ಆರೋಗ್ಯ

ಹಾಗಲಕಾಯಿಯ ಆರೋಗ್ಯಕರ ಪ್ರಯೋಜನಗಳು

36

 ಇಂಗ್ಲಿಷ್ ನಲ್ಲಿ  ಬಿಟರ್ ಗೌರ್ಡ್ ಎಂದು ಕರೆಯಲಾಗುವ ಇದು,ಸೌತೆಕಾಯಿಯಂತಹ ಕ್ಯುಕರ್ಬಿಟೇಸಿಯೆ ಜಾತಿಗೆ ಸೇರಿದ ಉಷ್ಣವಲಯ ಹಾಗು ಉಪೋಷ್ಣವಲಯದ ಬಳ್ಳಿಯಾಗಿದೆ. ಇದು ತಿನ್ನಲು ಯೋಗ್ಯವಾದ ಹಣ್ಣನ್ನು ಹೊಂದಿರುವ ಕಾರಣಕ್ಕೆ ಏಷಿಯಾ , ಆಫ್ರಿಕಾ ಹಾಗು ಕ್ಯಾರೆಬಿಯನ್ ಅಂದರೆ ವೆಸ್ಟ್ ಇಂಡೀಸ್ ದ್ವೀಪ ಪ್ರದೇಶಗಳಲ್ಲಿ ವ್ಯಾಪಕವಾಗಿ ಬೆಳೆಯಲಾಗುತ್ತದೆ. ಇದರ ಹಣ್ಣು ಇತರ ಎಲ್ಲ ಹಣ್ಣು ಗಳಿಗಿಂತ ಅತ್ಯಧಿಕ ಕಹಿಯಾಗಿರುತ್ತದೆ. ಇದರಲ್ಲಿಯೂ ಮೂಲಭೂತವಾಗಿ ಹಣ್ಣಿನ ಆಕಾರ ಹಾಗು ಕಹಿಯಲ್ಲಿ ವ್ಯತ್ಯಾಸ ಹೊಂದಿರುವ ಹಲವು ಪ್ರಭೇದಗಳಿವೆ.

ಹಾಗಲಕಾಯಿಯ ಉಪಯೋಗಗಳು

ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆಹಾಗಲಕಾಯಿಯಲ್ಲಿ ಪೈಟೋನ್ಯೂಟ್ರಿಯೆಂಟ್‍ಗಳೆಂಬ ಆಂಟಿ ಆಕ್ಸಿಡೆಂಟಗಳಿರುತ್ತದೆ. ಇವು ಕೆಟ್ಟ ಕೊಲೆಸ್ಟ್ರಾಲನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.

ರೋಗ ನಿರೋಧಕ ಶಕ್ತಿ ಯನ್ನು ಹೆಚ್ಚಿಸುತ್ತದೆ  : ವೈರಸ ಮತ್ತು ಬ್ಯಾಕ್ಟೀರಿಯಾಗಳ ವಿರುದ್ದ ಹೋರಾಡುವ ಸಾಮಥ್ರ್ಯವನ್ನು ಹೊಂದಿರುವುದರಿಂದ ವಿವಿಧ ಅಲರ್ಜಿಯನ್ನು ತಡೆಗಟ್ಟಲು  ಸಹಾಯ ಮಾಡುತ್ತದೆ.

ಮಧುಮೇಹವನ್ನು ಕಡಿಮೆ ಮಾಡುತ್ತದೆ : ಪ್ರತಿದಿನ ಹಾಗಲಕಾಯಿ ಸೇವಿಸುವುದರಿಂದ ಮಧುಮೇಹಿಗಳ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ.  ಹಾಗಲಕಾಯಿಯ ಜ್ಯೂಸ್ ಅತಿ ಸಾಮಾನ್ಯವಾದ, ಜನಪ್ರಿಯ ಪರಿಹಾರವಾಗಿದೆ. insulin ಗೆ ಸಮನಾದ ಕೆಲವು ರಾಸಾಯನಿಕಗಳು ಹಾಗಲಕಾಯಿಯಲ್ಲಿದ್ದು, ಅವು ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡುತ್ತವೆ.

ಮಲಬದ್ಧತೆಯನ್ನು ತಡೆಗಟ್ಟುತ್ತದೆ:  ಮಲಬದ್ದತೆಯನ್ನು ತಡೆಗಟ್ಟುವಲ್ಲಿ ಹಾಗಲಕಾಯಿ ನೈಸರ್ಗಿಕ ಪರಿಹಾರವಾಗಿದೆ.  ಯಾವದೇ ಅಡ್ಡ ಪರಿಣಾಮಗಳಿಲ್ಲ.

ಚರ್ಮ  ಮತ್ತು ಕೂದಲಿನ  ಕಾಂತಿಗಾಗಿ: ಚರ್ಮದ ಮೇಲಿನ ಮಯಸ್ಸಾದ ಚಿಹ್ನೆಗಳನ್ನು ಕಡಿಮೆ ಮಾಡುವಲ್ಲಿ ಆಂಟಿ ಆಕ್ಸಿಡೆಂಟಗಳು ಮತ್ತು ವಿಟಮಿನ್ ಸಿ ಮತ್ತು ಎ ಸಹಾಯ ಮಾಡುತ್ತದೆ. ಹಾಗಲಕಾಯಿಯ ಸೇವನೆಯು ಮೊಡವೆಗಳ ನಿವಾರಣೆಗೆ ಸಹಕಾರಿಯಾಗಿದೆ ಮಾತ್ರವಲ್ಲದೇ ಆಳವಾದ ಚರ್ಮದ ಸೋಂಕುಗಳಿಗೂ ಶಮನಕಾರಿಯಾಗಿದೆ. ಹಾಗಲಕಾಯಿಯ ರಸವನ್ನು ನಿಂಬೆ ಹಣ್ಣಿನ ರಸದೊಂದಿಗೆ ಬೆರೆಸಿ, ಪ್ರತಿದಿನ ಖಾಲಿ ಹೊಟ್ಟೆಗೆ 6 ತಿಂಗಳುಗಳ ಕಾಲ ಸೇವಿಸಿರಿ ಇಲ್ಲವೇ ನಿಮ್ಮ ನಿರೀಕ್ಷಿತ ಫಲಿತಾಂಶ ದೊರೆಯುವವರೆಗೆ ಸೇವನೆಯನ್ನು ಮುಂದುವರೆಸಿರಿ.

ತೂಕ ಕಡಿಮೆ ಮಾಡುತ್ತದೆ ಕ್ಯಾಲೋರಿ, ಕೊಬ್ಬು ಮತ್ತು ಕಾರ್ಬೋಹೈಡ್ರೇಟಗಳು ಕಡಿಮೆ ಇರುವುದರಿಂದ ತೂಕ ಇಳಿಸುವಲ್ಲಿ ಆಹಾರದಲ್ಲಿ ಸೇರಿಸಲಾಗುತ್ತದೆ.

ಕಣ್ಣಿನ ದೃಷ್ಟಿ  ಹೆಚ್ಚಿಸುತ್ತದೆ: ಇದರಲ್ಲಿನ ಬೀಟಾ ಕ್ಯಾರೋಟಿನ್ ಮತ್ತು ಜೀವಸತ್ವ ಎ ಪೋಷಕಾಂಶಗಳು ಹೇರಳವಾಗಿರುವುದರಿಂದ ಕಣ್ಣಿಗೆ ಅವಶ್ಯಕವಾದ ಪೋಷಕಾಂಶಗಳು ದೊರೆತು ಕಣ್ಣಿನ ತೊಂದರೆಗಳಿಂದ ರಕ್ಷಣೆ ನೀಡುತ್ತದೆ. ಹಾಗಲಕಾಯಿಯ ರಸದಲ್ಲಿ ಬೀಟಾ-ಕ್ಯಾರೋಟೀನ್ ಮತ್ತು ವಿಟಮಿನ್ ಎ ಪೋಷಕಾಂಶಗಳು ಹೇರಳವಾಗಿರುವುದರಿಂದ ಕಣ್ಣಿಗೆ ಅಗತ್ಯವಾದ ಪೋಷಕಾಂಶಗಳು ದೊರೆತು ಕಣ್ಣಿನ ತೊಂದರೆಗಳಿಂದ ರಕ್ಷಣೆ ನೀಡಿದಂತಾಗುತ್ತದೆ. ಅಲ್ಲದೇ ಉತ್ತಮ ಪ್ರಮಾಣದಲ್ಲಿರುವ ವಿಟಮಿನ್ ಸಿ ಮತ್ತು ಆಂಟಿ ಆಕ್ಸಿಡೆಂಟುಗಳು ಮಧುಮೇಹದ ಕಾರಣದಿಂದಾಗಿ ಉತ್ಪತ್ತಿಯಾಗುವ ದೃಷ್ಟಿದೋಷದಿಂದ ಕಣ್ಣುಗಳನ್ನು ಕಾಪಾಡುತ್ತವೆ. ಹಾಗಲಕಾಯಿಯ ನಿಯಮಿತ ಸೇವನೆಯಿಂದ ಕಣ್ಣುಗಳ ಉತ್ತಮ ಆರೋಗ್ಯವನ್ನು ಕಾಪಾಡಿಕೊಂಡು ಬರಲು ಸಾಧ್ಯವಾಗುತ್ತದೆ.

ರಕ್ತವನ್ನು ಶುದ್ಧಿಕರಿಸುತ್ತದೆ ಪ್ರತಿದಿನ ಬೆಳೆಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಹಾಗಲಕಾಯಿ ರಸ ಸೇವಿಸುವುದರಿಂದ ರಕ್ತ ಶುದ್ಧಿಗೊಳ್ಳುತ್ತದೆ.

ಕ್ಯಾನ್ಸರ್ನಿಂದ ಕಾಪಾಡುತ್ತದೆ

ರಕ್ತದಲ್ಲಿ ಇನ್ಸುಲಿನ್ ಪ್ರಮಾಣ ಕಡಿಮೆಯಾಗಲು ಕ್ಯಾನ್ಸರ್ ಗೆ ತುತ್ತಾಗಿ ಬಾಡಲಿಯ ಕಾರ್ಯಕ್ಷಮತೆ ಕುಸಿಯುವುದು ಪ್ರಮುಖ ಕಾರಣವಾಗಿದೆ. ಹಾಗಲಕಾಯಿಯಲ್ಲಿರುವ ಪೋಷಕಾಂಶಗಳು ಈ ಕ್ಯಾನ್ಸರ್ ಗೆ ಕಾರಣವಾದ ಅಪಾಯಕಾರಿ ಜೀವಕೋಶಗಳನ್ನು ಬೆಳೆಯದಂತೆ ತಡೆಯುತ್ತದೆ. ಪರಿಣಾಮವಾಗಿ ಬಾಡಲಿ ಸುಕ್ಷಮವಾಗಿ ಕಾರ್ಯನಿರ್ವಹಿಸಿ ರಕ್ತಕ್ಕೆ ಅಗತ್ಯವಾದ ಪ್ರಮಾಣದಲ್ಲಿ ಇನ್ಸುಲಿನ್ ಅನ್ನು ಉತ್ಪಾದಿಸಿಕೊಡಲು ಸಾಧ್ಯವಾಗುತ್ತದೆ.

About the author / 

Chethan Mardalu

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜ್ಯೋತಿಷ್ಯ

    ಮನೆಯಲ್ಲಿ ಈ ಶಂಖ ಇದ್ದರೆ ಏನಾಗುತ್ತೆ ಗೊತ್ತಾ.!?

    ಶಂಖದ ಬಗ್ಗೆ ನೀವು ಸಾಕಷ್ಟು ತಿಳಿದಿರುತ್ತೀರಿ. ಪ್ರತಿಯೊಂದು ಶುಭ ಕಾರ್ಯದಲ್ಲೂ ಇದನ್ನು ಬಳಸ್ತಾರೆ. ದೇವರ ಪೂಜೆಯಿಂದ ಹಿಡಿದು ಮದುವೆ ಸಮಾರಂಭದಲ್ಲಿಯೂ ಶಂಖವನ್ನು ಶುಭವೆಂದು ಪರಿಗಣಿಸಲಾಗಿದೆ. ಈ ಶಂಖದಿಂದ ನೀವು ಇಚ್ಛಿಸಿದಷ್ಟು ಪ್ರೀತಿ ಜೊತೆಗೆ ಹಣ ಸಿಗಲಿದೆ ಎಂಬ ವಿಷ್ಯ ನಿಮಗೆ ಗೊತ್ತಾ? ತಾಯಿ ಲಕ್ಷ್ಮಿ ಕೈನಲ್ಲಿ ಹಿಡಿದಿರುವ ಶಂಖ ದಕ್ಷಿಣಾವರ್ತಿ. ಇದನ್ನು ಲಕ್ಷ್ಮಿ ಶಂಖವೆಂದೂ ಕರೆಯುತ್ತಾರೆ. ಇದು ಬಲಮುರಿ ಶಂಖವಾಗಿದೆ. ಸಾಮಾನ್ಯವಾಗಿ ಸಿಗುವ ಶಂಖಗಳು ಎಡಮುರಿ ಶಂಖಗಳಾಗಿರುತ್ತವೆ. ದಕ್ಷಿಣಾವರ್ತಿ ಶಂಖವನ್ನು ತಾಯಿ ಲಕ್ಷ್ಮಿ ಎದುರು ಕೆಂಪು ಬಟ್ಟೆಯಲ್ಲಿಟ್ಟು…

  • ಆರೋಗ್ಯ, ಉಪಯುಕ್ತ ಮಾಹಿತಿ

    ಪ್ರತೀ ದಿನವೂ ಒಂದು ಗ್ಲಾಸ್ ದಾಳಿಂಬೆ ಜ್ಯೂಸ್ ಕುಡಿಯೋದರಿಂದ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ?

    ಹಣ್ಣುಗಳು ಆರೋಗ್ಯ ಮತ್ತು ತ್ವಚೆಗೆ ಅಪಾರ ಪ್ರಯೋಜನಕಾರಿಯಾಗಿವೆ. ರೋಗ ನಿರೋಧಕ ಶಕ್ತಿಯನ್ನು ಪಡೆಯಬೇಕಾದರೆ ಪ್ರತಿಯೊಂದು ಋತುಕಾಲಿಕ ಹಣ್ಣುಗಳನ್ನು ತಿನ್ನಬೇಕು. ದಾಳಿಂಬೆ ಜ್ಯೂಸ್ ಕುಡಿಯೋದ್ರಿಂದ ಸಾಕಷ್ಟು ಆರೋಗ್ಯಕರ ಪ್ರಯೋಜನಗಳಿವೆ. ಕ್ಯಾನ್ಸರ್, ಹೃದಯ ರಕ್ತನಾಳದ ಖಾಯಿಲೆಗಳಿಂದಲೂ ರಕ್ಷಣೆ ಕೊಡುತ್ತೆ ಈ ಜ್ಯೂಸ್ ಎನ್ನುತ್ತೆ ಹೊಸ ಸಂಶೋಧನೆ. ಇತ್ತೀಚಿನ ಸಂಶೋಧನೆಯ ಪ್ರಕಾರ ದಾಳಿಂಬೆ ಜ್ಯೂಸ್ ಹೃದಯ ರಕ್ತನಾಳಗಳನ್ನು ಶುದ್ಧಗೊಳಿಸಿ ಖಾಯಿಲೆಗಳು ಬರದಂತೆ ನೋಡಿಕೊಳ್ಳುತ್ತದೆ. ಹೃದಯಾಘಾತಕ್ಕೆ ಮುಖ್ಯ ಕಾರಣವಾಗಿರೋ ಅಪಧಮನಿ ಹಾಗೂ ಅಬಿಧಮನಿ ಮುಚ್ಚಿಹೋಗುವ ಅಪಾಯವನ್ನೂ ಕೂಡ ದಾಳಿಂಬೆ ತಡೆಯುತ್ತದೆ. ಅಲ್ಲದೇ ದಾಳಿಂಬೆ…

  • ಸುದ್ದಿ

    ಯಾವ ತಪ್ಪು ಮಾಡದೇ ಇದ್ದರೂ 93ರ ವೃದ್ಧೆಯನ್ನ ಅರೆಸ್ಟ್ ಮಾಡಿ ಬಂಧಿಸಿದ ಪೊಲೀಸರು…ಕಾರಣ?

    ಯಾವುದೇ ತಪ್ಪು ಮಾಡದೇ ಇದ್ದರೂ ಕೂಡ ಗ್ರೇಟ್ ಮ್ಯಾಂಚೆಸ್ಟರ್ ಪೊಲೀಸರು 93 ವರ್ಷದ ವೃದ್ಧೆಯನ್ನು ಬಂಧಿಸಿದ್ದಾರೆ. ಇದಕ್ಕೆ ಕಾರಣವೇನು ಎಂದು ಗೊತ್ತಾದರೆ ನಿಜಕ್ಕೂ ವಿಚಿತ್ರ ಎನ್ನಿಸುತ್ತೆ. ಹೌದು. ಯುಕೆ ನಿವಾಸಿ ಜೋಸಿ ಬಡ್ರ್ಸ್(93) ಯಾವುದೇ ಅಪರಾಧ ಮಾಡದೇ ಇದ್ದರೂ ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ. ಇದಕ್ಕೆ ಕಾರಣ ಕೇಳಿ ಸ್ವತಃ ಅಲ್ಲಿ ಪೊಲೀಸ್ ಅಧಿಕಾರಿಗಳೇ ದಂಗಾಗಿದ್ದಾರೆ. ಈ ವೃದ್ಧೆ ಜೀವನದಲ್ಲಿ ಇದುವರೆಗೆ ಯಾವುದೇ ಕಹಿ ಅನುಭವವನ್ನು ಹೊಂದಿಲ್ಲವಂತೆ. ಹೀಗಾಗಿ ಆಕೆಯ ಜೀವನದಲ್ಲಿ ಒಂದಾದರೂ ಕಹಿ ಅನುಭವನ್ನು ಹೊಂದುವ ಆಸೆ…

  • ಸ್ಪೂರ್ತಿ

    ಫುಟ್ಪಾತ್ ಮೇಲೆ ಭಿಕ್ಷೆ ಬೇಡುತ್ತಿದ್ದ ಹುಡುಗನ ಇವತ್ತಿನ ಸಾಧನೆ ಬಗ್ಗೆ ನಿಮಗೆ ಗೊತ್ತಾ..?ತಿಳಿಯಲು ಈ ಲೇಖನ ಓದಿ…

    ಹಿಂದೊಂದು ದಿನ ಊಟ ಇಲ್ಲದೆ, ಮಲಗೋಕೆ ಜಾಗ ಇಲ್ಲದೆ ಚೆನ್ನೈನ ಫುಟ್ಪಾತ್ ಮೇಲೆ ಇದ್ದ ಈ ಹುಡುಗನ ಇವತ್ತಿನ ಸಾಧನೆ ಕೇಳಿದ್ರೆ ನೀವೆಲ್ಲ ಹುಬ್ಬೇರುಸ್ತೀರಾ. ಜೀವನ ಒಂದೇ ರೀತಿಯಲ್ಲಿ ಯಾವತ್ತೂ ಇರೋದಿಲ್ಲ ಅನ್ನೋದಕ್ಕೆ ಈ ಹುಡುಗನೇ ಸ್ಪಷ್ಟ ಉದಾಹರಣ..

  • God

    ಧರ್ಮಸ್ಥಳ ಮಂಜುನಾಥನನ್ನು ನೆನೆಯುತ್ತಾ ನಿಮ್ಮ ಇಂದಿನ ರಾಶಿ ಭವಿಷ್ಯ ಹೇಗಿದೆ ನೋಡಿರಿ

    ಮೇಷ ರಾಶಿ ಭವಿಷ್ಯ (Monday, November 22, 2021) ಮೇಷರಾಶಿಯಲ್ಲಿ ಹುಟ್ಟಿದವರಲ್ಲಿ ನಿಮ್ಮ ಅಸೂಯೆ ವರ್ತನೆ ನಿಮ್ಮನ್ನು ದುಃಖಿಗಳಾಗಿಯೂ ಮತ್ತು ಖಿನ್ನರಾಗಿಯೂ ಮಾಡಬಹುದು. ಆದರೆ ಇದು ಒಂದು ಸ್ವಯಂಕೃತ ಗಾಯವಾಗಿರುವುದರಿಂದ ಇದರ ಬಗ್ಗೆ ಪ್ರಲಾಪಿಸುವ ಅಗತ್ಯವಿಲ್ಲ. ಇತರರ ಸಂತೋಷ ಮತ್ತು ಅತೃಪ್ತಿಯನ್ನು ಹಂಚಿಕೊಳ್ಳುವ ಮೂಲಕ ಇದನ್ನು ತೊಡೆದುಹಾಕಲು ಪಣತೊಡಿ. ಹೆಚ್ಚುವರಿ ಹಣವನ್ನು ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಬೇಕು. ನೀವು ಕುಟುಂಬದ ಸದಸ್ಯರ ಜೊತೆ ಸ್ವಲ್ಪ ತೊಂದರೆ ಹೊಂದಿದ್ದರೂ ಇದು ನಿಮ್ಮ ಮನಶ್ಶಾಂತಿಯನ್ನು ಹಾಳು ಮಾಡಲು ಅವಕಾಶ ನೀಡಬೇಡಿ….

  • ಆಧ್ಯಾತ್ಮ

    ದಯವಿಟ್ಟು ಈ ಏಳು ವಸ್ತುಗಳನ್ನು ಶನಿವಾರದಂದು ಮನೆಗೆ ತರಬೇಡಿ!ಶಾಕ್ ಆಗ್ಬೇಡಿ?ಈ ಲೇಖನ ಓದಿ…

    ನಮ್ಮ ಭಾರತೀಯ ಮತ್ತು ಪಾಶ್ಚಾತ್ಯ ಹಸ್ತಸಾಮುದ್ರಿಕರ ಪ್ರಕಾರ ವ್ಯಕ್ತಿಯೊಬ್ಬರ ಜೀವನದ ಮೇಲೆ ಗ್ರಹಗಳ ಗತಿ ಹಾಗೂ ಸ್ಥಾನ ಅಪಾರವಾದ ಪ್ರಭಾವ ಬೀರುತ್ತವೆ. ಇದಕ್ಕೆ ಈ ಗ್ರಹಗಳ ಗುರುತ್ವಶಕ್ತಿ ಹಾಗೂ ಸೂಸುವ ವಿಕಿರಣದ ಅಲೆಗಳೇ ಕಾರಣ. ಈ ವಿಕಿರಣದ ಅಲೆಗಳು ಭಿನ್ನ ಬಣ್ಣಗಳು ಹಾಗೂ ಭಿನ್ನ ಅಂಗಗಳ ಮೇಲೆ ಭಿನ್ನವಾಗಿ ಪ್ರತಿಕ್ರಿಯಿಸುತ್ತವೆ.