ಆಧ್ಯಾತ್ಮ

ರುದ್ರಾಕ್ಷಿ ಧರಿಸುವುದರ ಹಿಂದಿದೆ ನಿಮಗೆ ಗೊತ್ತಿಲ್ಲದ ವೈಜ್ಞಾನಿಕ ಸತ್ಯ! ಹಾಗಾದ್ರೆ ರುದ್ರಾಕ್ಷಿ ಮಹತ್ವ ಏನು ಗೊತ್ತಾ???

6370

ಶಿವಪರಮಾತ್ಮನ ಉಪಾಸನೆಯಲ್ಲಿ ರುದ್ರಾಕ್ಷಕ್ಕೆ ಅತ್ಯಂತ ಪ್ರಮುಖ ಸ್ಥಾನ.”ರುದ್ರ” ಹಾಗೂ “ಅಕ್ಷ” ಈ ಎರಡು ಪದಗಳಿರುವ ಶಬ್ದ ರುದ್ರಾಕ್ಷ,ಅಂದರೆ ರುದ್ರನ ಕಣ್ಣು.”ರುದ್ರಸ್ಯ ಅಕ್ಷಿಃ ರುದ್ರಾಕ್ಷಃ”. ರುದ್ರಾಕ್ಷವೆಂಬುದು ಒಂದು ಮರ.ಆ ಮರದ ಬೀಜವೇ ರುದ್ರಾಕ್ಷಿ.ಶಿವ ಪುರಾಣ,ವಿದ್ಯೇಶ್ವರ ಸಂಹಿತಾ ಹಾಗೂ ಶ್ರೀ ದೇವೀಭಾಗವತಗಳಲ್ಲಿ ರುದ್ರಾಕ್ಷಕ್ಕೆ ಸಂಬಂಧಿಸಿದ ವಿಷಯಗಳಿವೆ.ಅನೇಕ ವರ್ಷಗಳ ಸತತ ಧ್ಯಾನದ ನಂತರ ಸದಾಶಿವ ತನ್ನ ಕಣ್ಣುಗಳನ್ನು ತೆರೆದ.ಆಗ ಕಣ್ಣುಗಳಿಂದ ಅಶ್ರು ಸುರಿಯಿತು.ಆ ಕಣ್ಣಿರಿನಿಂದಲೇ ಜನ್ಯವಾದದ್ದು ರುದ್ರಾಕ್ಷವೃಕ್ಷ ಎಂಬ ಪೌರಾಣಿಕ ಕಥೆಯಿದೆ.

ರುದ್ರಾಕ್ಷಿಯನ್ನು ಧರಿಸುವುದರಿಂದ ತನು-ಮನಗಳಲ್ಲಿ ಪವಿತ್ರತೆಯ ಸಂಚಾರವಾಗುತ್ತದೆ.ಪಾಪಗಳ ಸಮೂಹವನ್ನೇ ರುದ್ರಾಕ್ಷಿ ನಾಶಪಡಿಸುತ್ತದೆ.ಬಿಳಿ,ಕೆಂಪು,ಹಳದಿ ಹಾಗೂ ಕಪ್ಪುಬಣ್ಣಗಳಲ್ಲಿ ರುದ್ರಾಕ್ಷಿ ಸಿಗುತ್ತದೆ.ಋಷಿಗಳ ನಿರ್ದೇಶನದಂತೇ ಮನುಷ್ಯರು ತಮ್ಮ ದೇಹದ ಬಣ್ಣಗಳ ಪ್ರಕಾರ ರುದ್ರಾಕ್ಷಿಯನ್ನು ಧರಿಸಬೇಕು.ಸುಖ ಹಾಗೂ ಮೋಕ್ಷವನ್ನು ಬಯಸುವ ಜನರು ರುದ್ರಾಕ್ಷದ ಮಾಲೆಯನ್ನು ಧರಿಸಬೇಕು.ವಿಶೇಷವಾಗಿ ಶೈವ ಮತಾವಲಂಬಿಗಳು ತಪ್ಪದೇ ರುದ್ರಾಕ್ಷಮಾಲೆಯನ್ನು ಧರಿಸಬೇಲೇಬೇಕೆಂಬ ನಿಯಮವಿದೆ.

ಹಲವು ಮುಖ ಹಾಗೂ ಆಕಾರಗಳಲ್ಲಿ ರುದ್ರಾಕ್ಷಿ ಲಭ್ಯವಿದೆ.ಏಕಮುಖಿ ರುದ್ರಾಕ್ಷಿಯಲ್ಲಿ ಬಹಳ ಶಕ್ತಿಯಿರುತ್ತದೆಂದು ಹೇಳಲಾಗುತ್ತದೆ.ರುದ್ರಾಕ್ಷಿ ಚಿಕ್ಕದಿದ್ದಂತೆ ಅದರ ಶಕ್ತಿ ಉತ್ತರೋತ್ತರವಾಗಿ ವೃದ್ಧಿಯಾಗುತ್ತಿರುತ್ತದೆ.ದೊಡ್ಡ ರುದ್ರಾಕ್ಷಿಗಿಂತ ಚಿಕ್ಕ ರುದ್ರಾಕ್ಷಿಗೆ ಅಧಿಕಶಕ್ತಿಯಿರುತ್ತದೆ.ಆದರೂ ಎಲ್ಲ ರುದ್ರಾಕ್ಷಿಗಳಲ್ಲೂ ಶಿವಶಕ್ತಿ ಜಾಗೃತವಾಗಿರುತ್ತದೆ,ಸರ್ವಪಾಪಗಳನ್ನು ವಿನಾಶಮಾಡುವ ವಿಶೇಷ ಶಕ್ತಿಯಿರುತ್ತದೆ.ಸುಂದರವಾಗಿರುವ,ಅಖಂಡವಾಗಿರುವ ರುದ್ರಾಕ್ಷಿಯನ್ನು ಧರಿಸಬೇಕು.ತುಂಡಾಗಿರುವ,ಕೀಟದಿಂದ ಕಡಿಯಲ್ಪಟ್ಟಿರುವ,ಗಾಯಗಳಿಂದ ಕೂಡಿರುವ ರುದ್ರಾಕ್ಷಿಯನ್ನು ಧರಿಸಬಾರದು.

ರುದ್ರಾಕ್ಷಿ ಮಾಲೆಯನ್ನು ಧರಿಸುವುದರ ಹಿಂದೆ ಇವೆ ಹಲವು ವೈಜ್ಞಾನಿಕ ಕಾರಣಗಳು :-

ರುದ್ರಾಕ್ಷಿ ಮಾಲೆಯನ್ನು ಧರಿಸುವುದರಿಂದ ಕತ್ತಿನ ಭಾಗದಲ್ಲಿರುವ ನರಗಳು ದೃಢವಾಗಿರುತ್ತವೆ,ಇದು ಗಳಗಂಡ,ಕತ್ತುನೋವು ಮುಂತಾದ ರೋಗಗಳನ್ನು ತಡೆಯುತ್ತದೆ.ರುದ್ರಾಕ್ಷಿಗೆ ವಿಶೇಷವಾದ ಔಷಧೀಯ ಗುಣಗಳಿವೆ.ಸ್ನಾನವನ್ನು ಮಾಡುವಾಗ ರುದ್ರಾಕ್ಷಿಮಾಲೆಯ ನೀರು ಶರೀರದ ಮೇಲೆ ಬೀಳುವುದರಿಂದ ಅನೇಕ ಚರ್ಮರೋಗಗಳ ನಿಯಂತ್ರಣವಾಗುತ್ತದೆ. ಪ್ರಕೃತಿಯು ಮನುಷ್ಯನಿಗೆ ಕೊಟ್ಟ ಶ್ರೇಷ್ಟ ಉಡುಗೊರೆ ರುದ್ರಾಕ್ಷ. ಇಲ್ಲಿ ಓದಿ:-ಈ 5 ವಸ್ತುಗಳಿಂದ ಶಿವ ಲಿಂಗವನ್ನು ಪೂಜಿಸುವಂತಿಲ್ಲ!!!

ನಮ್ಮ ಅನೇಕ ಧರ್ಮಗ್ರಂಥಗಳಲ್ಲಿ ರುದ್ರಾಕ್ಷದ ಶ್ರೇಷ್ಟತೆಯನ್ನು ಪ್ರಶಂಸಿಸಲಾಗಿದೆ.ರುದ್ರಾಕ್ಷಿಮಾಲೆಯನ್ನು ಹಾಕಿಕೊಂಡು ದೇವಪೂಜೆ ಮಾಡಿದರೆ ಹರಿದ್ವಾರ,ಕಾಶೀ,ಗಂಗೆ ಮುಂತಾದ ಪುಣ್ಯತೀರ್ಥಗಳಲ್ಲಿ ಪೂಜೆ ಮಾಡಿದ ಫಲ ಸಿಗುತ್ತದೆ.ರುದ್ರಾಕ್ಷಿ ಮಾಲೆಯನ್ನು ಧರಿಸಿ ಮಂತ್ರೋಚ್ಚಾರಣೆ,ಜಪ ಮಾಡಿದರೆ ಫಲಪ್ರಾಪ್ತಿ ದ್ವಿಗುಣವಾಗುತ್ತದೆ.ರುದ್ರಾಕ್ಷಿಮಾಲೆಯನ್ನು ಧರಿಸಿದವರ ಶರೀರದಲ್ಲಿ ಸಕಾರಾತ್ಮಕ ಶಕ್ತಿ ಜಾಗೃತವಾಗುತ್ತದೆ.ಮನಸ್ಸಿನ ನಿಯಂತ್ರಣ ರುದ್ರಾಕ್ಷಿಮಾಲೆಯಿಂದ ಸಾಧ್ಯ.ರುದ್ರಾಕ್ಷಿಮಾಲೆಯಲ್ಲಿ ನೂರಾಎಂಟು ಅಥವಾ ಐವತ್ತನಾಲ್ಕು ರುದ್ರಾಕ್ಷಿಗಳಿದ್ದರೆ ಪರಿಣಾಮಕಾರಿ.

ರುದ್ರಾಕ್ಷಿಮಾಲೆಯನ್ನು ಧರಿಸಿ ಭಗವಾನ್ ಶಿವನ ಪೂಜೆ,ಜಪಗಳನ್ನಾಚರಿಸಿದರೆ ಶುಭವಾಗುತ್ತದೆ.ಬೇರೆ ಬೇರೆ ಮುಖಗಳಿರುವ ರುದ್ರಾಕ್ಷಿಮಾಲೆಯನ್ನು ಧರಿಸುವುದರಿಂದ ವಿಭಿನ್ನ ಇಚ್ಚೆಗಳು ನೆರವೇರುತ್ತವೆ.ರುದ್ರಾಕ್ಷಿಯನ್ನು ಧರಿಸಿದವರಿಗೆ ಶಿವಲೋಕ ಸಿಗುತ್ತದೆಂದು ಪದ್ಮಪುರಾಣ,ಶಿವಪುರಾಣಗಳಲ್ಲಿ ತಿಳಿಸಲಾಗಿದೆ.

ರುದ್ರಾಕ್ಷವನ್ನು ಧರಿಸುವ ಬಗೆ :-

ಭದ್ರಾಕ್ಷವೆಂಬುದು ರುದ್ರಾಕ್ಷದ ಇನ್ನೊಂದು ಜಾತಿ..ರುದ್ರಾಕ್ಷದ ಮಧ್ಯದಲ್ಲಿ ಭದ್ರಾಕ್ಷವನ್ನು ಧರಿಸಿದರೆ ಒಳಿತಾಗುತ್ತದೆ. ರುದ್ರಾಕ್ಷವನ್ನು ಧರಿಸುವ ಮುನ್ನ ಅದು ಅಸಲಿಯೋ,ನಕಲಿಯೋ ಎಂದು ಪರೀಕ್ಷಿಸಬೇಕು.ನೇಪಾಳ ಭಾಗದಲ್ಲಿ ಸಿಗುವ ರುದ್ರಾಕ್ಷ ಸಾಮಾನ್ಯವಾಗಿ ಅಸಲಿಯಾಗಿರುತ್ತದೆ.ಅಲ್ಲಿನ ಪಶುಪತಿನಾಥ ದೇವಾಲಯದಲ್ಲಿ ಹಲವು ವಿಧದ ಅಸಲಿ ರುದ್ರಾಕ್ಷಿ ಮಾಲೆಗಳು ಸಿಗುತ್ತವೆ.ತುಂಡಾಗಿರುವ,ಕೀಟಗಳು ತಿಂದಿರುವ ರುದ್ರಾಕ್ಷವನ್ನು ಧರಿಸಬಾರದು.ಜಪಾದಿ ಕರ್ಮಗಳಲ್ಲಿ ಚಿಕ್ಕರುದ್ರಾಕ್ಷಿಯಿರುವ ಮಾಲೆಗಳನ್ನು ಬಳಸಬೇಕು.

ಈ ನಂಬರಿನ ರುದ್ರಾಕ್ಷಿಗಳಿರುವ ಮಾಲೆಯನ್ನು ಧರಿಸಿದರೆ ಸಿಗುವ ಫಲಗಳು :- 

  • 108 ರುದ್ರಾಕ್ಷಿಗಳಿರುವ ಮಾಲೆಯನ್ನು ಧರಿಸಿದರೆ ಸಮಸ್ತ ಕಾರ್ಯಗಳಲ್ಲೂ ಯಶಸ್ಸು,ವಂಶವನ್ನು ಉದ್ಧಾರಮಾಡುವ ಸಾಮರ್ಥ್ಯ ಸಿಗುತ್ತದೆ. ಈ ಮಾಲೆಯನ್ನು ಮನೋಕಾಮನೆಗಳು ಈಡೇರಲು ಹಾಗೂ ಜಪ ತಪಾದಿ ಕಾರ್ಯಗಳಲ್ಲಿ ಧರಿಸುತ್ತಾರೆ.
  • 140 ರುದ್ರಾಕ್ಷಿಗಳಿರುವ ಸರವನ್ನು ಧರಿಸುವುದರಿಂದ ಸಾಹಸ,ಪರಾಕ್ರಮ ಹಾಗೂ ಉತ್ತಮ ಆರೋಗ್ಯ ಪ್ರಾಪ್ತಿಯಾಗುತ್ತದೆ. ದೀರ್ಘಾಯುಷ್ಯವನ್ನು ಬಯಸುವವರು ಈ ಮಾಲೆಯನ್ನು ಧರಿಸುತ್ತಾರೆ.
  • ಮೋಕ್ಷವನ್ನು ಬಯಸುವವರು 100 ರುದ್ರಾಕ್ಷಿಗಳುಳ್ಳ ಮಾಲೆ ಧರಿಸುತ್ತಾರೆ.
  • 50 ರುದ್ರಾಕ್ಷಿಗಳುಳ್ಳ ಮಾಲೆಯನ್ನು ಕಂಠದಲ್ಲಿ ಧರಿಸುವುದರಿಂದ ಶುಭಪ್ರಾಪ್ತಿಯಾಗುತ್ತದೆ.
  • ಧನಧಾನ್ಯಗಳನ್ನು ಬಯಸುವವರು 62 ರುದ್ರಾಕ್ಷಿಗಳಿರುವ ಮಾಲೆ ಧರಿಸುತ್ತಾರೆ.
  • 32 ರುದ್ರಾಕ್ಷಿಗಳಿರುವ ಮಾಲೆಯನ್ನು ಧರಿಸುವುದರಿಂದ ಧನಸಂಪತ್ತು ಹಾಗೂ ದೀರ್ಘಾಯುಷ್ಯ ಲಭಿಸುತ್ತದೆ.
  • 26 ರುದ್ರಾಕ್ಷಿಗಳಿರುವ ಮಾಲೆಯನ್ನು ತಲೆಯ ಮೇಲೆ ಧರಿಸುವುದರಿಂದ ಬುದ್ಧಿಶಕ್ತಿ ಹಾಗೂ ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ.
  • 15 ರುದ್ರಾಕ್ಷಿಗಳುಳ್ಳ ಮಾಲೆಯನ್ನು ಮಂತ್ರಸಿದ್ಧಿ ಹಾಗೂ ತಂತ್ರಸಿದ್ಧಿಕಾರ್ಯಗಳಿಗೆ ಬಳಸಲಾಗುತ್ತದೆ.
  • 12 ರುದ್ರಾಕ್ಷಿಗಳುಳ್ಳ ಮಾಲೆಯನ್ನು ಮಣಿಕಟ್ಟಿನಲ್ಲಿ ಧರಿಸುವುದರಿಂದ ವಿಘ್ನಗಳ ಪರಿಹಾರವಾಗುತ್ತದೆ.

26 ರುದ್ರಾಕ್ಶಿಗಳಿರುವ ಮಾಲೆ ಶಿರದಲ್ಲಿ,

50 ರುದ್ರಾಕ್ಷಿಗಳಿರುವ ಮಾಲೆ ಎದೆಯಲ್ಲಿ,

16  ರುದ್ರಾಕ್ಷಿಗಳಿರುವ ಮಾಲೆ ಭುಜದಲ್ಲಿ,

12 ರುದ್ರಾಕ್ಷಿಗಳಿರುವ ಮಾಲೆಯನ್ನು ಮಣಿಕಟ್ಟಿನಲ್ಲಿ ಧರಿಸಬೇಕೆಂದು ಪುರಾಣಗಳು ತಿಳಿಸುತ್ತವೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಬಾವನನ್ನು ಸ್ವಂತ ಮಾಡಿಕೊಳ್ಳಲು 7 ತಿಂಗಳ ಗರ್ಭಿಣಿ ಸೋದರಿಯನ್ನೇ ಕೊಂದ ತಂಗಿ …!

    19 ವರ್ಷದ ಸಹೋದರಿಯೊಬ್ಬಳು ತನ್ನ ಬಾವನನ್ನು ಮದುವೆಯಾಗಲು ಸ್ವಂತ ಅಕ್ಕನನ್ನೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಮಧ್ಯಪ್ರದೇಶದ ಜಬಲ್ಪುರದಲ್ಲಿ ನಡೆದಿದೆ. ಅಭಿಲಾಷಾ ಕೊಲೆಯಾದ ಸಹೋದರಿ. ಈ ಘಟನೆ ಜಬಲ್ಪುರದ ಕೈಥಾಲಾದಲ್ಲಿ ನಡೆದಿದೆ. ಆರೋಪಿ ಸಾಕ್ಷಿ ಅಕ್ಕನ ಪತಿಯನ್ನು ವಿವಾಹವಾಗಲು 7 ತಿಂಗಳ ಗರ್ಭಿಣಿಯಾಗಿದ್ದ ತನ್ನ ಸೋದರಿಯನ್ನು ಅನೇಕ ಬಾರಿ ಚಾಕುವಿನಿಂದ ಇರಿದು ಅಮಾನವೀಯವಾಗಿ ಹತ್ಯೆ ಮಾಡಿದ್ದಾಳೆ ಎಂದು ಪೊಲಿಸರು ತಿಳಿಸಿದ್ದಾರೆ. ಬಾತ್‍ರೂಮಿನಲ್ಲಿ ಗರ್ಭಿಣಿ ಮಹಿಳೆಯ ಶವ ಪತ್ತೆಯಾಗಿದ್ದು, ಕತ್ತು, ಹೊಟ್ಟೆ ಭಾಗದಲ್ಲಿ ಇರಿದ ಗಾಯಗಳು ಕಂಡುಬಂದಿದೆ….

  • ಸುದ್ದಿ

    ಪ್ರಧಾನಿ ನರೇಂದ್ರ ಮೋದಿಯವರ ಮುಂದೆಯೇ ಮಹಿಳಾ ಸಹೋದ್ಯೋಗಿಯ ಸೊಂಟಕ್ಕೆ ಕೈಹಾಕಿದ ಮಿನಿಸ್ಟರ್..!ಈ ವೈರಲ್ ವಿಡಿಯೋ ನೋಡಿ…

    ಸಚಿವರೊಬ್ಬರು ಪ್ರಧಾನಿ ನರೇಂದ್ರ ಮೋದಿಯವರ ಸಮ್ಮುಖದಲ್ಲೇ ಮಹಿಳಾ ಸಹೋದ್ಯೋಗಿಯೊಬ್ಬರ ಸೊಂಟಕ್ಕೆ ಕೈ ಹಾಕಿ ಅನುಚಿತವಾಗಿ ವರ್ತಿಸಿರುವ ಶಾಕಿಂಗ್ ಘಟನೆ ಅಗರ್ತಾಲದಲ್ಲಿ ನಡೆದಿದ್ದು, ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ತ್ರಿಪುರಾದ ಆಹಾರ ಮತ್ತು ನಾಗರಿಕ ಪೂರೈಕೆ ಸರಬರಾಜು ಸಚಿವ ಮನೋಜ್ ಕಾಂತಿ ದೇಬ್ ಇಂತಹ ಗುರುತರ ಆರೋಪಕ್ಕೆ ಒಳಗಾಗಿದ್ದು, ಶನಿವಾರದಂದು ಅಗರ್ತಾಲದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮವೊಂದರ ವೇಳೆ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟನೆ ನೆರವೇರಿಸಿದ ಸಂದರ್ಭದಲ್ಲಿ ಸಚಿವ ಮನೋಜ್ ಕಾಂತಿ…

  • ಉದ್ಯೋಗ

    ಸಾಫ್ಟ್ ವೇರ್ ಉದ್ಯೋಗಿಗಳಲ್ಲಿ ಕವಿದ ಆತಂಕದ ಕಾರ್ಮೋಡ!!!

    ಆತ ಸಾಫ್ಟವೇರ್ ಟೆಕ್ಕಿ. ಒಳ್ಳೆಯ ಪ್ಯಾಕೇಜ್‌ನ ಸಂಬಳ. ಪ್ರತಿಷ್ಠಿತ ಶಾಲೆಯಲ್ಲಿ ಓದುವ ಇಬ್ಬರು ಮುದ್ದಾದ ಮಕ್ಕಳ ಸಂಸಾರ. ಸಕಲ ಆಧುನಿಕ ಸೌಲಭ್ಯಗಳಿರುವ ಅಪಾರ್ಟ್‌ಮೆಂಟ್‌ನಲ್ಲಿ ಬ್ಯಾಂಕ್ ಸಾಲದಿಂದ ಖರೀದಿಸಿದ ಮೂರು ಬೆಡ್ ರೂಮ್‌ನ ಐಷಾರಾಮಿ ಫ್ಲ್ಯಾಟ್. ಸದಾ ಚಟುವಟಿಕೆಯಿಂದ, ನಗುವಿನಿಂದ ತುಂಬಿರುತ್ತಿದ್ದ ಮನೆಯಲ್ಲಿ ಇತ್ತೀಚೆಗೆ ಸ್ವಲ್ಪ ಆತಂಕ ಕಾಣುತ್ತಿದೆ. ಮಕ್ಕಳ ವಿದ್ಯಾಭ್ಯಾಸ, 30-40 ಲಕ್ಷದಷ್ಟಿರುವ ಗೃಹಸಾಲ ಅವನನ್ನು ಅಣಕಿಸುತ್ತಿವೆ. ಸಹೋದ್ಯೋಗಿಗಳು ಬಿಟ್ಟು ಹೋದ ತಿರುಗುವ ಕುರ್ಚಿಗಳು ಅವನನ್ನು ಬೆವರಿಸುತ್ತವೆ. ತನ್ನ ಕುರ್ಚಿಯೂ ಹೀಗೆ ಬರಿದಾಗಬಹುದೇನೋ ಎನ್ನುವ ಅವ್ಯಕ್ತ ಭಯ ಅವನನ್ನು ಕಾಡಲು ಶುರು ಮಾಡಿದೆ. ಸಂಜೆ ಆಫೀಸು ಮುಗಿಯುವಾಗ ಬರುವ ಇ ಮೇಲ್ ತೆರೆಯುವಾಗ ಕೈ ನಡುಗುತ್ತದೆ. ಹಾಗೆಯೇ ಮುಂಜಾನೆ ಆಫೀಸಿನಲ್ಲಿ ಲಾಗ್ ಇನ್ ಮಾಡುವಾಗ ಎಸಿ ಕ್ಯಾಬಿನ್‌ನಲ್ಲಿಯೂ ಬೆವರುತ್ತಾನೆ.

  • ವಿಸ್ಮಯ ಜಗತ್ತು

    ದಿನಕ್ಕೆ ಎರಡು ಮೂರು ಬಾರಿ ಹಾವುಗಳು ಕಚ್ಚಿದ್ರೂ ಸಹ, ಈ ಯುವತಿಗೆ ಏನೂ ಹಾಗಿಲ್ಲ..!ಇಲ್ಲಿವರೆಗೂ ಈಕೆ ಎಷ್ಟು ಬಾರಿ ಹಾವುಗಳಿಂದ ಕಚ್ಚಿಸಿಕೊಂಡಿದ್ದಾಳೆ ಗೊತ್ತಾ..?

    ಒಂದು ಬಾರಿ ಹಾವು ಕಚ್ಚಿದರೂ ಪರಂಧಾಮ ಸೇರುವವರ ಮಧ್ಯೆ ಇಲ್ಲೊಬ್ಬಾಕೆ ಯುವತಿ 34 ಬಾರಿ ಹಾವಿನಿಂದ ಕಚ್ಚಿಸಿಕೊಂಡೂ ಬದುಕುಳಿದಿದ್ದಾಳೆ. ಈಕೆಯನ್ನು ಕೊಲ್ಲಬೇಕು ಎಂದು ಅದೆಷ್ಟೋ ವಿಷಜಂತುಗಳು ಪ್ರಯತ್ನ ಪಟ್ಟರೂ ವಿಷಕಂಠನಂತೆ ಈಕೆ ವಿಷವೇರಿಸಿಕೊಂಡಳೇ ಹೊರತು ಸಾವನ್ನಪ್ಪಿಲ್ಲ.

  • ಜೀವನಶೈಲಿ

    ನೀವು ಮಧ್ಯಾಹ್ನ ನಿದ್ದೆ ಮಾಡ್ತೀರಾ..!ಹಾಗಾದ್ರೆ ನಿಮ್ಗೆ ಇಲ್ಲಿದೆ ನೋಡಿ ಸಖತ್ ಸುದ್ದಿ…

    ಮಧ್ಯಾಹ್ನ ನಿದ್ದೆ ಮಾಡುವವರನ್ನು ಸಾಮಾನ್ಯವಾಗಿ ಸೋಮಾರಿಗಳು ಎಂದು ಹೇಳುತ್ತೇವೆ.ಸಾಮಾನ್ಯವಾಗಿ ಮಧ್ಯಾಹ್ನ ಊಟ ಮಾಡಿದ ಕೂಡಲೇ ಏನು ಕೆಲಸ ಮಾಡದೇ ಕುಳಿತರೆ ನಿದ್ದೆ ಬರುಹುದು ಸಹಜ.ಆದರೆ ಮುಂದುವರೆಯುತ್ತಿರುವ ಈ ಪ್ರಪಂಚದಲ್ಲಿ ನಮ್ಮ ಜನಕ್ಕೆ ಮಧ್ಯಾಹ್ನ ಅಲ್ಲ ರಾತ್ರಿ ಕೂಡ ನಿದ್ದೆ ಮಾಡಲು

  • inspirational

    ವಿಶ್ವದ ಎಲ್ಲಾ ಆಗುಹೋಗುಗಳ ಜೊತೆ ಅವುಗಳ ಬಗೆಗಿನ ವಿಮರ್ಶಾತ್ಮಕ ದೃಷ್ಟಿಕೋನವನ್ನು ನೀಡುತ್ತಿದ್ದರು

    ಒಂದು ಕಾಲದಲ್ಲಿ ಮಾಧ್ಯಮ ಎಂದರೆ ಜ್ಞಾನದ ಕಣಜ ಎಂದೇ ಕರೆಯಲಾಗುತ್ತಿತ್ತು. ವಿಶ್ವದ ಎಲ್ಲಾ ಆಗುಹೋಗುಗಳ ಜೊತೆ ಅವುಗಳ ಬಗೆಗಿನ ವಿಮರ್ಶಾತ್ಮಕ ದೃಷ್ಟಿಕೋನವನ್ನು ನೀಡುತ್ತಿದ್ದರು.