ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ತನ್ನ ಯೋಧ ಪತಿಗಾಗಿ ಪತ್ನಿಯೊಬ್ಬರು ಬರೋಬ್ಬರಿ 19 ವರ್ಷದಿಂದ ಶಬರಿಯಾಗಿ ಕಾಯುತ್ತಿರುವ ಮನಕಲಕುವ ದೃಶ್ಯಕ್ಕೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಅಮ್ಮತ್ತಿ ಗ್ರಾಮ ಸಾಕ್ಷಿ ಆಗಿದೆ.ಅಮ್ಮತ್ತಿ ಗ್ರಾಮದ ಯೋಧನ ಪತ್ನಿ ಪಾರ್ವತಿ ಅವರ ಕರುಣಾಜನಕ ಕಥೆ ಇದಾಗಿದ್ದು, ಇವರು ತನ್ನ ಪತಿ ಉತ್ತಯ್ಯನ ಬರುವಿಕೆಗಾಗಿ 19 ವರ್ಷಗಳಿಂದ ಶಬರಿಯಂತೆ ಕಾಯುತ್ತಿದ್ದಾರೆ.
1985ರಲ್ಲಿ ಸೇನೆಗೆ ಸೇರಿದ್ದ ಉತ್ತಯ್ಯ 1999ರಲ್ಲಿ ರಜೆಗೆಂದು ಮನೆಗೆ ಬಂದು ವಾಪಾಸ್ ಹೋದವರು ಇಂದಿಗೂ ಹಿಂದಿರುಗಿ ಬಂದೇ ಇಲ್ಲ. ಹಾಗಂತ ಸೇನೆಯಲ್ಲೂ ಇಲ್ಲ, ಎಲ್ಲಿದ್ದಾರೆ ಅನ್ನೋದು ಗೊತ್ತಿಲ್ಲ. ಸೇನೆಯವರು ಮೊದಲು ಉತ್ತಯ್ಯ ಮಿಸ್ಸಿಂಗ್ ಎಂದು, ನಂತರ ಅವರು ನಿಧನರಾಗಿದ್ದಾರೆ ಎಂದು ಹೇಳಿದ್ದರು. ಅದಕ್ಕೆ ಸಾಕ್ಷಿ ಕೊಡಿ ಎಂದು ಪಾರ್ವತಿ ಇದುವರೆಗೂ ಪತಿಗಾಗಿ ಕಾಯುತ್ತಿದ್ದಾರೆ.
ಆಗಸ್ಟ್ 1999ರಂದು, ಉತ್ತರಪ್ರದೇಶದಲ್ಲಿ ಸ್ನಿಗ್ನಲ್ ಬೆಟಾಲಿಯನ್‍ನಲ್ಲಿ ಲಾನ್ಸ್ ನಾಯಕ್ ಆಗಿದ್ದ ಉತ್ತಯ್ಯ ಮನೆಗೆ ಬಂದಿದ್ದರು. 20 ದಿನ ಇದ್ದು ಗರ್ಭಿಣಿ ಪತ್ನಿಗೆ ದೇಶ ಸೇವೆ ಮುಗಿಸಿ ಬೇಗ ಹಿಂದಿರುಗಿ ಬರುತ್ತೇನೆ ಎಂದು ಹೇಳಿ ಅಲಹಾಬಾದ್‍ನ ತನ್ನ ಯುನಿಟ್‍ಗೆ ವಾಪಾಸ್ ಹೋಗಿದ್ದರು. ಬಳಿಕ ನವೆಂಬರ್ 21ರಂದು ಪತ್ನಿಗೆ ಕರೆ ಮಾಡಿ ಹುಷಾರಿಲ್ಲ ಎಂದು ಹೇಳಿದ್ದರು. ಅದೇ ಕಡೆಯ ಕರೆ, ಆ ನಂತರ ಮತ್ತೆ ಕರೆಯೇ ಬರದಿರೋದ್ರಿಂದ ಆತಂಕಕ್ಕೀಡಾದ ಕುಟುಂಬಕ್ಕೆ ಡಿಸೆಂಬರ್ 4ಕ್ಕೆ ಒಂದು ಟೆಲಿಗ್ರಾಂ ಬಂತು. ಕಡೆಗೂ ಪತಿಯಿಂದ ಟೆಲಿಗ್ರಾಂ ಬಂತು ಎಂದುಕೊಂಡಿದ್ದ ಪತ್ನಿಗೆ ದೊಡ್ಡ ಆಘಾತವೇ ಕಾದಿತ್ತು.
ಆ ಟೆಲಿಗ್ರಾಂನಲ್ಲಿ ಉತ್ತಯ್ಯ ಸೈನ್ಯದ ಯುನಿಟ್‍ನಲ್ಲಿಲ್ಲ ಊರಲ್ಲಿದ್ರೆ ಕಳುಹಿಸಿಕೊಡಿ ಎಂದು ಬರೆಯಲಾಗಿತ್ತು. ಆ ಸುದ್ದಿ ಕೇಳಿ ಶಾಕ್‍ಗೆ ಒಳಗಾದ ಯೋಧ ಉತ್ತಯ್ಯನ ಗರ್ಭಿಣಿ ಪತ್ನಿಗೆ ಡೆಲಿವರಿಯಾಗಿ ಮಗು ಕೂಡ ಸಾವನ್ನಪ್ಪಿತ್ತು. ದಿನ ಕಳೆದಂತೆ ಸುಧಾರಿಸಿಕೊಂಡು ಪತಿಗಾಗಿ ಹುಡುಕಾಟ ನಡೆಸಿ ಸೈನ್ಯದ ಯುನಿಟ್‍ಗೂ ಹೋಗಿ ಬಂದರೂ ಪತಿಯ ಸುಳಿವೇ ಸಿಗಲಿಲ್ಲ. ಕಡೆಗೆ ಸೇನೆ ಜೂನ್ 14ಕ್ಕೆ ಉತ್ತಯ್ಯ ನಿಧನರಾಗಿದ್ದಾರೆ ಎಂದು ಪತ್ರ ಕಳುಹಿಸಿದ್ದರು.
ಪತ್ರ ಕಳುಹಿಸಿದ ನಂತರ 2010ರಿಂದ ಯೋಧನ ಪತ್ನಿಗೆ ಪಿಂಚಣಿ ಕೊಡುವುದಕ್ಕೆ ಶುರು ಮಾಡಿದ ಸರ್ಕಾರ ಮೃತದೇಹವಾಗಲಿ, ಎಲ್ಲಿ, ಹೇಗೆ ನಿಧನರಾದರು ಎಂದಾಗಲೀ ಯೋಧನ ಕುಟುಂಬಕ್ಕೆ ಮಾಹಿತಿಯೇ ಕೊಟ್ಟಿಲ್ಲ. ಹೀಗಾದರೆ ಹೇಗೆ ಸೈನ್ಯ ನಂಬಿ ಯೋಧರನ್ನಾಗಿ ದೇಶ ಸೇವೆಗೆ ನಮ್ಮವರನ್ನು ಕಳುಹಿಸೋದು ಎಂದು ಪಾರ್ವತಿ ಹಿತೈಷಿಗಳು ಪ್ರಶ್ನಿಸುತ್ತಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಉಪ್ಪಿನ ಕಾಯಿ ಎಂದರೆ ಸಾಕು ಬಾಯಲ್ಲಿ ನೀರೂರಿ ಬಿಡುತ್ತೆ ,ಅದರಲ್ಲೂ ಉಟಕ್ಕೆ ಉಪ್ಪಿನ ಕಾಯಿ ಬೇಕೆ ಬೇಕು , ಊಟಕ್ಕೆ ತಕ್ಕ ಉಪ್ಪಿನಕಾಯಿ ಇದ್ದರೆ ಊಟ ರುಚಿಕರವಾಗಿರುತ್ತದೆ. ಯಾವುದೇ ಸಮಾರಂಭ ಔತಣಕೂಟದ ಎಲೆಯಲ್ಲಿ ಊಟಕ್ಕೆ ಉಪ್ಪಿನ ಕಾಯಿ ಇಲ್ಲ ಅಂದ್ರೆ ಅ ಭೋಜನ ಅಸಂಪೂರ್ಣ ಎನ್ನಿಸುತ್ತದೆ.
ಲೆಜೆಂಡ್ಸ್ ಲೀಗ್ ಕ್ರಿಕೆಟ್ (LLC) ನ ಉದ್ಘಾಟನಾ ಆವೃತ್ತಿಯು ಜನವರಿ 20 ರಂದು ಪ್ರಾರಂಭವಾಗಲಿದೆ ಮತ್ತು ಪಂದ್ಯಾವಳಿಯ ಅಧಿಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಎಲ್ಲಾ ಪಂದ್ಯಗಳು ಓಮನ್‌ನ ಮಸ್ಕತ್‌ನಲ್ಲಿರುವ ಅಲ್ ಅಮರತ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿವೆ. LLC ಎರಡು ಸುತ್ತುಗಳು ಮತ್ತು ಫೈನಲ್‌ಗಳನ್ನು ಹೊಂದಲಿದ್ದರೆ, ಆಟಗಳ ಸಮಯದಲ್ಲಿ ಮೂರು ವಿಶ್ರಾಂತಿ ದಿನಗಳು ಸಹ ಇರುತ್ತವೆ. ಮೂರನೇ ಮತ್ತು ಅಂತಿಮ ವಿಶ್ರಾಂತಿ ದಿನವು ಗ್ರ್ಯಾಂಡ್ ಫಿನಾಲೆಗೆ ಒಂದು ದಿನ ಮೊದಲು ಇರುತ್ತದೆ. ಪ್ರತಿ ಎರಡು…
ಧ್ಯಾನವು ಚಿನ್ನದ ಹಾಗೆ ಬಹು ಮೂಲ್ಯವುಳ್ಳದು. ಭೌತಿಕ ಐಶ್ವರ್ಯಕ್ಕೂ,ಮುಕ್ತೀಗೂ,ಶಾಂತಿಗೂ ಧ್ಯಾನವು ಒಳ್ಳೆಯದು. ಅದಕ್ಕಾಗಿ ಉಪಯೋಗಿಸುವ ಸಮಯ ಎಂದಿಗೂ ನಷ್ಟವಾಗುವಂತದಲ್ಲ. ಧ್ಯಾನದ ಲಾಭಗಳು ವರ್ಣಿಸಲು ಹೋದರೆ ಅದಕ್ಕೆ ಅಂತ್ಯವೇ ಇಲ್ಲ.
ಶುಭ-ಅಶುಭ ನಂಬಿಕೆಗಳು ಶತ-ಶತಮಾನಗಳಿಂದಲೂ ನಡೆದುಕೊಂಡು ಬಂದಿವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶುಭ-ಅಶುಭಕ್ಕೂ ನಮ್ಮ ಆಸುಪಾಸಿರುವ ಪ್ರಾಣಿ-ಪಕ್ಷಿಗಳಿಗೂ ಸಂಬಂಧವಿದೆ. ಕಾಗೆಗೆ ಸಂಬಂಧಿಸಿದಂತೆ ಅನೇಕ ನಂಬಿಕೆಗಳು ನಮ್ಮ ಪುರಾಣದಲ್ಲಿವೆ. ನಮ್ಮ ಜೀವನದಲ್ಲಿ ಬರಬಹುದಾದ ಸಂಕಷ್ಟಗಳ ಬಗ್ಗೆ ಕಾಗೆ ಮುನ್ಸೂಚನೆ ನೀಡುತ್ತದೆ. ಗ್ರಾಮ ಅಥವಾ ಒಂದು ಸ್ಥಳದಲ್ಲಿ ನಾಲ್ಕೈದು ಕಾಗೆಗಳು ಒಟ್ಟಿಗೆ ಕೂಗ್ತಾ ಇದ್ದರೆ ಆ ಗ್ರಾಮಕ್ಕೆ ಆಪತ್ತು ಬರಲಿದೆ ಎಂದರ್ಥ. ಮನೆ ಮುಂದೆ ಕಾಗೆಗಳು ಕೂಗಾಡ್ತಾ ಇದ್ದರೆ ಆ ಮನೆಯ ಯಜಮಾನನಿಗೆ ತೊಂದರೆ ಬರಲಿದೆ. ವ್ಯಕ್ತಿ ಮೈ ಮೇಲೆ ಕಾಗೆ…
ಇಂದು ಗುರುವಾರ 08/02/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…
ಹೋಟೆಲ್ನಲ್ಲಿ ಆಹಾರವನ್ನು ಎಂಜಲು ಮಾಡುತ್ತಿದ್ದ ವಿಡಿಯೋ ವೈರಲ್ ಆಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು, ಹೋಟೆಲ್ನ್ನು ಸೀಲ್ಡೌನ್ ಮಾಡಿದ್ದಾರೆ. ನಗರದ ಹೋಟೆಲ್ ಒಂದರಲ್ಲಿ ಹೋಟೆಲ್ ಮಾಲೀಕನ ಮಗ ಗ್ರಾಹಕರಿಗೆ ನೀಡುವ ಆಹಾರವನ್ನು ಎಂಜಲು ಮಾಡುತ್ತಿದ್ದ ಆರೋಪ ಕೇಳಿ ಬಂದಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಅಧಿಕಾರಿಗಳು ಹೋಟೆಲ್ ಬಾಗಿಲು ಹಾಕಿಸಿದ್ದಾರೆ. ತನಿಖೆ ಮುಂದುವರಿಸಿದ್ದಾರೆ. ಓರ್ವ ವ್ಯಕ್ತಿ…