೆ.
ಅಜ್ಜಿಯನ್ನು ಪೋಲೀಸರು ಬಂಧಿಸಿ ಅವರ ಆಸೆ ತೀರಿಸಿದ್ದಕ್ಕೆ ಮೊಮ್ಮಗಳು ಪಾಮ್ ಸ್ಮಿತ್ ಟ್ವಿಟ್ಟರ್ ನಲ್ಲಿ ಖಾಕಿ ಪಡೆಗೆ ಧನ್ಯವಾದ ಅರ್ಪಿಸಿದ್ದಾರೆ ಎಂದು ದಿ ಗಾರ್ಡಿಯನ್ ವರದಿ ಮಾಡಿದೆ. ಅಜ್ಜಿ ಅನಾರೋಗ್ಯಕ್ಕೆ ತುತ್ತಾಗಿದ್ದಾಗ ತನ್ನ ಈ ಆಸೆ ಬಗ್ಗೆ ಸ್ಮಿತ್ ಬಳಿ ಹೇಳಿದ್ದರು. ತನ್ನ ಅಜ್ಜಿಯ ಆರೋಗ್ಯವು ಏರುಪೇರು ಆಗುತಿತ್ತು. ತನ್ನ ಜೀವನದ ಉದ್ದಕ್ಕೂ ಚೆನ್ನಾಗಿದ್ದರಿಂದ ಯಾವುದಾದರು ಕಹಿ ಅನುಭವವನ್ನು ಹೊಂದಬೇಕೆಂದು ಎಂದು ಬಯಸಿದ್ದರು.
ಈ ಹಿನ್ನಲೆಯಲ್ಲಿ ವಯಸ್ಸಾದರೂ ತನ್ನನ್ನು ಬಂಧಿಸಬೇಕೆಂದು ಮನವಿ ಮಾಡಿದ್ದರು.
ಈ ಹಿನ್ನೆಲೆಯಲ್ಲಿ ಪೊಲೀಸರು 93 ವರ್ಷದ ವೃದ್ಧೆಯನ್ನು ಬಂಧಿಸಿದ್ದಾರೆ. ಈಗ ಆ ಅಜ್ಜಿ ಪೋಲೀಸರ ಬಂಧನದಿಂದ ಖುಷಿಪಟ್ಟಿದ್ದಾರೆ ಎನ್ನಲಾಗಿದೆ. ಅಲ್ಲದೆ ಈ ಬಗ್ಗೆ ಮ್ಯಾಂಚೆಸ್ಟರ್ ಪೊಲೀಸ್ ಅಧಿಕಾರಿ ಮಾತನಾಡಿ, ವೃದ್ಧೆಯ ಆಸೆಯನ್ನು ನಾವು ಈಡೇರಿಸುವಲ್ಲಿ ಯಶಸ್ವಿಯಾಗಿದ್ದೇವೆ. ಅವರ ಜೀವನದಲ್ಲಿ ನೆನಪಿಟ್ಟುಕೊಳ್ಳುವ ಒಂದು ದಿನವನ್ನು ನಾವು ನೀಡಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವೆ ವಾಗ್ದಾಳಿ ಪ್ರತಿದಾಳಿ ಮತ್ತಷ್ಟು ತೀವ್ರಗೊಂಡಿದೆ ಜೆಡಿಎಸ್ ರಾಜ್ಯಧ್ಯಕ್ಷ ಎಚ್ ವಿಶ್ವನಾಥ್ ಹೇಳಿಕೆಗೆ ಇಂದು ತಿರುಗೇಟು ನೀಡಿರುವ ಸಿದ್ದರಾಮಯ್ಯ ಇವು ಹೊಟ್ಟೆಕಿಚ್ಚಿನಿಂದ ಕೂಡಿದ ಕಿಡಿಗೇಡಿತನದ ಹೇಳಿಕೆಗಳು ಎಂದು ಖಾರವಾಗಿಯೇ ಸಾಮಾಜಿಕ ಜಾಲ ತಾಣದಲ್ಲಿ ಪ್ರತಿಕ್ರಿಯಿಸಿದ್ದಾರೆ ಸಮ್ಮಿಶ್ರ ಸರ್ಕಾರದಲ್ಲಿ ಪಾಲಿಸಬೇಕಾದ ಮೈತ್ರಿ ಧರ್ಮ ನನ್ನ ಬಾಯಿಯನ್ನು ಕಟ್ಟಿಹಾಕಿದೆ ಇದರಿಂದಾಗಿ ಎಚ್.ವಿಶ್ವನಾಥ್ ಅವರ ಬೇಜವಾಬ್ದಾರಿಯುತ ಹೇಳಿಕೆಗಳ ಬಗ್ಗೆ ವಿವರವಾಗಿ ಪ್ರತಿಕ್ರಿಯಿಸಲಾರೆ. ವಿಶ್ವನಾಥ್ ಇಂತಹ ಕಿಡಿಗೇಡಿತನದ ಹೇಳಿಕೆಗಳಿಂದಲೇ ಕುಖ್ಯಾತರು. ದೇವರು ಅವರಿಗೆ ಒಳ್ಳೆಯ…
*ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ* ಡೇಟಾ ಲೀಕ್ ಪ್ರಕರಣದಲ್ಲಿ ವಿಶ್ವದಾದ್ಯಂತ ಫೇಸ್ಬುಕ್ ಟೀಕೆಗೆ ಗುರಿಯಾಗಿದೆ. ಈ ಮಧ್ಯೆಯೇ ವಿಶ್ವದಾದ್ಯಂತ ಫೇಸ್ಬುಕ್ ದೊಡ್ಡ ಮಟ್ಟದಲ್ಲಿ ನೇಮಕಾತಿಗೆ ಮುಂದಾಗಿದೆ. ಫೇಸ್ಬುಕ್ ಒಟ್ಟೂ 20000 ಜನರನ್ನು ಕೆಲಸಕ್ಕೆ ನೇಮಿಸಿಕೊಳ್ಳಲು ಮುಂದಾಗಿದೆ. ಕಂಪನಿ ವಿಷಯ ಪರಿಶೀಲನೆ ಹಾಗೂ ಭದ್ರತೆ ವಿಭಾಗಕ್ಕಾಗಿ 15000 ಜನರನ್ನು ನೇಮಿಸಿಕೊಳ್ಳಲಿದೆ. ಉಳಿದ 5000 ಮಂದಿ ಇತರ ಕೆಲಸ ಮಾಡಲಿದ್ದಾರೆ. ಈ ಬಗ್ಗೆ ಫೇಸ್ಬುಕ್ ಸಿಇಓ ಮಾರ್ಕ್ ಜ್ಯೂಕರ್ಬರ್ಗ್ ಅಧಿಕೃತ ಮಾಹಿತಿ ನೀಡಿದ್ದಾರೆ. ಯುಎಸ್ ಸೆನೆಟ್ ನಲ್ಲಿ ಮಾರ್ಕ್ ಜ್ಯೂಕರ್ಬರ್ಗ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ….
ಸಾಲಮನ್ನಾ ಸೇರಿದಂತೆ ರೈತರಿಗೆ ಹಲವು ಅನುಕೂಲ ಕಲ್ಪಿಸಿರುವ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮತ್ತೊಂದು ಕೊಡುಗೆ ನೀಡಿದ್ದಾರೆ. ರೈತರಿಗೆ ಸಮರ್ಪಕವಾಗಿ ವಿದ್ಯುತ್ ಸರಬರಾಜು ಮಾಡುವುದಾಗಿ ಬಜೆಟ್ ನಲ್ಲಿ ಭರವಸೆ ನೀಡಲಾಗಿದೆ. ರಾಜ್ಯದಲ್ಲಿ ಸೌರಶಕ್ತಿ ಉತ್ಪಾದನೆ ಹೆಚ್ಚಳವಾದ ಹಿನ್ನೆಲೆಯಲ್ಲಿ ಮತ್ತು ರೈತರು ಎದುರಿಸುತ್ತಿರುವ ತೊಂದರೆಯನ್ನು ನಿವಾರಿಸುವ ಉದ್ದೇಶದಿಂದ ನೀರಾವರಿ ಪಂಪ್ ಸೆಟ್ ಗಳಿಗೆ ಹಗಲಿನ ವೇಳೆಯಲ್ಲಿ ಸಮರ್ಪಕವಾಗಿ ವಿದ್ಯುತ್ ಸರಬರಾಜು ಮಾಡಲಾಗುವುದು ಎಂದು ತಿಳಿಸಲಾಗಿದೆ. ಉಚಿತವಾಗಿ ನೀಡಲಾಗುತ್ತಿರುವ ನೀರಾವರಿ ಪಂಪ್ ಸೆಟ್, ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಗ್ರಾಹಕರಿಗೆ 9,250 ಕೋಟಿ…
ದಿನೇ ದಿನೆ ರಾಜ್ಯ ರಾಜಕಾರಣ ಕುತೂಹಲ ಕೆರೆಳಿಸುತ್ತಿದೆ. ಈ ಹಿನ್ನೆಲೆಯಲ್ಲಿ ದೇವೇಗೌಡ ರವರ ಕಿರಿಯ ಪುತ್ರ ರಾಜಕಾರಣಕ್ಕೆ ಎಂಟ್ರಿ ಕೊಟ್ಟಿದ್ದಾರೆ
ಲಿಂಬೆಯನ್ನು ಅಡುಗೆಯ ರುಚಿಗೆ ಮತ್ತು ಔಷಧಿಗೆ ಬಳಸುತ್ತಾರೆ, ನಮ್ಮ ಆರೋಗ್ಯಕ್ಕೂ ಸಹ ಲಿಂಬೆ ಉತ್ತಮ ಆರೈಕೆ. ಸಾಮಾನ್ಯವಾಗಿ ನಿಂಬೆಹಣ್ಣಿನ ರಸವನ್ನು ಹಿಂಡಿ ಎಲ್ಲರೂ ಸಿಪ್ಪೆಯನ್ನು ಬಿಸಾಡುತ್ತಾರೆ ಆದರೆ ನಮಗೆ ತಿಳಿದಿಲ್ಲ ಲಿಂಬೆ ರಸಕ್ಕಿಂತ ಹತ್ತು ಪಟ್ಟು ಸಿಪ್ಪೆಯಲ್ಲಿ ಹತ್ತಿ ಹೆಚ್ಚು ಪೋಷಕಾಂಶಗಳು ಇರುತ್ತವೆ ಎಂದು. ಲಿಂಬೆಯ ಸಿಪ್ಪೆಯಲ್ಲಿ ಮಿಟಮಿನ್ಸ್ , ಖನಿಜ, ಕರಗದೇ ಇರುವಂತಹ ನಾರುಗಳು ಹಾಗೂ ಪೊಟ್ಯಾಶಿಯಂ, ಕ್ಯಾಲ್ಸಿಯಂ, ಹಾಗೂ ಮಿಟಮಿನ್ ಸಿ ಉತ್ತಮ ಪ್ರಮಾಣದಲ್ಲಿ ಇರುತ್ತದೆ. ಇವು ಆರೋಗ್ಯವನ್ನು ಉತ್ತಮ ರೀತಿಯಲ್ಲಿ ಇರಿಸುತ್ತದೆ. ಹಾಗಾಗಿ…
ವಿವಿಧತೆಯಲ್ಲಿ ಏಕತೆಯನ್ನು ಕಾಣುವ ದೇಶ ನಮ್ಮ ಭಾರತ. ಇಲ್ಲಿ ಪ್ರತಿ ಕಿಲೋಮೀಟರ್ ಗೂ ನಮ್ಮ ಸಂಸ್ಕೃತಿ , ಸಂಪ್ರದಾಯ, ಭಾಷೆ , ಪದ್ಧತಿ ಬದಲಾಗುತ್ತ ಹೋಗುತ್ತದೆ. ಇಲ್ಲಿ ಪ್ರತೀ ರಾಜ್ಯಕ್ಕೂ ತನ್ನದೇ ಆದ ಭಾಷೆ, ಸಂಪ್ರದಾಯ, ಸಂಸ್ಕೃತಿ, ಕಲೆ , ಆಚಾರ ವಿಚಾರಗಳು ಇವೆ. ಅಂತೆಯೇ ತನ್ನದೇ ಆದ ವಿಶಿಷ್ಟ ಅಡುಗೆ ಶೈಲಿಗಳನ್ನು ಈ ರಾಜ್ಯಗಳು ಹೊಂದಿವೆ. ಇಡ್ಲಿ , ವಡೆ, ಮಸಾಲ ದೋಸೆ ತಮಿಳು ನಾಡಿನಲ್ಲಿ ಸುಪ್ರಸಿದ್ದ. ಈ ತಿಂಡಿಗಳ ಹೆಸರು ಕೇಳಿದೊಡನೆಯೇ ಹೊರ ಜನರಿಗೆ…