Health, ಆರೋಗ್ಯ, ಉಪಯುಕ್ತ ಮಾಹಿತಿ

ಸೇಬುಗಳ ಕುರಿತ೦ತೆ ಪ್ರಮುಖವಾದ ಕೆಲವು ಆರೋಗ್ಯ ಸ೦ಬ೦ಧಿ ಪ್ರಯೋಜನಗಳು!!

ಸೇಬು ಗುಲಾಬಿ ಕುಟುಂಬದಲ್ಲಿನ (ರೋಸೇಸೀ) ಜಾತಿಯಾದ  ಮೇಲಸ್ ಡೊಮೆಸ್ಟಿಕಾಕ್ಕೆ ಸೇರಿದ ಪೋಮ್ ಲಕ್ಷಣಗಳಿರುವ ಸೇಬಿನ ಮರದ ಹಣ್ಣು  ಅದು ಅತ್ಯಂತ ವ್ಯಾಪಕವಾಗಿ ಬೇಸಾಯಮಾಡಲಾದ ಮರಹಣ್ಣುಗಳ ಪೈಕಿ ಒಂದು, ಮತ್ತು ಮಾನವರಿಂದ ಬಳಸಲಾಗುವ ಮೇಲಸ್ಪಂಗಡದ ಅನೇಕ ಸದಸ್ಯಗಳ ಪೈಕಿ ಅತ್ಯಂತ ವ್ಯಾಪಕವಾಗಿ ಪರಿಚಿತವಾಗಿರುವ ಸದಸ್ಯವಾಗಿದೆ. ಈ ಮರವು ಮಧ್ಯ ಏಷ್ಯಾದ ಮೂಲದ್ದು, ಮತ್ತು ಇಂದೂ ಕೂಡ ಇದರ ಕಾಡುಪೂರ್ವಜವನ್ನು ಇಲ್ಲಿ ಕಾಣಬಹುದು. ಸೇಬು ಮೂಲತಃ ಸಮಶೀತೋಷ್ಣ ವಲಯದ ಬೆಳೆ. ಕಪ್ಪು ಸಮುದ್ರ ಮತ್ತು ಕ್ಯಾಸ್ಪಿಯನ್ ಸಮುದ್ರ ನಡುವಿನ ಭೂಭಾಗವು ಇದರ ಮೂಲ ಪ್ರದೇಶವೆಂದು ತಿಳಿಯಲಾಗಿದ್ದು,ನಂತರ ಈ ಬೆಳೆ ಸಮಶೀತೋಷ್ಣ ವಲಯದ ಎಲ್ಲ ದೇಶಗಳಿಗೂ ಪ್ರಸರಣ ಹೊಂದಿದೆ. ಭಾರತದಲ್ಲಿ ಸುಮಾರು ೦.೨೮ ದಶ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಸುಮಾರು ೨.೯ ದಶ ಲಕ್ಷ ಟನ್ ಸೇಬನ್ನು ಉತ್ಪಾದಿಸಲಾಗುತ್ತದೆ. ದೇಶದಲ್ಲಿ ಹಣ್ಣಿನ ಉತ್ಪಾದನೆಗೆ ಒಳ ಪಟ್ಟಿರುವ ಒಟ್ಟು ಕ್ಷೇತ್ರದ ೬.೧ರಷ್ಟು ಪ್ರದೇಶದಲ್ಲಿ ಸೇಬನ್ನು ಬೆಳೆಯಲಾಗುತ್ತದೆ. ಇದರ ಬೆಳವಣಿಗೆಗೆ 4-21 ಡಿಗ್ರಿ ಸೆಲ್ಶಿಯಸ್ ಉಷ್ಣಾಂಶ ಅತಿ ಸೂಕ್ತ. ಅಲ್ಲದೆ ಸುಮಾರು 100-125 ಸೆ.ಮೀ.ನಷ್ಟು ಮಳೆ ಬೇಕಾಗುತ್ತದೆ.ಮೋಡ ಮುಸುಕಿದ,ಕಡಿಮೆ ಉಷ್ಣಾಂಶದ,ಆರ್ದ್ರ ವಲಯಗಾಲ್ಲಿ ಚೆನ್ನಾಗಿ ಸೇಬು ಬೆಳೆಯುತ್ತದೆ. ಹಂಚಿಕೆ ಮತ್ತು ಉತ್ಪಾದನೆ: ಭಾರತದಲ್ಲಿ ಸೇಬಿನ ಬೇಸಾಯವು ಕೆಲವೇ ಪ್ರದೇಶದಲ್ಲಿ ಕೇಂದ್ರೀಕೃತವಾಗಿದೆ. ಜಮ್ಮು ಮತ್ತು ಕಾಶ್ಮೀರ,ಹಿಮಾಚಲ ಪ್ರದೇಶ,ಉತ್ತರಾಖಂಡ,ಪಂಜಾಬ್,ಅರುಣಾಚಲ ಪ್ರದೇಶ,ನಾಗಾಲ್ಯಾಂಡ್,ಮೇಘಾಲಯ ಮತ್ತು ಮಣಿಪುರಗಳಲ್ಲಿ ಸೇಬಿನ ಬೇಸಾಯವು ಹಂಚಿಕೆಯಾಗಿದೆ. ದಕ್ಷಿಣ ಭಾರತದಲ್ಲಿ ತಮಿಳುನಾಡಿನ ನೀಲಗಿರಿ ಬೆಟ್ಟಗಳಲ್ಲಿ ಮಾತ್ರ ಸೇಬನ್ನು ಬೆಳೆಯಲಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಈಶಾನ್ಯದ ಎಲ್ಲ ರಾಜ್ಯಗಳು ಹಾಗೂ ಕೇಂದ್ರ ಉನ್ನತ ಪ್ರದೇಶದಲ್ಲಿ ಸೇಬಿನ ಬೇಸಾಯವನ್ನು ಅಭಿವೃದ್ಧಿಪಡಿಸಲಾಗಿದೆ.

ಸೇಬು ನಮ್ಮ ದೈನ೦ದಿನ ಅವಶ್ಯಕತೆಯ ಖನಿಜಾ೦ಶಗಳು, ವಿಟಮಿನ್‌ಗಳು, ಹಾಗೂ ಪ್ರೋಟೀನ್‌ಗಳ ಸಮೃದ್ಧ ಆಗರವಾಗಿದೆ. ಪ್ರತಿ ದಿನವೂ ಸೇಬೊ೦ದನ್ನು ಸೇವಿಸುವುದರ ಮೂಲಕ ನೀವು ಉತ್ತಮ ಆರೋಗ್ಯವುಳ್ಳವರಾಗಿಯೂ ಹಾಗೂ ಸದೃಢರಾಗಿಯೂ ಜೀವಿಸಲು ಸಾಧ್ಯ. ಸೇಬು ತನ್ನಲ್ಲಿ ನಾರಿನ೦ಶ, ಆ೦ಟಿಆಕ್ಸಿಡೆ೦ಟ್, ಹಾಗೂ ರೋಗನಿರೋಧಕ ಶಕ್ತಿಯನ್ನು ವೃದ್ಧಿಸುವ ವಿಟಮಿನ್ ಸಿ ಯನ್ನು ಅಗಾಧ ಪ್ರಮಾಣದಲ್ಲಿ ದಾಸ್ತಾನಿರಿಸಿಕೊ೦ಡಿದೆ.

ಸಿಪ್ಪೆ ಸಮೇತವಾಗಿ ಸೇಬನ್ನು ಸೇವಿಸುವುದರಿ೦ದ ನೀವು ಅದರ ಸ೦ಪೂರ್ಣವಾದ ಪ್ರಯೋಜನಗಳನ್ನು ಅಥವಾ ಲಾಭಗಳನ್ನು ಪಡೆದ೦ತಾಗುತ್ತದೆ. ಸೇಬಿನ ಸಿಪ್ಪೆಯನ್ನು ತೆಗೆದು ತಿನ್ನುವುದು ಒ೦ದು ಒಳ್ಳೆಯ ಲಕ್ಷಣವಲ್ಲ. ಏಕೆ೦ದರೆ, ಸೇಬಿನ ತಿರುಳಿನಲ್ಲಿರುವುದಕ್ಕಿ೦ತಲೂ ಹೆಚ್ಚಿನ ಪ್ರಮಾಣದ ಆ೦ಟಿ ಆಕ್ಸಿಡೆ೦ಟ್‌ಗಳು ಅದರ ಸಿಪ್ಪೆಯಲ್ಲಿರುತ್ತದೆ




ಹೃದಯದ ಆರೋಗ್ಯ ಕಾಪಾಡುವುದು  ಸೇಬು ತಿಂದರೆ ಅದರಿಂದ ಕೊಲೆಸ್ಟ್ರಾಲ್ ಗಣನೀಯ ಪ್ರಮಾಣದಲ್ಲಿ ಕಡಿಮೆ ಆಗುವುದು ಮತ್ತು ಇದರಿಂದ ರಕ್ತನಾಳಗಳಲ್ಲಿ ತುಂಬಿರುವಂತಹ ಪದರವು ಶೇ.48ರಷ್ಟು ಕಡಿಮೆ ಆಗುವುದು ಎಂದು ಅಧ್ಯಯನಗಳು ಹೇಳಿವೆ.  ಸೇಬಿನಿಂದಾಗಿ ಮಹಿಳೆಯರಲ್ಲಿ ಹೃದಯ ಕಾಯಿಲೆಯಿಂದ ಸಾವಿನ ಪ್ರಮಾಣವು ಶೇ.43ರಷ್ಟು ಮತ್ತು ಪುರುಷರಲ್ಲಿ ಶೇ.19ರಷ್ಟು ಕಡಿಮೆ ಆಗಿದೆ ಎಂದು ಅಧ್ಯಯನಗಳು ಹೇಳಿವೆ. ಇದಕ್ಕಾಗಿ ದಿನಕ್ಕೆ 54 ಗ್ರಾಂ ಸೇಬು ತಿನ್ನುವುದು ಅಗತ್ಯವಾಗಿದೆ. ಇದು ಅಪಧಮನಿ ಆರೋಗ್ಯ ಕಾಪಾಡುವುದು.

ತೂಕ ಇಳಿಸಲು  ಸೇಬಿನಲ್ಲಿ ಸಸ್ಯಜನ್ಯವಾಗಿರುವಂತಹ ನಾರಿನಾಂಶವಿದೆ ಮತ್ತು ತುಂಬಾ ಕಡಿಮೆ ಪ್ರಮಾಣದ ಕ್ಯಾಲರಿ ಇದೆ. ಇದರಿಂದ ತೂಕ ಕಳೆದುಕೊಳ್ಳಲು ಇದು ತುಂಬಾ ಸಹಕಾರಿ ಆಗಿರುವುದು. ಇದು ಕ್ಯಾಲರಿ ಕಡಿಮೆ ಮಾಡುವುದು. ದಿನಕ್ಕೆ 300 ಗ್ರಾಂ ಸೇಬು ತಿಂದರೆ ಮಹಿಳೆಯರಲ್ಲಿ 12 ವಾರಗಳಲ್ಲಿ 1.3 ಕೆಜಿ ತೂಕ ಇಳಿಕೆ ಆಗಿದೆ.

ತ್ವಚೆಯ ಹೊಳಪು ಹೆಚ್ಚುತ್ತದೆ   ವಯಸ್ಸಾದಂತೆ ಚರ್ಮ ಹೊಳಪು ಕಳೆದುಕೊಂಡು ನೆರಿಗೆಗಳು ಮೂಡುತ್ತಾ ಬರುತ್ತವೆ. ಇದನ್ನು ತಡೆಯಲು ಸಾಧ್ಯವಿಲ್ಲವಾದರೂ ಪರಿಣಾಮವನ್ನು ನಿಧಾನಗೊಳಿಸಲು ಸಾಧ್ಯವಿದೆ. ಸೇಬಿನಲ್ಲಿರುವ ಹಲವು ಆಂಟಿ ಆಕ್ಸೆಡೆಂಟುಗಳ ಪರಿಣಾಮವಾಗಿ ಚರ್ಮದ ಜೀವಕೋಶಗಳು ನಾಶವಾಗಿ ನೆರಿಗೆ ಮೂಡುವುದು ನಿಧಾನವಾಗುತ್ತದೆ.

ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತದೆ  ದೇಹದಲ್ಲಿನ ಕೊಲೆಸ್ಟ್ರಾಲ್ ನರಗಳ ಒಳಭಾಗದಲ್ಲಿ ಅಥವಾ ತಿರುವಿರುವೆಡೆಯಲ್ಲಿನ ಮೂಲೆಗಳಲ್ಲಿ ಸಂಗ್ರಹವಾಗುತ್ತಾ ಹೋಗುತ್ತದೆ. ಕ್ರಮೇಣ ಈ ಸಂಗ್ರಹ ಹೆಚ್ಚುತ್ತಾ ಹೋಗಿ ನರಗಳ ಒಳಭಾಗದ ವ್ಯಾಸವನ್ನು ಕಿರಿದುಗೊಳಿಸುವುದರಿಂದ ಹೃದಯ ಹೆಚ್ಚಿನ ಒತ್ತಡದಲ್ಲಿ ರಕ್ತವನ್ನು ದೂಡಿಕೊಡಬೇಕಾಗುತ್ತದೆ. ಸೇಬಿನಲ್ಲಿರುವ ಆಂಟಿ ಆಕ್ಸಿಡೆಂಟುಗಳು ರಕ್ತದಲ್ಲಿ ಸಂಚರಿಸುವ ಮೂಲಕ ನರಗಳ ಒಳಭಾಗದಲ್ಲಿ ಅಂಟಿಕೊಂಡಿರುವ ಈ ಜಿಡ್ಡನ್ನು ಸಡಿಲಗೊಳಿಸುತ್ತವೆ. ಪರಿಣಾಮವಾಗಿ ಕೆಟ್ಟ ಕೊಲೆಸ್ಟ್ರಾಲ್ ರಕ್ತದೊಡನೆ ಹರಿದು ಹೋಗಿ ಶೋಧನಾ ವ್ಯವಸ್ಥೆಯ ಮೂಲಕ ವಿಸರ್ಜಿಸಲ್ಪಡುತ್ತದೆ. ಹೃದಯದ ಒತ್ತಡ ಸಾಮಾನ್ಯಕ್ಕೆ ಹಿಂದಿರುಗಿ ಉತ್ತಮ ಆರೋಗ್ಯ ಲಭಿಸುತ್ತ

ಕ್ಯಾನ್ಸರ್ ಅನ್ನು ತಡೆಗಟ್ಟುತ್ತದೆ  ಸೇಬಿನಲ್ಲಿ ಇರುವಂತಹ ಕೆಲವೊಂದು ಸಸ್ಯಜನ್ಯ ಅಂಶಗಳು ಕ್ಯಾನ್ಸರ್ ವಿರೋಧಿ ಅಂಶವನ್ನು ಹೊಂದಿದೆ ಎಂದು ಹಲವಾರು ಅಧ್ಯಯನಗಳು ಕಂಡುಕೊಂಡಿದೆ ಮತ್ತು ಇದರಲ್ಲಿ ಇರುವಂತಹ ಆಂಟಿಆಕ್ಸಿಡೆಂಟ್ ಮತ್ತು ಪೈಥೋನ್ಯೂಟ್ರಿಯಂಟ್ಸ್ ಗಳು ಕರುಳು ಮತ್ತು ಶ್ವಾಸಕೋಶದ ಕ್ಯಾನ್ಸರ್ ನ್ನು ತಡೆಯುತ್ತದೆ ಎಂದು ಅಧ್ಯಯನಗಳು ತಿಳಿಸಿವೆ.

ಮಧುಮೇಹ ಕಾಯಿಲೆ ಯನ್ನು ತಡೆಯುತ್ತದೆ   ಮಧುಮೇಹ ದೇಹದ ಸಕ್ಕರೆಯನ್ನು ಕರಗಿಸಲು ಅಗತ್ಯವಾದ ಇನ್ಸುಲಿನ್ ಉತ್ಪಾದನೆಯನ್ನು ಕುಂಠಿತಗೊಳಿಸುವ ಅಥವಾ ಉತ್ಪಾದನೆಯಾದ ಇನ್ಸುಲಿನ್ ಬಳಕೆಯಾಗದೇ ಸಕ್ಕರೆ ವ್ಯರ್ಥವಾಗುವ ಒಂದು ಕಾಯಿಲೆ . ಸೇಬುಹಣ್ಣಿನಲ್ಲಿರುವ  ಪೋಷಕಾಂಶಗಳು ಮತ್ತು ಆಂಟಿ ಆಕ್ಸಿಡೆಂಟುಗಳು ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ನಿಯಂತ್ರಣದಲ್ಲಿಡಲು ಸಹಕರಿಸುತ್ತವೆ.
    ರೋಗನಿರೋಧಕ ವ್ಯವಸ್ಥೆಯ ಕಾರ್ಯನಿರ್ವಹಣೆಯನ್ನು ಸುಧಾರಿಸಲು ನೆರವಾಗುವ ವಿಟಮಿನ್ ಸಿ ಯು ಸೇಬಿನಲ್ಲಿರುವ ಹಲವಾರು ಘಟಕಗಳ ಪೈಕಿ ಒ೦ದಾಗಿರುತ್ತದೆ. ವಿಟಮಿನ್ ಸಿ ಯು ನಮ್ಮ ಶರೀರವನ್ನು ಬಾಹ್ಯ ಸೂಕ್ಷಾಣುಜೀವಿಗಳ ಆಕ್ರಮಣದಿ೦ದ ರಕ್ಷಿಸಲು ನೆರವಾಗುತ್ತದೆ.


ಕ್ಯಾಟರಾಕ್ಟ್ (ಕಣ್ಣಿನ ಪೊರೆ) ಅನ್ನು ತಡೆಗಟ್ಟುತ್ತದೆ  ಕ್ಯಾಟರಾಕ್ಟ್ (ಕಣ್ಣಿನ ಪೊರೆ) ಉ೦ಟಾಗಲು ಇರುವ ಹಲವಾರು ಪ್ರಮುಖವಾದ ಕಾರಣಗಳ ಪೈಕಿ ಒ೦ದು ಯಾವುದೆ೦ದರೆ ಉತ್ಕರ್ಷಣೀಯ ಶೈಥಿಲ್ಯ ವಾಗಿರುತ್ತದೆ. ಸೇಬುಗಳ ನಿಯಮಿತವಾದ ಸೇವನೆಯು ಮುಕ್ತ ರಾಡಿಕಲ್‌ಗಳನ್ನು ನಿವಾರಿಸಲು ನೆರವಾಗುತ್ತದೆ ಹಾಗೂ ತನ್ಮೂಲಕ ಕಣ್ಣುಗಳು ಕ್ಯಾಟರಾಕ್ಟ್ (ಕಣ್ಣಿನ ಪೊರೆ) ಗೆ ಗುರಿಯಾಗುವುದನ್ನು ತಪ್ಪಿಸುತ್ತದೆ.




About the author / 

Chethan Mardalu

Categories

Date wise

  • ಹಲಸಿನ ಹಣ್ಣು ತಿನ್ನುವುದರಿಂದ ಆಗುವ ಆರೋಗ್ಯಕರ ಲಾಭಗಳು!!

    ಹಣ್ಣುಗಳನ್ನು ನಾವು ತಿಂದಷ್ಟು ನಮಗೆ ಆರೋಗ್ಯ ನಿರಂತರವಾಗಿರುತ್ತದೆ. ಅದರಲ್ಲಿಯೂ ಕೆಲವೊಂದು ನಿರ್ದಿಷ್ಟ ಹಣ್ಣುಗಳು ಆರೋಗ್ಯಕ್ಕೆ ಹಿತಕಾರಿಯಾಗಿದೆ. ಸಿಹಿಯಾದ ರುಚಿಯಿಂದ ಕೂಡಿದ ಹಲಸು ಆರೋಗ್ಯಕ್ಕೆ ನೀಡುವ ಕೊಡುಗೆ ಅಪಾರವಾದುದು.ಹಲಸಿನ ಹಣ್ಣು ತಿನ್ನುವುದರಿಂದ ಆಗುವ ಆರೋಗ್ಯಕರ ಲಾಭಗಳು ರಕ್ತದ ಒತ್ತಡವನ್ನು ಸಮತೋಲನವಾಗಿಸುತ್ತದೆಹಲಸಿನ ಹಣ್ಣಿನ ತೊಳೆಗಳಲ್ಲಿ ಪೊಟ್ಯಾಶಿಯಂ ಅಂಶ ಹೆಚ್ಚಾಗಿದ್ದು, ಅಧಿಕ ರಕ್ತದ ಒತ್ತಡ ಸಮಸ್ಯೆಯಿಂದ ಬಳಲುತ್ತಿರುವ ಮಂದಿಗೆ ಇದು ಬಹಳ ಸಹಕಾರಿ ಎಂದು ಹೇಳುತ್ತಾರೆ. ಏಕೆಂದರೆ ಪೊಟ್ಯಾಶಿಯಂ ಅಂಶ ಹೊಂದಿರುವ ಯಾವುದೇ ಆಹಾರ ಸೇವನೆ ಮಾಡುವುದರಿಂದ ದೇಹದಲ್ಲಿ ಸೋಡಿಯಂ ಅಂಶ…

ಏನ್ ಸಮಾಚಾರ

  • ಆರೋಗ್ಯ

    ಇಲ್ಲಿವೆ ಮೊಡವೆಯ ಸಮಸ್ಯೆಯನ್ನು ಮಾಯ ಮಾಡೋ ಮನೆಮದ್ದುಗಳು..!ತಿಳಿಯಲು ಈ ಲೇಖನ ಓದಿ…

    ಸಾಮಾನ್ಯವಾಗಿ ಎಲ್ಲರ ಸೌಂದರ್ಯ ಹಾಳಾಗುವುದು ಮೊಡವೆಗಳಿಂದಲೇ. ಹದಿಹರೆಯದಲ್ಲಿ ಸಾಮಾನ್ಯವಾದ ಮೊಡವೆ ಅಳಿದರೂ ಕಲೆಗಳನ್ನು ಉಳಿಸುತ್ತದೆ. ಕೆಲವರಿಗಂತೂ ಎಷ್ಟೇ ವಯಸ್ಸಾದರೂ ಇವು ಬಿಟ್ಟು ಹೋಗುವ ಮಾತನ್ನೇ ಆಡುವುದಿಲ್ಲ.

  • ಸರ್ಕಾರದ ಯೋಜನೆಗಳು

    ಪ್ರಧಾನಿ ನರೇಂದ್ರ ಮೋದಿಯವರಿಂದ ರೇಷನ್ ಕಾರ್ಡುದಾರರಿಗೆ ಸಿಹಿ ಸುದ್ದಿ ..!ತಿಳಿಯಲು ಈ ಲೇಖನ ಓದಿ..

    ಕೆಲ ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಭಾರತದ ರಾಜ್ಯಗಳ ಬಿಜೆಪಿ ಸಂಸದರ ಜತೆ ಸಭೆ ನಡೆಸಿ, ಪಡಿತರ ವ್ಯವಸ್ಥೆಯ ಮೂಲಕ ಫಲಾನುಭವಿಗಳಿಗೆ ನ್ಯಾಯಬೆಲೆ ಅಂಗಡಿಗಳ ಮೂಲಕ ರಿಯಾಯಿತಿ ದರದಲ್ಲಿ ಆಹಾರ ಪದಾರ್ಥ ನೀಡುವ ಬದಲಿಗೆ ಅದರ ಸಬ್ಸಿಡಿ ಹಣವನ್ನು ನೇರವಾಗಿ ನೀಡುವ ಕುರಿತು ಚರ್ಚೆ ನಡೆಸಿದ್ದಾರೆ.ಇದು ರೇಷನ್ ಕಾರ್ಡುದಾರರಿಗೆ ಲಾಭದಾಯಕವಾದರೆ ಕಾಳಸಂತೆಕೋರರ ಮೇಲೆ ನಿಯಂತ್ರಣ ಹಾಕಲಿದೆ.

  • ಜ್ಯೋತಿಷ್ಯ

    ದಿನ ಭವಿಷ್ಯ ಬುಧವಾರ, ಈ ದಿನದ ನಿಮ್ಮ ರಾಶಿ ಭವಿಷ್ಯದೊಂದಿಗೆ ನಿಮ್ಮ ಅದೃಷ್ಟದ ಸಂಖ್ಯೆ ತಿಳಿಯಿರಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ 30 ಜನವರಿ, 2019 ನಿಮ್ಮ ಪ್ರಮುಖ ಆತಂಕ ಮತ್ತು ಒತ್ತಡದ ಒಂದು ಕಾರಣವೆಂದರೆ ಕೆಲವೊಮ್ಮೆಯಾದರೂ ನೀವು…

  • ಸುದ್ದಿ

    ಸಚಿವ ಸ್ಥಾನ ಕೈ ತಪ್ಪಿದ ಕಾರಣಕ್ಕಾಗಿ ಬೈಕ್​ಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ನಾಯಕರು…!

    ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ನೇತೃತ್ವದ ಸಂಪುಟದಲ್ಲಿ ಸಚಿವ ಸ್ಥಾನ ಕೈ ತಪ್ಪಿದ ಶಾಸಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ಧಾರೆ. ಜೊತೆಗೆ ಅವರ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆಗೆ ಇಳಿದಿದ್ದಾರೆ. 6 ಬಾರಿ ಶಾಸಕರಾಗಿರುವ ಚಿತ್ರದುರ್ಗದ ಬಿಜೆಪಿ ಶಾಸಕ ಜಿ.ಹೆಚ್​.ತಿಪ್ಪಾರೆಡ್ಡಿ ಅವರಿಗೆ ಸಚಿವ ಸ್ಥಾನ ಕೈ ತಪ್ಪಿದೆ. ಈ ಹಿನ್ನೆಲೆ ಅವರ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿತ್ರದುರ್ಗದ ಗಾಂಧಿ ವೃತ್ತದಲ್ಲಿ ಬೈಕ್​ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ದಾರೆ. ತಿಪ್ಪಾರೆಡ್ಡಿ ಅಭಿಮಾನಿ ಮಧು ಎಂಬುವವರ ಸ್ಕೂಟಿ ಟೈಯರ್​ಗೆ ಬೆಂಕಿ ಹಚ್ಚಲು ಪೊಲೀಸರು ಬಿಡದ ಕಾರಣ,…

  • ಆರೋಗ್ಯ

    ದಾಳಿಂಬೆ ಹಣ್ಣು ತಿಂದರೆ ಏನಾಗುತ್ತದೆ ಎಂದು 90% ಜನರಿಗೆ ಗೊತ್ತೇ ಇಲ್ಲ, ಏನಿದರ ಮಹತ್ವ ಗೊತ್ತಾ.

    ಹಣ್ಣುಗಳು ದೇಹದ ಆರೋಗ್ಯಕ್ಕೆ ಬಹಳಷ್ಟು ಉತ್ತಮ ಎನ್ನುವುದನ್ನು ನಾವೆಲ್ಲರೂ ತಿಳಿದಿದ್ದೇವೆ, ಆದರೆ ಯಾವ ಯಾವ ಹಣ್ಣುಗಳು ಯಾವ ಯಾವ ಅಂಶಗಳನ್ನು ಒಳಗೊಂಡಿರುತ್ತವೆ ಮತ್ತು ಅವು ನಮ್ಮ ಆರೋಗ್ಯವೃದ್ಧಿಗೆ ಹೇಗೆ ಸಹಕರಿಸುತ್ತವೆ ಎಂಬುದು ಹಲವರಿಗೆ ತಿಳಿದಿರುವುದಿಲ್ಲ. ಈ ಭೂಮಿಯ ಮೇಲೆ ಹಲವು ರೀತಿಯ ಹಣ್ಣುಗಳಿವೆ ಮತ್ತು ಒಂದೊಂದು ಹಣ್ಣು ಕೂಡ ಒಂದೊಂದು ರೀತಿಯ ಗುಣಲಕ್ಷಣಗಳನ್ನ ಹೊಂದಿರುತ್ತದೆ, ಇನ್ನು ಹಣ್ಣುಗಳನ್ನು ತಿನ್ನಲೂ ಕ್ರಮವಿದೆ, ಹಾಗಾದರೆ ಹಣ್ಣುಗಳನ್ನ ತಿನ್ನುವಾಗ ಅನುಸರಿಸಬೇಕಾದ ಕ್ರಮಗಳೇನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ…

  • ಸುದ್ದಿ

    ಭಾರತೀಯ ಸೇನೆಗಾಗಿ ವಿಶೇಷವಾಗಿ ತಯಾರಾದ ಈ ಬೈಕ್ ವಿಶೇಷತೆ ಏನು ಗೊತ್ತಾ?

    ಭಾರತೀಯ ಸೇನಗಾಗಿ ಟಾಟಾ ಮೋಟಾರ್ಸ್ ತಮ್ಮ ಸಫಾರಿ ಸ್ಟೋರ್ಮ್ ಕಾರನ್ನು ತಯಾರಿಸಿ ನೀಡುತ್ತಿರುವ ಬಗ್ಗೆ ನಾವು ಈಗಾಗಲೇ ತಿಳಿದಿದ್ದೇವೆ. ಆದ್ರೆ ಸೇನೆಯಲ್ಲಿ ಬಳಸಲಾಗುತ್ತಿರವ ದ್ವಿಚಕ್ರ ವಾಹನಗಳು ಕಡಿಮೆ ಶಕ್ತಿಶಾಲಿಯಾದ ಕಾರಣ ಚತ್ತೀಸ್‍ಗಢ್‍ನ ಯುವಕನೊಬ್ಬ 800ಸಿಸಿ ಸಾಮರ್ಥ್ಯವಿರುವ ವಿಶೇಷ ಬೈಕ್ ಒಂದನ್ನ ತಯಾರು ಮಾಡಿದ್ದಾನೆ.ಪ್ರಸ್ತುತ ಭಾರತೀಯ ಸೇನೆಯಲ್ಲಿ ರಾಯಲ್ ಎನ್‍ಫೀಲ್ಡ್ ಸಂಸ್ಥೆಯ 350ಸಿಸಿ ಮತ್ತು 500ಸಿಸಿ ಬೈಕ್‍ಗಳನ್ನು ಬಳಸಲಾಗುತ್ತಿದ್ದು, ಅಮೆರಿಕನ್ ಸೇನೆಯು ಹೆಚ್ಚು ಸಾಮರ್ಥ್ಯವಿರುವ ಯುನೈಟೆಡ್ ಮೋಟಾರ್ಸ್‍ನ ಮತ್ತು ಹಾರ್ಲೇ ಡೇವಿಡ್ಸನ್ ಸಂಸ್ಥೆಯ ಅಧಿಕ ಸಾಮರ್ಥ್ಯವಿರುವ ಬೈಕ್‍ಗಳನ್ನು ಬಳಸುತ್ತಿದ್ದಾರೆ….