ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನಮ್ಮ ಸಮಾಜದಲ್ಲಿ ಹೈಷಾರಾಮಿ ಜೀವನ ನಡೆಸುವ ಜನರಿಗಿಂತ ಒಪ್ಪತ್ತಿನ ಊಟಕ್ಕಾಗಿ ದಿನಗೂಲಿ ಮಾಡುವ ಮಂದಿ ಜಾಸ್ತಿ. ಅಲ್ಲದೇ ಪೋಷಕರ ಜೊತೆ ತಮ್ಮ ಮಕ್ಕಳು ಕೂಡ ಕೆಲಸ ಮಾಡಿ ಜೀವನ ಸಾಗಿಸುತ್ತಿರುತ್ತಾರೆ. ಹೀಗೆ ಆಂಧ್ರಪ್ರದೇಶದ ರೈಲಿನಲ್ಲಿ ಒಬ್ಬ ಹುಡುಗ ಬಹಳ ಆಯಾಸದಿಂದ ಕುಳಿತ್ತಿದ್ದ. ಇದನ್ನು ಕಂಡ ಸಾಫ್ಟವೇರ್ ಉದ್ಯಮಿ ಏನ್ ತಮ್ಮ ಬಹಳ ಆಯಾಸದಿಂದ ಕುಳಿತ್ತಿದ್ದೀಯಾ? ಸಮೋಸ ಎಲ್ಲಾ ಮಾರಿಬಿಟ್ಟೆಯಾ? ಎಂದು ಕೇಳಿದ.

ಇದಕ್ಕೆ ಉತ್ತರಿಸಿದ ಸಮೋಸ ಮಾರುವ ಹುಡುಗ, ಹೌದು ಸಾರ್ ಎಲ್ಲಾ ಮಾರಿಬಿಟ್ಟೆ, ಇನ್ನೇನ್ ಮಾಡುವುದು ಹೊಟ್ಟೆ ಪಾಡಿಗಾಗಿ ಏನಾದರು ಮಾಡಲೇಬೇಕಲ್ವಾ ಸರ್ ಎಂದ.. ಈ ಮಾತನ್ನು ಕೇಳಿ ಬೇಸರಗೊಂಡ ಸಾಫ್ಟವೇರ್ ಉದ್ಯಮಿ, ಒಂದು ಸಮೋಸ ಮಾರಿದರೆ ನಿನಗೆ ಎಷ್ಟು ಸಿಗುತ್ತದೆ? ದಿನಕ್ಕೆ ಎಷ್ಟು ಸಮೋಸ ಮಾರ್ತ್ಯಪ್ಪ? ಎಂದು ಕೇಳಿದ. ಇದಕ್ಕೆ ಸಮೋಸ ಮಾರುವವನು, ಸಾರ್ ಒಂದು ಸಮೋಸ ಮಾರಿದರೆ 75 ಪೈಸೆ ಸಿಗುತ್ತದೆ. ಸೀಸನ್ ಸಮಯದಲ್ಲಿ ದಿನಕ್ಕೆ ಮೂರರಿಂದ ಮೂರು ವರೆ ಸಾವಿರ ಮಾರುತ್ತೇನೆ, ಸೀಸನ್ ಇಲ್ಲದಿದ್ದಾಗ ದಿನಕ್ಕೆ ಎರಡು ಸಾವಿರ ಸೇಲ್ ಮಾಡುತ್ತೇನೆ ಎಂದು ಹೇಳಿದ !

ಮನಸಲ್ಲೇ ಯೋಚಿಸದ ಆ ಉಧ್ಯಮಿ ದಿನಕ್ಕೆ ಎರಡು ಸಾವಿರ ಸಮೋಸ ಮಾರಿದರೆ, ಒಂದು ಸಾವಿರದ ಐನೂರು ರೂ ಆದಾಯ, ಅದೇ ತಿಂಗಳಿಗೆ 45 ಸಾವಿರ ! ನನ್ನ ಸಂಬಳ ತಿಂಗಳಿಗೆ ಕೇವಲ 25 ಸಾವಿರ, ನನ್ನ ಕೆಲಸದ ಒತ್ತಡದಲ್ಲಿ ನನ್ನ ನಗುವನ್ನೇ ಮರೆತು ಹೋಗಿದ್ದೇನೆ, ಆದರೆ ಈ ಹುಡುಗ ಹಾಗಲ್ಲ, ಎಂದುಕೊಂಡು ಮತ್ತೇ ಸಮೋಸ ಹುಡುಗನಿಗೆ, ನೀವೆ ಸಮೋಸವನ್ನು ತಯಾರು ಮಾಡುತ್ತೀರ ಎಂದು ಪ್ರಶ್ನಿಸಿದ? ಇದಕ್ಕೆ ಸಮೋಸ ಮಾರುವವನು, ಇಲ್ಲಾ ಸಾರ್ ನಮ್ಮ ಯಜಮಾನ ಬೇರೆಯವರ ಬಳಿ ಕೊಂಡುಕೊಂಡು ನಮಗೆ ಕೊಡುತ್ತಾನೆ ಎಂದು ಹೇಳಿದ. ಈ ಕೆಲಸ ಬಿಟ್ಟು ಬೇರೆ ಏನು ಮಾಡುತ್ತೀಯಾ? ಎಂದು ಉಧ್ಯಮಿ ಕೇಳಿದ.. ಕಳೆದ ವರ್ಷ ನನ್ನ ಅಕ್ಕನಿಗೆ ಮದುವೆ ಮಾಡಿದೆ, ನಂತರ ನಮ್ಮ ಊರಿನಲ್ಲಿ ಒಂದು ಜಮೀನು ಕೂಡ ಖರೀದಿ ಮಾಡಿದ್ದೇನೆ. ಅದರ ಬೆಲೆ ಈಗ ಸುಮಾರು 15 ಲಕ್ಷವಿದೆ. ಈ ಮಾತನ್ನು ಕೇಳಿ ಆಶ್ಚರ್ಯಚಕಿತನಾದ ಇಂಜಿನಿಯರ್ ನೀನು ಎಲ್ಲಿಯ ತನಕ ವ್ಯಾಸಾಂಗ ಮಾಡಿದ್ದೀಯಾ ಎಂದು ಕೇಳಿದ.

ಇದಕ್ಕೆ ಉತ್ತರಿಸಿದ ಹುಡುಗ, ಸರ್ ನಾನು ಮೂರನೇ ತರಗತಿವರೆಗೂ ಓದಿದ್ದೇನೆ, ಇದಾದ ಮೇಲೆ ಓದಲು ಸಾಧ್ಯವಾಗಲಿಲ್ಲ ಎಂದು ಹೇಳಿದ, ಇದಕ್ಕೆ ಉಧ್ಯಮಿ ಯಾಕೆ ಮುಂದೆ ಓದಬೇಕು ಅನಿಸಲಿಲ್ಲವಾ? ಸಾರ್ ನನ್ನ ವ್ಯಾಪಾರವನ್ನು ನನ್ನ ಮಕ್ಕಳಿಗೆ ಕೊಡಬಹುದು, ಆದರೆ ನಿಮ್ಮ ಉದ್ಯೋಗ ನಿಮ್ಮ ಮಕ್ಕಳಿಗೆ ಕೊಡಲು ಸಾಧ್ಯವಾಗುವುದಿಲ್ಲ ಅಲ್ಲವಾ? ಇದೇ ನನಗೆ ಜನ್ಮ ಕೊಟ್ಟ ತಂದೆ ಕಲಿಸಿದ ನೀತಿ, ಹಣವನ್ನು ಹೇಗೆ ಸಂಪಾದನೆ ಮಾಡಬೇಕು ಎಂಬುದು ನನಗೆ ಗೊತ್ತಾಗಿದೆ, ಹಾಗಾಗಿ ಓದು ನನಗೆ ಅವಶ್ಯಕತೆ ಇಲ್ಲ. ಸರ್ ನನ್ನ ಸ್ಟೇಷನ್ ಬಂತು ನಾನು ಹೊರಡುತ್ತೇನೆ ಎಂದು ಹೇಳಿ ಹೊರಟು ಬಿಟ್ಟ ಸಮೋಸ ಮಾಡುವ ಹುಡುಗ..

ನೋಡಿದ್ರಲ್ಲ ವಿದ್ಯೆ ಎಂಬುದು ಬರೀ ಜ್ಞಾನಾರ್ಜನೆಗೆ ಮತ್ತು ಒಳ್ಳೆಯ ನಾಗರೀಕನಾಗಿ ಬದುಕಲು, ದಯವಿಟ್ಟು ಓದನ್ನು ವ್ಯವಹಾರಕ್ಕೆ ಉಪಯೋಗಿಸಬೇಡಿ. ವಿದ್ಯೆ ಇಲ್ಲದವರನ್ನು ಕೀಳು ಮಟ್ಟದಲ್ಲಿ ನೋಡಬೇಡಿ, ಓದಿದವನಿಗೆ ಒಂದೇ ಕೆಲಸ, ಓದಾದೇ ಇಲ್ಲದವನಿಗೆ ಮಾಡಿದ್ದೆಲ್ಲಾ ಕೆಲಸಾನೇ..
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಹುಟ್ಟುವ ಮಕ್ಕಳಲ್ಲಿ ಕಣ್ಣಿನ ಕ್ಯಾನ್ಸರ್ ಹೆಚ್ಚುತ್ತಿದೆ. ಪೋಷಕರು ಕ್ಯಾನ್ಸರ್ನ್ನು ಪತ್ತೆ ಹಚ್ಚಿ ತಕ್ಷಣವೇ ಮಗುವಿಗೆ ಚಿಕಿತ್ಸೆ ನೀಡಿದರೆ ಬದುಕುಳಿಯುವ ಸಾಧ್ಯತೆ ಇರುತ್ತದೆ. ಮಕ್ಕಳ ಕಣ್ಣಿನ ಕೆಳಭಾಗದಲ್ಲಿ ಬಿಳಿ ಮಚ್ಚೆ ಇದ್ದರೆ ಅಥವಾ ಮೆಳ್ಳಗಣ್ಣಿದ್ದರೆ ಎಲ್ಲಾ ಸಂದರ್ಭದಲ್ಲೂ ಅದು ಶುಭಶಕುನವಾಗಿರುವುದಿಲ್ಲ, ಸಮಸ್ಯೆಯೂ ಆಗಿರಬಹುದು ಹಾಗಾಗಿ ಇಂತಹ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೇ ವೈದ್ಯರನ್ನು ಸಂಪರ್ಕಿಸುವುದು ಒಳಿತು. ನಿರ್ಲಕ್ಷಿಸಿದರೆ ಶಾಶ್ವತವಾಗಿ ದೃಷ್ಟಿ ಕಳೆದುಕೊಳ್ಳಬಹುದು. ಅಷ್ಟೇ ಅಲ್ಲ ಕ್ಯಾನ್ಸರ್ ಕಣ ಮೆದುಳಿಗೆ ವ್ಯಾಪಿಸಿ ಪ್ರಾಣವನ್ನೇ ಬಲಿತೆಗೆದುಕೊಳ್ಳುವ ಸಾಧ್ಯತೆಯೂ ಕೂಡ ಇರುತ್ತದೆ.ರೆಟಿನೊ ಬ್ಲಾಸ್ಟೋಮಾ ಎಂಬುದು…
ಅವರಿಗೆ ಭವಿಷ್ಯ ಏನೆಂದು ಖಚಿತವಾಗಿಲ್ಲ ಆದರೆ ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಎಬಿ ಡಿವಿಲಿಯರ್ಸ್ ಅವರು ರಾಷ್ಟ್ರೀಯ ತಂಡದಲ್ಲಿ ಮತ್ತು ಅವರ ಐಪಿಎಲ್ ಫ್ರಾಂಚೈಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಭವಿಷ್ಯದ ಸೆಟ್ಅಪ್ನಲ್ಲಿ ಆಡಲು ಪಾತ್ರವನ್ನು ಹೊಂದಿರುತ್ತಾರೆ ಎಂದು ವಿಶ್ವಾಸ ಹೊಂದಿದ್ದಾರೆ. ಸಮಕಾಲೀನ ಕ್ರಿಕೆಟ್ನ ಶ್ರೇಷ್ಠ ಬ್ಯಾಟರ್ಗಳಲ್ಲಿ ಒಬ್ಬರಾದ ಡಿವಿಲಿಯರ್ಸ್ ಕಳೆದ ವರ್ಷ ನವೆಂಬರ್ನಲ್ಲಿ ಎಲ್ಲಾ ರೀತಿಯ ಆಟದಿಂದ ನಿವೃತ್ತರಾಗಿದ್ದರು. “ಎಸ್ಎ ಕ್ರಿಕೆಟ್ನಲ್ಲಿ ಮತ್ತು ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಜೊತೆಗೆ ನಾನು ಇನ್ನೂ ಒಂದು ಪಾತ್ರವನ್ನು ವಹಿಸುತ್ತೇನೆ…
![]()
ಯಶಸ್ಸು ಯಾರಿಗೆ ಬೇಡ ಹೇಳಿ? ಎಷ್ಟೇ ಶ್ರಮವಹಿಸಿದ್ರೂ ಕೆಲವರಿಗೆ ಯಶಸ್ಸು ಲಭಿಸುವುದಿಲ್ಲ. ಜೀವನದಲ್ಲಿ ಒಂದಾದ ಮೇಲೆ ಒಂದು ಕಷ್ಟಗಳು ಬರ್ತಾನೆ ಇರುತ್ವೆ. ಮಾಡಿದ ಕೆಲಸಕ್ಕೆ ಯಶಸ್ಸು ಸಿಗಲಿ, ಜೀವನದಲ್ಲಿ ಸಫಲತೆ ಕಾಣಲಿ ಅಂತಾ ಎಲ್ಲರೂ ಬಯಸ್ತಾರೆ. ಯಶಸ್ಸಿನ ವಿಧಾನ ಹಾಗೂ ವಿಷಯಗಳು ಬೇರೆ ಬೇರೆಯಾದರೂ ಹೋರಾಟ ಮಾತ್ರ ತಪ್ಪಿದ್ದಲ್ಲ. ಕೆಲವರಿಗೆ ಬೇಗನೆ ಯಶಸ್ಸು ದೊರೆತರೆ ಇನ್ನು ಕೆಲವರು ಪಡಬಾರದ ಪಾಡೆಲ್ಲ ಪಡುತ್ತಾರೆ.
ನಟಿ ರಾಧಿಕಾ ಕುಮಾರಸ್ವಾಮಿ ಭೈರಾದೇವಿ ಚಿತ್ರೀಕರಣದ ವೇಳೆ ಸ್ಮಶಾನದಲ್ಲಿ ಬಿದ್ದು ಏಟು ಮಾಡಿಕೊಂಡಿದ್ದು ಇದೀಗ ಶೂಟಿಂಗ್ ಸೆಟ್ ನಲ್ಲೇ ಕುರಿಬಲಿ ನೀಡಿದ್ದಾರೆ ಎಂಬ ಸುದ್ದಿ ಚರ್ಚೆಗೆ ಗ್ರಾಸವಾಗಿದೆ. ಚಿತ್ರದಲ್ಲಿ ಕಾಳಿಮಾತೆಯ ಅವತಾರ ತಾಳಿದ್ದ ರಾಧಿಕಾ ಶಾಂತಿನಗರದ ಸ್ಮಶಾನದಲ್ಲಿ ಚಿತ್ರೀಕರಣ ನಡೆಯುವ ವೇಳೆ ಗೋರಿ ಮೇಲಿಂದ ಬಿದ್ದು ಸ್ಪೈನಲ್ ಕಾರ್ಡ್ ಗೆ ಏಟು ಮಾಡಿಕೊಂಡಿದ್ದರು. ಅಂದು ಅಮಾವಾಸ್ಯೆಯಾಗಿದ್ದು ರಾಧಿಕಾ ಕುಮಾರಸ್ವಾಮಿ ಬಿದ್ದು ಪೆಟ್ಟು ಮಾಡಿಕೊಂಡ ಬಳಿಕ ಚಿತ್ರತಂಡಕ್ಕೆ ಅಡ್ಡಿಯಾಗಿದೆ. ಹೀಗಾಗಿ ಚಿತ್ರೀಕರಣದ ಸೆಟ್ ನಲ್ಲೇ ಕುರಿಬಲಿ ನೀಡಲಾಗಿದೆ ಎಂಬ ಸುದ್ದಿ…
ಸುಟ್ಟಗಾಯಗಳೇ ಇಷ್ಟು, ಗಾಯ ವಾಸಿಯಾದರೂ ಕಲೆ ಹೋಗುವುದಿಲ್ಲ.. ಕಲೆಗಳಿಂದಾಗಿ ಚರ್ಮದ ಕಾಂತಿ ಕುಗ್ಗಿದಂತಾಗುತ್ತದೆ. ಈ ಕಲೆಗಳಿಂದಾಗಿ ನಮ್ಮ ಸೌಂದರ್ಯವೇ ಹಾಳಾಗುತ್ತದೆ. ಇಂತಹ ಮಾಸದ ಕಲೆಗಳನ್ನ ಸುಲಭವಾಗಿ ನಿವಾರಿಸಬಹುದು. ಸುಟ್ಟ ಕಲೆಗಳನ್ನ ಹೋಗಲಾಡಿಸಲು ಇಲ್ಲಿವೆ ಸಿಂಪಲ್ ಮನೆ ಮದ್ದುಗಳು. * ಲೋಳೆರಸ ಇದು ಎಲ್ಲಾ ರೀತಿಯ ಚರ್ಮ ರೋಗಗಳಿಗೂ ಪರಿಹಾರ ನೀಡುತ್ತೆ ಎಂದರೆ ತಪ್ಪಾಗಲಾರದು. ಆದ್ದರಿಂದ ಸುಟ್ಟ ಗಾಯದ ಮೇಲೆ ಲೋಳೆರಸ ಲೇಪಿಸುವುದರಿಂದ ಉರಿ ಕಡಿಮೆಗೊಳಿಸಿ. ಕಲೆಯು ಉಳಿಯದಂತೆ ಮಾಡುತ್ತದೆ. * ಪುದೀನಾ ಎಲೆಯನ್ನು ರುಬ್ಬಿ ತೆಳುವಾದ ಹತ್ತಿ…
ನೀವು ಹಣಬೆಯನ್ನು(ಮುಶ್ರೂಮ್ಸ್) ತಿನ್ನೋದ್ರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂದು ತಿಳಿಯಲು ಮುಂದೆ ಓದಿ…