ಭಾರತದ ಕೃಷಿ ಕ್ಷೇತ್ರದಲ್ಲಿ ಪ್ರಮುಖ
ಹೆಸರಾಗಿದ್ದ, ನೂರಾರು ಭತ್ತದ ತಳಿಗಳ
ಪುನಶ್ಚೇತನಕ್ಕೆ ಕಾರಣರಾಗಿದ್ದ ತಮಿಳ್ನಾಡಿನ ಕೆ ಆರ್ ಜಯರಾಮನ್
ನಿಧನರಾಗಿದ್ದಾರೆ. ಅವರು ಕ್ಯಾನ್ಸರಿನಿಂದ ಬಳಲುತ್ತಿದ್ದರು.ನೆಲ್ (ಭತ್ತವನ್ನು ತಮಿಳಿನಲ್ಲಿ
ಹೀಗೇ ಕರೆಯುತ್ತಾರೆ) ಎಂದೇ ಹೆಚ್ಚು ಪರಿಚಿತರಾಗಿದ್ದ
ಜಯರಾಮನ್, 170 ಕ್ಕಿಂತಲೂ ಹೆಚ್ಚು ಸ್ಥಳೀಯ ಭತ್ತದ
ವೈವಿಧ್ಯಗಳನ್ನು ಪುನಶ್ಚೇತನಗೊಳಿಸಿದ್ದುರ. ಮಾತ್ರವಲ್ಲ, ತಮಿಳುನಾಡಿನಲ್ಲಿ ಸಾವಯವ ಕೃಷಿಗೆ ಉತ್ತೇಜನ
ನೀಡಿದ್ದರು.
ತಮಿಳ್ನಾಡಿನಲ್ಲಿ
‘ಸೇವ್ ಅವರ್ ರೈಸ್’ ಅಭಿಯಾನದ
ಸಾರಥಿಯಾಗಿದ್ದ ಜಯರಾಮನ್, ಇದಕ್ಕಾಗಿ ರಾಜ್ಯ ಮತ್ತು ಕೇಂದ್ರ
ಸರ್ಕಾರಗಳಿಂದ ಹಲವಾರು ಪ್ರಶಸ್ತಿಗಳಿಗೆ ಪಾತ್ರರಾಗಿದ್ದರು.ಬೀಜಗಳ ಸಂರಕ್ಷಣೆ, ತಮಿಳ್ನಾಡಿನಾದ್ಯಂತ
ಕೃಷಿಯಲ್ಲಿ ಸ್ಥಳೀಯ ಶೈಲಿಯ ಅಳವಡಿಕೆ
ಮತ್ತು ಬೀಜ ಪ್ರಭೇದಗಳನ್ನು ಉತ್ತೇಜಿಸುವ
ಕೆಲಸದಲ್ಲಿ ಜಯರಾಮನ್ ತೊಡಗಿಸಿಕೊಡಿದ್ದರು. ತಿರುವರೂರು
ಜಿಲ್ಲೆಯ ಅದಿರಂಗಂ ಜಿಲ್ಲೆಯು ಜಯರಾಮನ್
ಅವರ ಕಾರಣದಿಂದಾಗಿಯೇ 2006 ರಿಂದ ‘ನೆಲ್ ತಿರುವಿಳ’
ಎಂಬ ವಾರ್ಷಿಕ ಭತ್ತದ ಉತ್ಸವಕ್ಕೆ
ಹೆಸರುವಾಸಿಯಾಗಿದೆ. ರಾಜ್ಯದೆಲ್ಲೆಡೆಯಿಂದ ಮತ್ತು ಹತ್ತಿರದ ಸ್ಥಳಗಳಿಂದ
ಬರುವ ರೈತರು ಈ ಉತ್ಸವದಲ್ಲಿ
ಪಾಲ್ಗೊಳ್ಳುತ್ತಾರೆ. ಕಳೆದ ವರ್ಷ ಸುಮಾರು
12 ಸಾವಿರ ರೈತರು ಹಬ್ಬದಲ್ಲಿ ಭಾಗಿಯಾಗಿದ್ದರು.
ಜಯರಾಮನ್
ಅವರು ಸದ್ದಿಲ್ಲದೆ ಭತ್ತದ ಕೃಷಿಯಲ್ಲಿ ಕ್ರಾಂತಿ
ಮಾಡಿದ ಬಗೆಯೇ ಕುತೂಹಲಕಾರಿ. ಪ್ರತಿದಿನವೂ
2 ಕಿ.ಗ್ರಾಂ ಬೀಜಗಳನ್ನು ನೀಡಿ,
ಮುಂದಿನ ವರ್ಷ 4 ಕಿ.ಗ್ರಾಂ
ಮರಳಿಸುವಂತೆ ಕೇಳುವ ಮೂಲಕ ಅವರು
ಸ್ಥಳೀಯ ಬೀಜ ಪ್ರಭೇದಗಳ ಪುನಶ್ಚೇತನದ
ಕೆಲಸ ಶುರು ಮಾಡಿದರು. ತಿರವರೂರು
ವಾರ್ಷಿಕ ಉತ್ಸವಕ್ಕೆ ಈ ಬಗೆಯಲ್ಲಿ ಒಬ್ಬೊಬ್ಬರಿಂದಲೂ
4 ಕಿ.ಗ್ರಾಂಗಿಂತಲೂ ಹೆಚ್ಚು ಬೀಜ ಮರಳತೊಡಗಿತು.
ಇದರ ಪರಿಣಾಮವಾಗಿ ಈ ಉತ್ಸವವು ತಮಿಳುನಾಡಿನ
ರೈತರಿಗೆ ಒಂದು ಪ್ರಮುಖ ವೇದಿಕೆಯೇ
ಆಗಿ ಮಾರ್ಪಟ್ಟಿತು.
ರಾಜ್ಯ ಸರ್ಕಾರದಿಂದ ಜಯರಾಮನ್ ಅವರಿಗೆ ಸತತ
ಎರಡು ವರ್ಷ (2012 ಮತ್ತು 2013) ‘ಅತ್ಯುತ್ತಮ ಸಾವಯವ ಕೃಷಿಕ’ ಪ್ರಶಸ್ತಿ
ಸಂದಿದೆ. 2015ರಲ್ಲಿ ಅವರು ನ್ಯಾಷನಲ್
ಇನೋವೇಶನ್ ಫೌಂಡೇಶನ್ (ಎನ್ಐಎಫ್)ಕೊಡುವ ‘ಬೆಸ್ಟ್
ಜೀನೋಮ್ ಸಂರಕ್ಷಕ’
ಪ್ರಶಸ್ತಿಯನ್ನು ಗೆದ್ದಿದ್ದಾರೆ.
ಕೋಲಾರ ನಗರದ ಪ್ರಧಾನ ಅಂಚೆ ಕಚೇರಿಯಲಿ ಶನಿವಾರ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಕೋಲಾರ ಜಿಲ್ಲೆಯ ಟೊಮೇಟೋ ಕುರಿತು ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. ಇತ್ತೀಚಿನ ದಿನಗಳಲ್ಲಿ ಟೊಮೇಟೋ ಕೋಲಾರ ಜಿಲ್ಲೆಯ ಪ್ರಧಾನ ತೋಟಗಾರಿಕೆ ಬೆಳೆಯಾಗಿ ಹೊರ ಹೊಮ್ಮಿದೆ. ರೈತರು ವರ್ಷದ ೩೬೫ ದಿನವೂ ಟೊಮೇಟೋವನ್ನು ಬೆಳೆಯುತ್ತಿದ್ದಾರೆ. ಕೋಲಾರದ ಎಪಿಎಂಸಿ ಮಾರುಕಟ್ಟೆಯೂ ಏಷ್ಯಾದ ಎರಡನೇ ಅತಿ ದೊಡ್ಡ ಟೊಮೇಟೋ ಮಾರುಕಟ್ಟೆಯಾಗಿ ಪ್ರಸಿದ್ಧಿ ಪಡೆದಿದೆ. ಈ ಹಿನ್ನೆಲೆಯಲ್ಲಿ ಟೊಮೇಟೋ ಬೆಳೆಯನ್ನು ಕೋಲಾರದ ಒಂದು ಜಿಲ್ಲೆ ಒಂದು…
ಮುಂದಿನ ತಿಂಗಳಿಂದ 500 ಕಿ.ಮೀ.ಗಿಂತ ಹೆಚ್ಚು ದೂರ ಸಂಚರಿಸುವ ರೈಲುಗಳ ಪ್ರಯಾಣದ ಅವಧಿಯನ್ನು ಸ್ವಲ್ಪ ಕಡಿಮೆ ಮಾಡಲು ಭಾರತೀಯ ರೈಲ್ವೆ ನಿರ್ಧರಿಸಿದೆ ಎಂದು ಹಿರಿಯ ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಲು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ದೊಡ್ಡ ಘೋಷಣೆಯೊಂದನ್ನು ಮಾಡಿದ್ದಾರೆ. 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ್ರೆ ಬಡವರ ಬ್ಯಾಂಕ್ ಖಾತೆಗೆ ಪ್ರತಿ ವರ್ಷ 72 ಸಾವಿರ ರೂಪಾಯಿ ಜಮಾ ಆಗಲಿದೆಯಂತೆ. ಪತ್ರಿಕಾಗೋಷ್ಠಿ ನಡೆಸಿದ ರಾಹುಲ್ ಗಾಂಧಿ ಕನಿಷ್ಠ ಆದಾಯ ಯೋಜನೆ ಘೋಷಣೆ ಮಾಡಿದ್ದಾರೆ. ಇದಕ್ಕೆ ರಾಹುಲ್ ಗಾಂಧಿ ‘ನ್ಯಾಯ್ ಸ್ಕೀಂ’ ಎಂದು ಹೆಸರಿಟ್ಟಿದ್ದಾರೆ. ಈ ಯೋಜನೆಯಿಂದ 25 ಕೋಟಿ ಜನರಿಗೆ ಸಹಾಯವಾಗಲಿದೆ ಎಂದು ರಾಹುಲ್ ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ…
ಹಣ್ಣುಗಳು ಆರೋಗ್ಯ ಮತ್ತು ತ್ವಚೆಗೆ ಅಪಾರ ಪ್ರಯೋಜನಕಾರಿಯಾಗಿವೆ. ರೋಗ ನಿರೋಧಕ ಶಕ್ತಿಯನ್ನು ಪಡೆಯಬೇಕಾದರೆ ಪ್ರತಿಯೊಂದು ಋತುಕಾಲಿಕ ಹಣ್ಣುಗಳನ್ನು ತಿನ್ನಬೇಕು. ದಾಳಿಂಬೆ ಜ್ಯೂಸ್ ಕುಡಿಯೋದ್ರಿಂದ ಸಾಕಷ್ಟು ಆರೋಗ್ಯಕರ ಪ್ರಯೋಜನಗಳಿವೆ. ಕ್ಯಾನ್ಸರ್, ಹೃದಯ ರಕ್ತನಾಳದ ಖಾಯಿಲೆಗಳಿಂದಲೂ ರಕ್ಷಣೆ ಕೊಡುತ್ತೆ ಈ ಜ್ಯೂಸ್ ಎನ್ನುತ್ತೆ ಹೊಸ ಸಂಶೋಧನೆ. ಇತ್ತೀಚಿನ ಸಂಶೋಧನೆಯ ಪ್ರಕಾರ ದಾಳಿಂಬೆ ಜ್ಯೂಸ್ ಹೃದಯ ರಕ್ತನಾಳಗಳನ್ನು ಶುದ್ಧಗೊಳಿಸಿ ಖಾಯಿಲೆಗಳು ಬರದಂತೆ ನೋಡಿಕೊಳ್ಳುತ್ತದೆ. ಹೃದಯಾಘಾತಕ್ಕೆ ಮುಖ್ಯ ಕಾರಣವಾಗಿರೋ ಅಪಧಮನಿ ಹಾಗೂ ಅಬಿಧಮನಿ ಮುಚ್ಚಿಹೋಗುವ ಅಪಾಯವನ್ನೂ ಕೂಡ ದಾಳಿಂಬೆ ತಡೆಯುತ್ತದೆ. ಅಲ್ಲದೇ ದಾಳಿಂಬೆ…
ತಮ್ಮ ಪ್ರಜಾಕೀಯ ಪಕ್ಷದ ಮೂಲಕ ಲೋಕಸಭಾ ಚುನಾವಣಾ ಸಮರಕ್ಕೆ ಸಿದ್ಧರಾಗಿರುವ ನಟ ರಿಯಲ್ ಸ್ಟಾರ್ ಉಪೇಂದ್ರ ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ಬಹು ನಿರೀಕ್ಷಿತ ಚಿತ್ರದ ಆಫರ್ ಗೆ ನೋ ಎಂದು ಹೇಳಿದ್ದಾರೆ. ಹೌದು.. ಪ್ರಸ್ತುತ ಪ್ರಜಾಕೀಯದಲ್ಲಿ ಬಿಸಿಯಾಗಿರುವ ನಟ ಉಪೇಂದ್ರ ಚಿತ್ರೀಕರಣಕ್ಕೆ ತಾತ್ಕಾಲಿಕ ವಿರಾಮ ಹಾಕಿದ್ದು, ಇದೇ ಕಾರಣಕ್ಕೆ ತಮ್ಮದೇ ಚಿತ್ರಗಳನ್ನು ಮುಂದೂಡಿದ್ದಾರೆ ಎನ್ನಲಾಗಿದೆ. ಅಲ್ಲದೇ ಪ್ರಜಾಕೀಯದತ್ತ ಗಮನ ಕೇಂದ್ರೀಕರಿಸುವ ನಟ ಉಪೇಂದ್ರ ತೆಲುಗಿನ ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ನೂತನ…
ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ 22 ಜನವರಿ, 2019 ಬಹಳ ಪ್ರಯೋಜನಕಾರಿ ದಿನವಲ್ಲ- ಆದ್ದರಿಂದ ನಿಮ್ಮ ಹಣದ ಪರಿಸ್ಥಿತಿಯನ್ನು ಪರಿಶೀಲಿಸಿ ಮತ್ತು…
ಈಗ 100ರಲ್ಲಿ 90 ಜನರು ಮದ್ಯಪಾನ ಮಾಡುತ್ತಾರೆ. ಒಂದು ಸಲ ಒಬ್ಬ ವ್ಯಕ್ತಿ ಕುಡಿತಕ್ಕೆ ಅಡಿಕ್ಟ್ ಆದರೆ ಅದನ್ನು ಬಿಡಲು ತುಂಬಾ ಕಷ್ಟಪಡುತ್ತಾರೆ. ಕುಡಿಯುವವರೆಲ್ಲಾ ಕೆಟ್ಟವರಲ್ಲ. ಆದರೆ ಕುಡಿತ ಮಾತ್ರ ತುಂಬಾ ಕೆಟ್ಟದು. ಅದು ನಮ್ಮ ಆರೋಗ್ಯದ ಜೊತೆಗೆ ನಮ್ಮ ಸಂಸಾರವನ್ನು ಹಾಳುಮಾಡುತ್ತದೆ. ಕುಡಿತದಿಂದ ಲಿವರ್ ಹಾಳಾಗುತ್ತೆ, ಉಸಿರಾಟದ ತೊಂದರೆ ಉಂಟಾಗುತ್ತೆ, ಹೊಟ್ಟೆಯಲ್ಲಿ ಹುಣ್ಣಾಗುತ್ತೆ, ಕಿಡ್ನಿ ಹಾಳಾಗುತ್ತೆ ಹೀಗೆ ಹಲವು ಸಮಸ್ಯೆಗಳು ಕುಡಿತದಿಂದ ಬರುತ್ತದೆ. ಕೆಲವರು ಎಷ್ಟೇ ಪ್ರಯತ್ನಿಸಿದರೂ ಕುಡಿತವನ್ನು ಬಿಡಲು ಆಗದಿದ್ದಾಗ ಈ ಮನೆಮದ್ದಗಳನ್ನು ಬಳಸಿ….