inspirational

ರೈತರ ಬೆಳೆ‌ ಸಮಿಕ್ಷೆ ನೊಂದಣಿ ದಿನಾಂಕ ವಿಸ್ತರಣೆ

ಬೆಂಗಳೂರು: ಅಗಷ್ಟ್  ತಿಂಗಳ 24ಕ್ಕೆ ಅಂತ್ಯಗೊಳ್ಳಲಿದ್ದ ಕೃಷಿ ಬೆಳೆ ಸಮೀಕ್ಷೆಯನ್ನು ಸೆಪ್ಟೆಂಬರ್ ತಿಂಗಳ 24  ತನಕ ವಿಸ್ತರಿಸಲು ರಾಜ್ಯ ಸರಕಾರ ನಿರ್ಧರಿಸಿದೆ. ಸಚಿವ ಸಂಪುಟ ಸಭೆಯಲ್ಲಿ ಕೃಷಿ ಬೆಳೆ ಸಮೀಕ್ಷೆ ಕುರಿತಂತೆ ಸುದೀರ್ಘ ಚರ್ಚೆ ನಡೆದ ಬಳಿಕ ಒಂದು ತಿಂಗಳು ಅವಧಿ ವಿಸ್ತರಿಸುವ ತೀರ್ಮಾನ ಕೈಗೊಂಡಿದೆ.

ಬೆಳೆ ಸಮೀಕ್ಷೆ ವ್ಯವಸ್ಥೆ ಬಗ್ಗೆ ಮುಖ್ಯಮಂತ್ರಿ ಹಾಗೂ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದ್ದು .  .
ಕಳೆದ ವರ್ಷ ಕೇವಲ 3,500 ಮಂದಿ ರೈತರು ಮಾತ್ರ ನೋಂದಣಿ ಮಾಡಿದ್ದರು, ಈ ವರ್ಷ ಅಲ್ಪ ಅವಧಿಯಲ್ಲೇ ದಾಖಲೆ ಪ್ರಮಾಣದಲ್ಲಿಇದುವರೆಗೆ 5.90 ಲಕ್ಷ ರೈತರು ನೋಂದಣಿ ಮಾಡಿಸಿದ್ದಾರೆ, ಪ್ರತಿ ನಿಮಿಷಕ್ಕೆ ಒಂದೂವರೆ ಸಾವಿರ ರೈತರು ಆಪ್‌ಲೋಡ್‌ ಮಾಡುತ್ತಿದ್ದಾರೆ. 20 ರಿಂದ 25 ಲಕ್ಷಕ್ಕೂ ಹೆಚ್ಚು ರೈತರು ಬೆಳೆ ಸಮೀಕ್ಷೆ ನೋಂದಣಿ ಮಾಡಿಕೊಳ್ಳುವ ವಿಶ್ವಾಸವಿದೆ ಹಾಗಾಗಿ   ಇದನ್ನು  ಬೆಳೆ ಸಮೀಕ್ಷೆ ಮುಂದಿನ ತಿಂಗಳ 24 ರವರೆಗೆ  ವಿಸ್ತರಿಸಿದ್ದೇವೆ ಎಂದು ಕ್ರಷಿ ಸಚಿವ ಬಿ.ಸಿ ಪಾಟೀಲ್ ಸುದ್ದಿ ಗೋಷ್ಟಿ ನಡೆಸಿ ತಿಳಿಸಿದರು.

About the author / 

Chethan Mardalu

Categories

Date wise

  • ರಾಜ್ಯದಲ್ಲಿ ಟಫ್ ರೂಲ್ಸ್ ಮತ್ತೆ ಜಾರಿ

    ರಾಜ್ಯ ಸರ್ಕಾರವು ಇಂದಿನಿಂದ ನೈಟ್ ಕರ್ಫ್ಯೂ & ವಾರಾಂತ್ಯದ ಕರ್ಫ್ಯೂ ಜಾರಿ ಮಾಡಲು ನಿರ್ಧರಿಸಲಾಗಿದೆ.ಈಗಾಗಲೇ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ ಮುಂದಿನ 2ವಾರಗಳ ಕಾಲ ಮುಂದುವರಿಸಲು ನಿರ್ಧರಿಸಲಾಗಿದೆ ರಾತ್ರಿ 10ರಿಂದ ಬೆಳಿಗ್ಗೆ 5 ರವರೆಗೆ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ.ವಾರಾಂತ್ಯದ ಕರ್ಫ್ಯೂವನ್ನು ದಿನಾಂಕ 7ರಿಂದ ಶುಕ್ರವಾರ ರಾತ್ರಿ 10 ಗಂಟೆಯಿಂದ 10 ರ ಸೋಮವಾರ ಬೆಳಿಗ್ಗೆ 5 ರವರೆಗೆ ಜಾರಿ ಮಾಡಲಾಗಿದೆ   ಸರ್ಕಾರಿ ಕಚೇರಿಗಳು ಮಾಲ್​ಗಳಿಗೆ ಭಾರತ ಸರ್ಕಾರದ ಮಾರ್ಗಸೂಚಿ ಅನುಸರಿಸಲಾಗುವುದು. * ಚಿತ್ರಮಂದಿರ, ಮಾಲ್,…

     728,007 total views,  704 views today

ಏನ್ ಸಮಾಚಾರ