ವಿಚಿತ್ರ ಆದರೂ ಸತ್ಯ

ಹೆಂಡ್ತಿ ಮಾತು ಕೇಳಿ, ಇಲ್ಲಂದ್ರೆ ನಿಮಗೆ, ನಿಮ್ಮ ಗಡ್ಡಕ್ಕೆ ಅನಾಹುತ ತಪ್ಪಿದ್ದಲ್ಲ !!!

259
ಇದು ನಿಮಗೆ ತಮಾಷೆ ಅನ್ನಿಸಬಹುದು, ಏನಪ್ಪಾ ಆ ತಮಾಷೆ ಅಂತಿರಾ. ಹೌದು, ಉತ್ತರಪ್ರದೇಶದ ಅಲಿಘಡ್ ಎಂಬಲ್ಲಿ ಈ ತಮಾಷೆ ನಡೆದಿದೆ. ಗಡ್ಡ ಶೇವ್ ಮಾಡಲು ನಿರಾಕರಿಸಿದ ಕಾರಣಕ್ಕೆ ತೀವ್ರವಾಗಿ ಕೆಂಡಾಮಂಡಲಗೊಂಡ ಪತ್ನಿಯೊಬ್ಬಳು ತನ್ನ ಪತಿ ಮೇಲೆ ಬಿಸಿ ನೀರು ಸುರಿದಿರುವ ಘಟನೆ ಅದು.
ಎಲ್ಲಿ,ಹೇಗೆ ಅಂತ ಮುಂದೆ ಓದಿ :- 
ಉತ್ತರಪ್ರದೇಶದ ಅಲಿಘಡ್ ಎಂಬಲ್ಲಿ ಈ ಘಟನೆ ನಡೆದಿದ್ದು, ಸಲ್ಮಾನ್ ಎಂಬುವರು ಶೋಷಣೆಗೊಳಗಾದ  ವ್ಯಕ್ತಿಯಾಗಿದ್ದಾರೆ.

ಸಲ್ಮಾನ್ ಅವರ ಪತ್ನಿ ,ನಗ್ಮಾ ಬಿಸಿನೀರು ಹಾಕಿದ ಪತ್ನಿಯಾಗಿದ್ದಾಳೆ. ಧಾರ್ಮಿಕ ನಂಬಿಕೆ ಹಿನ್ನಲೆಯಲ್ಲಿ ಸಲ್ಮಾನ್ ಗಡ್ಡವನ್ನು ಶೇವ್ ಮಾಡಲು ನಿರಾಕರಿಸಿದ್ದಾನೆ. ಈ ವಿಚಾರ ಸಂಬಂಧ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಇದರಿಂದ ಕುಪಿತಗೊಂಡ ಪತಿಯ ಮೇಲೆ ನಗ್ಮಾ ಇದ್ದಕ್ಕಿದ್ದಂತೆಯೇ ಬಿಸಿ ನೀರು ತಂದು ಸಲ್ಮಾನ್ ಮೇಲೆ ಸುರಿದಿದ್ದಾಳೆ.

ಸಲ್ಮಾನ್ ಹಾಗೂ ನಗ್ಮಾ ಮದುವೆಯಾಗಿ 6 ತಿಂಗಳಾಗಿದೆ. ಸಲ್ಮಾನ್ ಡ್ರೆಸ್ಸಿಂಗ್ ಸ್ಟೈಲ್ ಬಗ್ಗೆ ನಗ್ಮಾಗೆ ಅಸಮಾಧಾನವಿದ್ದು, ಇಬ್ಬರ ನಡುವೆ ಈ ಬಗ್ಗೆ ಸಾಕಷ್ಟು ಜಗಳಗಳಾಗಿವೆ.
ಮಾಡೆಲ್ ಗಳ ರೀತಿ ಡ್ರೆಸ್ ಸೆನ್ಸ್ ಹಾಗೂ ಅವರ ರೀತಿ ಸ್ಟೈಲಿಶ್ ಆಗಿ ಇರುವಂತೆ ಪ್ರತೀನಿತ್ಯ ಗಂಡನಿಗೆ ಬಲವಂತೆ ಮಾಡಿದ್ದಾಳೆ. ಇದಕ್ಕೆ ಸಲ್ಮಾನ್ ನಿರಾಕರಿಸಿದ್ದಾನೆ. ಈ ಹಿನ್ನಲೆಯಲ್ಲಿ ಗಂಡನ ಮೇಲೆ ಬಿಸಿ ನೀರು ಸುರಿದಿದ್ದಾಳೆಂದು ಪೊಲೀಸರು ಹೇಳಿದ್ದಾರೆ.

ಡ್ರೆಸ್ ಸೆನ್ಸ್ ಹಾಗೂ ಸ್ಟೈಲಿಶ್ ಆಗಿರುವಂತೆ ಪ್ರತಿನಿತ್ಯ ನನ್ನ ಪತ್ನಿ ಬಲವಂತ ಮಾಡುತ್ತಿದ್ದಳು. ಇದಕ್ಕೆ ನಿರಾಕರಿಸಿದ್ದಕ್ಕೆ ಬಿಸಿ ನೀರು ಸುರಿದಳು. ನನ್ನ ಕಿರುಚಾಟ ಕೇಳಿ ಸ್ಥಳೀಯರು ಬಂದು ನನ್ನನ್ನು ಆಸ್ಪತ್ರೆಗೆ ದಾಖಲಿಸಿದರು ಎಂದು ಶೋಷಣೆಗೊಳಗಾದ ಸಲ್ಮಾನ್ ಹೇಳಿದ್ದಾರೆ.

ಇದೀಗ ಮನನೊಂದಿರುವ ಸಲ್ಮಾನ್ ತನ್ನ ಪತ್ನಿಯ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯ ಮಾಡಿದ್ದು ನ್ಯಾಯಕ್ಕಾಗಿ ಆಗ್ರಹಿಸಿದ್ದಾನೆ.

ಅದಕ್ಕೆ ಹೇಳ್ತೀವಿ ಕೆಲವೊಂದು ಹೆಂಡತಿ ಮಾತುಗಳನ್ನು ಕೇಳಿ, ಕೇಳ್ತೀರಾ ಆಲ್ವಾ. ಕೇಳಿಲ್ಲ ಅಂದ್ರೆ ಗೊತ್ತಲ್ವ ಏನಾಗುತ್ತೆ ಅಂತ……

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಆರೋಗ್ಯ

    ಇಲ್ಲಿವೆ ಮೊಡವೆಯ ಸಮಸ್ಯೆಯನ್ನು ಮಾಯ ಮಾಡೋ ಮನೆಮದ್ದುಗಳು..!ತಿಳಿಯಲು ಈ ಲೇಖನ ಓದಿ…

    ಸಾಮಾನ್ಯವಾಗಿ ಎಲ್ಲರ ಸೌಂದರ್ಯ ಹಾಳಾಗುವುದು ಮೊಡವೆಗಳಿಂದಲೇ. ಹದಿಹರೆಯದಲ್ಲಿ ಸಾಮಾನ್ಯವಾದ ಮೊಡವೆ ಅಳಿದರೂ ಕಲೆಗಳನ್ನು ಉಳಿಸುತ್ತದೆ. ಕೆಲವರಿಗಂತೂ ಎಷ್ಟೇ ವಯಸ್ಸಾದರೂ ಇವು ಬಿಟ್ಟು ಹೋಗುವ ಮಾತನ್ನೇ ಆಡುವುದಿಲ್ಲ.

  • ಸುದ್ದಿ

    ಆಕಾಶದಿಂದ ಪಾತಾಳಕ್ಕೆ ಇಳಿದ ಈರುಳ್ಳಿ, ಕೇಜಿಗೆ ಈರುಳ್ಳಿ 25 ರೂಪಾಯಿ.!

    ಗಗನ ಸೀಳಿ ಬ್ರಹ್ಮಾಂಡ ತಲುಪಿದ್ದ ಈರುಳ್ಳಿ ಬೆಲೆ ಇದೀಗ ನಿಧಾನವಾಗಿ ಇಳಿಕೆಯತ್ತ ಮುಖ ಮಾಡಿದೆ. ದೇಶದ ವಿವಿಧೆಡೆ 200 ರೂ. ಗಡಿ ದಾಟಿದ್ದ ಈರುಳ್ಳಿ ಬೆಲೆ ಇದೀಗ 170 ರೂ. ಆಸುಪಾಸಿನಲ್ಲಿ ಮಾರಾಟವಾಗುತ್ತಿದೆ. ಆದರೆ ನೆರೆಯ ಆಂಧ್ರಪ್ರದೇಶದಲ್ಲಿ ಒಂದು ಕೆಜಿ ಈರುಳ್ಳಿ ಬೆಲೆ ಕೇವಲ 25 ರೂ. ಅಂದರೆ ನಿಮಗೆ ಅಚ್ಚರಿಯಾದಿತು. ಹೌದು, ಆಂಧ್ರ ಸರ್ಕಾರ ಈರುಳ್ಳಿಗೆ ಸಬ್ಸಿಡಿ ಘೋಷಣೆ ಮಾಡಿದ್ದು, ಕೆಜಿ ಈರುಳ್ಳಿ ಬೆಲೆ ಕೇವಲ 25 ರೂ. ಆಗಿದೆ. ರಾಜ್ಯದ ರೈತು ಬಜಾರ್‌ಗಳಲ್ಲಿ ಒಂದು…

  • ಜ್ಯೋತಿಷ್ಯ

    ದಿನ ಭವಿಷ್ಯ ಗುರುವಾರ, ಈ ದಿನದ ರಾಶಿ ಭವಿಷ್ಯದ ಜೊತೆಗೆ ನಿಮ್ಮ ಅದೃಷ್ಟದ ಸಂಖ್ಯೆ ತಿಳಿಯಿರಿ

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(14 ಫೆಬ್ರವರಿ, 2019) ನಿಮ್ಮ ಕುಟುಂಬದ ಜೊತೆ ಕಟ್ಟುನಿಟ್ಟಾಗಿ ವರ್ತಿಸಬೇಡಿ ಇದು ಶಾಂತಿ ಭಂಗವುಂಟುಮಾಡಬಹುದು. ಇಂದು ನೀವು…

  • ಸಿನಿಮಾ

    ಮತದಾನ ಮಾಡದ ಸಿಟಿ ಮಂದಿಗೆ ಬೆಂಡೆತ್ತಿದ ಜಗ್ಗೇಶ್ ಆಕ್ರೋಶದಿಂದ ಹೇಳಿದ್ದೇನು ಗೊತ್ತಾ..?

    ಮತ ಹಾಕದ ಸಿಲಿಕಾನ್ ಸಿಟಿ ಮಂದಿ ಪ್ರಜ್ಞಾವಂತ ಮುಖವಾಡದ ನಿಷ್ಪ್ರಯೋಜಕ ನತದೃಷ್ಟರು. ಅವರು ಬದುಕಿರುವ ಶವಗಳು ಎಂದು ನವರಸ ನಾಯಕ ಜಗ್ಗೇಶ್ ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ಗುರುವಾರದಂದು 2019ರ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ನಡೆದಿದೆ. ಮತದಾನ ಮಾಡಲು ಹಳ್ಳಿಗರು, ಅನಕ್ಷರಸ್ಥರು, ವೃದ್ಧರು, ಅಂಗವಿಕಲರು, ತುಂಬು ಗರ್ಭಿಣಿಯರು ಕೂಡ ಉತ್ಸಾಹದಿಂದ ಮತಗಟ್ಟೆಗೆ ಬಂದು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಆದ್ರೆ ಹೆಚ್ಚು ಪ್ರಜ್ಞಾವಂತರಿರುವ ಗಾರ್ಡನ್ ಸಿಟಿಯಲ್ಲಿಯೇ ಅತೀ ಕಡಿಮೆ ಪ್ರಮಾಣದಲ್ಲಿ ಮತದಾನವಾಗಿದೆ. ಬೆಂಗಳೂರು ದಕ್ಷಿಣದಲ್ಲಿ 53.47%…

  • inspirational, ಸುದ್ದಿ

    ಪ್ರಕಟವಾಯ್ತು SSLC ಫಲಿತಾಂಶ..ರಾಜ್ಯಕ್ಕೆ ಇವರೇ ಪ್ರಥಮ…ನಿಮ್ಮ ಜಿಲ್ಲೆ ಯಾವ ಸ್ಥಾನದಲ್ಲಿದೆ ನೋಡಿ…

    ಈ ಬಾರಿಯ ಎಸ್‍ಎಸ್‍ಎಲ್ ಸಿ ಫಲಿತಾಂಶದಲ್ಲಿ ಹಾಸನ ಮೊದಲ ಸ್ಥಾನ ಪಡೆದಿದ್ದು, ಈ ಮೂಲಕ ಜಿಲ್ಲೆ ಹೊಸ ದಾಖಲೆ ಬರೆದಿದೆ. ಹೌದು. ಫಲಿತಾಂಶದಲ್ಲಿ ಅರೆ ಮಲೆನಾಡು ರಾಜ್ಯದಲ್ಲೇ ನಂಬರ್ 1 ಸ್ಥಾನ ಪಡೆದಿದೆ. ಕಳೆದ ವರ್ಷ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ 7ನೇ ಸ್ಥಾನದಲ್ಲಿತ್ತು. ಆದರೆ ಈ ಬಾರಿ ಮೊದಲ ಸ್ಥಾನಕ್ಕೆ ಜಿಗಿದಿದೆ. ಈ ಮೂಲಕ ಹಾಸನ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳನ್ನು ಹಿಂದಿಕ್ಕಿದೆ. ಹಾಸನ ಪ್ರಥಮ ಸ್ಥಾನದ ಜೊತೆಗೆ ಹಾಸನದ ಇಬ್ಬರು ವಿದ್ಯಾರ್ಥಿಗಳು…