ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಸುಂದರವಾಗಿ ಕಾಣಲು ಎಲ್ಲರು ಇಷ್ಟಪಡ್ತಾರೆ. ಅದಕ್ಕಾಗಿ ಎಲ್ಲರೂ ಒಂದಲ್ಲಾ ಒಂದು ಟಿಪ್ಸ್ ಫಾಲೋ ಮಾಡ್ತಾರೆ. ಆದರೆ ಸರಿಯಾದ ಜ್ಞಾನವಿಲ್ಲದೇ ಜನರು ಈ 5 ಟಿಪ್ಸ್ ಅನ್ನು ನಂಬಿ ಇದನ್ನು ಅನುಸರಿಸುತ್ತಾರೆ. ಆದರೆ ಈ 5 ಟಿಪ್ಸ್ ಈಗ ಶುದ್ಧ ಸುಳ್ಳು ಎಂದು ತಿಳಿದುಬಂದಿದೆ.

1.ನಿಮ್ಮಸ್ಕಿನ್ ನನ್ನು ನಿಂಬೆಹಣ್ಣಿನಿಂದ ಉಜ್ಜುವುದು: ಜನರು ಪಿಂಪಲ್ ಫ್ರೀ ತ್ವಚೆ ಪಡೆಯಲು ನಿಂಬೆಹಣ್ಣಿನಿಂದ ಸ್ಕ್ರಬ್ಬಿಂಗ್ ಮಾಡಿಕೊಳ್ಳುತ್ತಾರೆ. ಆದರೆ ಈ ರೀತಿ ಮಾಡುವುದರಿಂದ ನಿಮ್ಮ ತ್ವಚೆಗೆ ಹಾನಿಯಾಗುತ್ತದೆ. ಏಕೆಂದರೆ ನಿಂಬೆಹಣ್ಣಿನಲ್ಲಿ ಸಿಟ್ರಿಕ್ ಆ್ಯಸಿಡ್ ಇರುತ್ತದೆ. ಹಾಗಾಗಿ ಅದನ್ನು ತ್ವಜೆ ಮೇಲೆ ನೇರವಾಗಿ ಉಜ್ಜುವುದು ಒಳ್ಳೆಯದಲ್ಲ. ನಿಂಬೆಹಣ್ಣನ್ನು ನೇರವಾಗಿ ಸ್ಕೀನ್ಗೆ ಉಜ್ಜುವುದರ ಬದಲು ಅದನ್ನು ಗ್ಲಿಸರಿನ್ ಅಥವಾ ಫೇಸ್ಪ್ಯಾಕ್ನಲ್ಲಿ ಮಿಕ್ಸ್ ಮಾಡಿ ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ.

2. ಪದೇ ಪದೇ ನೀರಿನಿಂದ ಮುಖ ತೊಳೆದರೆ ಮೊಡವೆ ಮಾಯ: ಪದೇ ಪದೇ ನೀರಿನಿಂದ ಮುಖ ತೊಳೆದರೆ ಮೊಡವೆಗಳು ಮಾಯವಾಗುತ್ತದೆ ಎಂದು ತುಂಬಾ ಜನ ನಂಬುತ್ತಾರೆ. ಆದರೆ ಇದು ಶುದ್ಧ ಸುಳ್ಳು. ಪದೇ ಪದೇ ನೀರಿನಿಂದ ಮುಖ ತೊಳೆದರೆ ನಿಮ್ಮ ಸ್ಕಿನ್ಗೆ ಬೇಕಾದ ಆಯಿಲ್ ಕಡಿಮೆ ಆಗುತ್ತದೆ. ಇದರಿಂದ ನಿಮ್ಮ ಸ್ಕೀನ್ ಡ್ರೈ ಆಗಿ ಮೊಡವೆ ಜಾಸ್ತಿಯಾಗುವ ರೀತಿ ಮಾಡುತ್ತದೆ. ಹೀಗಾಗಿ ದಿನಕ್ಕೆ 2 ಅಥವಾ 3 ಬಾರಿ ಮಾತ್ರ ಫೇಸ್ ವಾಶ್ ಮಾಡಬೇಕು.

3. ಸ್ಕ್ರಬ್ ಹಾಗೂ ಫೇಶಿಯಲ್ನಿಂದ ಪಿಂಪಲ್ ಫ್ರೀ: ಸ್ಕ್ರಬ್, ಕ್ಲೀನಿಂಗ್ ಹಾಗೂ ಫೇಶಿಯಲ್ ಮಾಡುವುದರಿಂದ ಪಿಂಪಲ್ ಕಡಿಮೆಯಾಗುತ್ತದೆ ಎಂದು ಎಲ್ಲರು ನಂಬುತ್ತಾರೆ. ಆದರೆ ಇದರಿಂದ ನಿಮ್ಮ ಹಣ ಮಾತ್ರ ವ್ಯರ್ಥ ಆಗುವುದು ಹೊರತು ಪಿಂಪಲ್ ದೂರವಾಗುವುದಿಲ್ಲ. ಈ ರೀತಿ ಮಾಡುವುದರಿಂದ ನಿಮ್ಮ ತ್ವಚೆಯ ಪೋರ್ ಓಪನ್ ಆಗಿ ನಿಮ್ಮ ಸ್ಕೀನ್ ಅನ್ನು ಸೆನ್ಸಿಟಿವ್ ಮಾಡುತ್ತದೆ. ಅಲ್ಲದೇ ಇದರಿಂದ ನಿಮ್ಮ ಮುಖದ ಮೇಲೆ ಇನ್ನಷ್ಟೂ ಪಿಂಪಲ್ ಜಾಸ್ತಿ ಮಾಡುತ್ತದೆ.

4. ಫೇರ್ ನೆಸ್ ಕ್ರೀಂ ಬೆಳ್ಳಗೆ ಮಾಡುತ್ತದೆ: ಫೇರ್ ನೆಸ್ ಕ್ರೀಂ ನಿಮ್ಮ ಮುಖವನ್ನು ಹೊಳೆಯುವಂತೆ ಮಾಡುತ್ತದೆ ಎಂದು ಅಂದುಕೊಂಡಿದ್ದಾರೆ. ಆದರೆ ಈ ಕ್ರೀಂಗಳು ಹಾಗೇ ಮಾಡುವುದಿಲ್ಲ. ಕಂಪೆನಿಗಳು ತಮ್ಮ ಪ್ರಾಡೆಕ್ಟ್ ಗಳನ್ನು ಮಾರಾಟ ಮಾಡಲು ಈ ರೀತಿಯ ಐಡಿಯಾ ಉಪಯೋಗಿಸುತ್ತಾರೆ. ಈ ಕ್ರೀಂಗಳನ್ನು ಉಪಯೋಗಿಸಿದ್ದರೆ ಅದು ನಿಮ್ಮ ತ್ವಚೆಯ ಫಿಗ್ಮೆಂಟೇಶನ್ನನ್ನು ತೆಗೆಯುತ್ತದೆ. ಹಾಗಾಗಿ ಕ್ರೀಂಗಳ ಬದಲು ನಿಮ್ಮ ಬಗ್ಗೆ ನೀವು ವಿಶ್ವಾಸವನ್ನು ಹೊಂದಿರಿ.

5. ಕ್ಲೌಡಿ ಡೇ ದಿನ ಸನ್ಸ್ಕ್ರೀನ್ ಬಳಸಬಾರದು: ಸನ್ ಸ್ಕ್ರೀನ್ ಉಪಯೋಗಿಸುವುದರಿಂದ ಅದು ನಮ್ಮನ್ನು ಅಲ್ಟ್ರಾವೈಲೆಟ್ ಕಿರಣಗಳಿಂದ ಕಾಪಾಡುತ್ತದೆ. ಬಿಸಿಲು ಇದ್ದಾಗ ಮಾತ್ರ ಜನರು ಸನ್ ಸ್ಕ್ರೀನ್ ಉಪಯೋಗಿಸುತ್ತಾರೆ. ಮೋಡ ಕವಿದ ದಿನವೂ ಕೂಡ ಸೂರ್ಯನ ಕಿರಣವೂ ನಮ್ಮ ಮೇಲೆ ಸುಲಭವಾಗಿ ಬೀಳುತ್ತದೆ. ಹಾಗಾಗಿ ನೀವು ದಿನವೂ ಸನ್ ಸ್ಕ್ರೀನ್ನನ್ನು ಉಪಯೋಗಿಸುವುದನ್ನು ಮರೆಯಬೇಡಿ. ಹೀಗಾಗಿ ಕ್ಲೌಡಿ ಡೇ ದಿನ ಸನ್ಸ್ಕ್ರೀನ್ ಬಳಸಬಾರದು ಎಂಬುವುದು ಶುದ್ಧ ಸುಳ್ಳಾಗಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಬೆಕ್ಕು ಮತ್ತು ನಾಯಿ ಪರಮ ಶತ್ರುಗಳು ಎಂದು ಹೇಳುತ್ತಾರೆ. ಆದರೆ ಇಲ್ಲೊಂದು ನಾಯಿ ಬೆಕ್ಕಿನ ಮರಿಗೆ ಹಾಲುಣಿಸಿ ತಾಯಿಯ ಪ್ರೀತಿಯನ್ನು ತೋರಿಸುತ್ತಿದೆ. ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ನೆಮ್ಮಲೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಚೆಟ್ಟಂಗಡ ಗಿಣಿ ತಿಮ್ಮಯ್ಯ ಅವರ ಮನೆಯಲ್ಲಿ ಈ ಅಪರೂಪದ ದೃಶ ಕಂಡು ಬಂದಿದೆ. ಈ ನಾಯಿ ಪ್ರತಿನಿತ್ಯ ಬೆಕ್ಕಿನಮರಿಗೆ ಹಾಲು ನೀಡುತ್ತಿದೆ. ಈ ನಾಯಿ ಬೆಕ್ಕಿನ ಮರಿಗಳಿಗೆ ಪ್ರತಿದಿನ ಹಾಲನ್ನು ಕುಡಿಸುತ್ತದೆ. ತಾಯಿಯ ಮಮತೆಯನ್ನು ಬಯಸಿ ಬರುವ ಬೆಕ್ಕಿನ ಮರಿಗೆ…
ತಾಮ್ರದ ಬಾಟೆಲ್ನಲ್ಲಿ ನೀರು ಕುಡಿಯುತ್ತಿದ್ದಿರಾ ಹಾಗಾದರೆ ನೀವು ಈ ವಿಷಯವನ್ನು ತಿಳಿದುಕೊಳ್ಳಿ ಏಕೆಂದರೆ ಇದು ನಿಮ್ಮ ಹಾಗು ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಈ ಸುದ್ದಿ ಓದಲೇಬೇಕು. ಏಕೆಂದರೆ ತಾಮ್ರ ಬಳಸುವುದರಿಂದ ನಿಮ್ಮ ಜೀವಕ್ಕೆ ಅಪಾಯವಾಗಲಿದೆ. ಎಲ್ಲೆಡೆ ತಾಮ್ರದ ದರ್ಬಾರ್ ಶುರುವಾಗಿದ್ದು, ನೀವು ತೆಳ್ಳಗಾಗಬೇಕೆಂದರೆ, ಬಿಪಿ, ಶೂಗರ್, ಟೆನ್ಶನ್ ಕಡಿಮೆ ಆಗಬೇಕೆಂದರೆ ಕಾಪರ್ ನಲ್ಲಿ ನೀರು ಕುಡಿಯಿರಿ ಎಂದು ಹಲವು ಮಂದಿ ಸಲಹೆ ನೀಡುತ್ತಾರೆ. ಅಚ್ಚರಿಯಂದರೆ ಕಾಪರ್ ಅತಿಯಾದ್ರೆ ಪಿತ್ತಕೋಶ (ಲಿವರ್) ಕಾಯಿಲೆ ಬರುತ್ತದೆ ಎಂಬ ವಿಚಾರ ವಿಶ್ವ…
ನಾನು ಒಬ್ಬ ನಟನಾಗಿ ಕಲೆಯ ಜೊತೆ ಗುರುತಿಸಿಕೊಳುತ್ತೇನೆ ಹೊರತು ರಾಜಕಾರಣದ ಜೊತೆಗಲ್ಲ. ದೇವೇಗೌಡರ ಕುಟುಂಬ ಹಾಗೂ ಅಂಬಿ ಕುಟುಂಬ ನಮ್ಮ ಕುಟುಂಬ ಹಾಗೆ. ಇಬ್ಬರೂ ನಮ್ಮ ಹಿತೈಷಿಗಳೇ ಆಗಿದ್ದು, ಇಬ್ಬರಿಗೂ ಒಳ್ಳೆಯದಾಗಲಿ ಎಂದು ನಟ ಪುನೀತ್ ರಾಜ್ಕುಮಾರ್ ಹೇಳಿದ್ದಾರೆ. ಮಾಜಿ ಸಚಿವ ಅಂಬರೀಶ್ ಪತ್ನಿ ಸುಮಲತಾ ಅವರು ಮಂಡ್ಯ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಇವರ ಜೊತೆಯಾಗಿ ದರ್ಶನ್ ಮತ್ತು ಯಶ್ ನಿಂತಿದ್ದಾರೆ. ಕನ್ನಡ ಚಿತ್ರರಂಗ ಸುಮಲತಾಗೆ ಬೆಂಬಲ ಕೊಡುತ್ತಿದೆ ಎಂಬ ಸುದ್ದಿ…
ಆ ವ್ಯಕ್ತಿಯೇ ರಿಯಾ ಕೂಪರ್. ಆತ ತನ್ನ ಲಿಂಗದ ಗೊಂದಲದಲ್ಲಿ ಮೂರು ಸಲ ಲಿಂಗ ಪರಿವರ್ತನೆ ಮಾಡಿಕೊಂಡಿದ್ದಾನೆ. ರಿಯಾ ಕೂಪರ್ ಇಂಗ್ಲೆಂಡಿನಲ್ಲಿ ಅತೀ ಸಣ್ಣ ವಯಸ್ಸಿನಲ್ಲಿ ಲಿಂಗ ಪರಿವರ್ತನೆ ಮಾಡಿಕೊಂಡವ ಎನ್ನುವ ಪ್ರಸಿದ್ಧಿಗೆ ಒಳಗಾದ. ಆತ ಕೇವಲ 15 ವರ್ಷದಲ್ಲಿ ಮಹಿಳೆಯಾಗಿ ಲಿಂಗ ಪರಿವರ್ತನೆ ಮಾಡಿ ಕೊಂಡ ಮತ್ತು ಇದರಿಂದ ಬೇಸತ್ತು ಮತ್ತೆ ಲಿಂಗ ಪರಿವರ್ತನೆಗೆ ಮುಂದಾದ.
ಬೆಂಗಳೂರು: 70 ವರ್ಷದ ವೃದ್ಧನೋರ್ವ ತನ್ನ 65 ವರ್ಷದ ಪತ್ನಿಯನ್ನು ಕೊಂದು ಬಳಿಕ ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಆಘಾತಕಾರಿ ಘಟನೆಯೊಂದು ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.ಈ ಘಟನೆ ದೊಡ್ಡಬಳ್ಳಾಪುರ ಸಮೀಪದ ಚನ್ನಪುರ ಗ್ರಾಮದಲ್ಲಿ ನಡೆದಿದೆ. ವೃದ್ಧ ನಾರಾಯಣಪ್ಪ, ಪತ್ನಿ ಲಕ್ಷ್ಮಮ್ಮನ್ನು ಕೊಲೆ ಮಾಡಿದ್ದಾರೆ. ಬಳಿಕ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಕುಟುಂಬದೊಂದಿಗೆ ನಡೆದ ವಾಗ್ವಾದವೇ ಈ ಘಟನೆಗೆ ಕಾರಣ ಎನ್ನಲಾಗುತ್ತಿದೆ. ಪತಿ, ಪತ್ನಿ ಬೇರೆ ಬೇರೆಯಾದ ಬಳಿಕ ನಾರಾಯಣಪ್ಪ ಅವರು ತಮ್ಮ ಬಳಿ ಇದ್ದ…
ಹುಡುಗಿಯರು ಮತ್ತಷ್ಟು ಸುಂದರವಾಗಿ ಕಾಣಲು ಅನವಶ್ಯಕ ಕೂದಲನ್ನು ತೆಗೆಯುತ್ತಾರೆ.ಇದಕ್ಕಾಗಿ ಥ್ರೆಡ್ಡಿಂಗ್ ಮಾಡಿಸಿಕೊಳ್ತಾರೆ. ಥ್ರೆಡ್ಡಿಂಗ್ ಸೂಕ್ಷ್ಮ ಚರ್ಮದ ಮೇಲೆ ಪರಿಣಾಮ ಬೀರುತ್ತದೆ. ಥ್ರೆಡ್ಡಿಂಗ್ ಮಾಡಿದ ಜಾಗದಲ್ಲಿ ಮೊಡವೆಗಳು ಏಳುತ್ತವೆ. ಒಂದು ಮಾಡಲು ಹೋಗಿ ಇನ್ನೊಂದಾಯ್ತು ಅಂತಾ ಗೊಣಗ್ತಾರೆ. ಇನ್ನು ಈ ಬಗ್ಗೆ ಬೇಸರ ಮಾಡಿಕೊಳ್ಳಬೇಕಾಗಿಲ್ಲ. ಈ ಮೊಡವೆಗಳಿಂದ ಸುಲಭವಾಗಿ ಮುಕ್ತಿ ಹೊಂದುವ ಉಪಾಯ ಇಲ್ಲಿದೆ.ಥ್ರೆಡ್ಡಿಂಗ್ ಮಾಡಿಸಿಕೊಳ್ಳುವ ಮೊದಲು ಚರ್ಮವನ್ನು ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಇದರಿಂದ ಥ್ರೆಡ್ಡಿಂಗ್ ಮಾಡುವ ವೇಳೆ ನೋವಾಗುವುದಿಲ್ಲ. ನಂತರ ಕಾಟನ್ ಬಟ್ಟೆಯಿಂದ ಚರ್ಮವನ್ನು ಮೃದುವಾಗಿ…